HOME » NEWS » State » MINISTER SHASHIKALA JOLLE SAYS GOVT IS COMMITTED TO PROTECT THE CD CASE VICTIM SNVS

Shashikala Jolle - ಸಿಡಿ ಪ್ರಕರಣದ ಸಂತ್ರಸ್ತೆಗೆ ರಕ್ಷಣೆ ಕೊಡುವುದು ನಮ್ಮ ಕರ್ತವ್ಯ: ಸಚಿವೆ ಶಶಿಲಾ ಜೊಲ್ಲೆ

ಸಿಡಿ ಪ್ರಕರಣದ ತನಿಖೆಯಿಂದ ಸಂತ್ರಸ್ತ ಯುವತಿಗೆ ಅನ್ಯಾಯ ಆಗಿದೆಯೋ ಇಲ್ಲವೋ ಎಂಬುದು ಗೊತ್ತಾಗುತ್ತದೆ. ಆದರೆ, ಆಕೆಗೆ ರಕ್ಷಣೆ ಕೊಡುವುದು ಸರ್ಕಾರದ ಜವಾಬ್ದಾರಿ ಮತ್ತು ಕರ್ತವ್ಯ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

news18-kannada
Updated:March 25, 2021, 3:22 PM IST
Shashikala Jolle - ಸಿಡಿ ಪ್ರಕರಣದ ಸಂತ್ರಸ್ತೆಗೆ ರಕ್ಷಣೆ ಕೊಡುವುದು ನಮ್ಮ ಕರ್ತವ್ಯ: ಸಚಿವೆ ಶಶಿಲಾ ಜೊಲ್ಲೆ
ಶಶಿಕಲಾ ಜೊಲ್ಲೆ
  • Share this:
ಬೆಂಗಳೂರು(ಮಾ. 25): ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತೆ ರಕ್ಷಣೆ ಕೊಡುವುದು ಸರ್ಕಾರದ ಕರ್ತವ್ಯವಾಗಿದೆ. ಆ ಯುವತಿಗೆ ರಕ್ಷಣೆ ಕೊಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ಸಿಡಿ ಪ್ರಕರಣದಲ್ಲಿ ಯುವತಿ ಎರಡನೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ವಿಚಾರವನ್ನು ಗಮನಕ್ಕೆ ತಂದಾಗ, ತನಗೆ ಆ ಯುವತಿ ಈಗ ಏನು ಹೇಳಿದ್ಧಾರೋ ಗೊತ್ತಿಲ್ಲ. ನಮ್ಮ ಸರ್ಕಾರ ಆ ಯುವತಿಗೆ ರಕ್ಷಣೆ ನೀಡುವುದಾಗಿ ಸದನದಲ್ಲೇ ಹೇಳಲಾಗಿದೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರು ಮತ್ತು ಮುಖ್ಯಮಂತ್ರಿಗಳು ಸದನದಲ್ಲಿ ಹೇಳಿದ್ದಾರೆ. ನಮ್ಮಿಂದ ಆಕೆಗೆ ರಕ್ಷಣೆ ಕೊಡುವ ಕೆಲಸ ಮಾಡುತ್ತೇವೆ. ಪ್ರಕರಣದಲ್ಲಿ ಆಕೆಗೆ ಅನ್ಯಾಯ ಆಗಿದೆಯೋ ಇಲ್ಲವೋ ಎಂಬುದು ತನಿಖೆ ಆದ ಬಳಿಕ ಗೊತ್ತಾಗುತ್ತದೆ. ಅದೇನಿದ್ದರೂ ಆ ಯುವತಿಗೆ ರಕ್ಷಣೆ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದ್ದು ಅದನ್ನು ಮಾಡುತ್ತೇವೆ ಎಂದು ಶಶಿಕಲಾ ಜೊಲ್ಲೆ ಸ್ಪಷ್ಟಪಡಿಸಿದ್ಧಾರೆ.

ಇದೇ ವೇಳೆ, ಗೃಹ ಸಚಿವ ಬೊಮ್ಮಾಯಿ ಅವರೂ ಕೂಡ ಯುವತಿಗೆ ರಕ್ಷಣೆ ಕೊಡಲು ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದ್ದಾರೆ. ನಾವು ಆ ಮಹಿಳೆಗೆ ರಕ್ಷಣೆ ಕೊಡಲು ಸಿದ್ಧರಿದ್ದೇವೆ. ಆಕೆ ತಾನು ಎಲ್ಲಿದ್ದೇನೆಂದು ತಿಳಿಸಿದರೆ ಆಕೆ ಇದ್ದಲ್ಲಿಗೆ ಪೊಲೀಸರನ್ನ ಕಳುಹಿಸಿ ಹೇಳಿಕೆ ಪಡೆಯುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಪ್ರಕರಣದಲ್ಲಿ ಎಸ್​ಐಟಿ ನಡೆಸುತ್ತಿರುವ ತನಿಖೆಯಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡುವುದಿಲ್ಲ. ಒಂದು ಕೇಸ್ ತನಿಖೆ ಆದರೆ ಹಲವು ಬೆಳವಣಿಗೆಗಳು ಬರುತ್ತವೆ. ಈಗಾಗಲೇ ಎಸ್​ಐಟಿ ಮುಖ್ಯಸ್ಥರು ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಯಾರು ಏನೇ ಹೇಳಿದರೂ ನಾವಂತೂ ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತಿದ್ದೇವೆ. ಈಗಾಗಲೇ ರಮೇಶ ಜಾರಕಿಹೊಳಿಯ ವಿಚಾರಣೆಯನ್ನೂ ಮಾಡಿದ್ದೇವೆ. ಈ ತನಿಖೆ ಯಾರ ವಿರುದ್ಧವೂ ಅಲ್ಲ, ಯಾರ ಪರವೂ ಅಲ್ಲ. ಇದರಲ್ಲಿ ಸತ್ಯ ಹೊರಗೆ ಬರಬೇಕು ಅಷ್ಟೇ. ಆ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ ಎಂದು ಹೇಳಿದ್ಧಾರೆ.

ಇದನ್ನೂ ಓದಿ: CD Case - ನನ್ನ ಬಳಿ ಇರೋ ಎವಿಡೆನ್ಸ್ ಬಿಟ್ಟರೆ ಶಾಕ್ ಆಗ್ತೀರಿ: ರಮೇಶ್ ಜಾರಕಿಹೊಳಿ ಹೇಳಿಕೆ

ಇನ್ನು, ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಬಿಡುಗಡೆ ಮಾಡಿದ ಎರಡನೇ ವಿಡಿಯೋ ಹೇಳಿಕೆ ಬಗ್ಗೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಯಡಿಯೂರಪ್ಪ ನಿಗೂಢವಾಗಿ ಪ್ರತಿಕ್ರಿಯಿಸಿದ್ದಾರೆ. “ಐ ಡೋಂಟ್ ನೋ ಎನಿಥಿಂಗ್. ಯೂ ನೋ ವೆರಿ ವೆಲ್” (ನನಗೇನೂ ಗೊತ್ತಿಲ್ಲ ಅಂತ ನಿಮಗೆ ಚೆನ್ನಾಗಿ ಗೊತ್ತು) ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
Published by: Vijayasarthy SN
First published: March 25, 2021, 3:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories