ಬೆಂಗಳೂರು (ಮಾರ್ಚ್ 16); ಇಡೀ ದೇಶ ಇಂದು ಕೊರೋನಾ ಭೀತಿಯಿಂದ ನಲುಗಿದ್ದರೆ, ಮಲೆನಾಡು ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಮಂಗನ ಖಾಯಿಲೆಗೆ ತತ್ತರಿಸಿವೆ. ವರ್ಷದಿಂದ ವರ್ಷಕ್ಕೆ ಸಾವಿನ ಸಂಖ್ಯೆ ಏರುತ್ತಲೇ ಇದೆ. ಪರಿಣಾಮ ಈ ವಿಚಾರ ಇಂದು ವಿಧಾಸಭೆಯಲ್ಲಿ ಬಿಜೆಪಿ ಪಕ್ಷದ ನಾಯಕರ ನಡುವೆಯೇ ಕಿತ್ತಾಟಕ್ಕೆ ಕಾರವಾಗಿತ್ತು.
ಇಂದು ವಿಧಾನ ಮಂಡಲ ಅಧಿವೇಶದಲ್ಲಿ ಮಲೆನಾಡಿನಲ್ಲಿ ಮಂಗನ ಖಾಯಿಲೆಯಿಂದ ಮೃತಪಟ್ಟವರ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದಾಯಿತು. ಇದಕ್ಕೆ ಉತ್ತರ ನೀಡುವ ವೇಳೆ ಮಾಹಿತಿ ನೀಡಲು ಮುಂದಾದ ಆರೋಗ್ಯ ಸಚಿವ ಶ್ರೀರಾಮುಲು, “ಮಲೆನಾಡಿನಲ್ಲಿ ಕಳೆದ ವರ್ಷ 210 ಮಂಗನ ಖಾಯಿಲೆ ಪ್ರಕರಣ ದಾಖಲಾಗಿತ್ತು. ಈ ವರ್ಷ 419 ಪ್ರಕರಣ ದಾಖಲಾಗಿದೆ. ಈ ಪೈಕಿ 15 ಜನ ಸಾವನ್ನಪ್ಪಿದ್ದಾರೆ” ಎಂದು ತಿಳಿಸಿದರು.
ಈ ವೇಳೆ ಗರಂ ಆದ ಸಾಗರದ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಸಾವಿನ ಸಂಖ್ಯೆ 15 ಅಲ್ಲ 23 ನಾನು ದಾಖಲೆ ತರ್ತೀನಿ, ಸುಳ್ಳು ಸುಳ್ಳು ಉತ್ತರ ನೀಡಿದ್ರೆ ಹೊಟ್ಟೆ ಉರಿಯಲ್ವ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಸಾವಿ ಕೂಪ. ಅಲ್ಲಿ ಸತ್ತವರನ್ನು ಕನಿಷ್ಟ ಮರಣೋತ್ತರ ಪರೀಕ್ಷೆಯೂ ಮಾಡಲ್ಲ. ಅಲ್ಲದೆ ಅಧಿಕಾರಿಗಳು ಸಿಎಂಗೆ ತಪ್ಪು ಮಾಹಿತಿ ನೀಡುತ್ತಾರೆ” ಎಂದು ಕಿಡಿಕಾರಿದರು.
ಅಧಿವೇಶನದ ವೇಳೆ ಶಾಸಕ ಹಾಲಪ್ಪ ಅವರ ಆಕ್ರೋಶಕ್ಕೆ ಕೊನೆಗೂ ಮಣಿದ ಸಚಿವ ಶ್ರೀರಾಮುಲು "ಸಿಎಂ ಯಡಿಯೂರಪ್ಪ, ಈಶ್ವರಪ್ಪ ಮತ್ತು ಹರತಾಳು ಹಾಲಪ್ಪ ಅವರ ಜೊತೆ ಸಭೆ ನಡೆಸಿ ಇದಕ್ಕೆ ಸೂಕ್ತ ಪರಿಹಾರ ನೀಡಲಾಗುವುದು" ಎಂದು ಆಶ್ವಾಸನೆ ನೀಡಿದರು.
ಇದನ್ನೂ ಓದಿ : ಕೊರೋನಾ ವೈರಸ್ ಬಗ್ಗೆ 7 ವರ್ಷದ ಹಿಂದೆಯೇ ಟ್ವಿಟರ್ ನಲ್ಲಿ ಎಚ್ಚರಿಕೆ ನೀಡಿದ್ದ ಈತ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ