ಪಿ ಎಲ್ ಡಿ ಬ್ಯಾಂಕ್ ರಾಜಕಾರಣ.. ಜಾರಕಿಹೊಳಿ ಸಹೋದರರ ಉಗ್ರ ನಿರ್ಧಾರದ ಎಚ್ಚರಿಕೆ...!

news18
Updated:September 6, 2018, 5:02 PM IST
ಪಿ ಎಲ್ ಡಿ ಬ್ಯಾಂಕ್ ರಾಜಕಾರಣ.. ಜಾರಕಿಹೊಳಿ ಸಹೋದರರ ಉಗ್ರ ನಿರ್ಧಾರದ ಎಚ್ಚರಿಕೆ...!
  • News18
  • Last Updated: September 6, 2018, 5:02 PM IST
  • Share this:
- ಚಂದ್ರಕಾಂತ್ ಸುಗಂಧಿ, ನ್ಯೂಸ್ 18 ಕನ್ನಡ

ಬೆಳಗಾವಿ (ಸೆ.06) : ಬೆಳಗಾವಿ ತಾಲೂಕಿನ ಪಿಎಲ್ ಡಿ ಬ್ಯಾಂಕ್ ಚುನಾವಣೆ ಇದೀಗ ರಾಜ್ಯದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ನಾಳೆ ನಡೆಯೋ ಚುನಾವಣೆ ಮೇಲೆ ಎತ್ತರ ಚಿತ್ತ ನೆಟ್ಟಿದೆ. ಇನ್ನೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಲಗಾಮು ಹಾಕದೇ ಇದ್ರೆ ಉಗ್ರ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಸಚಿವ ರಮೇಶ ಜಾರಕಿಹೊಳಿ ಹೈಕಮಾಂಡ್ ಎಚ್ಚರಿಕೆ ನಿಡಿದ್ದಾರೆ. ಬ್ಯಾಂಕ್ ರಾಜಕಾರಣ ಸಮ್ಮಿಶ್ರ ಸರ್ಕಾರದ ಬುಡವನ್ನು ಅಗಲುಗಾಡಿಸುತ್ತಿದೆ.

ಬೆಳಗಾವಿಯ ಪಿಎಲ್ ಡಿ ಬ್ಯಾಂಕ್ ರಾಜಕಾರಣ ಕಾಂಗ್ರೆಸ್ ಪಕ್ಷದಲ್ಲಿ ಬಿರುಗಾಳಿ ಎಬ್ಬಿಸಿದೆ. ಜಾರಕಿಹೊಳಿ ಸಹೋದರರು ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಬಿಗ್ ಫೈಟ್ ನಡೆದಿದ್ದು, ಈ ಜಗಳ ರಾಜ್ಯದ ಸಮ್ಮಿಶ್ರ ಸರ್ಕಾರದ ಅಸ್ತಿತ್ವಕ್ಕೆ ಕುತ್ತು ತರುವ ಸಾಧ್ಯತೆ ಇದೆ. ಇನ್ನೂ ಪಿ ಎಲ್ ಡಿ ಬ್ಯಾಂಕ್ ಚುನಾವಣೆಗೆ ಕೇವಲ ಒಂದು ದಿನ ಮಾತ್ರ ಬಾಕಿ ಉಳಿದೆ. ಇಂದು ಸಚಿವರ ರಮೇಶ ಜಾರಕಿಹೊಳಿ ಬೆಳಗಾವಿ ತಾಲೂಕಿನ ಎಲ್ಲಾ ಪಿಡಿಓಗಳ ಸಭೆಯ ಕರೆಯ ಮೂಲಕ ಹೆಬ್ಬಾಳ್ಕರ್ ಟಾಂಗ್ ನೀಡಿದರು.

ಬೆಳಗಾವಿಯ ಸರ್ಕ್ಯೂಟ್ ಹೌಸ್ ನಲ್ಲಿ ಕೇವಲ 2 ನಿಮಿಷದಲ್ಲಿ ಸಚಿವ ರಮೇಶ್ ಜಾರಕಿಹೊಳಿ ಸಭೆ ಅಂತ್ಯಗೊಂಡಿತು.  ನಂತರ ಮಾಧ್ಯಮಗಳ ಜತೆಗೆ ಮಾತನಾಡಿ ಸಚಿವ ರಮೇಶ ಜಾರಕಿಹೊಳಿ ಹೆಬ್ಬಾಳ್ಕರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಲಕ್ಷ್ಮೀ ರಾಜಕೀಯಕ್ಕೆ ಬಂದಿದ್ದು 2004ರಲ್ಲಿ ಅವರ ಇತಿಹಾಸವೇನು ಎಂದು ಪ್ರಶ್ನಿಸಿದ್ರು.

ನಾನು ಹೆಬ್ಬಾಳ್ಕರ್ ಸಾಕಷ್ಟು ಸಹಾಯ ಮಾಡಿದ್ದೇನೆ. ಅದನ್ನು ಸಹಾಯ ಮಾಡಿದ್ದನು ಮರೆಯಬೇಕು ಆದರೇ ಈಗ ಹೇಳುವ ಸಮಯ ಬಂದಿದೆ ಎಂದು ಹೆಬ್ಬಾಳ್ಕರ್ ತಂದೆ, ಮಗ, ಸಹೋದರಿನಗೆ ಮಾಡಿದ ಸಹಾಯದ ಬಗ್ಗೆ ವಿವರಿಸಿದ್ರು. ಇನ್ನೂ ಹೆಬ್ಬಾಳ್ಕರ್ ಇಷ್ಟೊಂದು ಕೀಳು ಮಟ್ಟದ ರಾಜಕೀಯ ಮಾಡುತ್ತಿರೋದು ಸರಿಯಲ್ಲ ಎಂದು ಕಿಡಿಕಾಡಿದ್ರು.

ನಾನು ಸಚಿವ ಡಿ.ಕೆ. ಶಿವಕುಮಾರ್ ಇಬ್ಬರು ಗೆಳೆಯರು ನಾನು ಅವರಿಗೆ ಸಹಾಯ ಮಾಡಿದ್ದೇ ಅವರು ನನಗೆ ಸಹಾಯ ಮಾಡಿದ್ದಾರೆ. ಇನ್ನೂ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಹದ್ದು ಬಸ್ತಿನಲ್ಲಿ ಇಡಿ ಇಲ್ಲವಾದಲ್ಲಿ ಜಾರಕಿಹೊಳಿ ಸಹೋದರರು ಉಗ್ರ ನಿರ್ಧಾರ ಕೈಗೊಳ್ಳಿದ್ದಾರೆ ಎಂದು ಕಾಂಗ್ರೆಸ್ ಹೈಕಮಾಂಡ್ ನೇರ ಎಚ್ಚರಿಕೆ ನೀಡಿದ್ದಾರೆ. ಸತೀಶ್ ಜಾರಕಿಹೊಳಿಗೆ ಅಪಮಾನ ಆದ್ರೆ ಅವರ ಜತೆಗೆ ನಾನು ಇರುತ್ತೇನೆ. ಸತೀಶ ಜಾರಕಿಹೊಳಿ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ದ ಎಂದರು.

ಇನ್ನೂ ಜಾರಕಿಹೊಳಿ ಮತ್ತು ಹೆಬ್ಬಾಳ್ಕರ್ ನಡುವಿನ ಜಗಳಕ್ಕೆ ಮೊದಲ ಬಲಿಯಾಗಿದೆ. ಬೆಳಗಾವಿ ತಾಪಂ ಇಓ ಎಸ್.ಕೆ. ಪಾಟೀಲ್ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಸಚಿವರ ರಮೇಶ ಜಾರಕಿಹೊಳಿ ಬೆಳಗಾವಿ ತಾಲೂಕಿನ ಎಲ್ಲಾ ಪಿಡಿಓಗಳ ಸಭೆಯ ಬಗ್ಗೆ ಬೆಳಗಾವಿ ತಾಲೂಕು ಪಂಚಾಯತ್ ಅಧ್ಯಕ್ಷ ಶಂಕರಗೌಡ ಪಾಟೀಲ್ ತೀವ್ರ ಸಮಮಾಧಾನ ವ್ಯಕ್ತ ಪಡಿಸಿದ್ದಾರೆ. ಸಚಿವರು ಶಿಷ್ಠಾಚಾರ್ ಪ್ರಕಾರ ನಮ್ಮನ್ನು ಕರೆಯಬೇಕಿತ್ತು ಎಂದು ಟೀಕಿಸಿದ್ದಾರೆ.ಒಟ್ಟಾರೆಯಾಗಿ ಬೆಳಗಾವಿಯಲ್ಲಿ ನಾಳೆ ನಡೆಯುವ ಪಿ ಎಲ್ ಡಿ ಬ್ಯಾಂಕ್ ಚುನಾವಣೆ ಇಡೀ ರಾಜ್ಯದ ಗಮನ ಸೆಳೆದಿದೆ. ಈ ಚುನಾವಣೆಯಲ್ಲಿ ಅಪಮಾನ ಆದರೇ ಉಗ್ರ ನಿರ್ಧಾರ ಕೈಗೊಳ್ಳು ಸಿದ್ದ ಎನ್ನುವ ಮೂಲಕ ರಮೇಶ ಜಾರಕಿಹೊಳಿ ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಮುಂದಿನ ನಿರ್ಣಯ ಏನು ಎಂಬುದು ಇದೀಗ ಕುತುಹಲಕ್ಕೆ ಕಾರಣವಾಗಿದೆ.


 
First published:September 6, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading