HOME » NEWS » State » MINISTER SHASHIKALA JOLLE HELPED THOUSAND OF PEOPLE IN THE TIME OF CORONAVIRUS LG

Shashikala Jolle: ನಿಪ್ಪಾಣಿಯಲ್ಲಿ ಕೋವಿಡ್ ಆಸ್ಪತ್ರೆ ಸ್ಥಾಪಿಸಿ ಸಾವಿರಾರು ಜನರ ಜೀವ ಉಳಿಸಿದ ಸಚಿವೆ ಶಶಿಕಲಾ ಜೊಲ್ಲೆ

ಬೆಳಗಾವಿ ಮತ್ತು ಕೊಲ್ಹಾಪುರಕ್ಕೆ ಕೋವಿಡ್ ಚಿಕಿತ್ಸೆಗೆ ಹೋದರೆ ಖಾಸಗಿ ಆಸ್ಪತ್ರೆಗಳು ಕನಿಷ್ಠ 3 ಲಕ್ಷ ಬಿಲ್ ಮಾಡುತ್ತಿದ್ದವು. ಹೀಗಾಗಿ ಅದೆಷ್ಟೋ ಸೋಂಕಿತರು ಹಣವಿಲ್ಲದೆ ಚಿಕಿತ್ಸೆ ದೊರೆಯದೇ ಪರದಾಡಿದ್ದರು. ಗಡಿ ಕನ್ನಡಿಗರ ಕರುಣಾಜನಕ ಪರಿಸ್ಥಿತಿ ಮನಗಂಡ ಸಚಿವೆ ಶಶಿಕಲಾ ಜೊಲ್ಲೆ  ಶಾಲೆಗಳಲ್ಲಿಯೇ ಕೋವಿಡ್ ಆಸ್ಪತ್ರೆ ಪ್ರಾರಂಭಿಸಿದರು.

news18-kannada
Updated:March 7, 2021, 11:54 AM IST
Shashikala Jolle: ನಿಪ್ಪಾಣಿಯಲ್ಲಿ ಕೋವಿಡ್ ಆಸ್ಪತ್ರೆ ಸ್ಥಾಪಿಸಿ ಸಾವಿರಾರು ಜನರ ಜೀವ ಉಳಿಸಿದ ಸಚಿವೆ ಶಶಿಕಲಾ ಜೊಲ್ಲೆ
ಸಚಿವೆ ಶಶಿಕಲಾ ಜೊಲ್ಲೆ
  • Share this:
ನಿಪ್ಪಾಣಿ(ಮಾ.07):  ಕೊರೋನಾ ಸಂಕಷ್ಟದಿಂದ ಜನರು ತತ್ತರಿಸಿದ್ದ ವೇಳೆ ಅನೇಕ ಜನಪ್ರತಿನಿಧಿಗಳು ಸಹಾಯ ಹಸ್ತ ಚಾಚಿದ್ದಾರೆ. ಅಂತೆಯೇ ಸಚಿವೆ ಶಶಿಕಲಾ ಜೊಲ್ಲೆಯವರೂ ಸಹ ಜನರ ಕಷ್ಟಕ್ಕೆ ಸ್ಪಂದಿಸುವ ಮೂಲಕ ಸುದ್ದಿಯಾಗಿದ್ದಾರೆ.  ಅನೇಕ ಜನರ ಜೀವ ಕಾಪಾಡಿ ಮಾನವೀಯತೆ ಮೆರೆದಿದ್ದಾರೆ. ನಿಪ್ಪಾಣಿಯಲ್ಲೇ ಕೋವಿಡ್ ಕೇರ್ ಸೆಂಟರ್ ಮಾಡಿ ಸಾವಿರಾರು ಜನರ ಜೀವ ಕಾಪಾಡಿದ್ದಾರೆ ಸಚಿವೆ ಶಶಿಕಲಾ ಜೊಲ್ಲೆ.  ಜೊಲ್ಲೆ ಸಮೂಹ ಸಂಸ್ಥೆಯ ಎಲ್ಲಾ ಶಾಲಾ ಕಟ್ಟಡಗಳಲ್ಲಿ ಕೋವಿಡ್ ಆಸ್ಪತ್ರೆ ಸ್ಥಾಪಿಸಿ ಚಿಕಿತ್ಸೆ ನೀಡಿದ್ದಾರೆ.

ಗಡಿ ಭಾಗದ ಸೋಂಕಿತರು ಚಿಕಿತ್ಸೆಗಾಗಿ ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಹೋಗುತ್ತಿದ್ದರು. ಇದನ್ನು ತಡೆದ ಸಚಿವೆ ಶಶಿಕಲಾ, ಜೊಲ್ಲೆ ಸಮೂಹ ಸಂಸ್ಥೆಯ ಎಲ್ಲಾ ಶಾಲಾ ಕಟ್ಟಡಗಳಲ್ಲಿಯೇ ಕೋವಿಡ್ ಕೇರ್ ಸೆಂಟರ್ ತೆರೆದು ಅಲ್ಲಿಯೇ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದಾರೆ. ಶಾಲೆಗಳಲ್ಲಿ ಆಕ್ಸಿಜನ್ ಘಟಕ,  ತುರ್ತು ನಿಘಾ ಘಟಕ ಸ್ಥಾಪಿಸಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ.



ಬೆಳಗಾವಿ ಮತ್ತು ಕೊಲ್ಹಾಪುರಕ್ಕೆ ಕೋವಿಡ್ ಚಿಕಿತ್ಸೆಗೆ ಹೋದರೆ ಖಾಸಗಿ ಆಸ್ಪತ್ರೆಗಳು ಕನಿಷ್ಠ 3 ಲಕ್ಷ ಬಿಲ್ ಮಾಡುತ್ತಿದ್ದವು. ಹೀಗಾಗಿ ಅದೆಷ್ಟೋ ಸೋಂಕಿತರು ಹಣವಿಲ್ಲದೆ ಚಿಕಿತ್ಸೆ ದೊರೆಯದೇ ಪರದಾಡಿದ್ದರು. ಗಡಿ ಕನ್ನಡಿಗರ ಕರುಣಾಜನಕ ಪರಿಸ್ಥಿತಿ ಮನಗಂಡ ಸಚಿವೆ ಶಶಿಕಲಾ ಜೊಲ್ಲೆ  ಶಾಲೆಗಳಲ್ಲಿಯೇ ಕೋವಿಡ್ ಆಸ್ಪತ್ರೆ ಪ್ರಾರಂಭಿಸಿದರು.

State Budget 2021: ನಾಳಿನ ರಾಜ್ಯ ಬಜೆಟ್​ ಮೇಲೆ ಮಹತ್ತರ ನಿರೀಕ್ಷೆ ಇಟ್ಟುಕೊಂಡಿರುವ ರಾಯಚೂರಿನ ಜನರು

ಅದೇ ಸಮಯದಲ್ಲಿ ಸಚಿವೆ ಶಶಿಕಲಾ ಜೊಲ್ಲೆಯವರಿಗೂ ಕೋವಿಡ್ ಸೋಂಕು ತಗುಲಿತ್ತು.  ಆಗ ಅದೇ ಶಾಲೆಯ ಆಸ್ಪತ್ರೆಯಲ್ಲಿ ದಾಖಲಾಗಿ  ಚಿಕಿತ್ಸೆ ಪಡೆದು ಗುಣಮುಖರಾದರು.  ಸ್ಥಳೀಯ 20ಕ್ಕೂ ಹೆಚ್ಚು ಖಾಸಗಿ ವೈದ್ಯರಿಂದ ಅತ್ಯಂತ ಕನಿಷ್ಠ ಗೌರವಧನದಲ್ಲಿ ಚಿಕಿತ್ಸೆ ನೀಡಲಾಯಿತು. ಇಷ್ಟೇ ಅಲ್ಲದೇ, ಕೊರೋನಾ ಸೋಂಕಿತರಿಗೆ 2 ಹೊತ್ತು ಊಟವನ್ನೂ ಸಹ ಸಂಸ್ಥೆಯ ವತಿಯಿಂದ ನೀಡಲಾಗುತ್ತಿತ್ತು.
Youtube Video
ಸಚಿವೆ ಶಶಿಕಲಾ ಜೊಲ್ಲೆಯವರು ಸುಮಾರು 2ಕೋಟಿಗೂ ಅಧಿಕ ದುಡ್ಡು ವ್ಯಯಿಸಿ ಕೋವಿಡ್ ಆಸ್ಪತ್ರೆ ಸ್ಥಾಪನೆ ಮಾಡಿದ್ದರು. ಅಲ್ಲಿ ದುಡ್ಡಿಲ್ಲದ ಸಾವಿರಾರು ಮಂದಿ ಕೊರೋನಾ ಚಿಕಿತ್ಸೆ ಪಡೆದು ಗುಣಮುಖರಾದರು. ಸಚಿವೆ ಮಾಡಿದ ಮಾನವೀಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಜನರು ಈಗಲೂ ಗುಣಗಾನ ಮಾಡುತ್ತಿದ್ದಾರೆ.
Published by: Latha CG
First published: March 7, 2021, 11:43 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories