ದಲಿತರನ್ನು ತುಳಿದು ಮೇಲೆ ಬಂದ ಸಿದ್ದರಾಮಯ್ಯ ನಂಬಿದವರ ಕತ್ತು ಕೊಯ್ತಾರೆ; ಸಚಿವ ಶ್ರೀರಾಮುಲು ವಾಗ್ದಾಳಿ

ಅನರ್ಹ ಶಾಸಕರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಟಾರ್ಗೆಟ್ ಮಾಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಶ್ರೀರಾಮುಲು, ಸಿದ್ದರಾಮಯ್ಯ ನಂಬಿದವರ ಕತ್ತು ಕೊಯ್ಯುತ್ತಿದ್ದಾರೆ. ದಲಿತ ನಾಯಕರನ್ನು ತುಳಿಯುತ್ತಾ ಬಂದಿದ್ದಾರೆ ಎಂದಿದ್ದಾರೆ.

news18-kannada
Updated:November 29, 2019, 1:41 PM IST
ದಲಿತರನ್ನು ತುಳಿದು ಮೇಲೆ ಬಂದ ಸಿದ್ದರಾಮಯ್ಯ ನಂಬಿದವರ ಕತ್ತು ಕೊಯ್ತಾರೆ; ಸಚಿವ ಶ್ರೀರಾಮುಲು ವಾಗ್ದಾಳಿ
ಶ್ರೀರಾಮುಲು
  • Share this:
ಬೆಂಗಳೂರು (ನ. 29): ಮೊದಲಿನಿಂದಲೂ ಸಿದ್ದರಾಮಯ್ಯ ತಮ್ಮನ್ನು ನಂಬಿದವರ ಕತ್ತು ಕೊಯ್ದು ಬದುಕುತ್ತಿದ್ದಾರೆ. ಅವರೀಗ ಸಿಂಗಲ್ ಸ್ಟಾರ್ ಆಗಿದ್ದಾರೆ. ದಲಿತರ ಹೆಸರು ಬಳಸಿಕೊಂಡು ಚುನಾವಣೆಯಲ್ಲಿ ಗೆದ್ದಿರುವ ಸಿದ್ದರಾಮಯ್ಯ ಅವರನ್ನೇ ತುಳಿಯುತ್ತಿದ್ದಾರೆ ಎಂದು ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.

ಹೇರೋಹಳ್ಳಿಯ ಪ್ರಚಾರದಲ್ಲಿ ಮಾತನಾಡಿರುವ ಸಚಿವ ಶ್ರೀರಾಮುಲು, ಗೆದ್ದ 24 ಗಂಟೆಯೊಳಗೆ ಎಸ್​.ಟಿ. ಸೋಮಶೇಖರ್ ಮಂತ್ರಿಯಾಗುತ್ತಾರೆ. ನಾನು ಅವರ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತೇನೆ. ನೀವು ಶಾಸಕರನ್ನು ಗೆಲ್ಲಿಸುತ್ತಿಲ್ಲ, ಮಂತ್ರಿಯನ್ನು ಗೆಲ್ಲಿಸುತ್ತಿದ್ದೀರ. ನಾವಿಬ್ಬರೂ ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮ ಪಡುತ್ತೇವೆ. ದೇಶದಲ್ಲಿ ಕಾಂಗ್ರೆಸ್ ಇಲ್ಲ, ಜೆಡಿಎಸ್ ಕೂಡ ಇಲ್ಲ. ಹೀಗಾಗಿ ಸೋಮಶೇಖರ್ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ.

ಪರಿವಾರ ಮತ್ತು ತಳವಾರ ಸಮುದಾಯವನ್ನು ಎಸ್​ಟಿ ಎಂದು ಪರಿಗಣಿಸಲು ಕೇಂದ್ರ ಸರ್ಕಾರ ಒಪ್ಪಿದೆ. ನಿನ್ನೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಒಪ್ಪಿಗೆ ನೀಡಿದೆ. ನ್ಯಾಯಮೂರ್ತಿ ನಾಗಮೋಹನದಾಸ್ ಸಮಿತಿ ಇನ್ನು ಎರಡು ತಿಂಗಳಲ್ಲಿ ತನ್ನ ವರದಿ ನೀಡಲಿದೆ. ಆ ವರದಿ ಬರುತ್ತಿದ್ದಂತೆ ವಾಲ್ಮೀಕಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲು ಕಲ್ಪಿಸುವುದು ನಿಶ್ಚಿತ ಎಂದು ಶ್ರೀರಾಮುಲು ಭರವಸೆ ನೀಡಿದ್ದಾರೆ.

ಹನಿಟ್ರ್ಯಾಪ್​ ಜಾಲದೊಳಗೆ ಬಿಜೆಪಿ ಎಂಎಲ್​ಎ; ಸಿಸಿಬಿ ಪೊಲೀಸರಿಗೆ ಸಿಕ್ತು ಕರಾವಳಿ ಶಾಸಕನ ಅಶ್ಲೀಲ ವಿಡಿಯೋ

ಅನರ್ಹ ಶಾಸಕರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಟಾರ್ಗೆಟ್ ಮಾಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಶ್ರೀರಾಮುಲು, ಸಿದ್ದರಾಮಯ್ಯ ನಂಬಿದವರ ಕತ್ತು ಕೊಯ್ಯುತ್ತಿದ್ದಾರೆ. ದಲಿತ ನಾಯಕರನ್ನು ತುಳಿಯುತ್ತಾ ಬಂದಿದ್ದಾರೆ. ಕಾಂಗ್ರೆಸ್​ನಲ್ಲಿ ಡಾ. ಜಿ. ಪರಮೇಶ್ವರ್ ಮುಖ್ಯಮಂತ್ರಿಯಾಗಬೇಕಿತ್ತು. ಆ ಅವಕಾಶವನ್ನು ಕಿತ್ತುಕೊಂಡ ಸಿದ್ದರಾಮಯ್ಯ ಕೊರಟಗೆರೆ ಕ್ಷೇತ್ರದಲ್ಲಿ ಸೋಲುವಂತೆ ಮಾಡಿದರು. ಇದೇ ರೀತಿ ಮೇಲ್ವರ್ಗದ ದಿನೇಶ್ ಗುಂಡೂರಾವ್, ವಿನಯ್ ಕುಲಕರ್ಣಿಯನ್ನು ಕೂಡ ತುಳಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸೀರಿಯಲ್ ನಟಿಯರ ಮೂಲಕ 10 ರಾಜಕಾರಣಿಗಳ ಹನಿಟ್ರ್ಯಾಪ್; ಈ ಜಾಲಕ್ಕೆ ಸಿಲುಕಿದ್ದಾರೆ ಇಬ್ಬರು ಅನರ್ಹ ಶಾಸಕರು!

ದಲಿತ ನಾಯಕರು ಮಾಜಿ ಸಿಎಂ ಸಿದ್ದರಾಮಯ್ಯನವರ ಜೊತೆಗಿಲ್ಲ. ಜಿ. ಪರಮೇಶ್ವರ್, ಬಿ.ಕೆ. ಹರಿಪ್ರಸಾದ್, ಮಲ್ಲಿಕಾರ್ಜುನ ಖರ್ಗೆ ಯಾರೂ ಈಗ ಸಿದ್ದರಾಮಯ್ಯ ಜೊತೆಗಿಲ್ಲ. ದಲಿತರ ಹೆಸರು ಬಳಸುತ್ತಾ ಸ್ಥಾನಮಾನ ಪಡೆಯುತ್ತಾರೆ. ಈಗಾಗಲೇ ಕಾಂಗ್ರೆಸ್​ನಲ್ಲಿ ಮೂಲ ಮತ್ತು ವಲಸಿಗ ಎಂದು 2 ಬಣ ಆಗಿದೆ. ಈ ಸಂಬಂಧ ಸಿದ್ದರಾಮಯ್ಯನವರ ವಿರುದ್ಧ ದೂರು ನೀಡಲು ಕಾಂಗ್ರೆಸ್ ಪಕ್ಷದ ಕೆಲವರು ಚಿಂತನೆ ಮಾಡಿದ್ದಾರೆ. ಸಿದ್ದರಾಮಯ್ಯ ಅವಕಾಶವಾದಿ ರಾಜಕಾರಣಿ. ಫಲಿತಾಂಶದ ಬಳಿಕ ಸಿದ್ದರಾಮಯ್ಯನವರಿಗೆ ವಿಪಕ್ಷ ಸ್ಥಾನ ಹೋಗುತ್ತದೆ ಎಂದು ಶ್ರೀರಾಮುಲು ಕಿಡಿಕಾರಿದ್ದಾರೆ.
First published: November 29, 2019, 1:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading