ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಷ್ಟ ಪಟ್ಟು ಮೇಲೆ ಬಂದ ವ್ಯಕ್ತಿ ಅಲ್ಲ ; ಸಚಿವ ಶ್ರೀರಾಮುಲು

ಇಡೀ ದೇಶದಲ್ಲಿ ಕಾಂಗ್ರೆಸ್​​​ ನವರನ್ನು ಅಟ್ಟಿಸಿಕೊಂಡು ಹೊಡೆದಿದ್ದಾರೆ. ಯಾವುದೇ ರಾಜ್ಯದಲ್ಲಿ ಅವರಿಗೆ ಬಹುಮತ ಸಿಗುವ ಸನ್ನಿವೇಶವಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿಯೂ ಅಸ್ತಿತ್ವ ಇರುವುದಿಲ್ಲ ಎಂದು ಹೇಳಿದರು

G Hareeshkumar | news18-kannada
Updated:December 7, 2019, 5:28 PM IST
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಷ್ಟ ಪಟ್ಟು ಮೇಲೆ ಬಂದ ವ್ಯಕ್ತಿ ಅಲ್ಲ ; ಸಚಿವ ಶ್ರೀರಾಮುಲು
ಸಚಿವ ಶ್ರೀರಾಮುಲು ಹಾಗೂ ಸಿದ್ದರಾಮಯ್ಯ
  • Share this:
ಚಿತ್ರದುರ್ಗ(ಡಿ.06) : ಸಿದ್ದರಾಮಯ್ಯ ಕಷ್ಟ ಪಟ್ಟು ಮೇಲೆ ಬಂದ ವ್ಯಕ್ತಿ ಅಲ್ಲ. ಅವರು ಯಾವುದೇ ಸಿದ್ದಾಂತದಿಂದ ಬಂದವರಲ್ಲ. ಪಕ್ಷದಿಂದ ಪಕ್ಷಕ್ಕೆ ಜಿಗಿದು ರಾಜಕಾರಣ ಮಾಡಿದವರು. ಇರುವೆ ಕಟ್ಟಿದ ಉತ್ತಕ್ಕೆ ಹಾವು ಸೇರಿಕೊಂಡಂತೆ ಸೇರಿ ಹುತ್ತವನ್ನೆ ನಾಶ ಮಾಡುವ ವ್ಯಕ್ತಿ ಎಂದು ಸಿದ್ದರಾಮಯ್ಯ ವಿರುದ್ದ ಸಚಿವ ಬಿ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿದ್ದು ಒಳ್ಳೆ ಕೆಲಸ ಮಾಡುತ್ತಾರೆ ಅಂತ ಜನ ಅಲ್ಲಿ ಕೂರಿಸಿದ್ದಾರೆ. ಉಪ ಚುನಾವಣೆಯಲ್ಲಿ 12-13 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ. ಸರ್ಕಾರ ಒಳ್ಳೆ ಕೆಲಸ ಮಾಡುತ್ತಿದೆ ಅಂತ ಜನ ಸರ್ಕಾರದ ಪರ ತೀರ್ಪು ನೀಡುತ್ತಾರೆ. ಮತ್ತೆ ಬಿಜೆಪಿಯವರು ಅಪರೇಷನ್ ಕಮಲ ಮಾಡಿದ್ರೆ ಬಿಜೆಪಿಯವರನ್ನ ಅಟ್ಟಿಸಿಕೊಂಡು ಹೊಡೆಯುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಶ್ರೀರಾಮುಲು ತಿರುಗೇಟು ನೀಡಿದರು.

ಇಡೀ ದೇಶದಲ್ಲಿ ಕಾಂಗ್ರೆಸ್​​​ ನವರನ್ನು ಅಟ್ಟಿಸಿಕೊಂಡು ಹೊಡೆದಿದ್ದಾರೆ. ಯಾವುದೇ ರಾಜ್ಯದಲ್ಲಿ ಅವರಿಗೆ ಬಹುಮತ ಸಿಗುವ ಸನ್ನಿವೇಶವಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿಯೂ ಅಸ್ತಿತ್ವ ಇರುವುದಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ರನ್ನ ಬಿಜೆಪಿಗೆ ಕರೆ ತರುವ  ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯರನ್ನ ಕರೆದುಕೊಂಡು ಬರುವುದಾಗಿ ರಮೇಶ್ ಹೇಳಿರಬಹುದು. ಮುಂಚೆಯಿಂದಲೂ ಅವರ ಸ್ನೇಹ ಚೆನ್ನಾಗಿದೆ. ಸಿದ್ದರಾಮಯ್ಯ ಪೂರ್ಣ ಕಾಂಗ್ರೆಸಿಗರಲ್ಲ. ವಲಸೆ ಕಾಂಗ್ರೆಸಿಗರು. ಜೆಡಿಎಸ್ ನಲ್ಲಿದ್ದು ಕಾಂಗ್ರೆಸ್​​ಗೆ ಜಿಗಿದರು, ಕಾಂಗ್ರೆಸ್​​ ನಿಂದ ಎಲ್ಲಿಗೆ ಜಿಗಿಯುತ್ತಾರೆ ಗೊತ್ತಿಲ್ಲ ಎಂದರು.

ಇದನ್ನೂ ಓದಿ : ತಕ್ಷಣ ಕನಕಪುರಕ್ಕೆ ಮೆಡಿಕಲ್​ ಕಾಲೇಜು ಮಂಜೂರು ಮಾಡಿ: ಇಲ್ಲದಿದ್ದರೆ ನನ್ನ ಹಾದಿಯಲ್ಲಿ ಹೋರಾಟ; ಸಿಎಂಗೆ ಡಿಕೆಶಿ ಎಚ್ಚರ

ಅವರಿಗೆ ಈಗ ಅಧಿಕಾರ ಬೇಕಾಗಿದೆ. ಮುಖ್ಯಮಂತ್ರಿ ಆಗುತ್ತೀರಿ ಎಂದು ಬೇರೆ ಪಕ್ಷದವರು ಕರೆದರೆ ಅವರ ಹಿಂದೆಯೇ ಹೋಗುತ್ತಾರೆ. ಜೆಡಿಎಸ್ ನಲ್ಲಿ ಡಿಸಿಎಂ ಮಾಡಲಿಲ್ಲ ಅಂತ ಕಾಂಗ್ರೆಸ್​​ ಗೆ ಬಂದರು. ಕಾಂಗ್ರೆಸ್ ನಲ್ಲಿ ಸಿಎಂ ಅಭ್ಯರ್ಥಿ, ವಿರೋಧ ಪಕ್ಷದ ನಾಯಕ ಮಾಡಲ್ಲ ಎಂದರೆ. ಬೇರೆ ಪಕ್ಷಕ್ಕೆ ಜಿಗಿಯಲೂ ರೆಡಿ ಇರ್ತಾರೆ ಎಂದು ತಿಳಿಸಿದರು.

ರಾಜ್ಯದ 15 ಕ್ಷೇತ್ರಗಳಲ್ಲಿ ಉಪ ಚುನಾವಣೆಯಾಗಿದೆ. 7-8 ಕ್ಷೇತ್ರಗಳಲ್ಲಿ ನಾನು ಪ್ರವಾಸ ಮಾಡಿದ್ದೇನೆ. ಅಲ್ಲಿನ ಎಸ್​​ ಸಿ ಹಾಗೂ ಎಸ್ಟಿ, ಹಿಂದುಳಿದ ಸಮುದಾಯದ ಜನ ಹೆಚ್ಚು ಮತದಾನ ಮಾಡಿದ್ದಾರೆ ಎಂದರು. 
First published:December 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ