ಯಾರಿಗೂ ಬೇಡವಾದ ಖಾತೆಗೆ ಬೇಡಿಕೆ ಬರುವಂತೆ ಮಾಡುತ್ತೇನೆ: ಸಚಿವೆ ಶಶಿಕಲಾ ಜೊಲ್ಲೆ

ಇತರ ಇಲಾಖೆಗಳಿಗೆ ಹೋಲಿಸಿದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹಿರಿಯ ನಾಗರಿಕರ, ವಿಕಲ ಚೇತನರ ಕಲ್ಯಾಣ ಇಲಾಖೆ ವಿಭಿನ್ನ ಮತ್ತು ಜನಸಾಮಾನ್ಯರೊಡನೆ ಸಂಪರ್ಕ ಹೊಂದಿರುವ ಇಲಾಖೆ ಎಂಬುದು ಸಚಿವೆ ಶಶಿಕಲಾ ಜೊಲ್ಲೆ ಅವರ ಹೆಮ್ಮೆಯ ಮಾತು.

news18-kannada
Updated:December 23, 2019, 8:27 PM IST
ಯಾರಿಗೂ ಬೇಡವಾದ ಖಾತೆಗೆ ಬೇಡಿಕೆ ಬರುವಂತೆ ಮಾಡುತ್ತೇನೆ: ಸಚಿವೆ ಶಶಿಕಲಾ ಜೊಲ್ಲೆ
ಸಚಿವೆ ಶಶಿಕಲಾ ಜೊಲ್ಲೆ
  • Share this:
ವಿಜಯಪುರ(ಡಿ. 23): ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎಂದರೆ ಬಹುತೇಕ ಸಚಿವರು ತಮಗೆ ಈ ಖಾತೆ ಬೇಡ.  ಬೇರೆ ಪ್ರಬಲ ಖಾತೆಯನ್ನೇ ಕೊಡಿ ಎಂದು ಕೇಳಿ ಹಠ ಹಿಡಿಯುವುದುಂಟು.  ಆದರೆ, ಸಚಿವೆ ಶಶಿಕಲಾ ಜೊಲ್ಲೆಗೆ ಮಾತ್ರ ಈ ಇಲಾಖೆಯ ಬಗ್ಗೆ ಎಲ್ಲಿಲ್ಲದ ಹೆಮ್ಮೆಯಂತೆ.  ಈ ವಿಚಾರವನ್ನು ಅವರೇ ಬಹಿರಂಗಪಡಿಸುವ ಮೂಲಕ ಎಲ್ಲರೂ ಹೌದೌದು ಎಂದು ತಲೆಯಾಡಿಸುವಂತೆ ಮಾಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಮಾಜದ ಪ್ರತಿಯೊಬ್ಬರ ಕುಟುಂಬಕ್ಕೆ ಸಂಬಂಧಿಸಿದ ಇಲಾಖೆ.  ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಈ ಇಲಾಖೆಗೊಳಪಡುತ್ತಾರೆ. ವಿಕಲ ಚೇತನರೂ ಇದೇ ಇಲಾಖೆಯ ಅಡಿಯಲ್ಲಿ ಬರುತ್ತಾರೆ.  ಹೀಗಾಗಿ ಇತರ ಇಲಾಖೆಗಳಿಗೆ ಹೋಲಿಸಿದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹಿರಿಯ ನಾಗರಿಕರ, ವಿಕಲ ಚೇತನರ ಕಲ್ಯಾಣ ಇಲಾಖೆ ವಿಭಿನ್ನ ಮತ್ತು ಜನಸಾಮಾನ್ಯರೊಡನೆ ಸಂಪರ್ಕ ಹೊಂದಿರುವ ಇಲಾಖೆ ಎಂಬುದು ಸಚಿವೆ ಶಶಿಕಲಾ ಜೊಲ್ಲೆ ಅವರ ಹೆಮ್ಮೆಯ ಮಾತು.

ಜಾರ್ಖಂಡ್ ಜನಾದೇಶ ಗೌರವಿಸುತ್ತೇವೆಂದ ಅಮಿತ್ ಶಾ; ಇದು ನನ್ನ ಸೋಲು, ಬಿಜೆಪಿಯದ್ದಲ್ಲ ಎಂದ ರಘುಬರ್ ದಾಸ್

ಈ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿಕಲ ಚೇತನರ ಸಮಸ್ಯೆಯ ಬಗ್ಗೆ ಸಚಿವೆಗೆ ಸಂಪೂರ್ಣ ಅರಿವಿದೆ.  ಹಾಗಾಗಿಯೇ ಅವರು ಓರ್ವ ತಾಯಿಯಾಗಿ ವಿಕಲಚೇತನರ ಸಮಸ್ಯೆಗಳ ಬಗ್ಗೆ ತಮಗೆ ಸಂಪೂರ್ಣ ಅರಿವಿದೆ ಎಂದು ಹೇಳಿದ್ದು. ಸಚಿವೆ ಶಶಿಕಲಾ ಜೊಲ್ಲೆ ಮತ್ತು ಚಿಕ್ಕೋಡಿ ಬಿಜೆಪಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.  ಅವರಲ್ಲಿ ಓರ್ವ ಮಗ ವಿಕಲಚೇತನ.  ಹೀಗಾಗಿ ವಿಕಲಚೇತನ ಮಕ್ಕಳಿಗಾಗಿಯೇ ಇವರು ತಮ್ಮ ಊರು ಯಕ್ಸಂಬಾದಲ್ಲಿ ವಿಶೇಷ ಶಾಲೆಯೊಂದನ್ನು ತೆರೆದಿದ್ದಾರೆ.

ಇನ್ನು, ಇವರ ಪತಿ ಅಣ್ಣಾಸಾಹೇಬ ಜೊಲ್ಲೆ ವಿಜಯಪುರದ ಸೈನಿಕ ಶಾಲೆಯ ವಿದ್ಯಾರ್ಥಿಯಾಗಿದ್ದು, ಈ ಶಾಲೆಯಲ್ಲಿ ಕಲಿಸಿದಂತೆ ಅವರು ಜಾತ್ಯತೀತ ಮತ್ತು ಪಕ್ಷಾತೀತ ವ್ಯಕ್ತಿತ್ವ ಬೆಳೆಸಿಕೊಂಡಿದ್ದಾರೆ.  ಜೊತೆಗೆ ಈ ಶಾಲೆಯಲ್ಲಿ ನೀಡಲಾಗುವ ಶಿಸ್ತು ಇವರ ಪ್ರತಿಯೊಂದು ಚಟುವಟಿಕೆಯ ಹಿಂದಿದೆಯಂತೆ.  ಇದನ್ನು ಸ್ವತಃ ಸಚಿವೆ ವಿಜಯಪುರದಲ್ಲಿ ಹೇಳಿಕೊಂಡಿದ್ದು ತಾವು ರಾಜಕಾರಣಿ, ಉದ್ಯಮಿಯಾಗಿ ಬೆಳೆಯಲು ಈ ಎಲ್ಲ ಧನಾತ್ಮಕ ಅಂಶಗಳೇ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ತಮ್ಮ ಇಲಾಖೆಯಲ್ಲಿ ಖಾಲಿ ಇದ್ದ ಬಹುತೇಕ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ.  ನೇಮಕವಾಗಿದ್ದರೂ ನಿಯೋಜನೆ ಮಾಡದೆ ಹಾಗೆ ಉಳಿದಿದ್ದ 42 ಸಿಡಿಪಿಓ ಮತ್ತು ಇತರ ಸಿಬ್ಬಂದಿಯನ್ನು ಖಾಲಿ ಇರುವ ಜಾಗಗಳಿಗೆ ವರ್ಗಾವಣೆ ಮಾಡಲಾಗಿದೆಯಂತೆ.  ಈಗ ಏನಿದ್ದರೂ ಈ ಇಲಾಖೆಯ ಯೋಜನೆಗಳು ಎಲ್ಲ ಫಲಾನುಭವಿಗಳಿಗೆ ತಲುಪಿಸುವುದು ಮಾತ್ರ.

ಫೇಸ್​ಬುಕ್ ಖಾತೆಯಲ್ಲಿ ಅವಹೇಳನಕಾರಿ ಪೋಸ್ಟ್‌: ಸೌದಿಯಲ್ಲಿ ಉಡುಪಿ ಯುವಕನ ಬಂಧನಅಷ್ಟೇ ಅಲ್ಲ, ಮುಂದಿನ ಮೂರು ವರ್ಷಗಳಲ್ಲಿ ಸಚಿವೆ ಶಶಿಕಲಾ ಜೊಲ್ಲೆ ವಿಶಿಷ್ಟ ಗುರಿಯನ್ನೂ ಹೊಂದಿದ್ದಾರಂತೆ.  ಅದೇನೆಂದರೆ ಇತ್ತೀಚಿನ ವರ್ಷಗಳಲ್ಲಿ ಸಚಿವರಾದವರು ಪ್ರಬಲ ಖಾತೆಗಳಿಗೆ ಬೇಡಿಕೆ ಇಡುವುದೇ ಹೆಚ್ಚು.  ಆದರೆ, ಅಂಥವರೆಲ್ಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜವಾಬ್ದಾರಿಯನ್ನು ಕೇಳಿ ಪಡೆಯುವಂತೆ ಇಲಾಖೆಯ ಖ್ಯಾತಿಯನ್ನು ಹೆಚ್ಚಿಸುವ ಕನಸು ಹೊಂದಿದ್ದಾರೆ.

ಮಕ್ಕಳ ಹೆಸರಿನಲ್ಲಿರುವ ನಕಲಿ ಎನ್ ಜಿ ಓಗಳನ್ನ ಲಿಸ್ಟ್ ಮಾಡಿ ಕ್ರಮ ಕೈಗೊಳ್ಳಲಾಗುವುದು.  ಈ ಬಗ್ಗೆ ಸಮಗ್ರ ವರದಿ ತರಿಸಿಕೊಂಡು ಅಕ್ರಮ ಎನ್ ಜಿ ಓಗಳ ವಿರುದ್ಧ ಕ್ರಮ ಕೈಗೊಳ್ಳುವುದು.  ಈ ಇಲಾಖೆಯಲ್ಲಿ ಎಲ್ಲವೂ ಸುವ್ಯವಸ್ಥಿತವಾಗಿ ನಡೆಯಬೇಕು.  ಅಧಿಕಾರಿಗಳ ಜೊತೆ ನಿರಂತರವಾಗಿ ಸಭೆಯನ್ನು ನಡೆಸಿ ಯಾವುದೇ ದೂರು ಬಾರದಂತೆ ಮತ್ತು ಇಲಾಖೆಯನ್ನು ಮತ್ತಷ್ಟು ಜನರ ಬಳಿ ತೆಗೆದುಕೊಂಡು ಹೂಗುವುದು ಇವರ ಕಾರ್ಯಯೋಜನೆಯ ಪ್ರಮುಖ ಅಂಶಗಳು.

ಎಲ್ಲವೂ ಇವರು ಅಂದುಕೊಂಡಂತೆ ಆಗಲಿ.  ಇವರ ಇಲಾಖೆಯ ಹೆಸರಿನಲ್ಲಿರುವಂತೆ ಈ ಖಾತೆಯ ಎಲ್ಲ ಯೋಜನೆಗಳು ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಮತ್ತು ವಿಕಲಚೇತನರೆಲ್ಲರಿಗೂ ತಲುಪಲಿ ಎಂದುದು ಎಲ್ಲರ ಹಾರೈಕೆಯಾಗಿದೆ.
First published: December 23, 2019, 8:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading