• Home
  • »
  • News
  • »
  • state
  • »
  • Sriramulu: ಸಿದ್ದರಾಮಯ್ಯ ಎಲ್ಲಿ ನಿಂತ್ರು ಗೆಲ್ಲೋದಿಲ್ಲ; ಡಿಕೆಶಿ ಪರ ರಾಮುಲು ಬ್ಯಾಟಿಂಗ್​!

Sriramulu: ಸಿದ್ದರಾಮಯ್ಯ ಎಲ್ಲಿ ನಿಂತ್ರು ಗೆಲ್ಲೋದಿಲ್ಲ; ಡಿಕೆಶಿ ಪರ ರಾಮುಲು ಬ್ಯಾಟಿಂಗ್​!

ಸಿದ್ದರಾಮಯ್ಯ, ಶ್ರೀರಾಮುಲು

ಸಿದ್ದರಾಮಯ್ಯ, ಶ್ರೀರಾಮುಲು

ಸಿದ್ದರಾಮಯ್ಯ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ರು ಅತ್ಯಂತ ಕೀಳಾಗಿ ಸೋಲೋದು ಗ್ಯಾರೆಂಟಿ ಎಂದು ಕೊಪ್ಪಳದ ಗಂಗಾವತಿಯ ಪಂಪಸಾಗರದಲ್ಲಿ ಸಚಿವ ಶ್ರೀರಾಮುಲು ಹೇಳಿದ್ದಾರೆ.

  • Share this:

ಕೊಪ್ಪಳ (ನ.13): ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಬಗ್ಗೆ ಸಚಿವ ಶ್ರಿರಾಮುಲು (Minister SriRamulu) ಭವಿಷ್ಯ ನುಡಿದಿದ್ದಾರೆ. ಈ ಬಾರಿ ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ನಿಂತ್ರು ಗೆಲ್ಲೋದಿಲ್ಲ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. ಚುನಾವಣೆ ಗಿಮಿಕ್ ಗಾಗಿ ಕೋಲಾರದಲ್ಲಿ (Kolara) ಯಾತ್ರೆ ಮಾಡ್ತಿದ್ದಾರೆ. ರಾಜಕೀಯ ಪುನರ್ಜನ್ಮ ನೀಡಿದ ಬಾದಾಮಿ ಕ್ಷೇತ್ರದ ಜನರಿಗೆ ಸಿದ್ದರಾಮಯ್ಯ ಮೋಸ ಮಾಡ್ತಿದ್ದಾರೆ. ಸಿದ್ದರಾಮಯ್ಯ ಅವರನ್ನ ಬಾದಾಮಿ (Badami) ಜನರು ಯಾವ ಕಾರಣಕ್ಕೂ ಕ್ಷಮಿಸುವುದಿಲ್ಲ.


ವರುಣಾದಲ್ಲೂ ಸಿದ್ದರಾಮಯ್ಯ ಗೆಲ್ಲೋದು ಕಷ್ಟ


ಸಿದ್ದರಾಮಯ್ಯ ಅವರು ಕೊನೆದಾಗಿ ಸ್ಪರ್ಧೆ ಮಾಡೋದು ವರುಣಾದಲ್ಲೇ, ವರುಣಾದಲ್ಲೂ ಸಿದ್ದರಾಮಯ್ಯ ಗೆಲ್ಲೋದು ಕಷ್ಟ ಎಂದು ಶ್ರೀರಾಮುಲು ಭವಿಷ್ಯ ನುಡಿದಿದ್ದಾರೆ. ಜನರ ಅಟೆನ್ಶನ್ ಡೈವರ್ಟ್​ ಮಾಡಲು  ಪಾದಯಾತ್ರೆ ಮಾಡ್ತಿದ್ದಾರೆ. ಕೋಲಾರದಿಂದ ಡಿಮ್ಯಾಂಡ್ ಕ್ರಿಯೇಟ್ ಮಾಡ್ತಿದ್ದಾರೆ ಎಂದು ರಾಮುಲು ಹೇಳಿದ್ದಾರೆ.


bjp mla raju gowda reacts on siddaramaiah and sriramulu talk war mrq
ಸಿದ್ದರಾಮಯ್ಯ , ಡಿಕೆ ಶಿವಕುಮಾರ್, ಶ್ರೀರಾಮುಲು


ಬಾದಾಮಿ ಜನರಿಗೆ ಸಿದ್ದರಾಮಯ್ಯರಿಂದ ಮೋಸ 


ರಾಜಕಿಯ ಪುನರ್ಜನ್ಮ ನೀಡಿದ ಬಾದಾಮಿ ಜನರಿಗೆ ಸಿದ್ದರಾಮಯ್ಯ ಕೈ ಕೊಡ್ತಾಯಿದ್ದಾರೆ. ಮಾಜಿ ಸಿ ಎಂ ಸಿದ್ದರಾಮಯ್ಯ ವಿರುದ್ದ ಬಿಜೆಪಿ ಅಚ್ಚರಿಯ ಅಭ್ಯರ್ಥಿಯನ್ನ ಕಣಕ್ಕಿಳಿಸ್ತಿವಿ. ವರುಣಾದಿಂದ ಕೂಡಾ ಅವರನ್ನ ಸೋಲಿಸ್ಲಿಕ್ಕೆ ನಮ್ಮ ಕಾರ್ಯಕರ್ತರು ಕೆಲಸ ಮಾಡ್ತಾರೆ.


ಸಿದ್ದರಾಮಯ್ಯಗೆ ಡಿಕೆಶಿಯದ್ದೇ ಭಯ


ಮಾಜಿ ಸಿ ಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿಗಿಂತ ಅವರ ಪಕ್ಷದ ಡಿ ಕೆ ಶಿವಕುಮಾರ್ ಭಯ ಹೆಚ್ಚಾಗಿದೆ. ಅವರು ಎಲ್ಲೇ ಚುನಾವಣೆಗೆ ನಿಂತರು ಡಿಕೆಶಿ ಭಯ ಕಾಡ್ತಿದೆ. ಡಿಕೆಶಿ ಪ್ರಭಾವ ಇಲ್ಲದ ಕಡೆಯಲ್ಲಿ ಚುನಾವಣೆ ನಿಲ್ಲಲು ಹುಡುಕಾಟ ನಡೆಸಿದ್ದಾರೆ. ಡಿಕೆ ಶಿವಕುಮಾರ್ ಅಂತವರಲ್ಲ ತುಂಬಾ ಒಳ್ಳೆಯವರು ಎಂದು ಡಿಕೆ ಶಿವಕುಮಾರ್​ ಪರ ಸಾಫ್ಟ್​ ಕಾರ್ನರ್ ತೋರಿದ್ದಾರೆ.


ಸಿದ್ದರಾಮಯ್ಯ ಸೋಲೋದು ಗ್ಯಾರೆಂಟಿ


ಸಿದ್ದರಾಮಯ್ಯ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ರು ಅತ್ಯಂತ ಕೀಳಾಗಿ ಸೋಲೋದು ಗ್ಯಾರೆಂಟಿ ಎಂದು ಕೊಪ್ಪಳದ ಗಂಗಾವತಿಯ ಪಂಪಸಾಗರದಲ್ಲಿ ಸಚಿವ ಶ್ರೀರಾಮುಲು ಹೇಳಿದ್ದಾರೆ.


ಕೋಲಾರದಲ್ಲಿ ಸಿದ್ದು ಸ್ಪರ್ಧೆಗೆ ರೆಡಿಯಾಗ್ತಿದೆ ಅಖಾಡ!

ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಕೋಲಾರವೇ ಸಿದ್ದರಾಮಯ್ಯ ಅವರಿಗೆ ಸ್ಪರ್ಧಿಸಲು ಸೇಫ್ ಆಗಿರೋ ಕ್ಷೇತ್ರ ಎನ್ನುವ  ಮಾತುಗಳು ಸಹ ಪಕ್ಷದ ವಲಯದಲ್ಲಿ ಕೇಳಿಬರ್ತಿದೆ. ​ಇದಕ್ಕೆ ಸಂಬಂಧಿಸಿದಂತೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸ್ಥಳೀಯ ನಾಯಕ ಅಭಿಪ್ರಾಯಗಳನ್ನ ಸಂಗ್ರಹಿಸಿದ್ದು ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ.
ತ್ರದ ಹುಡುಕಾಟದಲ್ಲಿರುವ  ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರಕ್ಕೆ ಬರ್ತಿದ್ದಂತೆ ಭರ್ಜರಿ ಸ್ವಾಗತ ಸಿಕ್ಕಿದೆ. ಕೋಲಾರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸಿದ್ದರಾಮಯ್ಯ ಮೆಥೋಡಿಸ್ಟ್ ಚರ್ಚ್​ಗೆ ಸಿದ್ದರಾಮಯ್ಯ ಭೇಟಿ ನೀಡಿದ್ರು. ಚಿನ್ನದ ಗಣಿ ನಾಡಿಗೆ ಬಂದ ಬಂದ ಸಿದ್ದರಾಮಯ್ಯರಿಗೆ ಕಾಂಗ್ರೆಸ್​ ಮುಖಂಡರು ಹಾಗೂ ಕಾರ್ಯಕರ್ತರು ಕ್ರೇನ್ ಮೂಲಕ 300 ಕೆಜಿ ತೂಕದ ಸೇಬಿನ ಹಾರ ಹಾಕಿದ್ರು. ಅಭಿಮಾನಿಗಳು ಜೈಕಾರ ಹಾಕಿ ಸಂಭ್ರಮಿಸಿದ್ರು.


ಇದನ್ನೂ ಓದಿ: Karnataka Politics: ಸಿದ್ದರಾಮಯ್ಯ ಮೇಲೆ ರಾಹುಲ್ ಗಾಂಧಿ ನೆರಳು ಬಿದ್ದಿದೆ; ಪ್ರಹ್ಲಾದ್ ಜೋಶಿ

 ಕೋಲಾರದಿಂದ ಸ್ಪರ್ಧಿಸುವಂತೆ ಒತ್ತಡವಿದೆ

 ಕೋಲಾರಕ್ಕೆ ಬರುವಂತೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಜಿಲ್ಲೆಯ ಶಾಸಕರು ಸ್ವಾಗತಿಸಿದ್ದಾರೆ. ಇಂದು ಕೋಲಾರದ ಭೇಟಿ ವೇಳೆ ಅದ್ದೂರಿ ಸ್ವಾಗತ ಸಿಕ್ಕಿದೆ. ಎಲ್ಲರಿಗೂ ನಾನು ಧನ್ಯವಾದ ಅರ್ಪಿಸುವೆ ಕೋಲಾರದಲ್ಲಿ ಸ್ಪರ್ಧೆ ಮಾಡುವಂತೆ ನನ್ನ ಮೇಲೆ ಒತ್ತಡ ಇದೆ. ನಾನೂ ಈಗ ಬಾದಾಮಿ ಕ್ಷೇತ್ರದ ಶಾಸಕನಾಗಿದ್ದೇನೆ. ವರುಣಾ, ಬಾದಾಮಿಯಿಂದಲೂ ಸ್ಪರ್ಧೆಗೆ ಒತ್ತಾಯಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ರು.

Published by:ಪಾವನ ಎಚ್ ಎಸ್
First published: