ಬಹಮನಿ ಸುಲ್ತಾನರ ಉತ್ಸವದ ವಿಚಾರ: ವಿವಾದವಾಗುತ್ತಿದ್ದಂತೆ ಉಲ್ಟಾ ಹೊಡೆದ ಸಚಿವ ಶರಣ್ ಪ್ರಕಾಶ್


Updated:February 14, 2018, 11:23 PM IST
ಬಹಮನಿ ಸುಲ್ತಾನರ ಉತ್ಸವದ ವಿಚಾರ: ವಿವಾದವಾಗುತ್ತಿದ್ದಂತೆ ಉಲ್ಟಾ ಹೊಡೆದ ಸಚಿವ ಶರಣ್ ಪ್ರಕಾಶ್

Updated: February 14, 2018, 11:23 PM IST
ಕಲಬುರಗಿ(ಫೆ.14): ಬಹಮನಿ ಸುಲ್ತಾನರ ಉತ್ಸವದ ವಿಚಾರ ವಿವಾದವಾಗುತ್ತಿದ್ದಂತೆ ಎಚ್ಚೆತ್ತಿರುವ ಸಚಿವ ಶರಣ್ ಪ್ರಕಾಶ್, ಉತ್ಸವ ವಿಚಾರದಲ್ಲಿ ಯೂಟರ್ನ್ ಹೊಡೆದಿದ್ದಾರೆ. ಇದು ಸಂಘಟನೆಯವರ ನಿರ್ಧಾರ ಸರ್ಕಾರದ್ದಲ್ಲ ಎಂದಿದ್ದಾರೆ. ಸರ್ಕಾರ ರಾಷ್ಟ್ರಕೂಟ ಉತ್ಸವ ಮಾತ್ರ ಮಾಡುತ್ತಿದೆ. ಬಹಮನಿ ಉತ್ಸವವನ್ನು ಕೆಲ ಸಂಘಸಂಸ್ಥೆಗಳು ನಡೆಸುತ್ತಿವೆ. ಇದಕ್ಕೆ ನನ್ನ ವೈಯಕ್ತಿಗ ಬೆಂಬಲವಿದೆ ಎಂದ ಶರಣಪ್ರಕಾಶ ಪಾಟೀಲ್ ಹೇಳಿದ್ದಾರೆ. ಯಾರೇ ವಿರೋಧಿಸಿದರೂ ಬಹಮನಿ ಉತ್ಸವ ನಿಲ್ಲಿಸುವುದಿಲ್ಲ. ಮಾರ್ಚ್ 6 ರಂದು ನಿಗದಿಯಂತೆ ಬಹಮನಿ ಉತ್ಸವ ನಡೆಯಲಿದೆ ಕಲಬುರ್ಗಿಯಲ್ಲಿ ನ್ಯೂಸ್ 18 ಕನ್ನಡಕ್ಕೆ ಸಚಿವರು ಸ್ಪಷ್ಟನೆ ನೀಡಿದ್ದಾರೆ.

ಇದಕ್ಕೂ ಮುನ್ನ, ಮಾರ್ಚ್ 4 ಮತ್ತು 5ಕ್ಕೆ ಕಲಬುರಗಿಯ ಮಳಖೇಡದಲ್ಲಿ ಉತ್ಸವ ನಡೆಸಿಯೇ ತೀರುತ್ತೀವಿ ಎಂದು ಸಚಿವ ಶರಣುಪ್ರಕಾಶ ಪಾಟೀಲ್​ ಹೇಳಿಕೆ ನೀಡಿದ್ದರು. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ, ಈ ವಿಷಯ ನನಗೆ ಗೊತ್ತೇ ಇಲ್ಲ. ಶರಣಪ್ರಕಾಶ್ ಪಾಟೀಲ್ ಅವರನ್ನೇ ಹೋಗಿ ಕೇಳಿ ಎಂದು ಖಾರವಾಗಿ ಉತ್ತರಿಸಿದ್ದರು.

ಬಹಮನಿ ಉತ್ಸವದ ಬಗ್ಗೆ ಸರ್ಕಾರದಲ್ಲೇ ಮಾಡ್ತೀವಿ. ಗೊತ್ತಿಲ್ಲ ಎನ್ನುವ ಚರ್ಚೆ ಆಗುತ್ತಿದ್ದರೆ ಬಹಮನಿ ಉತ್ಸವ ಆಚರಿಸುತ್ತಿರುವುದಕ್ಕೆ ಬಿಜೆಪಿ ಕೆಂಡಾಮಂಡಲವಾಗಿತ್ತು. ಸಂಸದೆ ಶೋಭಾ ಕರಂದ್ಲಾಜೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಇತ್ತ, ಬಹಮನಿ ಉತ್ಸವದ ಬಗ್ಗೆ ಸ್ವತಃ ಕಾಂಗ್ರೆಸ್​ ಸಚಿವ ಕಾಗೋಡು ತಿಮ್ಮಪ್ಪನವರು ಯಾರೀ ಆ ಬಹಮನಿ ಸುಲ್ತಾನ ಅಂತ ಪ್ರಶ್ನೆ ಹಾಕಿದ್ದರು. ಪರಿಷತ್​ ಸದಸ್ಯ ಸಿ.ಎಂ. ಇಬ್ರಾಹಿಂ ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು. ಬಿಜೆಪಿ ನಾಯಕರಿಗೆ ಬಹಮನಿ ಸುಲ್ತಾನರ ಪದದ ಅರ್ಥ ಗೊತ್ತಿಲ್ಲ. ಹಿಂದೂ ಪದದ ಅರ್ಥ ಏನಾದ್ರು ಬಿಜೆಪಿ ನಾಯಕರಿಗೆ ಗೊತ್ತಾ? ಎಂದು ಪ್ರಶ್ನಿಸಿದ್ದರು.ಜೆಡಿಎಸ್​ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಇದು ರಾಜಕೀಯಕ್ಕಾಗಿ ಮಾಡ್ತಿರುವ ಕಾರ್ಯಕ್ರಮ ಎಂದು ಗುಡುಗಿದ್ದರು.

ಇದೀಗ, ಎಲ್ಲ ವಿವಾದಗಳಿಗೆ ತೆರೆ ಎಳೆಯುವ ಯತ್ನದಲ್ಲಿ ಸಚಿವ ಶರಣ್ ಪ್ರಕಾಶ್ ಯೂಟರ್ನ್ ಹೊಡೆದಿದ್ದಾರೆ.

 
First published:February 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ