ಜಗದೀಶ್ ಶೆಟ್ಟರ್ ನಿವಾಸದಲ್ಲಿ ಉತ್ತರ ಕರ್ನಾಟಕದ ಬಿಜೆಪಿ ಜನಪ್ರತಿನಿಧಿಗಳು ಸಭೆ ಸೇರಿದ್ದು ಸತ್ಯ; ಶ್ರೀರಾಮುಲು

ಸಚಿವ ಜಗದೀಶ್ ಶೆಟ್ಟರ್ ನಿವಾಸದಲ್ಲಿ ಸಭೆ ನಡೆದಿರುವುದು ಸತ್ಯ. ಉತ್ತರ ಕರ್ನಾಟಕದ ಸಂಸದರು ಮತ್ತು ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು. ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತಾಗಿ ಸಭೆಯಲ್ಲಿ ಚರ್ಚಿಸಲಾಗಿದೆ.

 ಸಚಿವ ಶ್ರೀರಾಮುಲು

ಸಚಿವ ಶ್ರೀರಾಮುಲು

  • Share this:
ಕಲಬುರ್ಗಿ(ಫೆ.18): ಸದನದಲ್ಲಿ ಇಂದು ತುಕ್ಡೆ ತುಕ್ಡೆ ಗ್ಯಾಂಗ್ ಪದ ಮಾರ್ಧನಿಸಿತ್ತು, ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಬಿ.ಶ್ರೀರಾಮುಲು, ಕಾಂಗ್ರೆಸ್ ಮತ್ತು ಜೆಡಿಎಸ್ ಸಹವಾಸ ದೋಷದಿಂದ ತುಕ್ಡೆ ತುಕ್ಡೆಯಾಗಿದೆ. ಇಬ್ಬರೂ ಕೂಡಿ ಸರ್ಕಾರ ಮಾಡಿದ್ದರು. ನಂತರ ತುಕ್ಡೆ ತುಕ್ಡೆಯಾಗಿ ಬೇರೆಯಾಗಿ ಹೋದರು. ಅವರಂತೆ ನಾವೂ ತುಕ್ಡೆ ತುಕ್ಡೆಯಾಗಬೇಕಂತ ನಿರೀಕ್ಷಿಸುತ್ತಿದ್ದಾರೆ. ಆದರೆ ಅದು ಮಾತ್ರ ಕನಸಿನ ಮಾತು. ಯಡಿಯೂರಪ್ಪ ಅವರೇ ನಮ್ಮ ಸಿಎಂ ಆಗಿ ಮುಂದುವರೆಯುತ್ತಾರೆ ಎಂದರು.

ಕಾಂಗ್ರೆಸ್ ಮತ್ತು ಜೆಡಿಎಸ್​ನಿಂದ ಕಲಾಪ ಬಹಿಷ್ಕಾರದ ವಿಚಾರವಾಗಿ ಮಾತನಾಡಿದ ಸಚಿವ ಶ್ರೀರಾಮುಲು, ಉತ್ತರ ಕರ್ನಾಟಕದ ನೆರೆ ಪೀಡಿತರ ಸಮಸ್ಯೆ ಚರ್ಚಿಸುವುದು ಬೇಕಿಲ್ಲ. ಮನೆ - ಮಠ ಕಳೆದುಕೊಂಡವರ ಬಗ್ಗೆ ಚರ್ಚೆ ಮಾಡಲು ಅವರಿಗೆ ಸಮಯವಿಲ್ಲ. ಪಾಕಿಸ್ತಾನಕ್ಕೆ ಜೈ ಅಂದವರಿಗೆ ಅವರು ಸಹಕಾರ ಕೊಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮತ ಬ್ಯಾಂಕ್ ರಾಜಕೀಯ ಮಾಡುತ್ತಿದೆ. ನಮ್ಮ ಪಕ್ಷ ಎಲ್ಲಿಯೂ ಕಾಂಪ್ರಮೈಸ್ ಆಗಲ್ಲ ಎಂದು ಹೇಳುವ ಮೂಲಕ ವಿರೋಧ ಪಕ್ಷಗಳಿಗೆ ಚಾಟಿ ಬೀಸಿದರು.

ಬೆಂಕಿ ಇಲ್ಲ ಅಂದ ಮೇಲೆ  ಹೊಗೆ ಎಲ್ಲಿಂದ ಬರುತ್ತೆ 

ಸಚಿವ ಜಗದೀಶ್ ಶೆಟ್ಟರ್ ನಿವಾಸದಲ್ಲಿ ಸಭೆ ನಡೆದಿರುವುದು ಸತ್ಯ. ಉತ್ತರ ಕರ್ನಾಟಕದ ಸಂಸದರು ಮತ್ತು ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು. ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತಾಗಿ ಸಭೆಯಲ್ಲಿ ಚರ್ಚಿಸಲಾಗಿದೆ. ಉತ್ತರ ಕರ್ನಾಟಕದ ಅಭಿವೃದ್ಧಿ ಬಿಟ್ಟರೆ ಬೇರೆ ಯಾವ ಉದ್ದೇಶದಿಂದಲೂ ಸಭೆ ಸೇರಿರಲಿಲ್ಲ. ನಮ್ಮ ಪಕ್ಷದ ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಬೆಂಕಿಯೇ ಇಲ್ಲವೆಂದ ಮೇಲೆ ಹೊಗೆ ಎಲ್ಲಿಂದ ಬರುತ್ತೆ ಎಂದು ಶ್ರೀರಾಮುಲು ಮಾರ್ಮಿಕವಾಗಿ ಪ್ರಶ್ನಿಸಿದರು.

ಸರ್ಕಾರಿ ವೈದ್ಯರು ಖಾಸಗಿ ಪ್ರ್ಯಾಕ್ಟೀಸ್  ಮಾಡದಂತೆ ಕಾನೂನು

ಸರ್ಕಾರಿ ವೈದ್ಯರು ಖಾಸಗಿಯಾಗಿ ಪ್ರ್ಯಾಕ್ಟೀಸ್ ಮಾಡುವಂತಿಲ್ಲ. ಹಾಗೊಂದು ವೇಳೆ ಮಾಡಬೇಕೆಂದುಕೊಂಡರೆ ಈಗಲೇ ನೌಕರಿ ಬಿಟ್ಟು ಹೋಗಬಹುದು ಎಂದು ಇದೇ ಸಂದರ್ಭದಲ್ಲಿ ಸಚಿವ ಬಿ.ಶ್ರೀರಾಮುಲು ಖಡಕ್ ಆಗಿ ಹೇಳಿದ್ದಾರೆ. ಖಾಸಗಿ ಪ್ರ್ಯಾಕ್ಟೀಸ್ ನಿಷೇಧಿಸಿ ಕಾನೂನು ಜಾರಿಗೆ ತರಲು ಗಂಭೀರ ಚಿಂತನೆ ನಡೆಸಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾದವರು 24 ತಾಸುಗಳ ಕಾಲ ಅಲ್ಲೇ ಇದ್ದು ಸೇವೆ ಕೊಡಬೇಕು. ಅದನ್ನು ಬಿಟ್ಟು ಖಾಸಗಿಯಾಗಿ ಪ್ರ್ಯಾಕ್ಟೀಸ್ ಮಾಡುತ್ತಾರೆ ಅಂದರೆ ಹೇಗೆ ಒಪ್ಪೋಕಾಗುತ್ತೆ ಎಂದರು.

ಇದನ್ನೂ ಓದಿ : ಬಿಬಿಎಂಪಿ ಪೌರ ಕಾರ್ಮಿಕರಿಗೆ ಫ್ಲಾಟ್ ಭಾಗ್ಯ; ಮೊದಲ ಹಂತದಲ್ಲಿ 50 ಮಂದಿಗೆ ಹಂಚಿಕೆ

ಖಾಸಗಿ ಪ್ರ್ಯಾಕ್ಟೀಸ್ ಮಾಡೋರು ನಮಗೆ ಬೇಡವೇ ಬೇಡ. ಕೆಪಿಎಸ್​​ಸಿ ಬಿಟ್ಟು ನೇರ ನೇಮಕಾತಿ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ನಮಗೆ ಸ್ವಾತಂತ್ರ್ಯ ನೀಡಿದ್ದಾರೆ. ಹೀಗಿರಬೇಕಾದರೆ ಇಲ್ಲಿ ಯಾರು ಕೆಲಸ ಮಾಡುತ್ತಾರೋ ಅಂಥವರನ್ನೇ ತಗೆದುಕೊಳ್ಳತ್ತೇವೆ. ಸರ್ಕಾರಿ ಆಸ್ಪತ್ರೆ ಬೇಡ ಎನ್ನುವವರು ನಮಗೆ ಬೇಕಿಲ್ಲ. ಈಗ ಸೇವೆಯಲ್ಲಿದ್ದ ವೈದ್ಯರೂ ನೌಕರಿ ಬಿಟ್ಟು ಹೋಗಬಹುದು ಎಂದಿದ್ದಾರೆ.
First published: