• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಶೀಘ್ರದಲ್ಲೇ ನಿಮ್ಮ ಬೇಡಿಕೆ ಈಡೇರಿಸುತ್ತೇವೆ; ಅಂಗನವಾಡಿ ಕಾರ್ಯಕರ್ತೆಯರಿಗೆ ಸಚಿವೆ ಶಶಿಕಲಾ ಜೊಲ್ಲೆ ಭರವಸೆ

ಶೀಘ್ರದಲ್ಲೇ ನಿಮ್ಮ ಬೇಡಿಕೆ ಈಡೇರಿಸುತ್ತೇವೆ; ಅಂಗನವಾಡಿ ಕಾರ್ಯಕರ್ತೆಯರಿಗೆ ಸಚಿವೆ ಶಶಿಕಲಾ ಜೊಲ್ಲೆ ಭರವಸೆ

ಶಶಿಕಲಾ ಜೊಲ್ಲೆ

ಶಶಿಕಲಾ ಜೊಲ್ಲೆ

ನಿಮ್ಮೆಲ್ಲ ಬೇಡಿಕೆಗಳನ್ನು ಹಂತ ಹಂತವಾಗಿ ಪರಿಹರಿಸುವ ಕೆಲಸ ಮಾಡಲಾಗುವುದು . ಭರವಸೆಯಲ್ಲ, ವಿಶ್ವಾಸದ ನುಡಿಗಳನ್ನು ಹೇಳುತ್ತೇನೆ. ರಾಜ್ಯ ಸರ್ಕಾರ ನಿಮ್ಮ ಜೊತೆ ಇರಲಿದೆ. ದಯಮಾಡಿ ಮಹಿಳೆಯರೆಲ್ಲ ಹೋರಾಟ ಮಾಡುವುದು ಬಿಡಿ ಎಂದು ಸಚಿವೆ ಶಶಿಕಲಾ ಜೊಲ್ಲೆ ಮನವಿ ಮಾಡಿಕೊಂಡರು.

  • Share this:

    ಬೆಂಗಳೂರು(ಮಾ.04): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ವಿವಿಧ ಕಾರ್ಮಿಕ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಅಂಗನವಾಡಿ ಕಾರ್ಯಕರ್ತೆಯರೂ ಸಹ ಸಿಐಟಿಯು ಕಾರ್ಮಿಕ ಸಂಘಟನೆ ಜೊತೆಗೂಡಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ಶೀಘ್ರದಲ್ಲೇ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ.


    ಕೊರೊನಾ ಸಂದರ್ಭದಲ್ಲಿ ಫ್ರೆಂಟ್ ಲೈನ್ ವಾರಿಯರ್ ಆಗಿ ಕಾರ್ಯ ನಿರ್ವಹಿಸಿದ್ದೀರಿ. ಇದಕ್ಕೆ ನಾನು ಮಹಿಳೆಯಾಗಿಯೂ ಹೆಮ್ಮೆ ಪಡುತ್ತೇನೆ. ನೀವು ಹಲವು ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದಾರೆ. ಈ ಕುರಿತು ನಿನ್ನೆ ವಿವಿಧ ಸಂಘಟನೆಗಳ ಸದಸ್ಯರ ಜೊತೆ ಸಭೆಯಲ್ಲಿ ಚರ್ಚಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.


    ಕೊರೋನಾ ಸಂದರ್ಭದಲ್ಲಿ ಮೃತರಾದವರಿಗೆ ವಿಮೆ ಪರಿಹಾರವನ್ನು ಆದಷ್ಟು ಬೇಗನೆ ನೀಡಲಾಗುವುದು. ಕೆಲಸ ಖಾಯಂಗೊಳಿಸುವುದು ಸೇರಿದಂತೆ‌ ವಿವಿಧ ಬೇಡಿಕೆಗಳ ಕುರಿತು ಕೇಂದ್ರ ಸರ್ಕಾರದ ಜೊತೆ ನಾನೇ ಖುದ್ದು ಚರ್ಚಿಸುತ್ತೇನೆ.  ಈ ಕುರಿತು ಸಕಾರಾತ್ಮಕವಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದರು.


    CITU Protest: ಇಂದು ಬೆಂಗಳೂರಿನಲ್ಲಿ ಕಾರ್ಮಿಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ; ಟ್ರಾಫಿಕ್ ಜಾಮ್​ ಆಗುವ ಸಾಧ್ಯತೆ


    ನಿಮ್ಮೆಲ್ಲ ಬೇಡಿಕೆಗಳನ್ನು ಹಂತ ಹಂತವಾಗಿ ಪರಿಹರಿಸುವ ಕೆಲಸ ಮಾಡಲಾಗುವುದು . ಭರವಸೆಯಲ್ಲ, ವಿಶ್ವಾಸದ ನುಡಿಗಳನ್ನು ಹೇಳುತ್ತೇನೆ. ರಾಜ್ಯ ಸರ್ಕಾರ ನಿಮ್ಮ ಜೊತೆ ಇರಲಿದೆ. ದಯಮಾಡಿ ಮಹಿಳೆಯರೆಲ್ಲ ಹೋರಾಟ ಮಾಡುವುದು ಬಿಡಿ ಎಂದು ಸಚಿವೆ ಶಶಿಕಲಾ ಜೊಲ್ಲೆ ಮನವಿ ಮಾಡಿಕೊಂಡರು.


    ಇದೇ ವೇಳೆ ಮಾತನಾಡಿದ ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ,  ಇವತ್ತು ರಮೇಶ್ ಜಾರಕಿಹೊಳಿ ಬೆಡ್ ರೂಂ ವಿಚಾರ ಚರ್ಚೆಯಾಗ್ತಿದೆ. ನಮ್ಮ-ನಿಮ್ಮ ಕಷ್ಟವನ್ನು ಯಾರೂ ಚರ್ಚಿಸುತ್ತಿಲ್ಲ ರಾಜ್ಯವನ್ನು ಮಿನಿಸ್ಟರ್ ಕಟ್ಟಿದ್ದಾರಾ? ಐಎಎಸ್ ಆಫೀರ್ಸ್ ಕಟ್ಟಿದ್ದಾರಾ? ಇಲ್ಲ,  ನಮ್ಮಿಂದ ರಾಜ್ಯ ನಿರ್ಮಾಣಗೊಂಡಿದೆ. ಮೇಲಾಧಿಕಾರಿಗಳ ದರ್ಪ ಅಷ್ಟಿಷ್ಟಲ್ಲ, ನಮ್ಮಿಂದ ನೀವು ಅಂತ ಮರೆಯಬೇಡಿ. ಒಂದು ದಿನ ನಾವು ಕೈ ಕೊಟ್ಟರೆ ನಿಮ್ಮ ಕೆಲಸ ನಡೆಯಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


    ವಿಧಾನಸೌಧಕ್ಕೆ ಮುತ್ತಿಗೆ ಹಾಕೋದು ನಮಗೆ ಕಷ್ಟವಲ್ಲ. ನೀವೆ ಇಲ್ಲಿ ಬಂದು ನಮ್ಮ ಕಷ್ಟ ಕೇಳಿ.  ಸಿಎಂ ನಮ್ಮ ಜೊತೆ ಒಂದು ಜಂಟಿ ಸಭೆ ನಡೆಸಿ. ಒಂದು ದೇಶ ಅಂತ ಹೇಳುತ್ತಿದ್ದಾರೆ.
    ಎರಡು ದೇಶ ಬೇಕು ಅಂತ ಯಾರು ಕೇಳಿದ್ದು? ಒಂದು ದೇಶ ಕಟ್ಟುವ ಮೊದಲು ನಿಮ್ಮ ಎರಡು ನೀತಿ ಕೈಬಿಡಿ. ಕಸ ಗುಡಿಸುವವರು ಕಸ ಗುಡಿಸುತ್ತಲೇ ಇರಬೇಕು. ಅದಾನಿ ಅಂಬಾನಿ ಅಂತಹವರು ಬೆಳೆಯುತ್ತಲೇ ಇರಬೇಕು. ಇದೇ ನಿಮ್ಮ ಒಂದು ದೇಶದ ಪರಿಕಲ್ಪನೆಯಾ? ಎಂದು ಪ್ರಶ್ನಿಸಿದ್ದಾರೆ.

    Published by:Latha CG
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು