HOME » NEWS » State » MINISTER SHASHIKALA JOLLE INSTRUCTIONS TO OFFICIALS AT VIJAYAPURA DISTRICT MVSV LG

ಜೋಳ ಬೆಳೆಗೆ ಪ್ರೋತ್ಸಾಹ ನೀಡಿ, ತೊಗರಿ ಜೊತೆ ಕಡಲೆ ಖರೀದಿಗೂ ಕ್ರಮ ಕೈಗೊಳ್ಳಿ; ಕೆಡಿಪಿ ಸಭೆಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಖಡಕ್ ಸೂಚನೆ

ವಿಜಯಪುರ ಜಿಲ್ಲೆಯಲ್ಲಿ 3.65 ಲಕ್ಷ ರೈತರಿದ್ದರೂ ಬೆಳೆ ವಿಮೆ ವಿಚಾರದಲ್ಲಿ ಕೇವಲ ಶೇ.25 ರೈತರು ಮಾತ್ರ ಬೆಳೆವಿಮೆ ಮಾಡಿಸುತ್ತಿದ್ದಾರೆ.  ಇದು ಸರಿಯಲ್ಲ.  ಶೇ. 100 ರಷ್ಟು ಬೆಳೆ ವಿಮೆ ಮಾಡಿಸಲು ಕ್ರಮ ಕೈಗೊಳ್ಳಿ ಎಂದು ಶಾಸಕ ನಡಹಳ್ಳಿ ಮತ್ತು ಸಚಿವೆ ಶಶಿಕಲಾ ಜೊಲ್ಲೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

news18-kannada
Updated:February 26, 2021, 2:44 PM IST
ಜೋಳ ಬೆಳೆಗೆ ಪ್ರೋತ್ಸಾಹ ನೀಡಿ, ತೊಗರಿ ಜೊತೆ ಕಡಲೆ ಖರೀದಿಗೂ ಕ್ರಮ ಕೈಗೊಳ್ಳಿ; ಕೆಡಿಪಿ ಸಭೆಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಖಡಕ್ ಸೂಚನೆ
ಸಚಿವೆ ಶಶಿಕಲಾ ಜೊಲ್ಲೆ
  • Share this:
ವಿಜಯಪುರ(ಫೆ. 26): ಉತ್ತರ ಕರ್ನಾಟಕದ ಪಾರಂಪರಿಕ ಬೆಳೆ ಜೋಳ ಬಿತ್ತನೆ ಕಡಿಮೆಯಾಗುತ್ತಿದ್ದು, ಇದನ್ನು ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ವಿಜಯಪುರ ಜಿ. ಪಂ. ಸಭಾಂಗಣದಲ್ಲಿ ನಡೆಯುತ್ತಿರುವ 3ನೇ ತ್ರೈಮಾಸಿಕ ಕೆಡಿಪಿ ಸಮಿತಿ ಪರಿಶೀಲನಾ ಸಭೆಯಲ್ಲಿ ಅವರು ಸೂಚನೆ ನೀಡಿದರು. ಸಭೆಯಲ್ಲಿ ಮಾತನಾಡಿದ ಮುದ್ದೇಬಿಹಾಳ ಬಿಜೆಪಿ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ, ವಿಜಯಪುರ ಜಿಲ್ಲೆಯಲ್ಲಿ ಜೋಳ ಬಿತ್ತನೆ ಪ್ರಮಾಣ ಕಡಿಮೆಯಾಗಲು ಏನು ಕಾರಣ? ರೈತರು ಬೇರೆ ಬೆಳೆಗಳತ್ತ ಹೆಚ್ಚು ಆಕರ್ಷಿತರಾಗಲು ಕಾರಣ ಏನು ಎಂದು ಪ್ರಶ್ನಿಸಿದರು.  

ಇದಕ್ಕೆ ಉತ್ತರಿಸಿದ ಕೃಷಿ ಇಲಾಖೆ ಜಂಟಿ‌ ನಿರ್ದೇಶಕ ರಾಜಶೇಖರ ಮಾತನಾಡಿ, ರೈತರು ಬಿತ್ತನೆ, ನಿರ್ವಹಣೆ, ರಾಶಿ ವಿಷಯಗಳಲ್ಲಿ ಜೋಳಕ್ಕಿಂತ ತೊಗರಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಉತ್ತರಿಸಿದರು.ಆಗ ಮಾತನಾಡಿದ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ, ಬೆಳೆಗಳ ಬೆಂಬಲ ಬೆಲೆ ನಿಗದಿ ಸಭೆಯಲ್ಲಿ ನಾನು ಮತ್ತು ಡಿಸಿಎಂ ಲಕ್ಷ್ಮಣ ಸವದಿ ಇದ್ದೇವೆ.  ಜೋಳಕ್ಕೆ ರೂ‌ 3500 ಬೆಂಬಲ ಬೆಲೆ ನಿಗದಿ ಮಾಡುವಂತೆ ಕೇಂದ್ರಕ್ಕೆ ಕಳುಹಿಸುತ್ತೇವೆ.  ತೊಗರಿಗಿಂತ ಜೋಳಕ್ಕೆ ಉತ್ತಮ ಲಾಭವಿದೆ ಎಂದು ರೈತರಲ್ಲಿ ಜಾಗೃತಿ ಮೂಡಿಸಿ ಎಂದು ಸಲಹೆ ನೀಡಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ‌ ಪ್ರಾರಂಭವಾಗಲಿದೆ ರಾಜ್ಯದ ಮೊದಲ ಖಾಸಗಿ ಆನ್​ಲೈನ್​​ ಕೃಷಿ ಮಾರುಕಟ್ಟೆ

ಇದಕ್ಕೆ ಸಹಮತ ಸೂಚಿಸಿದ ಸಚಿವೆ ಜೊಲ್ಲೆ ಉತ್ತರ ಕರ್ನಾಟಕದಲ್ಲಿ ವಿಜಯಪುರ ಜಿಲ್ಲೆ ಮಾಲ್ದಂಡಿ ಬಿಳಿ ಜೋಳಕ್ಕೆ ಹೆಸರುವಾಸಿಯಾಗಿದೆ.  ಈ ಹಿನ್ನೆಲೆಯಲ್ಲಿ ಜೋಳ ಬೆಳೆಯಲು‌ ಪ್ರೋತ್ಸಾಹ ನೀಡಲು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಮಧ್ಯೆ ವಿಜಯಪುರ ಜಿಲ್ಲೆಯಲ್ಲಿ 3.65 ಲಕ್ಷ ರೈತರಿದ್ದರೂ ಬೆಳೆ ವಿಮೆ ವಿಚಾರದಲ್ಲಿ ಕೇವಲ ಶೇ.25 ರೈತರು ಮಾತ್ರ ಬೆಳೆವಿಮೆ ಮಾಡಿಸುತ್ತಿದ್ದಾರೆ.  ಇದು ಸರಿಯಲ್ಲ.  ಶೇ. 100 ರಷ್ಟು ಬೆಳೆ ವಿಮೆ ಮಾಡಿಸಲು ಕ್ರಮ ಕೈಗೊಳ್ಳಿ ಎಂದು ಶಾಸಕ ನಡಹಳ್ಳಿ ಮತ್ತು ಸಚಿವೆ ಶಶಿಕಲಾ ಜೊಲ್ಲೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಮಧ್ಯೆ, ವಿದ್ಯುತ್ ಸಮಸ್ಯೆ ಕುರಿತು ಹೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳನ್ನು ಸಚಿವರು ಹಾಗೂ ಶಾಸಕರು ತರಾಟೆಗೆ ತೆಗೆದುಕೊಂಡರು.

ಆಗ ಮಧ್ಯೆ ಪ್ರವೇಶಿಸಿದ ಇಂಡಿ‌ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ, ವಿಜಯಪುರ ಜಿಲ್ಲೆಯಲ್ಲಿ ವಿದ್ಯುತ್ ವಿತರಣೆ ಕೇಂದ್ರಗಳ ಸ್ಥಾಪನೆ, ನಿರ್ವಹಣೆಯಲ್ಲಿ ಇಲ್ಲಿನ ಅಧಿಕಾರಿಗಳು ನಿರೀಕ್ಷೆಗೂ ಮೀರಿ ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.  ಆದರೆ, ವಿದ್ಯುತ್ ಕಂಬಗಳು ಮತ್ತು ಸರಬರಾಜು ನಿರ್ವಹಣೆಯತ್ತ ಗಮನ ಹರಿಸಬೇಕು ಎಂದು ಶಾಸಕರು ಸೂಚಿಸಿದರು.

ವಿಜಯಪುರ ಜಿಲ್ಲೆಯಲ್ಲಿ ತೊಗರಿ ಖರೀದಿ ಕೇಂದ್ರಗಳಲ್ಲಿಯೇ ಈ ಬಾರಿ ಕಡಲೆ ಖರೀದಿಸಲು ಅವಕಾಶ ನೀಡಿ. ಇದರಿಂದ ಪ್ರತ್ಯೇಕ ಕೇಂದ್ರಗಳ ಸ್ಥಾಪನೆ, ಸಿಬ್ಬಂದಿಗಳ ನಿಯೋಜನೆ, ರೈತರ ಸಮಯ ಉಳಿತಾಯವಾಗಲಿದೆ ಎಂದು ಶಾಸಕ ನಡಹಳ್ಳಿ ಸಲಹೆಯನ್ನು ಸಚಿವರು ಸಹಮತ ಸೂಚಿಸಿದರು.  ಅಲ್ಲದೇ, ಕೂಡಲೇ ಆರಂಭಿಸುವಂತೆ ಎಪಿಎಂಸಿ ಅಧಿಕಾರಿ ಚಬನೂರ ಅವರಿಗೆ ಸೂಚನೆ ನೀಡಿದರು.
ಈ ಸಭೆಯಲ್ಲಿ ನಾಗಠಾಣ(ಮೀ) ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ, ಜಿಲ್ಲಾಧಿಕಾರಿ ಪಿ. ಸುನೀಲ ಕುನಾರ, ಜಿ. ಪಂ. ಸಿಇಓ ಗೋವಿಂದರೆಡ್ಡಿ, ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ, ಜಿ. ಪಂ. ಅಧ್ಯಕ್ಷೆ ಸುಜಾತಾ ಸೋಮನಾಥ ಕಳ್ಳಿಮನಿ, ಉಪಾಧ್ಯಕ್ಷ ಪ್ರಭುಗೌಡ ಚೆನ್ನಪ್ಪ ದೇಸಾಯಿ, ನಾನಾ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Published by: Latha CG
First published: February 26, 2021, 2:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories