ಉಡುಪಿ: ಮುಂದಿನ ಚುನಾವಣೆಯಲ್ಲಿ ಗೆದ್ದು ನಾವು ಅಧಿಕಾರಕ್ಕೆ ಬಂದರೆ 7 ಕೆಜಿಯಲ್ಲ, 10 ಕೆಜಿ ಅಕ್ಕಿ ಕೊಡ್ತೇವೆ ಎಂದು ಹೇಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ (Ex CM Siddaramaiah) ಅವರಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Minister Shobha Karandlaje) ಅವರು ತಿರುಗೇಟು ನೀಡಿದ್ದಾರೆ. ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ ತಮ್ಮ ಇಂಗಿತ ವ್ಯಕ್ತಪಡಿಸಿ, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಮೊದಲಿನಂತೆ 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶೋಭಾ ಕರಂದ್ಲಾಜೆ ಅವರು, ಕೇಂದ್ರ ಸರ್ಕಾರದ (Central Government) ದೇಶದ ಎಲ್ಲಾ ಪಡಿತರದಾರರಿಗೆ ಅಕ್ಕಿಯನ್ನು (Ration) ನೀಡುತ್ತಿದೆ. ದೇಶದ 84 ಕೋಟಿ ಜನರಿಗೆ ಕೇಂದ್ರ ಅಕ್ಕಿ ನೀಡುತ್ತಿದೆ. ಇದಕ್ಕಾಗಿ ಒಂದು ಕೆಜಿ ಅಕ್ಕಿಗೆ 36 ರೂಪಾಯಿ ನೀಡಿ ಖರೀದಿ ಮಾಡಿ, 3 ರೂಪಾಯಿಗೆ ಕೊಡುತ್ತಿದೆ ಎಂದು ಮಾಹಿತಿ ನೀಡಿದರು.
ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಕೇಂದ್ರ ವರ್ಷಕ್ಕೆ 1 ಲಕ್ಷ 60 ಸಾವಿರ ಕೋಟಿ ರೂಪಾಯಿ ಖರ್ಚು ಮಾಡುತ್ತದೆ. ಒಂದು ಕೆಜಿಗೆ 36 ರೂಪಾಯಿಗೆ ಖರೀದಿಸಿ ಮಾಡಿ 3 ರೂಪಾಯಿಗೆ ಕೊಡುತ್ತಿದೆ. ಅಲ್ಲದೇ 1,84,000 ಕೋಟಿ ರೂಪಾಯಿ ಗೋಧಿ ಖರೀದಿ ಮಾಡಲು ವಿನಿಯೋಗ ಮಾಡುತ್ತಿದ್ದೇವೆ.
Free food grains for 81.35Cr beneficiaries!
PM Sri @narendramodi Ji led cabinet decides to continue ‘Free’ food grains for another 1 year under NFSA.
Govt. bear the expenditure of ₹2 lakh crores!#CabinetDecisions pic.twitter.com/I2NePgKggd
— Shobha Karandlaje (@ShobhaBJP) December 23, 2022
ಜಾತಿವಾದ ಮಾಡಿ ಲಿಂಗಾಯತ ಧರ್ಮ ಒಡೆದರು
ಸಿದ್ದರಾಮಯ್ಯ ಅವರ ಸ್ವಂತ ಕಿಸೆಯಿಂದ ಹಣ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಯೋಜನೆಗೆ ಹಣವನ್ನು ಕೊಡುತ್ತದೆ. ಕಳೆದ ಬಾರಿ ನರೇಂದ್ರ ಮೋದಿಯವರ ಹಣ, ಸಿದ್ದರಾಮಯ್ಯದ್ದು ಹೆಸರು. ಇದೇ ಸಿದ್ದರಾಮಯ್ಯ ಮಾಡಿದ ಸಾಧನೆ. ಈ ಬಾರಿ ಜನಕ್ಕೆ ಮೋಸ ಮಾಡಲು ಸಾಧ್ಯವಿಲ್ಲ. ಮುಖ್ಯಮಂತ್ರಿಯಾದಾಗ ಜಾತಿವಾದ ಮಾಡಿ ಲಿಂಗಾಯಿತ ಧರ್ಮ ಒಡೆದರು. ಎಲ್ಲೂ ಹೆಸರಿಲ್ಲದ ಟಿಪ್ಪು ಹೆಸರು ಜಾರಿಗೆ ತಂದಿದ್ದು ಸಿದ್ದರಾಮಯ್ಯ.
ಮುಸಲ್ಮಾನರಿಗೆ 10,000 ಕೋಟಿ ರೂಪಾಯಿ ಹೆಚ್ಚುವರಿ ಕಾಯ್ದಿರಿಸುವುದಾಗಿ ಘೋಷಣೆ ಮಾಡಿದ್ದಾರೆ. ನೀವು ಯಾರಿಗೆ ಬೇಕಾದರೂ ದುಡ್ಡು ಕೊಡಿ, ಆದರೆ ಹಣ ಸರ್ಕಾರದ ಬೊಕ್ಕಸದ್ದು ಎಂದು ನೆನಪಿರಲಿ. ನ್ಯಾಯಯುತವಾಗಿ ಎಲ್ಲಾ ಜಾತಿಯ ಬಡವರಿಗೆ ಸರ್ಕಾರದ ಹಣ ಸಲ್ಲಬೇಕು. ಒಂದು ಧರ್ಮಕ್ಕೆ ಹಣ ಘೋಷಣೆ ಮಾಡಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯನ ಬಗ್ಗೆ ರಾಜ್ಯದ ಜನಕ್ಕೆ ನನಗಿಂತ ಹೆಚ್ಚು ಗೊತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Karnataka Politics: ಯಾರು ಹೇಳಿದ್ರೂ ನೋ ನೋ; ಮುಗಿಯದ ಡಿಕೆಶಿ, ಸಿದ್ದರಾಮಯ್ಯ ಮುನಿಸು
ಸಿದ್ದರಾಮಯ್ಯ ಏನು ಹೇಳಿದ್ದರು?
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದ್ದ ವೇಳೆ ಮಾತನಾಡಿದ್ದ ಸಿದ್ದರಾಮಯ್ಯ ಅವರು, ಕಪ್ಪು ಹಣವನ್ನು ಹೊರಗೆ ತಂದು ಎಲ್ಲರಿಗೂ 15 ಲಕ್ಷ ರೂಪಾಯಿ ಕೊಡ್ತೇವೆ ಎಂದು ಹೇಳಿದ್ದರು. ಯಾರಿಗಾದರೂ ಬಂದಿದೆಯಾ ಎಂದು ಪ್ರಶ್ನೆ ಮಾಡಿದ್ದಾರೆ. ಯುವಕರಿಗೆ 2 ಕೋಟಿ ಉದ್ಯೋಗ ಸೃಷ್ಠಿ ಮಾಡಿ ಸಮಸ್ಯೆ ಬಗೆಹರಿಸುತ್ತೇನೆಂದು ಹೇಳಿದ್ದರು. ಇದ್ಯಾವುದು ಆಗಿಲ್ಲ.
ಐತಿಹಾಸಿಕ ನಿರ್ಧಾರ ಕೈಗೊಂಡ ಮೋದಿ ಸಂಪುಟ.
ಮೋದಿ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 81.35 ಕೋಟಿ ಜನರಿಗೆ ಡಿಸೆಂಬರ್ 2023 ರ ವರೆಗೆ ಉಚಿತ ಪಡಿತರ ನೀಡಲಿದೆ.#CabinetDecisions pic.twitter.com/Nq8o0VaQdm
— Shobha Karandlaje (@ShobhaBJP) December 24, 2022
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ