ರಮೇಶ್​ ಜಾರಕಿಹೊಳಿ ಜಗತ್ತಿನ ಎಂಟನೇ ಅದ್ಬುತವಿದ್ದಂತೆ; ಸತೀಶ್​ ಜಾರಕಿಹೊಳಿ

ರಮೇಶ್​ರ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವೊಲಿಸಲು  ಸಿದ್ದರಾಮಯ್ಯ, ಸತೀಶ್​ ಜಾರಕಿಹೊಳಿಗೆ ಸೂಚನೆ ನೀಡಿದ್ದರು. ಅದರಂತೆ ಸತೀಶ್​ ಜಾರಕಿಹೊಳಿ ಕೂಡ ಹಲವು ಬಾರಿ ಮನವೊಲಿಸುವ ಯತ್ನ ಮಾಡಿದ್ದರು. ಆದರೂ ಕೂಡ ರಮೇಶ್​ ಜಗ್ಗಿರಲಿಲ್ಲ.

Seema.R | news18
Updated:July 3, 2019, 4:47 PM IST
ರಮೇಶ್​ ಜಾರಕಿಹೊಳಿ ಜಗತ್ತಿನ ಎಂಟನೇ ಅದ್ಬುತವಿದ್ದಂತೆ; ಸತೀಶ್​ ಜಾರಕಿಹೊಳಿ
ರಮೇಶ್​ ಜಾರಕಿಹೊಳಿ-ಸತೀಶ್​ ಜಾರಕಿಹೊಳಿ
  • News18
  • Last Updated: July 3, 2019, 4:47 PM IST
  • Share this:
ಬೆಂಗಳೂರು (ಜು.03): ಆನಂದ್​ ಸಿಂಗ್​ ಬೆನ್ನಲ್ಲೇ ಏಕಾಏಕಿ ರಾಜೀನಾಮೆ ನೀಡಿದ ರಮೇಶ್​ ಜಾರಕಿಹೊಳಿ ನಿರ್ಧಾರ ಪಕ್ಷದ ನಾಯಕರಿಗೆ ಅಷ್ಟೇನು ಅಚ್ಚರಿ ಮೂಡಿಸಿರಲಿಲ್ಲ. ಆದರೆ, ಈ ರೀತಿಯ ದಿಢೀರ್​ ರಾಜೀನಾಮೆ ನೀಡಿರುವುದರ ಕುರಿತು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಅವರ ಸಹೋದರ ಸಚಿವ ಸತೀಶ್​ ಜಾರಕಿಹೊಳಿ, ರಮೇಶ್​ ಜಗತ್ತಿನ ಎಂಟನೇ ಅದ್ಭುತ ಎಂದು ವ್ಯಂಗ್ಯವಾಡಿದ್ದಾರೆ.

ಮಂತ್ರಿಗಿರಿ ಸ್ಥಾನ ಕೈ ತಪ್ಪಿದಾಗಿನಿಂದ ಪಕ್ಷದ ನಾಯಕರ ವಿರುದ್ಧ ರಮೇಶ್​ ಜಾರಕಿಹೊಳಿ ಅಸಮಾಧಾನ ಹೊರಹಾಕುತ್ತಲೇ ಇದ್ದರು. ಪ್ರತಿ ಬಾರಿಯೂ ತಮ್ಮ ಬೆಂಬಲಿಗ ಪಡೆಯೊಂದಿಗೆ ಮುಂಬೈಗೆ ಹಾರಿದರೂ, ಅವರನ್ನು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್​ ನಾಯಕರು ವಾಪಸ್ಸು ತರುವ ಕಾರ್ಯ ಮಾಡಿದ್ದರು.

Ramesh Jarkiholi resignation
ರಮೇಶ್​ ಜಾರಕಿಹೊಳಿ ರಾಜೀನಾಮೆ ಪತ್ರ


ರಮೇಶ್​ರ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವೊಲಿಸಲು  ಸಿದ್ದರಾಮಯ್ಯ, ಸತೀಶ್​ ಜಾರಕಿಹೊಳಿಗೆ ಸೂಚನೆ ನೀಡಿದ್ದರು. ಅದರಂತೆ ಸತೀಶ್​ ಜಾರಕಿಹೊಳಿ ಕೂಡ ಹಲವು ಬಾರಿ ಮನವೊಲಿಸುವ ಯತ್ನ ಮಾಡಿದ್ದರು. ಆದರೂ ಕೂಡ ರಮೇಶ್​ ಜಗ್ಗಿರಲಿಲ್ಲ. ಸಮಯಕ್ಕಾಗಿ ಕಾದು ಕುಳಿತಿದ್ದ ರಮೇಶ್​ ಕಡೆಗೂ ರಾಜೀನಾಮೆ ನೀಡಿದ್ದಾರೆ. ಇಂದು ಖುದ್ದಾಗಿ ಸ್ಪೀಕರ್​ ಭೇಟಿಯಾಗಿ ಮತ್ತೊಮ್ಮೆ ರಾಜೀನಾಮೆ ಸಲ್ಲಿಸಲಿದ್ದಾರೆ.

ಈ ನಡುವೆ ರಮೇಶ್​ ಜಾರಕಿಹೊಳಿ ನಡೆಯನ್ನು ಟೀಕಿಸಿರುವ ಸಚಿವ ಸತೀಶ್​ ಜಾರಕಿಹೊಳಿ, "ರಮೇಶ್ ಸಮಸ್ಯೆ ಏನು ಅಂತಲೇ ಗೊತ್ತಾಗುತ್ತಿಲ್ಲ. ಅದೊಂದು ರೀತಿ 8ನೇ ಅದ್ಭುತದ ಥರ ಇದೆ6 ತಿಂಗಳಿನಿಂದ ರಮೇಶ್ ಜೊತೆ ಸಂಪರ್ಕದಲ್ಲಿಲ್ಲ. ಹೀಗಾಗಿ ಅವರಿಗೆ ಏನಾಗಿದೆ ಎಂಬುದು ತಿಳಿದಿಲ್ಲ," ಎಂದಿದ್ದಾರೆ. 

ಇದನ್ನು ಓದಿ: ಕೊನೆಯ ಅಂಕದಲ್ಲಿ ರಾಜೀನಾಮೆ ನಾಟಕ; ಇಂದು ಸ್ಪೀಕರ್​ ಖುದ್ದು ಭೇಟಿಯಾಗಿ ಶಾಸಕ ಸ್ಥಾನ ತ್ಯಜಿಸಲಿರುವ ರಮೇಶ್ ಜಾರಕಿಹೊಳಿ?

ಅಲ್ಲದೇ, "ನನ್ನ ಮಾಹಿತಿ ಪ್ರಕಾರ ಬಿಜೆಪಿ ಅವರನ್ನು ಸೆಳೆಯುತ್ತಿಲ್ಲ. ರಮೇಶ್ ಜಾರಕಿಹೊಳಿಯೇ ಸ್ವಇಚ್ಚೆಯಿಂದ ರಾಜೀನಾಮೆ ನೀಡಲು ಮುಂದಾಗಿದ್ದಾರೆ," ಎಂದು ತಿಳಿಸಿದ್ದಾರೆ. ಸತೀಶ್​ ಹೇಳಿಕೆ ಗಮನಿಸಿದಲ್ಲಿ ಈ ಹಿಂದೆ ಪಿಎಲ್​ಡಿ ಚುನಾವಣೆ ಸಂದರ್ಭದಲ್ಲಿ ಸಚಿವ ಡಿಕೆ ಶಿವಕುಮಾರ್ ಜಿಲ್ಲೆಯಲ್ಲಿ​ ಹಸ್ತಕ್ಷೇಪದ ಬಳಿಕ ರಮೇಶ್​ ಜಾರಕಿಹೊಳಿ ಪಕ್ಷದ ಮೇಲೆ ಮುನಿಸು ತೋರಿದ್ದರು. ಇದರಿಂದಾಗಿಯೇ ಅವರು ಈ ನಿರ್ಣಯಕ್ಕೆ ಬಂದಿದ್ದಾರೆ ಎಂಬ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

First published: July 3, 2019, 4:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading