ಚಿತ್ರದುರ್ಗ: ವಿಧಾನ ಪರಿಷತ್ ಚುನಾವಣೆಗೆ (MLC Election) ದಿನಗಣನೆ ಶುರುವಾಗಿದ್ದು, ಎಲ್ಲಾ ಪಕ್ಷಗಳ ಘಟಾನುಘಟಿ ನಾಯಕರು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಎದುರಾಗಿ ನಾಯಕರ ವಿರುದ್ಧ ಭರ್ಜರಿ ವಾಗ್ದಾಳಿಯನ್ನು ನಡೆಸುತ್ತಿದ್ದಾರೆ. ದುರ್ಗದ ಲೋಕದೊಳಲು ಗ್ರಾಮದಲ್ಲಿ ಚುನಾವಣೆ ಪ್ರಚಾರದಲ್ಲಿ ತೊಡಗಿರುವ ಸಚಿವ ಶ್ರೀರಾಮುಲು (Minister Sriramulu) ಕಾಂಗ್ರೆಸ್ (Congress) ನಾಯಕರ ವಿರುದ್ಧ ಮಾತಿನ ಬಾಣ ಬಿಟ್ಟರು. ಕಾಂಗ್ರೆಸ್ ಪಕ್ಷದಲ್ಲಿ ಗೂಳಿ ಕಾಳಗ ನಡೆಯುತ್ತಿದೆ. ಕನಕಪುರ ಗೂಳಿ, ಮೈಸೂರು ಗೂಳಿ ನಡುವೆ ಕಾಳಗ ನಡೆಯುತ್ತಿದೆ ಎನ್ನುವ ಮೂಲಕ ಸಿದ್ದರಾಮಯ್ಯ-ಡಿಕೆಶಿ ಬಣ ರಾಜಕೀಯ ಇದೆ ಎಂದು ಆರೋಪಿಸಿದರು. ಗೂಳಿ ಕಾದಾಟದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಪಕ್ಷದಲ್ಲಿ ಉಳಿಬೇಕಾ ಬಿಡಬೇಕಾ ಅನ್ನುವಂತಾಗಿದೆ. ಗೂಳಿಗಳ ಜಗಳದಲ್ಲಿ ಜನರು ಸಾಯುತ್ತಿದ್ದಾರೆ.ಮೂರು ಬಿಟ್ಟವರು ಕಾಂಗ್ರೆಸ್ ನವರು ಎನ್ನುವಂತ ಪರಿಸ್ಥಿತಿಗೆ ಬಂದಿದೆ ಎಂದು ವ್ಯಂಗ್ಯವಾಗಿ ವಾಗ್ದಾಳಿ ನಡೆಸಿದರು.
ಗೂಳಿಗಳ ಮಧ್ಯೆ ಕಾಂಗ್ರೆಸ್ ಪಕ್ಷದವರು ನಲುಗುತ್ತಿದ್ದಾರೆ
ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿ ಅಧಿಕಾರಕ್ಕೆ ಬರುತ್ತದೆ. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಬರುತ್ತದೆ. ಮೈಸೂರು- ಕನಕಪುರ ಗೂಳಿಗಳ ಮಧ್ಯೆ ಕಾಂಗ್ರೆಸ್ ಪಕ್ಷದವರು ನಲುಗುತ್ತಿದ್ದಾರೆ. ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಆಗಿದೆ. 2023ರಲ್ಲಿ ರಾಜ್ಯದಲ್ಲಿ ನಮ್ಮದೇ ಸರ್ಕಾರ ಬರುತ್ತದೆ. JDS ಎಲ್ಲಿ ಸ್ಪರ್ಧೆ ಮಾಡಿಲ್ಲವೋ ಅಲ್ಲಿ ಸ್ವಯಂ ಪ್ರೇರಣೆಯಿಂದ ನಮಗೆ ಸಹಕಾರ ನೀಡುತ್ತಾರೆ. ನಮ್ಮ ಪಕ್ಷದ ತೀರ್ಮಾನ ಇದಲ್ಲ, ಕೆಲ ಗ್ರಾಮ ಪಂಚಾಯತಿ ಸದಸ್ಯರು ಸ್ವಯಂ ಪ್ರೇರಣೆಯಿಂದ ಬೆಂಬಲಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ: ಅಯ್ಯೋ ದೇವರೇ.. ಡಿಕೆ ಶಿವಕುಮಾರ್ BJPಗೆ ಬಂದರೆ ನಾವ್ಯಾರು ಪಕ್ಷದಲ್ಲಿ ಇರೋಲ್ಲ: ಸಚಿವ ಈಶ್ವರಪ್ಪ
ಸಿದ್ದರಾಮಯ್ಯ ನಂಬಿಕಸ್ಥ ಅಲ್ಲ ಎಂದು ಮೊದಲೇ ಹೇಳಿದ್ದೆ
ಇನ್ನು ಬದಾಮಿ ಕ್ಷೇತ್ರ ಬಿಟ್ಟುಕೊಂಡ ಚಿಮ್ಮನಕಟ್ಟಿ ನಿನ್ನೆ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದ ಬಗ್ಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಖುದ್ದು ಚಾಮುಂಡೇಶ್ವರಿ ಕ್ಷೇತ್ರ ಉಳಿಸಿಕೊಳ್ಳುವ ಆಗಲಿಲ್ಲ. ಬದಾಮಿಯಲ್ಲಿ ನಾನು ಸ್ಪರ್ಧೆ ಮಾಡಿ ಹೇಳಿದ್ದೆ, ಸಿದ್ದರಾಮಯ್ಯ ನಂಬಿಕಸ್ಥ ಅಲ್ಲ ಎಂದು. ಸಿಎಂ ಆಗಿ ಕೆಲಸ ಮಾಡಿ, ರಾಜ್ಯದಲ್ಲಿ ಹೆಸರು ಕೆಡಿಸಿಕೊಂಡಿದ್ದಾರೆ. ಇವರನ್ನ ನಂಬಿ ಈ ಕ್ಷೇತ್ರ ಪಶ್ಚತಾಪ ಪಡಬೇಕು ಎಂದಿದ್ದೆ. ಚಿಮ್ಮನಕಟ್ಟೆ ಅವರು ನೇರವಾಗಿ ಹೇಳಿದ್ದಾರೆ, ಅದು ನಿಜ ಎಂದು ಕಿಡಿಕಾರಿದರು. ಕಳೆದ ಚುನಾವಣೆಯಲ್ಲಿ ಬದಾಮಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ಸ್ಪರ್ಧಿಸಿ ಸೋಲು ಕಂಡಿದ್ದರು.
ಡಿಕೆಶಿ ಅವರ ಸಂಸ್ಕೃತಿ ನಮ್ಮದಲ್ಲ
ಇನ್ನು ವಾಗ್ದಾಳಿ ಮುಂದುವರೆಸಿದ ಶ್ರೀರಾಮುಲು, ಸಿದ್ದರಾಮಯ್ಯ ಅವರು BJP ಯಲ್ಲಿ ಸುನಾಮಿ, ಬಿರುಗಾಳಿ ಬರುತ್ತದೆ ಎಂದು ಹೇಳುತ್ತಾರೆ. ಸಿದ್ದರಾಮಯ್ಯ ಎಲ್ಲಿ ಸ್ಪರ್ಧೆ ಮಾಡುತ್ತಾರೆ ಅಲ್ಲಿ ಕಾಂಗ್ರೆಸ್ ನಲ್ಲಿ ಸುಂಟರಗಾಳಿ ಬರುತ್ತದೆ ಎಂದರು. ಇನ್ನು ಬಿಜೆಪಿಗೆ ಹೋಗದಿದ್ದಕ್ಕೆ ನನ್ನನ್ನು ಜೈಲಿಗೆ ಕಳುಹಿಸಲಾಗಿತು ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದರು. ತಪ್ಪಿತಸ್ಥರು ಯಾರೋ ಅವರು ಜೈಲಿಗೆ ಹೋಗಬೇಕಾಗುತ್ತದೆ. ಬಿಜೆಪಿ ಷಡ್ಯಂತ್ರದಿಂದ ಜೈಲಿಗೆ ಎನ್ನುತ್ತಾರೆ. ಡಿಕೆಶಿ ಅವರ ಸಂಸ್ಕೃತಿ ನಮ್ಮದಲ್ಲ ಎಂದು ಸಚಿವ ರಾಮುಲು ಟಾಂಗ್ ನೀಡಿದರು.
ಇದನ್ನೂ ಓದಿ: ಜಾತ್ಯಾತೀತ ಅಂತ ಹೇಳಿಕೊಂಡು ಕೋಮುವಾದಿಗಳ ಜೊತೆ ಕೈಜೋಡಿಸಿದ್ದಾರೆ: BJP- JDS ಮೈತ್ರಿಗೆ ಸಿದ್ದರಾಮಯ್ಯ ವ್ಯಂಗ್ಯ
ಜೆಡಿಎಸ್ನವರು ಮಗುವನ್ನು ಚಿವುಟಿ, ತೊಟ್ಟಿಲನ್ನೂ ತೂಗ್ತಾರೆ. ಸ್ಥಳೀಯ ನಾಯಕರಿಗೆ ಇನ್ ಡೈರೆಕ್ಟ್ ಆಗಿ ಹೇಳಿಕೊಟ್ಟಿದ್ದಾರೆ ಎಂದು ಜೆಡಿಎಸ್ ನಡೆ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ವ್ಯಂಗ್ಯವಾಡಿದರು. ನಾವು ಯಾವುದೇ ಕಾರಣಕ್ಕೂ ಕೋಮುವಾದಿಗಳ ಜೊತೆ ಕೈಜೋಡಿಸಲ್ಲ. ಜೆಡಿಎಸ್ ಜಾತ್ಯಾತೀತ ಅಂತಾರೆ, ಆದ್ರೆ 2005 ರಿಂದಲೂ ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ ಎಂದು ಮಂಡ್ಯದಲ್ಲಿ ಆರೋಪಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ