ಗಣರಾಜ್ಯೋತ್ಸವ ಭಾಷಣ: ಮತ್ತೆ ಕನ್ನಡ ಪದ ತಪ್ಪಾಗಿ ಬಳಕೆ ಮಾಡಿ ಸುದ್ದಿಯಾದ ಸಚಿವ ಶ್ರೀರಾಮುಲು

ವೈವಿಧ್ಯತೆಯ ದೇಶ ಎನ್ನುವ ಬದಲು ವೈವಿಧ್ಯತೆ ಇಲ್ಲದ ದೇಶ, ಸಾಮಾಜಿಕ ನ್ಯಾಯದ ಬದಲಾಗಿ ‘ನಾಯಿ’, ಉಡಾವಣೆ ಬದಲಾಗಿ ‘ಉಗ್ರಾಣಿಗಳು’, ಮಾದರಿ ಬದಲಿ ಮಾಧುರಿ ಎಂದು ಹೇಳುವ ಮೂಲಕ ಎಡವಟ್ಟು ಮಾಡಿಕೊಂಡರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಯಚೂರು (ಜ.26): 71ನೇ ಗಣರಾಜ್ಯೋತ್ಸವ ಭಾಷಣದ ವೇಳೆ ಸಚಿವ ಶ್ರೀರಾಮುಲು ಕನ್ನಡ ಪದಗಳನ್ನುತಪ್ಪು ತಪ್ಪಾಗಿ ಉಚ್ಛಾರಣೆ ಮಾಡಿ ಮತ್ತೆ ಟೀಕೆಗೆ ಒಳಗಾಗಿದ್ದಾರೆ. 

ಇಲ್ಲಿ  ಧ್ವಜಾರೋಹಣ ಮಾಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀರಾಮುಲು, ಭಾಷಣದುದ್ದಕ್ಕೂ ಹಲವು ಕನ್ನಡ  ಪದಗಳನ್ನುಸರಿಯಾಗಿ ಉಚ್ಛಾರಣೆ ಮಾಡಿಲ್ಲ.

ದೇಶದ ಕುರಿತು ಮಾತನಾಡಿದ ಅವರು ವೈವಿಧ್ಯತೆಯ ದೇಶ ಎನ್ನುವ ಬದಲು ವೈವಿಧ್ಯತೆ ಇಲ್ಲದ ದೇಶ, ಸಾಮಾಜಿಕ ನ್ಯಾಯದ ಬದಲಾಗಿ ‘ನಾಯಿ’, ಉಡಾವಣೆ ಬದಲಾಗಿ ‘ಉಗ್ರಾಣಿಗಳು’, ಮಾದರಿ ಬದಲಿ ಮಾಧುರಿ ಎಂದು ಹೇಳುವ ಮೂಲಕ ಎಡವಟ್ಟು ಮಾಡಿಕೊಂಡರು

ಅಷ್ಟೇ ಅಲ್ಲದೇ, ಜ.26ರ ಗಣರಾಜ್ಯೋತ್ಸವ ದಿನಾಚರಣೆ ಎನ್ನುವ ಬದಲು ಆಗಸ್ಟ್​ 15 ಗಣರಾಜ್ಯೋತ್ಸವ ದಿನಾಚರಣೆ ಎಂದಿದ್ದಾರೆ.

ಇದನ್ನು ಓದಿ: ಬೆಂಗಳೂರಿನಲ್ಲಿ ಧ್ವಜಾರೋಹಣ ಮಾಡಿದ ರಾಜ್ಯಪಾಲ ವಜುಭಾಯಿ ವಾಲಾ; ಕೇಸರಿ, ಬಿಳಿ, ಹಸಿರು ಬಣ್ಣದ ಶಾಲು ಧರಿಸಿ ಮಿಂಚಿದ ಸಿಎಂ

ಈ ಹಿಂದೆ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕೂಡ ಅವರು ಕನ್ನಡ ನಾಡು ನುಡಿ ಬಗ್ಗೆ ಭಾಷಣ ಮಾಡುವಾಗ ಅಭಾಸವಾಗಿ ಕನ್ನಡ ಮಾತನಾಡುವ ಮೂಲಕ ಟೀಕೆಗೆ ಗುರಿಯಾಗಿದ್ದರು. ಶ್ರೀರಾಮುಲು ಕನ್ನಡವನ್ನು ಟೀಕೆ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಅವರಿಗೆ ಸ್ವರ, ವ್ಯಂಜನಗಳ ಜ್ಞಾನವಿಲ್ಲ ಎಂದು ಟೀಕಿಸಿದ್ದರು. ಈಗ ಮತ್ತೊಮ್ಮೆ ಇದೇ ರೀತಿ ಎಡವಟ್ಟು ಮಾಡಿಕೊಳ್ಳುವ ಮೂಲಕ ಸಚಿವರು ಸುದ್ದಿಯಾಗಿದ್ದಾರೆ.
First published: