‘ರಮೇಶ್​​ ಒಬ್ಬ ಮೋಸಗಾರ, ಕಾಂಗ್ರೆಸ್​​ನಲ್ಲಿದ್ದು ಬಿಜೆಪಿಗೆ ಪ್ರಚಾರ ಮಾಡುತ್ತಾನೆ‘: ಸತೀಶ್​​ ಜಾರಕಿಹೊಳಿ

ರಮೇಶ್ ಹೇಳಿಕೆಯನ್ನು ನಾನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅವನೊಬ್ಬ ಸುಳ್ಳುಗಾರ. ಬದ್ಧತೆ ಇಲ್ಲದ ಶಾಸಕ. ಯಾವತ್ತೂ ನುಡಿದಂತೆ ನಡೆದವನಲ್ಲ. ಅದುವೇ ಅವನ ಸ್ಪೆಷಾಲಿಟಿ- ಸತೀಶ್​​​ ಜಾರಕಿಹೊಳಿ

Ganesh Nachikethu
Updated:April 25, 2019, 8:10 AM IST
‘ರಮೇಶ್​​ ಒಬ್ಬ ಮೋಸಗಾರ, ಕಾಂಗ್ರೆಸ್​​ನಲ್ಲಿದ್ದು ಬಿಜೆಪಿಗೆ ಪ್ರಚಾರ ಮಾಡುತ್ತಾನೆ‘: ಸತೀಶ್​​ ಜಾರಕಿಹೊಳಿ
ರಮೇಶ್​ ಜಾರಕಿಹೊಳಿ-ಸತೀಶ್​ ಜಾರಕಿಹೊಳಿ
Ganesh Nachikethu
Updated: April 25, 2019, 8:10 AM IST
ಬೆಂಗಳೂರು(ಏ.25): ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸಚಿವ ಸತೀಶ್​​ ಜಾರಕಿಹೊಳಿ ಮತ್ತು ಶಾಸಕ ರಮೇಶ್​​ ಜಾರಕಿಹೊಳಿ ಸಹೋದರರ ನಡುವೆ ಸತತ ಎರಡನೇ ದಿನವೂ ವಾಕ್ಸಮರ ಮುಂದುವರಿದಿದ್ದು, ಇಬ್ಬರು ಪರಸ್ಪರ ಏಕವಚನದಲ್ಲೇ ಆರೋಪ-ಪ್ರತ್ಯಾರೋಪಗಳಲ್ಲಿ ಮುಳುಗಿದ್ದಾರೆ. ಜಾರಕಿಹೊಳಿ ಸಹೋದರರ ಈ ನಡೆ ಸರ್ಕಾರಕ್ಕೆ ಅಪಾಯ ತಂದೊಡ್ಡುವ ಸುಳಿವು ನೀಡಿದೆ.

‘ಅತ್ತ ಸತೀಶ್​ ಗೋಮುಖ ವ್ಯಾಘ್ರ. ಅವನಿಂದಲೇ ನಾನು ಮೋಸ ಹೋದೆ' ಎಂದು ಕಾಂಗ್ರೆಸ್​​ ಬಂಡಾಯ ಶಾಸಕ ರಮೇಶ ಜಾರಕಿಹೊಳಿ ನೇರ ವಾಗ್ಧಾಳಿ ನಡೆಸಿದರೇ, ಇತ್ತ'ರಮೇಶ ಒಬ್ಬ ಬೇಜವಾಬ್ದಾರಿ ಶಾಸಕ. ನನ್ನ ಮೇಲೆ ತಾನು ಮಾಡಿರುವ ಆರೋಪ ನಿರಾಧಾರ. ಯಾವುದೋ 'ವಸ್ತು' ಕಳೆದುಕೊಂಡಿದ್ದಕ್ಕೆ ಹೀಗೆ ಹತಾಶರಾಗಿದ್ದಾನೆ' ಎಂದು ಸತೀಶ್​​​ ಪ್ರತಿದಾಳಿ ನಡೆಸಿದ್ದಾರೆ.

ನಿನ್ನೆ ಬೆಂಗಳೂರಿಗೆ ತೆರಳುವುವ ಮುನ್ನ ರಮೇಶ ಜಾರಕಿಹೊಳಿ ಮಾಧ್ಯಮದವರ ಜತೆಗೆ ಮಾತಾಡಿದರು. ಈ ವೇಳೆ ನಮ್ಮಲ್ಲಿ ಭಿನ್ನಮತ ಆರಂಭಕ್ಕೆ ಸತೀಶ ಜಾರಕಿಹೊಳಿಯೇ ನೇರ ಕಾರಣ. ನಾನು ಸಚಿವನಾಗಿ ಆರಾಮಾಗಿದ್ದೆ. ನನ್ನ ಮನೆಗೆ ಅಳುವ ನೆಪದಲ್ಲಿ ಬಂದ ಸತೀಶ್ ನಮ್ಮನ್ನು ಖೆಡ್ಡಾ ತೋಡಿ ಕೆಡವಿದ. ಅವನಿಂದಲೇ ನಾನು ಮೋಸ ಹೋದೆ. ಭಿನ್ನಮತಕ್ಕೆ ಪ್ರಚೋದನೆ ನೀಡಿದ್ದೇ ಸತೀಶ್‌ ಎಂದರು.

ಹಾಗೆಯೇ ನನ್ನ ರಾಜೀನಾಮೆ ಸುಮಾರು ಜನ ಬಯಸುತ್ತಿದ್ಧಾರೆ. ನಾನೂ ಅದನ್ನು ಒಪ್ಪುತ್ತೇನೆ. ಒಬ್ಬನೇ ರಾಜೀನಾಮೆ ನೀಡುವುದು ಬೇಡ. ಒಂದಷ್ಟು ಜನ ಸಾಮೂಹಿಕ ರಾಜೀನಾಮೆ ನೀಡಬೇಕು ಎಂದು ಕಾದಿದ್ದೇವೆ. ಸದ್ಯದಲ್ಲೇ ರಾಜೀನಾಮೆ ನೀಡುತ್ತೇವೆ ಎಂದರು. ಈ ಮೂಲಕ ತಾನು ಆಪರೇಷನ್​​​ ಕಮಲಕ್ಕೆ ಬಲಿಯಾಗಿರುವುದಾಗಿ ಪರೋಕ್ಷ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಜಾಮೀನು ಸಿಕ್ಕರೂ ಕಂಪ್ಲಿ ಗಣೇಶ್​ಗೆ ಇಲ್ಲ ಬಿಡುಗಡೆ ಭಾಗ್ಯ!

ಸಚಿವ ಸತೀಶ್​​ ಜಾರಿಕಿಹೊಳಿಯವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ರಮೇಶ್ ಹೇಳಿಕೆಯನ್ನು ನಾನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅವನೊಬ್ಬ ಸುಳ್ಳುಗಾರ. ಬದ್ಧತೆ ಇಲ್ಲದ ಶಾಸಕ. ಯಾವತ್ತೂ ನುಡಿದಂತೆ ನಡೆದವನಲ್ಲ. ಅದುವೇ ಅವನ ಸ್ಪೆಷಾಲಿಟಿ ಎಂದು ತಿರುಗೇಟು ನೀಡಿದರು.ಇನ್ನು ದಿನಕ್ಕೊಂದು ರೀತಿ ಮಾತಾಡುತ್ತಿದ್ಧಾನೆ. ಯಮಕನಮರಡಿ ಚುನಾವಣೆಗೆ ಇನ್ನೂ ಸಾಕಷ್ಟು ಕಾಲಾವಕಾಶ ಇದೆ. ಆವಾಗ ಏನಾಗುತ್ತೋ ನೋಡೋಣ. ಸದ್ಯಕ್ಕೆ ಅದರ ಬಗ್ಗೆ ಚರ್ಚೆ ಬೇಡ. ರಮೇಶ ಮೊದಲು ಯಾವುದಾದರೂ ಒಂದು ಪಕ್ಷವನ್ನು ಆಯ್ಕೆ ಮಾಡಲಿ. ಆದರೆ, ಕಾಂಗ್ರೆಸ್‌ನಲ್ಲಿದ್ದುಕೊಂಡು ಬಿಜೆಪಿ ಪರ ಪ್ರಚಾರ ಮಾಡುವುದು ಸರಿಯಲ್ಲ. ಅವರ ರಾಜೀನಾಮೆಯಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎನ್ನುವ ಮೂಲಕ ಬಿಜೆಪಿಗೆ ಹೋಗಲಿ ಎಂದು ಕಿಡಿಕಾರಿದರು.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ರೆಬೆಲ್ ಆಗಲು ಏನು ಕಾರಣ? ಕೌಟುಂಬಿಕ ಸತ್ಯ ಬಿಚ್ಚಿಟ್ಟ ಸತೀಶ್ ಜಾರಕಿಹೊಳಿ

ಒಟ್ನಲ್ಲಿ ಜಾರಕಿಹೊಳಿ ಸಹೋದರರ ಕಿತ್ತಾಟ ಮೈತ್ರಿಗೆ ಕುತ್ತು ತಂದಿದೆ. ಈ ಮಧ್ಯೆ ಬಿಜೆಪಿಯೂ ಆಪರೇಷನ್​​ ಕಮಲಕ್ಕೆ ಮತ್ತೆ ಮುಂದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
------------
First published:April 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ