ಡಿಸಿಎಂ ಹುದ್ದೆಗೆ ಶ್ರೀರಾಮುಲು ಪಟ್ಟು: ಅಮಿತ್​​ ಶಾ ಮೂಲಕವೇ ಉಪ ಮುಖ್ಯಮಂತ್ರಿಯಾಗಲು ಯತ್ನ

ನೀವು ಪ್ರಾಮಿಸ್ ಮಾಡಿದ್ದಿರಿ ಎನ್ನುವುದನ್ನು ಬಿಟ್ಟು ಉಳಿದೆಲ್ಲಾ ವಿಚಾರಗಳನ್ನು ಜೆ.ಪಿ. ನಡ್ಡ ಕಿವಿಗೂ ತುರುಕಿದ್ದಾರಂತೆ. ಇದರ ನಡುವೆ ಸದ್ಯ ಸಚಿವ ಸ್ಥಾನ ಕೊಟ್ಟರೆ ಸಾಕು ಎಂಬ ಸ್ಥಿತಿಗೆ ರಮೇಶ್ ಜಾರಕಿಹೊಳಿ ಬಂದಿರುವುದರಿಂದ ಯಾವ ಅಡೆತಡೆಗಳೂ ಇಲ್ಲ, ಉಪ ಮುಖ್ಯಮಂತ್ರಿ ಪಟ್ಟ ಒಲಿಯಬಹುದು ಎಂದು ಹೊಸ ಕನಸಿಗೆ ಜಾರಿದ್ದಾರೆ ಶ್ರೀರಾಮುಲು.

ಸಚಿವ ಶ್ರೀರಾಮುಲು, ಕೇಂದ್ರ ಗೃಹ ಸಚಿವ ಅಮಿತ್​​ ಶಾ

ಸಚಿವ ಶ್ರೀರಾಮುಲು, ಕೇಂದ್ರ ಗೃಹ ಸಚಿವ ಅಮಿತ್​​ ಶಾ

  • Share this:
ಬೆಂಗಳೂರು(ಜ.22): ರಾಜ್ಯ ಆರೋಗ್ಯ ಸಚಿವ ಬಿ ಶ್ರೀರಾಮುಲು ಉಪ ಮುಖ್ಯಮಂತ್ರಿ‌ ಆಗಲೇಬೇಕೆಂದು ಪಣ ತೊಟ್ಟಿದ್ದಾರೆ. ಅದಕ್ಕಾಗಿ ಈಗಾಗಲೇ ಸಾಕಷ್ಟು ಬಾರಿ ಸಿಎಂ ಬಿ.ಎಸ್​​ ಯಡಿಯೂರಪ್ಪ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಜತೆಗೆ ಚರ್ಚಿಸಿ ಸುಸ್ತಾಗಿದ್ದಾರೆ. ಇವರಿಂದ ಉದ್ದೇಶ ಸಿದ್ದಿಸುವುದಿಲ್ಲ ಎಂದು ಖಾತ್ರಿಯಾದ ಕೂಡಲೇ ಶ್ರೀರಾಮುಲು ದೆಹಲಿಗೆ ದುಂಬಾಲು ಬಿದ್ದಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್​​ ಶಾ ಮತ್ತು ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮೂಲಕ ಸ್ಥಾನ‌ ಪಡೆಯಲು ಪ್ರಯತ್ನಿಸುತ್ತಿದ್ದಾರೆ.

ಅಮಿತ್​ ಶಾ ಮತ್ತು ನಡ್ಡ ಪೈಕಿ ಸಚಿವ ಶ್ರೀರಾಮುಲು ಮಾಜಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಮೇಲೆಯೇ ಅಪಾರವಾದ ನಂಬಿಕೆ ಇಟ್ಟುಕೊಂಡಿದ್ದಾರೆ. ಏಕೆಂದರೆ ವಿಧಾನಸಭಾ ಚುನಾವಣೆ ವೇಳೆ ಶಾ ಅವರೇ ಖುದ್ದಾಗಿ ರಾಮುಲು ಅವರಿಗೆ ಉಪ ಮುಖ್ಯಮಂತ್ರಿ ಕನಸು ಬಿತ್ತಿದ್ದರಂತೆ. ಆದುದರಿಂದ ಅಮಿತ್ ಶಾ ಬೆನ್ನು ಬಿದ್ದಿರುವ ರಾಮುಲು, 'ನಿಮ್ಮ ಮಾತನ್ನು ಕೇಳಿ ನಾನು ಏನೆಲ್ಲಾ ಮಾಡಿದೆ?' ಎಂಬ ಲೆಕ್ಕ ಕೊಟ್ಟಿದ್ದಾರಂತೆ. ಇದನ್ನು ಕೇಳಿ ಅಮಿತ್ ಶಾ ಕೂಡ ಬೆಚ್ಚಿ ಬಿದ್ದಿದ್ದಾರಂತೆ.

ನೀವು ಹೇಳಿದ್ದಕ್ಕಾಗಿ ಎರಡೆರಡು ಕಡೆ ಸ್ಪರ್ಧೆ ಮಾಡುವ ರಿಸ್ಕ್ ತೆಗೆದುಕೊಂಡೆ. ಚುನಾವಣೆ ವೇಳೆ 12 ಸಾವಿರ ಕಿಲೋ‌ ಮೀಟರ್ ಪ್ರಯಾಣ ಮಾಡಿದೆ. 126 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದೆ. ಸಿದ್ದರಾಮಯ್ಯ ಅವರನ್ನು ಬಿಟ್ಟರೆ ಅತೀ ಹೆಚ್ಚು ಪ್ರವಾಸ ಮತ್ತು ಪ್ರಚಾರ ಮಾಡಿದ್ದು ನಾನೇ. ಯಡಿಯೂರಪ್ಪ ಪ್ರಚಾರ ಮಾಡಿದ್ದು 70 ಕ್ಷೇತ್ರಗಳಲ್ಲಿ ಮಾತ್ರ. ನೀವು ಬಿತ್ತಿದ ಭರವಸೆ ಮತ್ತು ನನ್ನ ಶ್ರಮದಿಂದ ವಾಲ್ಮಿಕಿ ಸಮುದಾಯದ ಮತ ಹಿಡಿಯಾಗಿ ಬಿಜೆಪಿಗೆ ಬಂದಿದೆ. ಈಗ ನೀವು ನನ್ನ ಕೈ ಹಿಡಿಯಿರಿ ಎಂದು ಕೇಳಿಕೊಂಡಿದ್ದಾರಂತೆ.

ಇದನ್ನೂ ಓದಿ: ದೆಹಲಿ ವಿಧಾನಸಭಾ ಚುನಾವಣೆ: ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ

ನೀವು ಪ್ರಾಮಿಸ್ ಮಾಡಿದ್ದಿರಿ ಎನ್ನುವುದನ್ನು ಬಿಟ್ಟು ಉಳಿದೆಲ್ಲಾ ವಿಚಾರಗಳನ್ನು ಜೆ.ಪಿ. ನಡ್ಡ ಕಿವಿಗೂ ತುರುಕಿದ್ದಾರಂತೆ. ಇದರ ನಡುವೆ ಸದ್ಯ ಸಚಿವ ಸ್ಥಾನ ಕೊಟ್ಟರೆ ಸಾಕು ಎಂಬ ಸ್ಥಿತಿಗೆ ರಮೇಶ್ ಜಾರಕಿಹೊಳಿ ಬಂದಿರುವುದರಿಂದ ಯಾವ ಅಡೆತಡೆಗಳೂ ಇಲ್ಲ, ಉಪ ಮುಖ್ಯಮಂತ್ರಿ ಪಟ್ಟ ಒಲಿಯಬಹುದು ಎಂದು ಹೊಸ ಕನಸಿಗೆ ಜಾರಿದ್ದಾರೆ ಶ್ರೀರಾಮುಲು.
First published: