ಕೋಡಿಹಳ್ಳಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ: ಸಚಿವೆ ಶಶಿಕಲಾ ಜೊಲ್ಲೆ ಆಕ್ರೋಶ

ಏಳೆಂಟು ತಿಂಗಳು ಗಳಿಂದ ಕೋವಿಡ್-19 ಸರ್ಕಾರಕ್ಕೆ ಒಂದು ದೊಡ್ಡ ಸವಾಲಾಗಿತ್ತು. ಸಿಎಂ ಯಡಿಯೂರಪ್ಪನವರು ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದಾರೆ. ಸದ್ಯದ ಕಷ್ಟದ ಪರಿಸ್ಥಿತಿಯಲ್ಲೂ ಸಾರಿಗೆ ನೌಕರರಿಗೆ ಸರ್ಕಾರ ನ್ಯಾಯ ಒದಗಿಸಿದೆ

ಸಚಿವೆ ಶಶಿಕಲಾ ಜೊಲ್ಲೆ

ಸಚಿವೆ ಶಶಿಕಲಾ ಜೊಲ್ಲೆ

  • Share this:
ಚಿಕ್ಕೋಡಿ(ಡಿಸೆಂಬರ್​. 14): ಕಳೆದ ಮುರು ದಿನಗಳಿಂದ ಸಾರಿಗೆ ಇಲಾಖೆ ಸಿಬ್ಬಂದಿಗಳು ನಾನಾ ಬೇಡಿಕೆಗಳನ್ನ ಮುಂದಿಟ್ಟು ನಡೆಸುತ್ತಿದ್ದ ಹೋರಾಟ ಕೊನೆಗೂ ಅಂತ್ಯಗೊಂಡಿದೆ. ಸರ್ಕಾರ ಸಾರಿಗೆ ಸಿಬ್ಬಂದಿಗಳ ಬೇಡಿಕೆ ಈಡೇರಿಸಲು ಮುಂದಾಗಿದ್ದು ಪ್ರಾಮಾಣಿಕ ಪ್ರಯತ್ನ ನಡೆಸಿದೆ. ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ಸರ್ಕಾರ ಮತ್ತು ಮತ್ತು ಸಾರಿಗೆ ಸಿಬ್ಬಂದಿಗಳ ನಡುವಿನ ಮಾತುಕತೆ ಯಶಸ್ವಿಯಾಗಿರುವ ಹಿನ್ನಲೆ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಯಡಿಯೂರಪ್ಪನವರು ಸೇರಿದಂತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಕಂದಾಯ ಸಚಿವ ಆರ್ ಅಶೋಕ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂಬ ಮುಖ್ಯ ಬೇಡಿಕೆಯಾಗಿತ್ತು.ಆದರೆ, ಅದು ಅಷ್ಟು ಸುಲಭವಾಗಿ ಆಗುವಂತೆ ಮಾತಲ್ಲ. ಹತ್ತು ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡಿದೆ ಎಂದು ಹೇಳಿದರು.

ನಮ್ಮ ಸರ್ಕಾರ ಯಾವುದೇ ಕ್ಷೇತ್ರದ, ವರ್ಗದ ಜನರಿಗೆ ತೊಂದರೆ ಆಗದ ಹಾಗೆ ಕೆಲಸ‌ ಮಾಡುತ್ತಿದೆ. ಏಳೆಂಟು ತಿಂಗಳು ಗಳಿಂದ ಕೋವಿಡ್-19 ಸರ್ಕಾರಕ್ಕೆ ಒಂದು ದೊಡ್ಡ ಸವಾಲಾಗಿತ್ತು. ಸಿಎಂ ಯಡಿಯೂರಪ್ಪನವರು ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದಾರೆ. ಸದ್ಯದ ಕಷ್ಟದ ಪರಿಸ್ಥಿತಿಯಲ್ಲೂ ಸಾರಿಗೆ ನೌಕರರಿಗೆ ಸರ್ಕಾರ ನ್ಯಾಯ ಒದಗಿಸಿದೆ ಎಂದು ಹೇಳಿದರು.

ಕೋಡಿಹಳ್ಳಿ ವಿರುದ್ದ ಆಕ್ರೋಶ

ಇನ್ನೂ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರು ಸಾರಿಗೆ ನೌಕರರಿಗೆ ಬೆಂಬಲ ನೀಡಿದ ಬೆನ್ನಲ್ಲೆ ಕೋಡಿಹಳ್ಳಿ ವಿರುದ್ದ ವಿವಿಧ ನಾಯಕರು ಗರಂ ಆಗಿದರು. ಕೋಡಿಹಳ್ಳಿ ರೈತರ ಚಳುವಳಿ ಬಿಟ್ಟು ಇಲ್ಲಿಗೆ ಬಂದು ಹುರಿದುಂಬಿಸುವ ಕೆಲಸ ಮಾಡುತ್ತಿದ್ದಾರೆ. ಕೋಡಿಹಳ್ಳಿಯಿಂದಲೇ ಜನರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಬಿಜೆಪಿಯ ಹಿರಿಯ ನಾಯಕರು ಆರೋಪಿಸಿದ ಬೆನ್ನಲ್ಲೆ ಸಚಿವ ಶಶಿಕಲಾ ಜೊಲ್ಲೆ ಕೂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ದ ಹರಿಹಾಯ್ದಿದ್ದಾರೆ.

ಇದನ್ನೂ ಓದಿ : ಎಸ್ಮಾ ಜಾರಿ ಮಾಡಿ, ಸಿಬ್ಬಂದಿಗಳು ಜೈಲಿಗೆ ಹೋದರೆ, ನೌಕರರ ಕುಟುಂಬಕ್ಕೆ ಕೋಡಿಹಳ್ಳಿ ರಕ್ಷಣೆ ಕೊಡ್ತಾರಾ; ಈಶ್ವರಪ್ಪ

ಕೋಡಿಹಳ್ಳಿ ಚಂದ್ರಶೇಖರ್ ಮುಷ್ಕರದಲ್ಲಿ ಭಾಗಿಯಾಗಿದ್ದು ಖಂಡನೀಯ ರೈತರ ಪರವಾಗಿ ರೈತರಿಗಾಗಿ ಹೋರಾಟ ಮಾಡಿದ್ರೆ ಒಪ್ಪಿಕೊಳ್ತಿದ್ವಿ, ಸಾರಿಗೆ ನೌಕರರಿಗೆ ಹುರಿದುಂಬಿಸಿ ಬೇರೆ ರೀತಿಯಲ್ಲಿ ಪರಿಸ್ಥಿತಿ ಸೃಷ್ಟಿಸಿದ್ದಾರೆ. ನಮ್ಮ ಸರ್ಕಾರ ಸಾರಿಗೆ ನೌಕರರನ್ನು ಹೇಗೆ ಇಟ್ಟುಕೊಳ್ಳಬೇಕು ನಮಗೆ ಗೊತ್ತು. ಕೋಡಿಹಳ್ಳಿ ಚಂದ್ರಶೇಖರ್ ಅವರು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ. ಇದರಿಂದ ಜನರು ತೊಂದರೆ ಅನುಭವಿಸುವ ಸ್ಥಿತಿ ನಿರ್ಮಾಣವಾಯಿತು ಎಂದು ಕೊಡಿಹಳ್ಳಿ ವಿರುದ್ದ ಸಚಿವೆ ಜೊಲ್ಲೆ ವಾಗ್ದಾಳಿ ನಡೆಸಿದರು.

ಒಟ್ಟಿನಲ್ಲಿ ಈಗಾಗಲೇ ಕೊರೋನಾ ದಿಂದಾಗಿ ಸಾರಿಗೆ ಸಂಸ್ಥೆ ಸಾಕಷ್ಟು ಆರ್ಥಿಕ ನಷ್ಟದಲ್ಲಿ ಇದ್ದು ಈಗ ನೌಕರರ ಮುಷ್ಕರದಿಂದಾಗಿ ಮತ್ತೆ ನಷ್ಟ ಅನುಭವಿಸುವಂತಾಗಿದೆ. ಸದ್ಯಕ್ಕೆ ನೌಕರರು ಮುಷ್ಕರ ಕೈಬಿಟ್ಟಿದ್ದು ಕೆಲಸಕ್ಕೆ ಹಾಜರಾಗಿದ್ದಾರೆ. ಮತ್ತೆ ಜನ ಸರ್ಕಾರಿ ಸಾರಿಗೆ ವ್ಯವಸ್ಥೆಯ ಕಡೆಗೆ ಮುಖ ಮಾಡಿದ್ದು ಮೂರು ದಿನಗಳ ಮುಷ್ಕರ ಅಂತ್ಯವಾಗಿದ್ದು, ಶೀಘ್ರವೆ ಸರ್ಕಾರ ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಮುಂದಾಗಬೇಕಿದೆ.
Published by:G Hareeshkumar
First published: