ಅಲ್ಪಸಂಖ್ಯಾತ ವಸತಿ ಶಾಲೆಗಳಲ್ಲಿ ದಾಖಲಾತಿ ಇಳಿಕೆಯಾದಲ್ಲಿ ಕಠಿಣ ಕ್ರಮ; ಸಚಿವ ಶ್ರೀಮಂತ ಪಾಟೀಲ್ ಎಚ್ಚರಿಕೆ

ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಒಂದೊಂದು ಐಟಿಐ ಕಾಲೇಜು ಸ್ತಾಪನೆಯ ಗುರಿಯಿಂದ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಸಚಿವ ಶ್ರೀಮಂತ ಪಾಟೀಲ್.

ಸಚಿವ ಶ್ರೀಮಂತ ಪಾಟೀಲ್.

  • Share this:
ಕೋಲಾರ(ಸೆ.03): ಕೋಲಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಜ್ಯ  ಕೈಮಗ್ಗ ಮತ್ತು ಜವಳಿ  ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ  ಪಾಟೀಲ ಅವರು, ಬುಧವಾರ ಇಲಾಖೆಗೆ ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು, ಸಭೆಯಲ್ಲಿ ಉಸ್ತುವಾರಿ ಸಚಿವ ಎಚ್ ನಾಗೇಶ್, ಶಾಸಕಿ ರೂಪಕಲಾ, ಪರಿಷತ್ ಶಾಸಕ ಗೋವಿಂದರಾಜು, ಡಿಸಿ ಸಿ ಸತ್ಯಭಾಮ ಭಾಗಿಯಾಗಿದ್ದರು, ಸಭೆಯಲ್ಲಿ ನೇಕಾರರ ಜೊತೆಗೆ ಚರ್ಚಿಸಿದ ಸಚಿವರು ಸಮಸ್ಯೆಗಳು ಇದ್ದಲ್ಲಿ ಇಲಾಖೆ ಅಧಿಕಾರಿಗಳ ಸಹಾಯ ಪಡೆಯಿರಿ ಎಂದು ತಿಳಿಸಿದರು.

ಸಭೆಯ ನಂತರ ಮಾತನಾಡಿದ ಸಚಿವ ಶ್ರೀಮಂತ ಪಾಟೀಲ್, ಕೋಲಾರದಲ್ಲಿ ನೇಕಾರರಿಗೆ ಯಾವುದೆ ಸಮಸ್ಯೆಯಿಲ್ಲ, ನೇಕಾರ ಸಮ್ಮಾನ್ ಯೋಜನೆಯಡಿ ಎಲ್ಲರಿಗು ಪ್ರೋತ್ಸಾಹ ಧನ ತಲುಪಿದೆ. ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ನಾಲ್ಕು ನೇಕಾರರ ಕುಟುಂಬಕ್ಕೆ 2 ಲಕ್ಷ ತಲಾ ಪರಿಹಾರ ಕೊಡಲು ಸಿಎಂ ಒಪ್ಪಿದ್ದಾರೆ ಎಂದರು. ಇನ್ನು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಒಂದೊಂದು ಐಟಿಐ ಕಾಲೇಜು ಸ್ತಾಪನೆಯ ಗುರಿಯಿಂದ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

Jagan Mohan Reddy: ಆ್ಯಂಬುಲೆನ್ಸ್​​ ಹೋಗಲು ದಾರಿ ಬಿಟ್ಟು ವ್ಯಕ್ತಿ ಪ್ರಾಣ ಉಳಿಸಿದ ಆಂಧ್ರ ಸಿಎಂ ಜಗನ್​​

ಆದರೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಮೊರಾರ್ಜಿ ದೇಸಾಯಿ ಶಾಲೆ, ಹಾಸ್ಟೆಲ್ ಸೇರಿದಂತೆ ಇಲಾಖೆಯ ಅನುದಾನದಲ್ಲಿ ನಡೆಯುತ್ತಿರುವ ವಸತಿ ಶಾಲೆಗಳಲ್ಲಿ, ಮಕ್ಕಳ‌ ದಾಖಲಾತಿ ಶೇಕಡಾ 50 ರಷ್ಟೂ ಮೀರಿಲ್ಲ. ಇಷ್ಟೆಲ್ಲ ಗುಣಮಟ್ಟದ ಸೌಲಭ್ಯಗಳನ್ನು ನೀಡುತ್ತಿದ್ದರೂ ವಿಧ್ಯಾರ್ಥಿಗಳು ಯಾಕೆ ದಾಖಲಾಗಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಅಲ್ಲದೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸೂಕ್ತ ಪ್ರಚಾರವನ್ನು ಕೈಗೊಂಡು ದಾಖಲಾತಿ ಹೆಚ್ಚಿಸದೆ ಹೋದಲ್ಲಿ, ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಜರುಗಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ಇನ್ನು ಮೈತ್ರಿ ಸರ್ಕಾರ ಬೀಳಿಸಲು  ಅಕ್ರಮವಾಗಿ ಸಂಪಾದನೆ ಮಾಡಿದ ಹಣವನ್ನ ಬಳಕೆ ಮಾಡಿದ್ದಾರೆಂದು,  ಮಾಜಿ ಸಿಎಂ‌ ಕುಮಾರಸ್ವಾಮಿ ಅವರ ಆರೋಪದ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿರೋಧ ಪಕ್ಷದವರು ಆರೋಪ ಮಾಡುವುದಕ್ಕೆ ಇದ್ದಾರೆ. ಅದಲ್ಲದೆ ಬೇರೇನು ಮಾಡಲು ಸಾಧ್ಯ ?ಎಂದು ವ್ಯಂಗ್ಯವಾಡಿದರು. ಅಲ್ಲದೆ ಆರೋಪಕ್ಕೆ ಸೂಕ್ತ ದಾಖಲೆ ಒದಗಿಸಲಿ ಎಂದು ಸವಾಲು ಹಾಕಿದರು.
Published by:Latha CG
First published: