ಡಿಕೆಶಿಗೆ ಕುಂದಗೋಳ ಉಸ್ತುವಾರಿ, ನಮ್ಮ ಆಕ್ಷೇಪವಿಲ್ಲ; ಕಾಂಗ್ರೆಸ್​​​ ಗೆಲುವಿಗೆ ಒಟ್ಟಾಗಿ ದುಡಿಯುತ್ತೇವೆ- ಸತೀಶ್​​ ಜಾರಕಿಹೊಳಿ

ಶಿವಕುಮಾರ್ ನನ್ನ ಬಗ್ಗೆ ಹಾಗೆ ಮಾತನಾಡಬಾರದಾಗಿತ್ತು. ನಾನು ಎಲ್ಲಿಯೂ ಅವರು ಕುಂದಗೋಳ ಉಸ್ತುವಾರಿ ಆಗಬಾರದು ಎಂದು ಹೇಳಿಲ್ಲ- ಸತೀಶ್​​ ಜಾರಕಿಹೊಳಿ

Ganesh Nachikethu | news18
Updated:April 30, 2019, 8:36 PM IST
ಡಿಕೆಶಿಗೆ ಕುಂದಗೋಳ ಉಸ್ತುವಾರಿ, ನಮ್ಮ ಆಕ್ಷೇಪವಿಲ್ಲ; ಕಾಂಗ್ರೆಸ್​​​ ಗೆಲುವಿಗೆ ಒಟ್ಟಾಗಿ ದುಡಿಯುತ್ತೇವೆ- ಸತೀಶ್​​ ಜಾರಕಿಹೊಳಿ
ಡಿಕೆಶಿ, ಸತೀಶ್​ ಜಾರಕಿಹೊಳಿ
Ganesh Nachikethu | news18
Updated: April 30, 2019, 8:36 PM IST
ಬೆಂಗಳೂರು(ಏ.30): "ಕುಂದಗೋಳ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನಾಗಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ನೇಮಿಸಲಾಗಿದೆ. ಹಿರಿಯರು ಎಂಬ ಕಾರಣಕ್ಕೆ ಡಿಕೆಶಿ ಅವರಿಗೆ ಚುನಾವಣಾ ಉಸ್ತುವಾರಿ ನೀಡಲಾಗಿದೆ. ಕಾಂಗ್ರೆಸ್​​ನಲ್ಲಿ ಯಾರಿಗೆ​​ ಉಸ್ತುವಾರಿ ನೀಡಿದರೂ ನಮ್ಮಲ್ಲಿ ಯಾವುದೇ ಆಕ್ಷೇಪವಿಲ್ಲ. ನಾವೆಲ್ಲರೂ ಕಾಂಗ್ರೆಸ್​​ ಅಭ್ಯರ್ಥಿ ಗೆಲುವಿಗಾಗಿ ಒಟ್ಟಾಗಿ ಶ್ರಮಿಸುತ್ತೇವೆ" ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಇಂದು ಸುದ್ದಿಗಾರರ ಜತೆ ಮಾತಾಡಿದ ಅರಣ್ಯ ಇಲಾಖೆ ಸಚಿವ ಸತೀಶ್​​ ಜಾರಕಿಹೊಳಿ ಅವರು, ನಾನು ಡಿಕೆಶಿಯವರ ಬಗ್ಗೆ ಎಲ್ಲೂ ಮಾತಾಡಿಲ್ಲ. ನಮ್ಮ ಬಗ್ಗೆ ಅವರು ಏನೇ ಪ್ರತಿಕ್ರಿಯಿಸುವ ಮುನ್ನಾ ಯೋಚಿಸಬೇಕಿತ್ತು. ಯೋಚಿಸಿ ಬಳಿಕ ಪ್ರತಿಕ್ರಿಯೆ ನೀಡಿದರೇ ಸರಿಯಾಗಿರುತ್ತಿತ್ತು. ಈ ಹಿಂದೆ ಬಳ್ಳಾರಿ ಉಸ್ತುವಾರಿ ನೀಡಿದಾಗಲೂ ಒಟ್ಟಾಗಿ ಕೆಲಸ ಮಾಡಿದ್ದೇವೆ. ಮುಂದೆಯೂ ಕಾಂಗ್ರೆಸ್​​ ಗೆಲುವಿಗಾಗಿ ದುಡಿಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೈಕಮಾಂಡ್ ಡಿಕೆಶಿ ಅವರನ್ನು ಕುಂದಗೋಳ ಕ್ಷೇತ್ರದ ಉಸ್ತುವಾರಿಯನ್ನಾಗಿ ನೇಮಕ ಮಾಡಿರುವುದಕ್ಕೆ ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಚಿವ ಡಿಕೆ ಶಿವಕುಮಾರ್ ಅವರು, ಸತೀಶ್ ಜಾರಕಿಹೊಳಿ ದೊಡ್ಡವರು, ಸಾಹುಕಾರ್ ಇದ್ದಾರೆ. ನಾಯಕರು ಯಾರೇ ಆಗಲಿ ಇನ್ನೊಬ್ಬರ ಬಗ್ಗೆ ಜಾಸ್ತಿ ಏಕೆ ಮಾತನಾಡುತ್ತಾರೆ. ಅವರಿಗೆ ನಮ್ಮ ಮೇಲೆ ಜಾಸ್ತಿ ಪ್ರೀತಿ ಇರುತ್ತದೆ ಎಂದಿದ್ದರು.

ಇದನ್ನೂ ಓದಿ: ಕುಂದಗೋಳ ಉಪಚುನಾವಣೆ: ಪಕ್ಷೇತರ ಅಭ್ಯರ್ಥಿ ನಾಮಪತ್ರ ತಿರಸ್ಕಾರ; 23 ಪೈಕಿ 22 ಕ್ರಮಬದ್ಧ

ಹಾಗೆಯೇ ಸತೀಶ್​​ ದೊಡ್ಡವರು ನಾವು ಸಾಮಾನ್ಯ ಪ್ರಜೆಗಳು. ಪಕ್ಷ ನೀಡಿದ ಜವಾಬ್ದಾರಿಯನ್ನಷ್ಟೇ ನಾನು ನಿರ್ವಹಿಸುತ್ತಿದ್ದೇನೆ ಎಂದು ಸತೀಶ್​​ ಕಾಲೆಳೆದಿದ್ದರು. ಡಿಕೆಶಿ ಈ ಹೇಳಿಕೆಗೆ ಇಂದು ಪ್ರತಿಕ್ರಿಯಿಸಿದ ಸತೀಶ್​​ ಜಾರಕಿಹೊಳಿ, ಶಿವಕುಮಾರ್ ನನ್ನ ಬಗ್ಗೆ ಹಾಗೆ ಮಾತನಾಡಬಾರದಾಗಿತ್ತು. ನಾನು ಎಲ್ಲಿಯೂ ಅವರು ಕುಂದಗೋಳ ಉಸ್ತುವಾರಿ ಆಗಬಾರದು ಎಂದು ಹೇಳಿಲ್ಲ. ಆದರೆ ಡಿಕೆಶಿ ಅನಾವಶ್ಯಕವಾಗಿ ನಮ್ಮ ಬಗ್ಗೆ ಮಾತಾಡಿದ್ದಾರೆ ಎಂದು ತಿರುಗೇಟು ನೀಡಿದ್ದರು.

ಇದನ್ನೂ ಓದಿ: ಆಂಧ್ರದಲ್ಲಿ ಐಪಿಎಲ್​​ ಜತೆಗೆ ಎಲೆಕ್ಷನ್​​​ ಬೆಟ್ಟಿಂಗ್ ಜೋರು; ಗೆಲ್ಲುವ ಕ್ಷೇತ್ರಗಳ ಮೇಲೆ ಹಣದ ಹೊಳೆಯನ್ನೇ ಹರಿಸುತ್ತಿರುವ ಜನಸೇನಾ

ಮೇ 19ರಂದು ಕುಂದಗೋಳ, ಚಿಂಚೋಳಿ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಮೇ 23ರಂದು ಫಲಿತಾಂಶ ಪ್ರಕಟವಾಗುತ್ತದೆ. ಸಚಿವರಾಗಿದ್ದ ಸಿ.ಎಸ್. ಶಿವಳ್ಳಿಯವರ ಅಕಾಲಿಕ ನಿಧನದಿಂದ ತೆರವಾಗಿರುವ ಕುಂದಗೋಳ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಶಾಸಕ ಹಾಗೂ ಬಿ.ಎಸ್​. ಯಡಿಯೂರಪ್ಪ ಅವರ ಸಂಬಂಧಿ ಎಸ್.ಐ. ಚಿಕ್ಕನಗೌಡರ್, ಕಾಂಗ್ರೆಸ್​ನಿಂದ ಸಿ.ಎಸ್​. ಶಿವಳ್ಳಿಯವರ ಪತ್ನಿ ಕುಸುಮಾವತಿ ಶಿವಳ್ಳಿ ಕಣದಲ್ಲಿದ್ದಾರೆ.
Loading...

----------
First published:April 30, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...