ನನಗೆ ರಾಯಚೂರು ಬೇಡ ಬಳ್ಳಾರಿಯೇ ಬೇಕು; ಸಿಎಂ ಯಡಿಯೂರಪ್ಪ ಮುಂದೆ ಹಠ ಹಿಡಿದ ಸಚಿವ ಶ್ರೀರಾಮುಲು

ಡಿಸಿಎಂ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಸಚಿವ ಶ್ರೀರಾಮುಲು ತಮಗೆ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸ್ಥಾನವನ್ನಾದರೂ ನೀಡಲೇಬೇಕೆಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಬಳಿ ಹಠ ಹಿಡಿದಿದ್ದಾರೆ.

news18-kannada
Updated:August 28, 2019, 10:44 AM IST
ನನಗೆ ರಾಯಚೂರು ಬೇಡ ಬಳ್ಳಾರಿಯೇ ಬೇಕು; ಸಿಎಂ ಯಡಿಯೂರಪ್ಪ ಮುಂದೆ ಹಠ ಹಿಡಿದ ಸಚಿವ ಶ್ರೀರಾಮುಲು
ಯಡಿಯೂರಪ್ಪ- ಶ್ರೀರಾಮುಲು
  • Share this:
ಬೆಂಗಳೂರು (ಆ. 28): ರಾಜ್ಯ ಸರ್ಕಾರದ ಸಚಿವ ಸಂಪುಟ ರಚನೆ ವೇಳೆಯಲ್ಲೇ ಅನೇಕ ಶಾಸಕರು ತಮಗೆ ಮಂತ್ರಿಗಿರಿ ಸಿಗದ ಕಾರಣಕ್ಕೆ ಅಸಮಾಧಾನ ಹೊರಹಾಕಿದ್ದರು. ಇದೀಗ ಖಾತೆ ಹಂಚಿಕೆಯೂ ಆಗಿದ್ದು, ಮೂವರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟು, ಹಿರಿಯರಿಗೆ ಉತ್ತಮ ಖಾತೆ ನೀಡದ ಕಾರಣಕ್ಕೆ ಮತ್ತೊಮ್ಮೆ ಅಸಮಾಧಾನ ಭುಗಿಲೆದಿದ್ದಿದೆ. ಉಪಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಲ್ಲಿ ಆರ್​. ಅಶೋಕ್, ಜಗದೀಶ್ ಶೆಟ್ಟರ್, ಶ್ರೀರಾಮುಲು ಹೆಸರೂ ಕೇಳಿಬಂದಿತ್ತು. ಆದರೆ. ಅವರೆಲ್ಲರನ್ನೂ ಪಕ್ಕಕ್ಕಿರಿಸಿ ಗೋವಿಂದ ಕಾರಜೋಳ, ಅಶ್ವತ್ಥ ನಾರಾಯಣ, ಲಕ್ಷ್ಮಣ ಸವದಿಗೆ ಡಿಸಿಎಂ ಹುದ್ದೆ ನೀಡಿರುವುದು ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಬಗ್ಗೆ ಸಿಎಂ ಬಿಎಸ್​ ಯಡಿಯೂರಪ್ಪನವರನ್ನು ಭೇಟಿಯಾಗಿ ಮಾತನಾಡಿರುವ ಸಚಿವ ಶ್ರೀರಾಮುಲು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ತಮಗೆ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸ್ಥಾನವನ್ನಾದರೂ ನೀಡಲೇಬೇಕೆಂದು ಹಠ ಹಿಡಿದಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಶ್ರೀರಾಮುಲು ನಡುವೆ ನಿನ್ನೆ ಸಿಎಂ ಧವಳಗಿರಿ ನಿವಾಸದಲ್ಲಿ ನಡೆದ ಮಾತುಕತೆಯ ವಿವರ ಇಲ್ಲಿದೆ.

ಜಾಮೀನು ಪಡೆಯಲು ನ್ಯಾಯಾಧೀಶರಿಗೆ ಗಾಲಿ ಜನಾರ್ದನ ರೆಡ್ಡಿ ಕೋಟಿ ಕೋಟಿ ಆಫರ್!

ನನಗೆ ಇಷ್ಟಪಟ್ಟ ಖಾತೆಯೂ ಸಿಗಲಿಲ್ಲ, ಡಿಸಿಎಂ ಕೂಡ ಆಗಲಿಲ್ಲ. ಈಗ ಮೊಳಕಾಲ್ಮೂರು ಶಾಸಕ ಅಂತ ಚಿತ್ರದುರ್ಗಕ್ಕೆ ಉಸ್ತುವಾರಿ ಮಾಡಿ ಸುಮ್ಮನಿರಬೇಡಿ. ಚಿತ್ರದುರ್ಗ ಉಸ್ತುವಾರಿ ಕೊಡಿ ಬೇಜಾರಿಲ್ಲ, ಜೊತೆಗೆ ಬಳ್ಳಾರಿ ಉಸ್ತುವಾರಿನೂ ನನಗೇ ಕೊಡಬೇಕು ಸರ್ ಎಂದು ಬೇಡಿಕೆಯಿಟ್ಟಿದ್ದಾರೆ.

ನಾನು ಬಳ್ಳಾರಿಯವನು. ಬಳ್ಳಾರಿ ಶ್ರೀರಾಮುಲು ಅಂತಾನೇ ಪ್ರಮಾಣ ಸ್ವೀಕರಿಸಿದ್ದೇನೆ. ಅಲ್ಲೇ ಹುಟ್ಟಿ ಬೆಳೆದವನು, ಬಳ್ಳಾರಿ ಋಣ ತೀರಿಸ್ಬೇಕು. ಚಿತ್ರದುರ್ಗ ಕೊಡದಿದ್ರೂ ಸರಿ, ಬಳ್ಳಾರಿ ಮಿಸ್ ಮಾಡ್ಬೇಡಿ. ಇಷ್ಟಪಟ್ಟ ಖಾತೆಯಂತೂ ಸಿಗಲಿಲ್ಲ, ಈ ಆಸೆಯನ್ನಾದರೂ ಈಡೇರಿಸಿ. ನಾನು ಆರೂವರೆ ವರ್ಷ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಸಿದ್ರಾಮಣ್ಣ ಸರ್ಕಾರ ಇದ್ದಾಗ ನನಗೆ, ನನ್ನ ಬೆಂಬಲಿಗರಿಗೆ ಕಾಟ ಕೊಟ್ರು, ಕುಮಾರಸ್ವಾಮಿ ಸಿಎಂ ಆದಾಗ ಡಿಕೆಶಿ ಅವಮಾನ ಮಾಡಿದ್ರು. ಬಳ್ಳಾರಿಯಲ್ಲಿ ಕಾಂಗ್ರೆಸ್ ಇಲ್ಲದ ಹಾಗೆ ಮಾಡುತ್ತೇನೆ, ಪಕ್ಷವನ್ನು ಗಟ್ಟಿ ಮಾಡುತ್ತೇನೆ, ನೀವು ನನಗೆ ಬಳ್ಳಾರಿ ಉಸ್ತುವಾರಿ ಕೊಡಲೇಬೇಕು ಎಂದು ಮನವಿ ಮಾಡಿದ್ದಾರೆ.

ಬಿಎಸ್​ವೈಗೆ ತಲೆನೋವು ತಂದಿಟ್ಟ ಹೈಕಮಾಂಡ್​ ನಿರ್ಧಾರ; ಉಮೇಶ್ ಕತ್ತಿ ಮನವೊಲಿಕೆಗೆ ಸಿಎಂ ಶತಪ್ರಯತ್ನ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಬಿಎಸ್​ ಯಡಿಯೂರಪ್ಪ, ನಿಮಗೆ ಬೇಕಾದ ಖಾತೆ ಸಿಗದಿದ್ದಕ್ಕೆ ನನಗೂ ಬೇಸರವಿದೆ. ಆದರೆ, ನಾನೇನೂ ಮಾಡಲಾಗದ ಸ್ಥಿತಿಯಲ್ಲಿದ್ದೇನೆ. ನೀವು ಬಳ್ಳಾರಿ ಉಸ್ತುವಾರಿ ಬೇಕೆಂದು ಕೇಳುತ್ತಿದ್ದೀರಿ. ನಾಳೆ ಸುಪ್ರೀಂಕೋರ್ಟ್​ ತೀರ್ಪು ಬಂದ್ರೆ ಏನು ಮಾಡೋದು? ನಾನು ಈಗಾಗ್ಲೇ ಆನಂದ್ ಸಿಂಗ್​ಗೆ ಮಾತು ಕೊಟ್ಟಿದ್ದೇನೆ. ಅವರನ್ನು ಸಚಿವರನ್ನಾಗಿ ಮಾಡಿ ಬಳ್ಳಾರಿ ಉಸ್ತುವಾರಿನೂ ಕೊಡ್ತೀನಿ ಅಂತ ಹೇಳಿಬಿಟ್ಟಿದ್ದೇನೆ. ಈಗ ನಿಮಗೆ ಕೊಟ್ಟು, ನಾಳೆ ಆನಂದ್ ಸಿಂಗ್​ಗೆ ಕೊಟ್ಟರೆ ಕೊಟ್ಟು ಕಸಿದುಕೊಂಡರು ಎಂಬ ಮಾತು ಬರುತ್ತೆ, ಏನು ಮಾಡೋದು? ಎಂದು ಪ್ರಶ್ನಿಸಿದ್ದಾರೆ.ಬಳ್ಳಾರಿ ಬದಲು ರಾಯಚೂರು ಕೊಡ್ತೀನಿ ಎಂದ ಸಿಎಂ ಯಡಿಯೂರಪ್ಪನವರ ಮಾತಿಗೆ ಒಪ್ಪದ ಶ್ರೀರಾಮುಲು ಬಳ್ಳಾರಿಗೆ ಪಟ್ಟು ಹಿಡಿದಿದ್ದಾರೆ. ಏನು ಮಾಡೋದು ಅಂತ ಯೋಚನೆ ಮಾಡಿ ಹೇಳುತ್ತೇನೆ ಎಂದು ಶ್ರೀರಾಮುಲುಗೆ ಸಮಾಧಾನ ಮಾಡಿ ಸಿಎಂ ಕಳುಹಿಸಿದ್ದಾರೆ. 

 
First published:August 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading