• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Munenakoppa: ಕಬ್ಬಿನ ಹಣ ಬಾಕಿ ಪಾವತಿ: ರಾಜಕೀಯ ಪಕ್ಷದ ಮಾಲೀಕರು ಎಂದು ನೋಡದೇ ಎಲ್ಲರ ವಿರುದ್ಧ ಕ್ರಮ

Munenakoppa: ಕಬ್ಬಿನ ಹಣ ಬಾಕಿ ಪಾವತಿ: ರಾಜಕೀಯ ಪಕ್ಷದ ಮಾಲೀಕರು ಎಂದು ನೋಡದೇ ಎಲ್ಲರ ವಿರುದ್ಧ ಕ್ರಮ

ಸಚಿವ ಶಂಕರ್​ ಪಾಟೀಲ್​ ಮುನೇನಕೊಪ್ಪ

ಸಚಿವ ಶಂಕರ್​ ಪಾಟೀಲ್​ ಮುನೇನಕೊಪ್ಪ

ರೈತರ ಬಾಕಿ ಹಣ ಪಾವತಿ ಮಾಡುವಂತೆ ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ವಿಫಲವಾದರೆ ಕಠಿಣ ಕ್ರಮಕ್ಕೆ ಮುಂದಾಗಲಾಗುವುದು ಎಂದು ಎಚ್ಚರಿಕೆ ನೀಡಿದರು

  • Share this:

ಬೆಂಗಳೂರು (ಮೇ. 11):  ರಾಜ್ಯದ ಸಕ್ಕರೆ ಕಾರ್ಖಾನೆಗಳು (Sugar Factory) ರೈತರ ಕಬ್ಬಿನ ಹಣ ಬಾಕಿ ಪಾವತಿಯನ್ನು ಇನ್ನೊಂದು ತಿಂಗಳೊಳಗೆ ಮಾಡಬೇಕು. ಈ ತಿಂಗಳೊಳಗೆ ರೈತರ 100% ಬಾಕಿ ಪಾವತಿ ಬಗ್ಗೆ ಕಾರ್ಖಾನೆಗಳು ಭರವಸೆ ಕೊಟ್ಟಿವೆ. ಅದರಂತೆ ಎಲ್ಲಾ ಸಕ್ಕರೆ ಕಾರ್ಖಾನೆಗಳು ಕಾರ್ಯ ನಿರ್ವಹಿಸಬೇಕು. ಮಾತು ತಪ್ಪಿದರೆ, ರಾಜಕೀಯ ಪಕ್ಷದ ಮಾಲೀಕರು ಎಂದು ನೋಡುವುದಿಲ್ಲ. ಬಾಕಿ ಕೊಡದಿದ್ರೆ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಸಕ್ಕರೆ ಖಾತೆ ಸಚಿವ ಶಂಕರ್ ಪಾಟೀಲ್ ಮುನೇನಕೂಪ್ಪ (Shankar Patil Munenakoppa) ಎಚ್ಚರಿಕೆ ನೀಡಿದ್ದಾರೆ.


ಸಕ್ಕೆರೆ ಕಾರ್ಮಿಕರ ಜೊತೆ ಸಭೆ 
ಇಂದು ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಭೆ ನಡೆಸಿ, ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರೈತರಿಗೆ ಕಬ್ಬಿನ ಹಣ ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಈಗಾಗಲೇ ನೋಟಿಸ್ ನೀಡಿ ಹಣ ಪಾವತಿಸುವಂತೆ ಸೂಚನೆ ನೀಡಲಾಗಿದೆ. ಇಷ್ಟಾದರೂ ಕೆಲ ಸಕ್ಕರೆ ಕಾರ್ಖಾನೆಗಳು ರೈತರಿಗೆ ಬಾಕಿ ಹಣ ಪಾವತಿ ಮಾಡಿಲ್ಲ. ಕಬ್ಬಿನ ಹಣ ಬಾಕಿ ಪಾವತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆಗಳು ನಡೆಸಿದ್ದು, ರೈತರ ಬಾಕಿ ಹಣ ಪಾವತಿ ಮಾಡುವಂತೆ ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ವಿಫಲವಾದರೆ ಕಠಿಣ ಕ್ರಮಕ್ಕೆ ಮುಂದಾಗಲಾಗುವುದು ಎಂದು ಎಚ್ಚರಿಕೆ ನೀಡಿದರು


ಬಾಕಿ ಪಾವತಿಗೆ ಗಡವು
ಸಭೆಯಲ್ಲಿ ಕಾರ್ಖಾನೆ ಮಾಲೀಕರ ಜೊತೆ ಸಹಕಾರಿ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಎಲ್ಲ ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ. ರೈತರ ಬಾಕಿಯನ್ನು ಕೊಡುವಂತೆ ಈ ಹಿಂದೆಯೂ ಮನವಿ ಮಾಡಲಾಗಿತ್ತು. ಈ ಹಿಂದೆಯೇ ಕಾರ್ಖಾನೆಗಳು ಶೇ. 100ರಷ್ಟು ಬಾಕಿ ಪಾವತಿ ನೀಡುವುದಾಗಿ ತಿಳಿಸಿದ್ದರು. ಆದರೆ, ಈ ಸಲ ಕೆಲ ಕಾರ್ಖಾನೆಗಳಲ್ಲಿ ಕ್ರಷಿಂಗ್ ಮಾಡುತ್ತಿದ್ದಾರೆ. ಈ ಹಿನ್ನಲೆ ಬಾಕಿ ಪಾವತಿಗೆ ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ.


ಇದನ್ನು ಓದಿ: CM Ibrahim ಯಾವ ಪಾತ್ರಕ್ಕೂ ಬೇಕಾದ್ರು ಸೂಕ್ತವಾಗುವ ವ್ಯಕ್ತಿ: CT Ravi ವ್ಯಂಗ್ಯ


ಮಂಡ್ಯ ಮೈ ಶುಗರ್​ ಸರ್ಕಾರಕ್ಕೆ


2021-22 ರಲ್ಲಿ ರೈತರಿಗೆ 19,626 ಕೋಟಿ ರೂ ಹಣ ರೈತರಿಗೆ ಸಂದಾಯ ಆಗಬೇಕಿದೆ. ಈ ಪೈಕಿ 18,224 ಕೋಟಿ ರೂ ಸಂದಾಯ ಮಾಡಲಾಗಿದೆ. ಕಬ್ಬು ಬೆಳೆಗಾರರಿಗೆ ಕಾರ್ಖಾನೆಗಳು 1435 ಕೋಟಿ ರೂ ಬಾಕಿ ಬಿಲ್ ಕೊಡಬೇಕಿದೆ. ಈ ಪೈಕಿ ಇವತ್ತಿನ ಸಭೆಯಲ್ಲಿ ತಕ್ಷಣ 200 ಕೋಟಿ ಬಾಕಿ ಪಾವತಿಗೆ ಕಾರ್ಖಾನೆಗಳು ಒಪ್ಪಿಕೊಂಡಿವೆ. ಮಂಡ್ಯ ಮೈ ಶುಗರ್ ಗೆ 50 ಕೋಟಿ ಬಿಡುಗಡೆ ಮಾಡಲಾಗುವುದು. ಇದನ್ನು ಸರ್ಕಾರದ ವತಿಯಿಂದಲೇ ನಡೆಸುತ್ತೇವೆ. ಮೈಸೂರಿನ ಶ್ರೀರಾಮ್, ಬಾಗಲಕೋಟೆಯ  ಕಾರ್ಖಾನೆಗಳನ್ನು ಸರ್ಕಾರದಿಂದಲೇ ನಿರ್ವಹಣೆ ಮಾಡಲಾಗುವುದು. ಪಾಂಡವಪುರ ಕಾರ್ಖಾನೆಯ ಪುನಶ್ಚೇತನಕ್ಕೂ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.


ಇದನ್ನು ಓದಿ: ಶಿಕ್ಷಕರ ನೇಮಕಾತಿ ಪರೀಕ್ಷೆಯ ಮೇಲೆ ಹದ್ದಿನ ಕಣ್ಣು! ಗೃಹ ಇಲಾಖೆಯ ಜೊತೆ ಸಭೆ


ರಾಜಕೀಯ ನಾಯಕರು ಎಂದು ಪರಿಗಣಿಸದೇ ಎಲ್ಲರ ವಿರುದ್ಧ ಕ್ರಮ


ಹಳೆಯ ಅರಿಯರ್ಸ್ 11.58 ಕೋಟಿ ಬಾಕಿ ಇದೆ. ಒಟ್ಟು ನಾಲ್ಕು ಕಾರ್ಖಾನೆಗಳು ಅರಿಯರ್ಸ್ ಬಾಕಿ ಉಳಿಸಿಕೊಂಡಿವೆ. ಸಭೆಗೆ ನಿರಾಣಿ ಅವರ ಮಗ ಬಂದಿದ್ದಾರೆ. ಸಭೆಗೆ ಬರುವ ಮುನ್ನ  ಅವರು 40 ಕೋಟಿ ಬಾಕಿ ನೀಡಿ ಬಂದಿರುವುದಾಗಿ ತಿಳಿಸಿದ್ಬಂದಾರೆ. ಸಚಿವರು, ಬೇರೆಯವರು ಎಂಬುದನ್ನು ನೋಡದೇ ಈ ಬಾರಿ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ.


ಇಥೆನಾಲ್ ಪಾಲಿಸಿ ತರುವ ವಿಚಾರ ಕುರಿತು ಮಾತನಾಡಿದ ಅವರು, ನಮ್ಮ ರಾಜ್ಯದಿಂದ  ಅಧ್ಯಯನಕ್ಕೆ ಉತ್ತರ ಪ್ರದೇಶಕ್ಕೆ ಒಂದು ತಂಡ ಕಳಿಸಲಾಗಿದೆ. ಅಧ್ಯಯನಕ್ಕೆ ತಂಡ ಕಳಿಸಲಾಗಿದೆ. ಕಳೆದ ವರ್ಷದ ಬಾಕಿ ಯಾವುದೂ ಇಲ್ಲ. ಈ ವರ್ಷದ ಬಾಕಿ ಈ ತಿಂಗಳೊಳಗೆ ಕೊಡಲು ಸೂಚನೆ ನೀಡಲಾಗಿದೆ ಎಂದರು

First published: