• Home
  • »
  • News
  • »
  • state
  • »
  • SriRamulu: ತಾಕತ್​ ಇದ್ರೇ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿ; ಸಿದ್ದರಾಮಯ್ಯಗೆ ಸವಾಲ್​ ಹಾಕಿದ ಶ್ರೀರಾಮುಲು!

SriRamulu: ತಾಕತ್​ ಇದ್ರೇ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿ; ಸಿದ್ದರಾಮಯ್ಯಗೆ ಸವಾಲ್​ ಹಾಕಿದ ಶ್ರೀರಾಮುಲು!

ಸಿದ್ದರಾಮಯ್ಯ , ಶ್ರೀರಾಮುಲು

ಸಿದ್ದರಾಮಯ್ಯ , ಶ್ರೀರಾಮುಲು

ಸಿದ್ದರಾಮಯ್ಯ ಮೊಳಕಾಲ್ಮೂರು ಕ್ಷೇತ್ರದಿಂದ ತಾಕತ್ ಇದ್ರೆ ಸ್ಪರ್ಧೆ ಮಾಡಿ ಎಂದು ಸಚಿವ ಶ್ರೀರಾಮುಲು ಸವಾಲ್ ಹಾಕಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಊಟ ಮಾಡಿ, ದೇವೇಗೌಡರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ರಿ ಎಂದು ಆರೋಪಿಸಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಬೆಳಗಾವಿ (ನ.3): ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ವಿರುದ್ಧ ಸಾರಿಗೆ ಸಚಿವ ಬಿ ಶ್ರೀರಾಮುಲು (SriRamulu)  ತೀವ್ರ ವಾಗ್ದಾಳಿ ನಡೆಸಿದ್ರು. ಬೆಳಗಾವಿಯಲ್ಲಿ ಮಾತನಾಡಿದ ಶ್ರೀರಾಮುಲು, ಸಿದ್ದರಾಮಯ್ಯ ಮೊಳಕಾಲ್ಮೂರು ಕ್ಷೇತ್ರದಿಂದ ತಾಕತ್ ಇದ್ರೆ ಮತ್ತೆ ಸ್ಪರ್ಧೆ ಮಾಡಿ ಎನ್ನುವ ಸವಾಲ್ (Challenge) ಹಾಕಿದ್ದಾರೆ. ನನ್ನ ಸ್ಪರ್ಧೆಯ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದಾರೆ. ಸಿಎಂ ಆಗಿ ಐದು ವರ್ಷ ಕೆಲಸ ಮಾಡಿದ್ರಲ್ಲ, ಮೊದಲು ಅವರ ಕ್ಷೇತ್ರ ಯಾವುದು ಎಂದು ಘೋಷಣೆ (Announcement) ಮಾಡಬೇಕು. ಸ್ಪರ್ಧಿಸಲು ಕ್ಷೇತ್ರ ಇಲ್ಲದೇ ಪರದೇಶಿಯಾಗಿ ಓಡಾಡುತ್ತಿದ್ದಾರೆ. ಇಂತಹ ಪರದೇಶಿ ಗಿರಾಕಿಗಳಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ರು.


ದೇವೇಗೌಡರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ರಿ


ಸಿದ್ದರಾಮಯ್ಯ ಮೊಳಕಾಲ್ಮೂರು ಕ್ಷೇತ್ರದಿಂದ ತಾಕತ್ ಇದ್ರೆ ಸ್ಪರ್ಧೆ ಮಾಡಿ ಎಂದು ಸವಾಲ್ ಹಾಕಿದ್ದಾರೆ. ನನ್ನ ಗೆಲವು ಸೋಲಿನ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ. ನಿಮ್ಮ ರೀತಿ ನಾನು ರಾಜಕೀಯ ಮಾಡಿಲ್ಲ. ಜೆಡಿಎಸ್ ಪಕ್ಷದಲ್ಲಿ ಊಟ ಮಾಡಿ, ದೇವೇಗೌಡರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ರಿ. ಕಾಂಗ್ರೆಸ್ ಪಕ್ಷದಲ್ಲಿ ಡಿಕೆಶಿ, ಪರಮೇಶ್ವರಿಗೆ ಚೂರಿ ಹಾಕೋ ಕೆಲಸ ಮಾಡಿದ್ರಿ. ಜೊತೆಗೆ ಇದ್ದವರನ್ನು ಮುಗಿಸುತ್ತಲ್ಲೇ ಬಂದ್ರಿ. ಇವತ್ತ ನನ್ನ ಪಕ್ಷ ನಿಷ್ಠೆ ಬಗ್ಗೆ ಮಾತನಾಡೋದು ಹಾಸ್ಯಾಸ್ಪದ ಆಗಿದೆ. ಸಿಎಂ ಆಗಿ ಕೆಲಸ ನಂತರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನ ಸೋಲಿಸಿದರು. ಸಿದ್ದರಾಮಯ್ಯ ಅಹಕಾಂಕರರಿಂದಲೇ ಜನ ಸೋಲಿಸಿದ್ದಾರೆ.


Congress tweeted about Minister Sriramulu
ಸಿದ್ದರಾಮಯ್ಯ, ಶ್ರೀರಾಮುಲು


ಅಹಂಕಾರಿಗಳಿಗೆ ಜನ ತಕ್ಕ ಪಾಠ ಕಲಿಸುತ್ತಾರೆ


ನಾನು 30 ವರ್ಷದಿಂದ ರಾಜಕೀಯದಲ್ಲಿ ಇದ್ದೇನೆ. 7 ಸಲ ಸ್ಪರ್ಧೆ ಮಾಡಿ ಐದು ಸಲ ಎಂಎಲ್ಎ, ಒಮ್ಮೆ ಎಂಪಿ ಆಗಿದ್ದೇನೆ. ನಾವು ಕೂಡ ಈ ಸಲ ಬದಾಯಿಯಿಂದಲೇ ಸ್ಪರ್ಧೆ ಮಾಡಿ, ಬದಾಯಿ ಜನರು ತಮ್ಮ ಮುಖಕ್ಕೆ ಮಂಗಳಾರತಿ ಮಾಡುತ್ತಾರೆ. ಸಿದ್ದರಾಮಯ್ಯ ನವರೇ ಅಹಂಕಾರ ಮಾತು ಬರಬಾರದು. ನಮ್ಮ ಊರಿಗೆ ಬಂದು ಬೈದು ಹೋಗಿದ್ದಿರಿ. ಇಂದು ಗೆಲ್ಲುವ ಬಗ್ಗೆ ನನ್ನ ಕ್ಷೇತ್ರದಲ್ಲಿ ಸವಾಲ್ ಹಾಕಿದ್ದಾರೆ.


ಇದನ್ನೂ ಓದಿ: Renukacharya: ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್​ ಶವ ಪತ್ತೆ, ಕಾಲುವೆಯಲ್ಲಿ ಬಿದ್ದಿದ್ದ ಕಾರು


ಮುಂದಿನ ಚುನಾವಣೆ ಅಹಂಕಾರಿಗಳಿಗೆ ಜನ ತಕ್ಕ ಪಾಠ ಕಲಿಸುತ್ತಾರೆ. ನಾನು ಮೊಳಕಾಲ್ಮೂರು ಮೊಳಕಾಲಮೂರು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ನನ್ನ ಸ್ಪರ್ಧೆ ಬಗ್ಗೆ ಮಾತನಾಡೋವರ ಪರಿಸ್ಥಿತಿ ಏನಾಗಿದೆ. ಬದಾಮಿ ಜನ ಮುಖಕ್ಕೆ ಮಸಿ ಬಳಿಯುವಂತ ಸ್ಥಿತಿ ನಿರ್ಮಾಣವಾಗಿದೆ ಎಂದು ವಾಗ್ದಾಳಿ ನಡೆಸಿದ್ರು.


ಕಾಂಗ್ರೆಸ್​ ನಾಯಕರೇ ಸಿದ್ದರಾಮಯ್ಯರನ್ನು ಸೋಲಿಸುತ್ತಾರೆ


ವಿಪಕ್ಷ ನಾಯಕ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರ ಬಿಡುವ ಬಗ್ಗೆ ಘೋಷಣೆ ಮಾಡಿದ್ದಾರೆ. ವರುಣಾ ಕ್ಷೇತ್ರಕ್ಕೆ ಹೋಗುವ‌ ತೀರ್ಮಾನ ಮಾಡಿದ್ದಾರೆ. ಕಾಂಗ್ರೆಸ್ ನಾಯಕರೇ ಸಿದ್ದರಾಮಯ್ಯ ಸೋಲಿಸುವ ತೀರ್ಮಾನ ಮಾಡಿದ್ದಾರೆ. ಸಿದ್ದರಾಮಯ್ಯ ಎಲ್ಲೇ ಸ್ಪರ್ಧೆ ಮಾಡಿದ್ರು ಸೋಲು ಖಚಿತ. ಹಿಂದುಳಿದವ ವರ್ಗದ ನಾಯಕ ಎಂದು ಹೇಳುವ ಸಿದ್ದರಾಮಯ್ಯ ಸಮುದಾಯದಕ್ಕೆ ಏನ್ ಮಾಡಿದ್ದಾರೆ. ಪರಿಶಿಷ್ಟ ಜಾತಿ, ಸಮುದಾಯದಕ್ಕೆ ಮೀಸಲಾತಿ ನೀಡಿದ್ದು ಬಿಜೆಪಿ ಎಂದು ಶ್ರೀರಾಮುಲು ಹೇಳಿದ್ರು.


ಇದನ್ನೂ ಓದಿ: Chandrashekar Death: ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಸಾವು ಕೊಲೆಯೋ? ಅಪಘಾತವೋ?


ಜನಾರ್ದನ ರೆಡ್ಡಿ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತೆ


ಮಾಜಿ ಸಚಿವ ಜನಾರ್ದನ ರೆಡ್ಡಿ ಸಕ್ರಿಯ ರಾಜಕೀಯ ಬರೋ ವಿಚಾರದ ಬಗ್ಗೆ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ರು.  ಈ ಬಗ್ಗೆ ಬಿಜೆಪಿ ಪಕ್ಷ ತೀರ್ಮಾನ ಮಾಡುತ್ತದೆ. ಜನಾರ್ದನ ರೆಡ್ಡಿಗೆ ಕೆಲ ವಿಷಯದಲ್ಲಿ ನೋವಾಗಿದೆ. ಈ ವಿಷಯವನ್ನು ಹಿರಿಯ ನಾಯಕರು ರೆಡ್ಡಿ ಅವರನ್ನು ಭೇಟಿ ಆಗಿದ್ದೇವೆ. ಕೆಲ ವಿಷಯಗಳನ್ನು ಹೇಳಿದ್ದಾರೆ. ಅದನ್ನು ಪಕ್ಷದ ನಾಯಕರ ಗಮನಕ್ಕೆ ತಂದಿದ್ದೇವೆ. ಮುಂದೆ ಪಕ್ಷ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕಾದು ನೋಡೊಣ ಎಂದರು.

Published by:ಪಾವನ ಎಚ್ ಎಸ್
First published: