HOME » NEWS » State » MINISTER SHASHIKALA JOLLE SAYS KITTUR RANI CHENNAMMA AWARD DISTRIBUTION TOMORROW IN PALACE GROUND SESR

ಸಾಧನೆಗೈದ ಮಹಿಳೆಯರಿಗೆ ನಾಳೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ; ಸಚಿವೆ ಶಶಿಕಲಾ ಜೊಲ್ಲೆ

ಮಹಿಳಾ ಕ್ಷೇತ್ರದದಲ್ಲಿ ಸಾಧನೆ ಮಾಡಿದ ಆರು ಮಹಿಳಾ ಸಂಸ್ಥೆಗಳು, ಎಂಟು ಮಹಿಳಾ ಸಾಧಕಿಯರಿಗೆ, ಸಾಹಿತ್ಯ ಕ್ಷೇತ್ರದಲ್ಲಿ ಮೂರು, ಕಲೆ ಕ್ಷೇತ್ರದ ಐದು ,ಸಾಹಿತ್ಯ ಮೂರು, ಕ್ರೀಡೆ ಇಬ್ಬರು, ಶಿಕ್ಷಣ ಒಬ್ಬರು ಹಾಗೂ ವೀರ ಮಹಿಳೆ ಒಬ್ಬರಿಗೆ ಸೇರಿದಂತೆ ಒಟ್ಟು 49 ಪ್ರಶಸ್ತಿಗಳನ್ನ ವಿತರಿಸಲಾಗುತ್ತದೆ

news18-kannada
Updated:March 9, 2021, 6:22 PM IST
ಸಾಧನೆಗೈದ ಮಹಿಳೆಯರಿಗೆ ನಾಳೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ; ಸಚಿವೆ ಶಶಿಕಲಾ ಜೊಲ್ಲೆ
ಶಶಿಕಲಾ ಜೊಲ್ಲೆ
  • Share this:
ಬೆಂಗಳೂರು (ಮಾ. 9):  ಮಹಿಳಾ ಕ್ಷೇತ್ರದಲ್ಲಿ ವಿವಿಧ ಸಾಧನೆಗೈದ ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ವಿತರಣೆ ಮಾಡಲಾಗುವುದು ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು. ಈ ಕುರಿತು ಮಾತನಾಡಿದ ಅವರು, ಮಹಿಳಾ ದಿನಾಚರಣೆಯಂದೇ ಅವರ ಸಾಧನೆ ಗುರುತಿಸಿ ಅವರಿಗೆ ಈ ಪ್ರಶಸ್ತಿ ವಿತರಣೆ ಮಾಡುತ್ತಾ ಬಂದಿದ್ದೇವೆ. ಆದರೆ, ಮಾ. 8ರಂದು ಮುಖ್ಯಮಂತ್ರಿಗಳು ರಾಜ್ಯ ಬಜೆಟ್​ ಮಂಡಿಸಿದರು. ಈ ಹಿನ್ನಲೆ ಈ ಪ್ರಶಸ್ತಿ ವಿತರಣೆಯನ್ನು ನಾಳೆ ಮಾಡಲಾಗುವುದು ಎಂದು ತಿಳಿಸಿದರು. ನಾಳೆ ಅರಮನೆ ಆವರಣದಲ್ಲಿ ಸಾಧನೆಗೈದ ಮಹಿಳೆಯರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೇ ಈ ಪ್ರಶಸ್ತಿ ನೀಡಲಿದ್ದಾರೆ ಎಂದು ತಿಳಿಸಿದರು.

ಮಹಿಳಾ ಕ್ಷೇತ್ರದದಲ್ಲಿ ಸಾಧನೆ ಮಾಡಿದ ಆರು ಮಹಿಳಾ ಸಂಸ್ಥೆಗಳು, ಎಂಟು ಮಹಿಳಾ ಸಾಧಕಿಯರಿಗೆ, ಸಾಹಿತ್ಯ ಕ್ಷೇತ್ರದಲ್ಲಿ ಮೂರು, ಕಲೆ ಕ್ಷೇತ್ರದ ಐದ , ಸಾಹಿತ್ಯ ಮೂರು, ಕ್ರೀಡೆ ಇಬ್ಬರು, ಶಿಕ್ಷಣ ಒಬ್ಬರು ಹಾಗೂ ವೀರ ಮಹಿಳೆ ಒಬ್ಬರಿಗೆ ಸೇರಿದಂತೆ ಒಟ್ಟು 49 ಪ್ರಶಸ್ತಿಗಳನ್ನ ವಿತರಿಸಲಾಗುತ್ತದೆ ಎಂದರು.

ರಮೇಶ್​ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಬೆಳಗಾವಿ ಕ್ಷೇತ್ರದ ಉಸ್ತುವಾರಿಗೆ ಶಶಿಕಲಾ ಜೊಲ್ಲೆ ಮತ್ತು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪೈಪೋಟಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, ಬೆಳಗಾವಿ ಉಸ್ತುವಾರಿ ವಿಚಾರವಾಗಿ ನಾನೇನು ಪ್ರಯತ್ನ ಮಾಡಿಲ್ಲ. ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆ ಮಾಡಲಿ. ನಾನು ಈಗಾಗಲೇ ಕಾರವಾರ ಮತ್ತು ಬಿಜಾಪುರ ಉಸ್ತುವಾರಿಯನ್ನು ನಿಭಾಯಿಸುತ್ತಿದ್ದೇನೆ. ಬೆಳಗಾವಿ ಕೊಟ್ಟರು ನಿಭಾಯಿಸುವ ಸಾರ್ಮರ್ಥ್ಯವಿದೆ ಎಂದರು.
Published by: Seema R
First published: March 9, 2021, 6:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories