• Home
  • »
  • News
  • »
  • state
  • »
  • SriRamulu: ನಿನ್ನ ಅಹಂಕಾರ ಜಾಸ್ತಿಯಾಗಿದೆ; ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ರಾಮುಲು ವಾಗ್ದಾಳಿ

SriRamulu: ನಿನ್ನ ಅಹಂಕಾರ ಜಾಸ್ತಿಯಾಗಿದೆ; ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ರಾಮುಲು ವಾಗ್ದಾಳಿ

ಸಿದ್ದರಾಮಯ್ಯ , ಶ್ರೀರಾಮುಲು

ಸಿದ್ದರಾಮಯ್ಯ , ಶ್ರೀರಾಮುಲು

ನೀನು ಅಧಿಕಾರದಲ್ಲಿದ್ದಾಗ ಏನು ಮಾಡಿದೆ ಎಂದು ಎಲ್ಲವೂ ಗೊತ್ತಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಕಾಂಗ್ರೆಸ್​ ಮೀಸಲಾತಿ ಕೊಡಲಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ರಾಮುಲು ಕಿಡಿಕಾರಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಮತ್ತೆ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಹಾಗೂ ಸಚಿವ ಶ್ರೀರಾಮುಲು (Sri Ramulu) ನಡುವಿನ ವಾಕ್ ಸಮರ ಮುಂದುವರಿದಿದೆ. ಗದಗದಲ್ಲಿ ಮಾತಾಡಿದ ಸಚಿವ ಶ್ರೀರಾಮುಲು ಅವರು ಸಿಎಂ ಸಿದ್ದರಾಮಯ್ಯ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸರ್ಕಾರ ಮೀಸಲಾತಿ (BJP Government Reservation) ಹೆಚ್ಚಿಸದ ಬಳಿಕ ನಾವೂ ಹೋರಾಡಿದ್ದೇವೆ ಅಂತ ಕಾಂಗ್ರೆಸ್​ ಅಪಸ್ವರ ಎತ್ತಿದೆ. ಕಾಂಗ್ರೆಸ್ (Congress) ಅಧಿಕಾರದಲ್ಲಿದ್ದಾಗ ಎಸ್ ಸಿ‌ ಎಸ್ ಟಿಗೆ (SC-ST) ಮೀಸಲಾತಿ ಕೊಟ್ಟಿಲ್ಲ. ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ತರಲು ಸಿದ್ದರಾಮಯ್ಯ ಅವರಿಗೆ ಆಗಲಿಲ್ಲ. ಕಾಂತರಾಜ್ ವರದಿಯನ್ನ ಸಿದ್ದರಾಮಯ್ಯ ಜಾರಿಗೆ ತರಲಿಲ್ಲ. ನೀನು ಅಧಿಕಾರದಲ್ಲಿದ್ದಾಗ ಏನು ಮಾಡಿದೆ ಎಂದು ಎಲ್ಲವೂ ಗೊತ್ತಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಕಾಂಗ್ರೆಸ್​ ಮೀಸಲಾತಿ ಕೊಡಲಿಲ್ಲ ಎಂದು ಏಕವಚನದಲ್ಲೇ ಸಿದ್ದರಾಮಯ್ಯ ವಿರುದ್ಧ ರಾಮುಲು ಕಿಡಿಕಾರಿದ್ದಾರೆ.


ಏಕವಚನದಲ್ಲೇ ರಾಮುಲು ವಾಗ್ದಾಳಿ


ಜೇನುಗೂಡಿಗೆ ಕಲ್ಲು ಹಾಕುದು ಬೇಡ ಅಂತ ಮೀಸಲಾತಿ ನೀಡಿರಲಿಲ್ಲ. ಜಸ್ಟಿಸ್ ನಾಗಮೋಹನ ದಾಸ್ ಅವರ ವರದಿಯನ್ನೂ ಜಾರಿ ಮಾಡ್ಲಿಲ್ಲ.ಮಂಡಲ್ ಕಮೀಷನ್ ಆಗುವಾಗ ಸಿದ್ದರಾಮಯ್ಯ ಎಲ್ಲಿದ್ದರು?ಇವತ್ತು ಮಂಡಲ್ ಕಮೀಷನ್, ನಾಗಮೋಹನದಾಸ್ ವರದಿ ಜಾರಿ ಬಗ್ಗೆ ಕೇಳಿತ್ತೀಯಾ? ನೀನೇನು ಮಾಡಿದ್ದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಏಕ ವಚನದಲ್ಲೇ ರಾಮುಲು ಪ್ರಶ್ನೆ ಮಾಡಿದ್ದಾರೆ.


Congress tweeted about Minister Sriramulu
ಸಿದ್ದರಾಮಯ್ಯ, ಶ್ರೀರಾಮುಲು


ನಿನ್ನ ಕಥೆ ಕೇಳುವವರು ಇಲ್ಲಿ ಯಾರೂ ಇಲ್ಲ


ಬಾಬಾ ಸಾಹೇಬರ ಆಶಯದಂತೆ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ನೀಡಲಾಗಿದೆ. ಮೀಸಲಾತಿ ಕೊಟ್ಟ ನಂತರ ನಿನ್ನ ಕಥೆ ಕೇಳುವವರು ಇಲ್ಲಿ ಯಾರೂ ಇಲ್ಲ. ನಿನ್ನ ಅಹಂಕಾರ ಜಾಸ್ತಿಯಾಗಿದೆ. ಚುನಾವಣೆಯಲ್ಲಿ ಜನರು ಅಹಂಕಾರ ಇಳಿಸಲಿದ್ದಾರೆ ಎಂದು ಶ್ರೀರಾಮುಲು ಹೇಳಿದ್ದಾರೆ.


ಪ್ರಸನ್ನಾನಂದ ಸ್ವಾಮಿಗಳ ಹೋರಾಟ 250 ದಿನದ ಹೋರಾಟ ಅಲ್ಲ. ಇದು 40 ವರ್ಷದ ಹೋರಾಟ. ರಕ್ತದಿಂದ ಬರೆದುಕೊಡುತ್ತೇನೆ ಅಂತ ಹೇಳಿದ್ದೆ. ಪಕ್ಷ ಜೊತೆಗೆ ಇರುತ್ತೆ ಅನ್ನೋ ವಿಶ್ವಾಸ ಇತ್ತು. ಭರವಸೆಯಂತೆ ಮುಖ್ಯಮಂತ್ರಿಗಳು ಮೀಸಲಾತಿ ನೀಡಿದ್ದಾರೆ ಎಂದ್ರು.


ಇದನ್ನೂ ಓದಿ: H D Kumaraswamy: ಕನ್ನಡದ ಕತ್ತು ಹಿಸುಕುವುದೇ ಬಿಜೆಪಿಯ ನಿತ್ಯ ಕಾಯಕ; ಎಚ್​ಡಿಕೆ ಕಿಡಿ


ಧಾರವಾಡದಲ್ಲಿ ನಡೆದ ಸಮಾವೇಶದಲ್ಲಿ ಮಾತಾಡಿದ ಸಚಿವ ಶ್ರೀರಾಮುಲು, ಮೀಸಲಾತಿ ಎನ್ನುವುದು ಜೇನುಗೂಡು ಇದ್ದಂತೆ. ಗೂಡಿಗೆ ಕೈ ಹಾಕಿದ್ರೆ ಮುಖಕ್ಕೆ ಕಡಿದು ಸಾಯಿಸಿ ಬಿಡುತ್ತೇವೆ. ಮಾಮೂಲಿ ಹುಳಗಳು ಕಡಿದರೆ ಬದುಕಬಹುದು. ಆದರೆ ಕಾಡಿನಲ್ಲಿರೋ ಹೆಜ್ಜೇನು ತುಂಬಾ ಅಪಾಯಕಾರಿ, ಅಂತಹ ಹೆಜ್ಜೇನಿನ ಗೂಡಿಗೆ ಕೈ ಹಾಕುವುದು ಅಂದರೆ ಎಷ್ಟು ಕಷ್ಟ.


ಬಿಜೆಪಿ ತೆಗೆದುಕೊಂಡ ತೀರ್ಮಾನ ಐತಿಹಾಸಿಕ


ಈ‌ ಮೀಸಲಾತಿ ಹೆಚ್ಚಳ ವಿಚಾರ ಇವತ್ತು ಗೊತ್ತಾಗುವುದಿಲ್ಲ. ಇನ್ನೊಂದು 10-15 ವರ್ಷ ಕಳೆಯಲಿ. ಆಗ ನಮ್ಮ‌ಮಕ್ಕಳು ನೌಕರಿಗೆ ಹೋದಾಗ ಸಂತೋಷ ಆಗುತ್ತೆ. ಆಗ ಬಿಜೆಪಿ ತೆಗೆದುಕೊಂಡ ತೀರ್ಮಾನ ಐತಿಹಾಸಿಕ ಅಂತ ಗೊತ್ತಾಗುತ್ತದೆ. ಈ ಕೆಲಸ ಯಾರೂ ಮಾಡಲಿಲ್ಲ.ಬಿಜೆಪಿ ಬಗ್ಗೆ ಯಾರ ಯಾರೋ ಬೊಬ್ಬೆ ಹೊಡಿತಾ ಇದ್ದರು. ಬಿಜೆಪಿ ಅಂದ್ರೆ ಬ್ರಾಹ್ಮಣರ ಪಕ್ಷ, ಲಿಂಗಾಯತರ, ಮುಂದುವರಿದ ಜಾತಿ ಪಕ್ಷ ಅಂತ ಇದ್ದರು. ಹೀಗೆ ಹೇಳುತ್ತಲೇ ಅವರು ನಮ್ಮನ್ನು ಆಳಿದ್ದರು ಎಂದು ರಾಮುಲು ಗುಡುಗಿದ್ದಾರೆ.


ಇದನ್ನೂ ಓದಿ: H D Kumaraswamy: ಇನ್ಸ್​ಪೆಕ್ಟರ್ ನಂದೀಶ್ ಸಾವು ಹೃದಯಾಘಾತವಲ್ಲ ಕೊಲೆ! ಉನ್ನತ ಮಟ್ಟದ ತನಿಖೆಗೆ ಎಚ್​ಡಿಕೆ ಆಗ್ರಹ


ಹಿಂದುಳಿದ ಸಮಾಜದ ಸ್ವಯಂಘೋಷಿತ ನಾಯಕ


ಅಂಬೇಡ್ಕರ ಭಾವಚಿತ್ರ ಇಟ್ಟುಕೊಂಡು ಎಸ್ಸಿ, ಎಸ್ಟಿ ಮತಗಳನ್ನು ತೆಗೆದುಕೊಂಡ್ರು. ಹಿಂದುಳಿದ ಸಮಾಜದ ಸ್ವಯಂಘೋಷಿತ ನಾಯಕ ಅಂತ ಹೇಳಿಕೊಂಡಿದ್ರಿ, ಹಿಂದುಳಿದ ನಾಯಕ ಅಂತ ಹೇಳಿಕೊಂಡೆ ಸಿಎಂ ಆಗಿದ್ರಿ ಆದರೂ ಏನ್​ ಮಾಡಿದ್ದಿರಪ್ಪಾ ನೀವು ಎಂದು ರಾಮುಲು ಪ್ರಶ್ನೆ ಮಾಡಿದ್ದಾರೆ.

Published by:ಪಾವನ ಎಚ್ ಎಸ್
First published: