• Home
  • »
  • News
  • »
  • state
  • »
  • Sri Ramulu Tweet: ಕಾಂಗ್ರೆಸ್ ಸಮಾವೇಶದ ಕಸ ಕ್ಲೀನ್ ಮಾಡಿದ ಶ್ರೀರಾಮುಲು! ಕೈ ನಾಯಕರಿಗೆ ಸಚಿವರು ಕೊಟ್ರು ಟಾಂಗ್

Sri Ramulu Tweet: ಕಾಂಗ್ರೆಸ್ ಸಮಾವೇಶದ ಕಸ ಕ್ಲೀನ್ ಮಾಡಿದ ಶ್ರೀರಾಮುಲು! ಕೈ ನಾಯಕರಿಗೆ ಸಚಿವರು ಕೊಟ್ರು ಟಾಂಗ್

ಸಚಿವ ಶ್ರೀರಾಮುಲು

ಸಚಿವ ಶ್ರೀರಾಮುಲು

ಸಮಾವೇಶದಲ್ಲಿ ದೊಡ್ಡ ದೊಡ್ಡ ಭಾಷಣ ಬಿಗಿದು ಹೋಗಿದ್ದಾರೆ.  ವೀರಾವೇಶದ ಮಾತುಗಳನ್ನಾಡಿದ್ದ ಕಾಂಗ್ರೆಸ್ ನಾಯಕರಿಗೆ ಕನಿಷ್ಟ ಪಕ್ಷ ತಾವು ಮಾಡಿದ್ದ ಹೊಲಸನ್ನು ಸ್ವಚ್ಛಗೊಳಿಸಬೇಕೆಂಬ ಸಾಮಾನ್ಯ ಜ್ಞಾನವೂ ಇದ್ದಂತೆ ಕಾಣಲಿಲ್ಲ ಎಂದು ರಾಮುಲು ಟ್ವೀಟ್​ ಮೂಲಕ ಕಿಡಿಕಾರಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಸಚಿವ ಶ್ರೀರಾಮುಲು (Minister Sriramulu) ಹಾಗೂ ಕಾಂಗ್ರೆಸ್ (Congress) ನಡುವಿನ ಟ್ವೀಟ್ ವಾರ್ (Tweet War) ಮುಂದುವರಿದಿದೆ. ಕಾಂಗ್ರೆಸ್​ ವಿರುದ್ಧ ಸಾಲು ಸಾಲು ಟ್ವೀಟ್ ಮಾಡಿ ರಾಮುಲು ವಾಗ್ದಾಳಿ ನಡೆಸಿದ್ದಾರೆ. ಬಳ್ಳಾರಿಯ (Ballary) ತಲುಪಿದ್ದ ರಾಹುಲ್ ಜೋಡೋ ಯಾತ್ರೆಗೆ ಕಾರ್ಯಕರ್ತರ ದಂಡೇ ಹರಿದು ಬಂದಿತ್ತು. ಕಾಂಗ್ರೆಸ್​ ಸಮಾವೇಶ ಮಾಡಿದ್ದ ಜಾಗವನ್ನು ಸಚಿವ ಶ್ರೀರಾಮುಲು ಸ್ವಚ್ಛಗೊಳಿಸುವ ಮೂಲಕ ಕಾಂಗ್ರೆಸ್​ಗೆ ವಿಭಿನ್ನ ರೀತಿಯಲ್ಲಿ ಟಾಂಗ್​ ಕೊಟ್ಟಿದ್ದಾರೆ. 


ನಾವು ಮಾತ್ರ ಸ್ವಚ್ಛವಾಗಿದ್ದರೆ ಸಾಲದು, ಪರಿಸರವೂ ಶುಭ್ರವಾಗಿರಬೇಕು


ಮುನಿಸಿಪಲ್ ಮೈದಾನ ಸ್ವಚ್ಚಗೊಳಿಸಿದ ಸಚಿವ ಶ್ರೀರಾಮುಲು, ನಾವು ಮಾತ್ರ ಸ್ವಚ್ಛವಾಗಿದ್ದರೆ ಸಾಲದು, ನಮ್ಮ ಸುತ್ತಮುತ್ತಲಿನ ಪರಿಸರವೂ ಅಷ್ಟೇ ಶುಭ್ರವಾಗಿರಬೇಕು ಎಂಬ ಕಾರಣಕ್ಕಾಗಿ ದೇಶದ ಪ್ರಧಾನಿ ಜೀ ಸ್ವಚ್ಫ ಭಾರತ್ ಯೋಜನೆ ಪ್ರಾರಂಭಿಸಿದ್ದರು. ಕಡೆ ಪಕ್ಷ ಕಾಂಗ್ರೆಸ್ ನಾಯಕ ಸ್ಥಳೀಯ ನಾಯಕರಿಗಾದರೂ ಇದರ ಬಗ್ಗೆ ಅರಿವು ಮೂಡಿಸದಿರುವುದು ನನಗೆ ಆಶ್ಚರ್ಯ ಉಂಟು ಮಾಡಿದೆ ಎಂದು ಕಾಂಗ್ರೆಸ್​ನನ್ನು ರಾಮುಲು ಕುಟುಕಿದ್ದಾರೆ.


ಕಾಂಗ್ರೆಸ್ ನಾಯಕರಿಗೆ ರಾಮುಲ್ ತಿರುಗೇಟು


ಶನಿವಾರ ಬಳ್ಳಾರಿಯ ಮುನಿಸಿಪಲ್ ಮೈದಾನದಲ್ಲಿ ಭಾರತ್ ಜೋಡೋ ಸಮಾವೇಶದಲ್ಲಿ ದೊಡ್ಡ ದೊಡ್ಡ ಭಾಷಣ ಬಿಗಿದು ಹೋಗಿದ್ದಾರೆ.  ವೀರಾವೇಶದ ಮಾತುಗಳನ್ನಾಡಿದ್ದ ಕಾಂಗ್ರೆಸ್ ನಾಯಕರಿಗೆ ಕನಿಷ್ಟ ಪಕ್ಷ ತಾವು ಮಾಡಿದ್ದ ಹೊಲಸನ್ನು ಸ್ವಚ್ಛಗೊಳಿಸಬೇಕೆಂಬ ಸಾಮಾನ್ಯ ಜ್ಞಾನವೂ ಇದ್ದಂತೆ ಕಾಣಲಿಲ್ಲ ಎಂದು ರಾಮುಲು ಟ್ವೀಟ್​ ಮೂಲಕ ಕಿಡಿಕಾರಿದ್ದಾರೆ.


ನಿಮ್ಮ ಪಾದಯಾತ್ರೆಯ ಸದುದ್ದೇಶ ಈಡೇರುತ್ತದೆಯೇ?


ದೇಶ ಜೋಡಿಸುತ್ತೇನೆ ಎಂದು ಕೇವಲ ಪಾದಯಾತ್ರೆ ನಡೆಸಿದರೆ ಸಾಲದು.
ರಾಹುಲ್​ ಗಾಂಧಿ ಅವರೇ ಭಾರತವನ್ನು ನೀವು ಬೇಸೆಯುವ ಯತ್ನ ಮಾಡಿ. ನಮ್ಮದೇನು ಅಭ್ಯಂತರ ಇಲ್ಲ. ಆದರೆ, ನೀವೇ ನಿಂತು ಅಬ್ಬರಿಸಿ ಬೊಬ್ಬಿರಿಸಿದ ಸ್ಥಳವನ್ನು ಸ್ವಚ್ಛಗೊಳಿಸುವಂತೆ ನಿಮ್ಮ ಕಾರ್ಯಕರ್ತರಿಗೆ ಕಿವಿ ಮಾತು ಹೇಳದಿದ್ದರೆ, ನಿಮ್ಮ ಪಾದಯಾತ್ರೆಯ ಸದುದ್ದೇಶ ಈಡೇರುತ್ತದೆಯೇ?


ಮೈದಾನವನ್ನ ಸ್ವಚ್ಚಗೊಳಿಸಿದ ರಾಮುಲು


ಸ್ವತಃ ನಾನು ಹಾಗೂ ನಮ್ಮ ಪಕ್ಷದವರು ಸ್ವಚ್ಛಗೊಳಿಸುವ ಮೂಲಕ ಕೈ ಕೊಳಕನ್ನು ತೆಗೆದುಹಾಕಿದೆವು ಎಂದು ಮೈದಾನವನ್ನ ಸ್ವಚ್ಚಗೊಳಿಸಿ ಕಾಂಗ್ರೆಸ್ ನಾಯಕರ ವಿರುದ್ದ ಶ್ರೀರಾಮುಲು ಕಿಡಿಕಾರಿದ್ದಾರೆ.


ಇದನ್ನೂ ಓದಿ: Murugha Mutt: ಮುರುಘಾಮಠದ ಪ್ರಭಾರ ಪೀಠಾಧ್ಯಕ್ಷರ ನೇಮಕ; ಬಸವಪ್ರಭು ಶ್ರೀಗಳಿಗೆ ಪೂಜಾ ಕೈಂಕರ್ಯದ ಉಸ್ತುವಾರಿಬಳ್ಳಾರಿಯಲ್ಲಿ ಐರನ​ಲೆಗ್ ಬಂದು ಹೋಗಿದೆ


ಬಳ್ಳಾರಿಯಲ್ಲಿ ಐರನ​ಲೆಗ್ ಬಂದು ಹೋಗಿದೆ ಹೀಗಾಗಿ ಕ್ಲೀನ್ ಮಾಡುತ್ತಿದ್ದೇನೆ. ಹಿಂದೆ ಮಹಿಷಾಸುರದಲ್ಲಿಯೂ ಐರನ್ ಲೆಗ್ ಬಂದಿತ್ತು, ಆಗ ಪೂಜೆ ಮಾಡಿಸಿದ್ದೆ ಎಂದು ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಬಳ್ಳಾರಿಯಲ್ಲಿ ಹೇಳಿದ್ದಾರೆ. ಬಳ್ಳಾರಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಜೋಡೋ ಯಾತ್ರೆಯ ಸಮಾವೇಶ ನಡೆದಿತ್ತು.


ಇದನ್ನೂ ಓದಿ: BJP Leaders: ಯತ್ನಾಳ್ ನಮ್ಮ ಪಕ್ಷದ ನಾಯಕರಲ್ಲ, ಆದ್ರೂ ಬಿಜೆಪಿಗೆ ಡ್ಯಾಮೇಜ್ ತಪ್ಪಿಲ್ಲಎಂದ್ರು ಅರುಣ್ ಸಿಂಗ್


ರಾಹುಲ್​ ಗಾಂಧಿ ಬಗ್ಗೆ ವ್ಯಂಗ್ಯ


ಸಮಾವೇಶ ನಡೆದ ಸ್ಥಳದಲ್ಲಿ ಇಂದು (ಅ. 16) ಸಚಿವ ಬಿ. ಶ್ರೀರಾಮುಲು ಮತ್ತು ಬಿಜೆಪಿ ಕಾರ್ಯಕರ್ತರು ಸ್ವಚ್ಛತಾ ಕಾರ್ಯ ಕೈಗೊಂಡಿದ್ದರು. ಈ ಸಮಯದಲ್ಲಿ ಶಾಸಕ ಸೋಮಶೇಖರ್ ರೆಡ್ಡಿ ಮಾಧ್ಯಮದವರೊಂದಿಗೆ ಮಾತನಾಡಿ ಬಳ್ಳಾರಿಯಲ್ಲಿ ಐರನ​ಲೆಗ್ ಬಂದು ಹೋಗಿದೆ ಹೀಗಾಗಿ ಕ್ಲೀನ್ ಮಾಡುತ್ತಿದ್ದೇನೆ ಎಂದು ರಾಹುಲ್​ ಗಾಂಧಿ ಬಗ್ಗೆ ವ್ಯಂಗ್ಯವಾಡಿದ್ದಾರೆ.

Published by:ಪಾವನ ಎಚ್ ಎಸ್
First published: