ರಾಜಕೀಯ ಬೇರೆ, ವೈಯಕ್ತಿಕ ಬದುಕು ಬೇರೆ; ಡಿಕೆಶಿ ಬಂಧನದ ಬಗ್ಗೆ ಏನೂ ಹೇಳಲ್ಲ; ಸಚಿವ ಶ್ರೀರಾಮುಲು

ಇಂಥ ಅನೇಕ ಪ್ರಕರಣಗಳನ್ನು ನಾನು ನೋಡಿದ್ದೇನೆ. ಕಾನೂನು ತನ್ನ ಕೆಲಸ ಮಾಡಿಕೊಂಡು ಹೋಗುತ್ತದೆ. ಜನಾರ್ದನ ರೆಡ್ಡಿ ಬಂಧನ ಪ್ರಕರಣವನ್ನು ಇದಕ್ಕೆ ತಳಕು ಹಾಕುವುದಿಲ್ಲ-ಶ್ರೀರಾಮುಲು

Latha CG | news18
Updated:September 4, 2019, 11:50 AM IST
ರಾಜಕೀಯ ಬೇರೆ, ವೈಯಕ್ತಿಕ ಬದುಕು ಬೇರೆ; ಡಿಕೆಶಿ ಬಂಧನದ ಬಗ್ಗೆ ಏನೂ ಹೇಳಲ್ಲ; ಸಚಿವ ಶ್ರೀರಾಮುಲು
ಶ್ರೀರಾಮುಲು-ಡಿಕೆ ಶಿವಕುಮಾರ್​
  • News18
  • Last Updated: September 4, 2019, 11:50 AM IST
  • Share this:
ಬಳ್ಳಾರಿ(ಸೆ.04):  ಡಿಕೆಶಿ ಬಂಧನ ಬಗ್ಗೆ ಏನೂ ಹೇಳಲ್ಲ. ಕಾನೂನು ಅನುಸಾರವಾಗಿ ಈ ಪ್ರಕರಣ ನಡೆಯುತ್ತಿದೆ. ಈಗಾಗಲೇ ಡಿಕೆಶಿಯವರ ಬಳಿ ನಾನು ಕ್ಷಮೆ ಕೇಳಿದ್ದೇನೆ.  ರಾಜಕೀಯ ಬೇರೆ, ವೈಯಕ್ತಿಕ ಬದುಕು ಬೇರೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಬಂಧನ ವಿಚಾರವಾಗಿ ಮೌನ ವಹಿಸಿದರು. "ಇಡಿ ಅಧಿಕಾರಿಗಳು ಡಿಕೆ ಶಿವಕುಮಾರ್​ ಅವರನ್ನು ಬಂಧಿಸಿದ್ದಾರೆ. ಕಾನೂನಿಗನುಗುಣವಾಗಿ ತನಿಖೆ ನಡೆಯುತ್ತಿದೆ. ಇದರ ಬಗ್ಗೆ ಮಾತನಾಡುವುದು ಸರಿಯಲ್ಲ
ನಾನು ಡಿಕೆಶಿ ಬಳಿ ಕ್ಷಮೆ ಕೇಳಿದ್ದೇನೆ," ಎಂದರು.

"ರಾಜಕೀಯವಾಗಿ ಟೀಕೆ ಮಾಡುವುದು ಬೇರೆ. ಅದು ವೈಯಕ್ತಿಕ ಬದುಕಿಗೆ ಪರಿಣಾಮ ಆಗಬಾರದು.  ರಾಜಕೀಯದಲ್ಲಿ ವಾಕ್ಸಮರ ಸಂಪ್ರದಾಯದ ರೀತಿ ನಡೆದುಕೊಂಡು ಹೋಗುತ್ತಿದೆ. ಆದರೆ ವೈಯಕ್ತಿಕವಾಗಿ ಆರೋಪ ಮಾಡುವುದು ಸರಿಯಲ್ಲ," ಎಂದು ಹೇಳಿದರು.

ಮನುಷ್ಯತ್ವ ಇರೋರು ಹೀಗೆ ಮಾಡಲ್ಲ; ಡಿಕೆ ಶಿವಕುಮಾರ್​ ಬಂಧನಕ್ಕೆ ಸಿದ್ದರಾಮಯ್ಯ ಬೇಸರ

"ಇಂಥ ಅನೇಕ ಪ್ರಕರಣಗಳನ್ನು ನಾನು ನೋಡಿದ್ದೇನೆ. ಕಾನೂನು ತನ್ನ ಕೆಲಸ ಮಾಡಿಕೊಂಡು ಹೋಗುತ್ತದೆ. ಜನಾರ್ದನ ರೆಡ್ಡಿ ಬಂಧನ ಪ್ರಕರಣವನ್ನು ಇದಕ್ಕೆ ತಳಕು ಹಾಕುವುದಿಲ್ಲ," ಎಂದರು.

"ನನ್ನ ಮಿತ್ರರು ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಹೇಳಿದ್ದಾರೆ. ನಾನು ಉಪ್ಪು ತಿಂದರೆ ನೀರು ಕುಡಿಯಲು ಸಿದ್ಧ," ಎಂದು ಶಿವಕುಮಾರ್​ ಬೇಸರ ವ್ಯಕ್ತಪಡಿಸಿದ್ದರು. ಈ ವಿಚಾರಕ್ಕೆ ಶ್ರೀರಾಮುಲು ಮರುಗಿ, “ನನ್ನ ಮಾತಿನಿಂದ ನೋವಾಗಿದ್ದರೆ ಡಿಕೆಶಿ ಅಣ್ಣನವರೇ ಕ್ಷಮಿಸಿ. ಕೈ ಮುಗಿದು ಕೇಳುತ್ತೇನೆ ನನ್ನನ್ನು ಕ್ಷಮಿಸಿ. ನನ್ನ ಭಾಷೆ ರಾಜಕಾರಣಕ್ಕೆ ಸೀಮಿತವೇ ಹೊರತು ವೈಯಕ್ತಿಕ ಅಲ್ಲ. ಡಿಕೆಶಿ ಅಣ್ಣನಿಗೆ ರಾಜಕೀಯವಾಗಿ ಮಾತ್ರ ಮಾತನಾಡಿದ್ದು,” ಎಂದು ಶ್ರೀರಾಮುಲು ಹೇಳಿದ್ದರು.ಶ್ರೀರಾಮುಲು ಕ್ಷಮೆ ಕೇಳಿದ ವಿಚಾರಕ್ಕೆ ಡಿಕೆಶಿ ಕೂಡ ಪ್ರತಿಕ್ರಿಯೆ ನೀಡಿದ್ದರು. ಈಗ ಕ್ಷಮೆ ಕೇಳಿ ಏನು ಪ್ರಯೋಜನ? ಆಡಿದ ಮಾತನ್ನು ವಾಪಸ್ ತೆಗೆದುಕೊಳ್ಳೋಕಾಗೊಲ್ಲ.  ರಾಮುಲು ಅಣ್ಣ ಯಾವ ರೀತಿ ಮಾತನಾಡಿದ್ದಾರೋ ಗೊತ್ತಿಲ್ಲ. ನಾನು ಕೂಡ ಮಾತನಾಡಿದ್ದೇನೆ ಎಂದಿದ್ದರು ಡಿಕೆ ಶಿವಕುಮಾರ್​.

First published:September 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ