ನಿಮ್ಮ ಕ್ಷೇತ್ರದ ಸಮಸ್ಯೆ ನನ್ನ ಗಮನಕ್ಕೆ ತಂದಿದ್ದೀರಾ?; ಸಿದ್ದರಾಮಯ್ಯನವರಿಗೆ ಸಚಿವ ಶ್ರೀರಾಮುಲು ಪ್ರಶ್ನೆ

ನಿಮ್ಮ ವಿರುದ್ಧ ಬದಾಮಿಯಲ್ಲಿ ಸೋತಿರಬಹುದು, ಚಾಮುಂಡೇಶ್ವರಿಯಲ್ಲಿ ನೀವು ಸೋತಷ್ಟು ಹೀನಾಯವಾಗಿ ಸೋತಿಲ್ಲ. ಚಾಮುಂಡೇಶ್ವರಿ ಜನರನ್ನು ನೀವು ಮರೆತಂತೆ ನಾನು ಬದಾಮಿಯ ಜನರನ್ನು ನಾನು ಮರೆತಿಲ್ಲ. ಪ್ರವಾಹ ಬಂದಾಗ ನಿಮಗಿಂತ ಮೊದಲು ಹೋಗಿ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ ಎಂದಿದ್ದಾರೆ.

G Hareeshkumar | news18-kannada
Updated:December 5, 2019, 9:32 PM IST
ನಿಮ್ಮ ಕ್ಷೇತ್ರದ ಸಮಸ್ಯೆ ನನ್ನ ಗಮನಕ್ಕೆ ತಂದಿದ್ದೀರಾ?; ಸಿದ್ದರಾಮಯ್ಯನವರಿಗೆ ಸಚಿವ ಶ್ರೀರಾಮುಲು ಪ್ರಶ್ನೆ
ಸಚಿವ ಶ್ರೀರಾಮುಲು ಹಾಗೂ ಸಿದ್ದರಾಮಯ್ಯ
  • Share this:
ಬೆಂಗಳೂರು (ಡಿ.05): ನಿಮ್ಮ ಕ್ಷೇತ್ರದ  ಆಸ್ಪತ್ರೆಯ ಸಮಸ್ಯೆಯ ಬಗ್ಗೆ ನನ್ನ ವಿರುದ್ದ ರಾಜಕೀಯ ಟೀಕೆ ಮಾಡಿದ್ದೀರಿ ಆದರೆ, ಯಾವತ್ತಾದರು ಈ ಸಮಸ್ಯೆಯ ಬಗ್ಗೆ ನನ್ನ ಗಮನಕ್ಕೆ ತಂದಿದ್ದಾರೆ ಎಂದು ಟ್ವೀಟರ್​​​ನಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಆರೋಗ್ಯ ಸಚಿವ ಬಿ ಶ್ರೀರಾಮುಲು ಪ್ರಶ್ನೆ ಮಾಡಿದ್ದಾರೆ.

ಇಂದು ಬೆಳಿಗ್ಗೆ ಬಾದಾಮಿಯ ಕೆರೂರು ಪಟ್ಟಣದಲ್ಲಿ ಸರ್ಕಾರಿ ಪ್ರೌಢಶಾಲೆ ಉದ್ಘಾಟನೆ ಸಮಯದಲ್ಲಿ ಸಿದ್ದರಾಮಯ್ಯ ಅವರು, ಜನರ ಸಮಸ್ಯೆಗಳನ್ನು ಕೇಳದೇ ಬಿಜೆಪಿಯವರು ಸುಮ್ಮನೆ ನಾವು ಅದು ಮಾಡುತ್ತೇವೆ. ಇದು ಮಾಡುತ್ತೇವೆ ಎಂದು ಬುರುಡೆ ಹೊಡೆಯುತ್ತಾರೆ. ಏನು ಮಾಡುವುದಿಲ್ಲ. ಜನ ಅದು ಯಾವ ಕಾರಣಕ್ಕೆ ಅವರಿಗೆ ಮತ ಹಾಕುತ್ತಾರೋ ಗೊತ್ತಿಲ್ಲ ಎಂದಿದ್ದರು.

ಗ್ರಾಮಕ್ಕೆ ಸರ್ಕಾರಿ ಆಸ್ಪತ್ರೆಗೆ ಕೇಳಿದ ಕಾರ್ಯಕರ್ತನಿಗೆ ಉತ್ತರಿಸಿದ ಅವರು, ನನ್ನ ವಿರುದ್ಧ ನಿಂತಿದಲ್ಲ ಯಾವನವನು ಶ್ರೀರಾಮುಲು. ಅವನೇ  ಆರೋಗ್ಯ ಮಂತ್ರಿ ಇದ್ದಾರೆ. ಅವರಿಗೆ  ಹೇಳಿದರೆ ಕೇಳುವಲ್ಲ ಅವನು. ಅವನಿಗೆ ಇನ್ನೊಂದು ಸಾರಿ ಹೇಳುತ್ತೇನೆ. ನನ್ನ ಜೊತೆ ಅವನು ಮಾತೇ ಆಡೋಲ್ಲ. ಅದಕ್ಕಾಗಿ ಸಚಿವ, ಡಿಎಚ್​ಓ ಪತ್ರ ಬರಿಯಿರಿ ಎಂದು ಸಲಹೆ ನೀಡಿ ಎಂದು ಸಿದ್ದರಾಮಯ್ಯ ಹೇಳಿದ್ದರು.

ಇದನ್ನೂ ಓದಿ : Karnataka ByPolls : ಶ್ರೀರಾಮುಲು ನನ್ನ ಜೊತೆ ಮಾತೇ ಆಡುವುದಿಲ್ಲ; ಸಿದ್ದರಾಮಯ್ಯ ದೂರು

ಈ ಬಗ್ಗೆ ಟ್ವೀಟರ್​ ನಲ್ಲಿ ತಿರುಗೇಟು ನೀಡಿದ ಸಚಿವರು,  ನಿಮ್ಮ ವಿರುದ್ಧ ಬದಾಮಿಯಲ್ಲಿ ಸೋತಿರಬಹುದು, ಚಾಮುಂಡೇಶ್ವರಿಯಲ್ಲಿ ನೀವು ಸೋತಷ್ಟು ಹೀನಾಯವಾಗಿ ಸೋತಿಲ್ಲ. ಚಾಮುಂಡೇಶ್ವರಿ ಜನರನ್ನು ನೀವು ಮರೆತಂತೆ ನಾನು ಬದಾಮಿಯ ಜನರನ್ನು ನಾನು ಮರೆತಿಲ್ಲ. ಪ್ರವಾಹ ಬಂದಾಗ ನಿಮಗಿಂತ ಮೊದಲು ಹೋಗಿ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ ಎಂದಿದ್ದಾರೆ.

 ನಿಮ್ಮ ಕ್ಷೇತ್ರದಲ್ಲಿ ಎಷ್ಟು ಆಸ್ಪತ್ರೆಗಳಿವೆ ಎಷ್ಟು ವೈದ್ಯರು ಮತ್ತು ಸಿಬ್ಬಂದಿ ಕೊರತೆ ಇದೆ ಎಂದು ಪತ್ರ ಕಳುಹಿಸಿಕೊಡಿ. ಹುದ್ದೆಗಳನ್ನು ಭರ್ತಿ ಮಾಡೋಣ. ರಾಜಕೀಯವನ್ನು ಚುನಾವಣೆಗಷ್ಟೇ ಸೀಮಿತವಾಗಿಡೋಣ. ಬಳಿಕ ರಾಜ್ಯದ ಅಭಿವೃದ್ಧಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. 4/5

— B Sriramulu (@sriramulubjp) December 5, 2019

ಅದನ್ನು ಬಿಟ್ಟು ಕೇವಲ, ವ್ಯಂಗ್ಯ, ಟೀಕೆಗಳಿಂದ ಕ್ಷೇತ್ರದ ಸಮಸ್ಯೆಗಳು ಬಗೆಹರಿಯುವುದಿಲ್ಲ. ಜನರಿಗೆ ನ್ಯಾಯವೂ ಸಿಗುವುದಿಲ್ಲ. ಇನ್ನಾದರೂ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಗಮನಹರಿಸಿ. 5/5

— B Sriramulu (@sriramulubjp) December 5, 2019

ನಿಮ್ಮ ಸರ್ಕಾರದ 5 ವರ್ಷ ಮತ್ತು ಮೈತ್ರಿ ಸರ್ಕಾರದ ಒಂದೂಕಾಲು ವರ್ಷದಲ್ಲಿ ನೀವೇನು ಸಾಧನೆ ಮಾಡಿದ್ದೀರಿ, ನಾನು ಸಚಿವನಾಗಿ 100 ದಿನ ಕಳೆದಿದೆ ಅಷ್ಟೆ. ವೈದ್ಯರು, ಸಿಬ್ಬಂದಿ ನೇಮಕ ಪ್ರಕ್ರಿಯೆ ಆರಂಭಿಸಿದ್ದೇನೆ ಎಂದು ತಿಳಿಸಿದರು.

 

 
First published: December 5, 2019, 9:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading