• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Shobha Karandlaje: ಕಾಂಗ್ರೆಸ್‌ ಸರ್ಕಾರ ಹೆಣ್ಮಕ್ಕಳಿಗೆ ಯೋಜನೆ ತಂದಿರುವುದು ಖುಷಿ ತಂದಿದೆ; ಶೋಭಾ ಕರಂದ್ಲಾಜೆ ಮೆಚ್ಚುಗೆ

Shobha Karandlaje: ಕಾಂಗ್ರೆಸ್‌ ಸರ್ಕಾರ ಹೆಣ್ಮಕ್ಕಳಿಗೆ ಯೋಜನೆ ತಂದಿರುವುದು ಖುಷಿ ತಂದಿದೆ; ಶೋಭಾ ಕರಂದ್ಲಾಜೆ ಮೆಚ್ಚುಗೆ

ಶೋಭಾ ಕರಂದ್ಲಾಜೆ

ಶೋಭಾ ಕರಂದ್ಲಾಜೆ

ಕಾಂಗ್ರೆಸ್‌ ಸರ್ಕಾರ ಹೆಣ್ಮಕ್ಕಳಿಗೆ ಕೊಟ್ಟಿರುವುದು ಖುಷಿಯಾಗಿದೆ, ಒಳ್ಳೆಯದಾಗಲಿ‌. ಪ್ರವಾಸ ಮಾಡಬಹುದು‌, ಬೇರೆ ಕಡೆ ಹೋಗಬಹುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಶೋಭಾ ಕರಂದ್ಲಾಜೆ, ಆದ್ರೆ, ಶೋಭನಿಗೂ ಫ್ರೀ ಎಂಬ ದುರಾಂಕಾರದ ಮಾತನ್ನ ಕಾಂಗ್ರೆಸ್ ಹೇಳುತ್ತೆ. ಇದಕ್ಕೆ ಜನರೇ ಉತ್ತರ ಕೊಡ್ತಾರೆ, ನಾನೇನೂ ಹೇಳಲ್ಲ ಎಂದು ಕಿಡಿಕಾರಿದರು.

ಮುಂದೆ ಓದಿ ...
  • News18 Kannada
  • 5-MIN READ
  • Last Updated :
  • Chikmagalur, India
  • Share this:

ಚಿಕ್ಕಮಗಳೂರು : ಸರ್ಕಾರಿ (KSRTC) ಬಸ್ಸಿನಲ್ಲಿ ಶೋಭಾ ಕರಂದ್ಲಾಜೆಗೂ (Shobha karandlaje) ಫ್ರೀ ಎಂಬ ಕಾಂಗ್ರೆಸ್ (Congress Govt) ಹೇಳಿಕೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗರಂ ಆಗಿದ್ದಾರೆ.


ಈ ಸಂಬಂಧ ಚಿಕ್ಕಮಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ ಕರಂದ್ಲಾಜೆ, ಹೆಣ್ಮಕ್ಕಳಿಗೆ ಸರ್ಕಾರ ಯೋಜನೆ ಕೊಟ್ಟಿರುವುದು ಖುಷಿಯಾಗಿದೆ, ಒಳ್ಳೆಯದಾಗಲಿ‌. ಪ್ರವಾಸ ಮಾಡಬಹುದು‌, ಬೇರೆ ಕಡೆ ಹೋಗಬಹುದು. ಆದ್ರೆ, ಶೋಭನಿಗೂ ಫ್ರೀ ಎಂಬ ದುರಾಂಕಾರದ ಮಾತನ್ನ ಕಾಂಗ್ರೆಸ್ ಹೇಳುತ್ತೆ. ಇದಕ್ಕೆ ಜನರೇ ಉತ್ತರ ಕೊಡ್ತಾರೆ, ನಾನೇನೂ ಹೇಳಲ್ಲ ಎಂದು ಕಿಡಿಕಾರಿದರು.


ಇದನ್ನೂ ಓದಿ: Siddaramaiah: ನಾನು ಮತ್ತೆ ಚುನಾವಣೆಗೆ ನಿಲ್ಲೋದಿಲ್ಲ, ರಾಜಕೀಯ ನಿವೃತ್ತಿ ಬಗ್ಗೆ ಪುನರುಚ್ಛರಿಸಿದ ಸಿದ್ದರಾಮಯ್ಯ


ಪಠ್ಯ ಪುಸ್ತಕದಲ್ಲಿ ನಮ್ಮ ಮಕ್ಕಳು ಏನು ಕಲಿಯಬೇಕೆಂದು ನಾವೇ ನಿರ್ಧಾರ ಮಾಡಬೇಕು. ಅವರ ಬೆಳವಣಿಗೆ ಪ್ರಗತಿ, ಅಭ್ಯುದಯಕ್ಕೆ ಚರಿತ್ರೆ ತಿಳಿದುಕೊಳ್ಳಬೇಕು ಎಂದ ಶೋಭಾ ಕರಂದ್ಲಾಜೆ, ನಮ್ಮ ದೇಶವನ್ನು ತಿಳಿದುಕೊಳ್ಳಲು ಏನು ಕಲಿಸಬೇಕು, ಅದೇ ಆಧಾರದಲ್ಲಿ  ಕಲಿಸಬೇಕು. ಪಠ್ಯ ಪುಸ್ತಕ ಅನ್ನೋದು ಪಾರ್ಟಿ, ಜಾತಿ, ಧರ್ಮದ ವಿಚಾರವಲ್ಲ. ನಾವು ಸಂವಿಧಾನ್ಮಕವಾಗಿ ಏನನ್ನ ಒಪ್ಪಿಕೊಂಡಿದ್ದೇವೋ, ಅದನ್ನೇ ಕಲಿಯುವಂತಹ ಅವಕಾಶವಾಗಬೇಕು ಎಂದು ಹೇಳಿದರು.


ಮುಂದುವರಿದು ಮಾತನಾಡಿದ ಅವರು, ಒಂದು ಸರ್ಕಾರ ಬಂದಾಗ ಒಂದು ಪಠ್ಯ, ಇನ್ನೊಂದು ಸರ್ಕಾರ ಬಂದಾಗ ಮತ್ತೊಂದು ಪಠ್ಯ ಸರಿಯಲ್ಲ. ನಮ್ಮ ದೇಶ ಭಕ್ತರ, ನಮ್ಮ ಸ್ವಾತಂತ್ರ್ಯ ಹೋರಾಟಗಾರರ, ನಮ್ಮ ಸಂಸ್ಕೃತಿಯ ಬಗ್ಗೆ ಕಲಿಸುವ  ಅನಿವಾರ್ಯತೆ ಇದೆ. ಈ ದೃಷ್ಟಿಯಿಂದ ರಾಜ್ಯ ಸರ್ಕಾರ ಯೋಚನೆ ಮಾಡಲಿ. ಕಾಂಗ್ರೆಸ್ ಪಠ್ಯ, ಬಿಜೆಪಿಯ ಪಠ್ಯ ಅನ್ನೋದಕ್ಕಿಂತ ಹೆಚ್ಚು ನಮ್ಮ ಮಕ್ಕಳು ಏನನ್ನ ಕಲಿಯಬೇಕು. ಮುಂದಿನ ಪೀಳಿಗೆ ಎಲ್ಲಿಗೆ ಹೋಗಬೇಕು, ಏನಾಗಬೇಕು ಇದರ ಆಧಾರದಲ್ಲಿ ಪಠ್ಯ ಕೊಡುವುದು ಒಳ್ಳೆಯದು ಎಂದು ಹೇಳಿದರು.




ಇದೇ ವೇಳೆ ಸರ್ಕಾರಿ ಬಸ್ಸಿನಲ್ಲಿ ಶೋಭಾ ಕರಂದ್ಲಾಜೆಗೂ ಫ್ರೀ ಎಂಬ ಕಾಂಗ್ರೆಸ್ ಹೇಳಿಕೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗರಂ ಆದರು.

First published: