Sidaramaiah: ಯಡಿಯೂರಪ್ಪ ಸಿಡಿ ಬಿಡುಗಡೆ ಮಾಡ್ತೀವಿ ಎಂಬ ಎಚ್ಚರಿಕೆ; ಇಂತಹ ಲಜ್ಜೆ ಗೆಟ್ಟವರು ಅಧಿಕಾರದಲ್ಲಿ ಇರಬೇಕಾ ಎಂದ ಸಿದ್ದರಾಮಯ್ಯ

ಸಚಿವ ರಮೇಶ್​ ಜಾರಕಿಹೊಳಿ ಕೆಲಸ ಕೊಡಿಸುವ ನೆಪದಲ್ಲಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್​ ಕಲ್ಲಹಳ್ಳಿ ಈಗಾಗಲೇ ನಗರ ಪೊಲೀಸ್​ ಆಯುಕ್ತರಿಗೆ ದೂರು ನೀಡಿದ್ದಾರೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಒಂದನ್ನೂ ಬಿಡುಗಡೆ ಮಾಡಿದ್ದಾರೆ.

ಸಿದ್ದರಾಮಯ್ಯ.

ಸಿದ್ದರಾಮಯ್ಯ.

 • Share this:
  ಬೆಂಗಳೂರು (ಮಾರ್ಚ್​ 03); ಒ"ಬ್ಬ ರಾಜ್ಯ ಸಚಿವನ ಸೆಕ್ಸ್​ ವಿಡಿಯೋ ಎಲ್ಲಾ ಮಾಧ್ಯಮಗಳಲ್ಲೂ ಬಹಿರಂಗವಾಗಿದೆ. ಅದನ್ನು ನೋಡಲೂ ಆಗುವುದಿಲ್ಲ. ಆದರೆ, ಇಂತಹ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ರಮೇಶ್​ ಜಾರಕಿಹೊಳಿ ರಾಜೀನಾಮೆ ಪಡೆದರೆ, ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಸಿಡಿಯನ್ನು ಬಿಡುಗಡೆ ಮಾಡ್ತೀನಿ ಅಂತ ರಮೇಶ್​ ಜಾರಕಿಹೊಳಿ ತಮ್ಮ ಮುಖ್ಯಮಂತ್ರಿಗೆ ಬೆದರಿಕೆ ಒಡ್ತಾ ಇದ್ದಾನೆ. ಇಂತಹ ಲಜ್ಜೆ ಗೆಟ್ಟವರು ಅಧಿಕಾರದಲ್ಲಿ ಇರಬೇಕಾ? ಇವರಿಗೆ ಏನಾದರೂ ಮಾನ ಮರ್ಯಾದೆ ಇದೆಯಾ?"​ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

  ಸಚಿವ ರಮೇಶ್​ ಜಾರಕಿಹೊಳಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿರುವ ಅಶ್ಲೀಲ ವಿಡಿಯೋ ಪ್ರಸ್ತುತ ಇಡೀ ರಾಜ್ಯ ರಾಜಕೀಯ ಮಾತ್ರವಲ್ಲದೆ ರಾಷ್ಟ್ರೀಯ ರಾಜಕಾರಣದಲ್ಲೂ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. ಎಲ್ಲಾ ಮಾಧ್ಯಮಗಳಲ್ಲೂ ಈ ಕುರಿತು ಚರ್ಚೆಯಾಗುತ್ತಿದೆ. ಕಾಂಗ್ರೆಸ್​ ನಾಯಕರು ಈಗಾಗಲೇ ಅಶ್ಲೀಲ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವ ಸಚಿವ ರಮೇಶ್​ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅಲ್ಲದೆ, ತಾನು ನಿರ್ದೂಷಿ ಎಂದು ಸಾಬೀತುಮಾಡಿ ಮತ್ತೆ ಅಧಿಕಾರಕ್ಕೆ ಬರುತ್ತೇನೆ ಎಂದು ತಿಳಿಸಿದ್ದಾರೆ.

  ಸಚಿವ ರಮೇಶ್​ ಜಾರಕಿಹೊಳಿ ಕೆಲಸ ಕೊಡಿಸುವ ನೆಪದಲ್ಲಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್​ ಕಲ್ಲಹಳ್ಳಿ ಈಗಾಗಲೇ ನಗರ ಪೊಲೀಸ್​ ಆಯುಕ್ತರಿಗೆ ದೂರು ನೀಡಿದ್ದಾರೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಒಂದನ್ನೂ ಬಿಡುಗಡೆ ಮಾಡಿದ್ದಾರೆ.

  ಇದನ್ನೂ ಓದಿ: Ramesh Jarkiholi: ರಾಸಲೀಲೆ ವಿಡಿಯೋ ಪ್ರಕರಣ; ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ

  ಮಹಿಳೆಯೊಂದಿಗಿನ ರಾಸಲೀಲೆ ದೃಶ್ಯಗಳು ಸಿಡಿಯಲ್ಲಿ ದಾಖಲಾಗಿದ್ದು, ಸಂತ್ರಸ್ತೆ ಪರ ದಿನೇಶ್​ ಕಲ್ಲಹಳ್ಳಿ ದೂರು ನೀಡಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ. ಅಲ್ಲದೆ, ಸಂತ್ರಸ್ಥೆಗೆ ಭಯದ ವಾತಾವರಣ ಇದೆ. ಹಾಗಾಗಿ ಆಕೆ ಮಾಧ್ಯಮದ ಮುಂದೆ ಬರುತ್ತಿಲ್ಲ. ದೂರು ಕೊಟ್ಟ ಬಳಿಕ ಎಲ್ಲವನ್ನು ಹೇಳುತ್ತೇನೆ ಎಂದು ದಿನೇಶ್ ಕಲ್ಲಹಳ್ಳಿ ತಿಳಿಸಿದ್ದಾರೆ.  ಆದರೆ, ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅವರ ಸಿಡಿ ಬಿಡುಗಡೆ ಮಾಡ್ತೀನಿ ಎಂದು ರಮೇಶ್​ ಜಾರಕಿಹೊಳಿ ಅವರ ತಮ್ಮ ಬೆದರಿಕೆ ಹಾಕುತ್ತಿದ್ದಾರೆ. ಮತ್ತೊಂದೆಡೆ ಹಲವು ದಿನಗಳಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, "ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಿಡಿ ಇದ್ದು ಅದನ್ನು ಕಣ್ಣಲ್ಲಿ ನೋಡಲೂ ಸಾಧ್ಯವಿಲ್ಲ ಎಂದು ಆರೋಪಿಸುತ್ತಲೇ ಇದ್ದಾರೆ". ಹೀಗಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸಿದ್ದರಾಮಯ್ಯ ಇಂತಹ ಲಜ್ಜೆ ಗೆಟ್ಟವರು ಅಧಿಕಾರದಲ್ಲಿ ಇರಬೇಕಾ? ಇವರಿಗೆ ಮಾನ ಮರ್ಯಾದೆ ಇದೆಯಾ? ಎಂದು ಬಹಿರಂಗ ಸಭೆಯಲ್ಲಿ ಕಿಡಿಕಾರಿದ್ದಾರೆ.
  Published by:MAshok Kumar
  First published: