ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಇನ್ನೂ ಮುಂದೆ ಮಾತನಾಡಲ್ಲ; ಸಚಿವ ರಮೇಶ ಜಾರಕಿಹೊಳಿ ಹೊಸ ವರಸೆ!

ಇನ್ನೂ ಮುಂದೆ ಹೆಬ್ಬಾಳ್ಕರ್ ಬಗ್ಗೆ ನಾನು ಮಾತನಾಡಲ್ಲ. ನೀವು ಪದೇ ಪದೇ ಇಂತಹ ಪ್ರಶ್ನೆ ಕೇಳಿದರೆ ನಿಮ್ಮ ಜತೆಗೂ ಮಾತನಾಡುವುದನ್ನು ಬಿಡುತ್ತೇನೆ ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ- ಲಕ್ಷ್ಮೀ ಹೆಬ್ಬಾಳ್ಕರ್

ರಮೇಶ್ ಜಾರಕಿಹೊಳಿ- ಲಕ್ಷ್ಮೀ ಹೆಬ್ಬಾಳ್ಕರ್

  • Share this:
ಬೆಳಗಾವಿ (ಮಾ. 1): ಜಿಲ್ಲೆಯಲ್ಲಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ರಾಜಕೀಯ ವೈಷಮ್ಯ ಹೊಸದಲ್ಲ. ಇಷ್ಟು ದಿನ ಶಾಸಕಿ ಹೆಬ್ಬಾಳ್ಕರ್ ವಿರುದ್ದ ನಿರಂತರವಾಗಿ ಸಚಿವ ರಮೇಶ ಜಾರಕಿಹೊಳಿ ವಾಗ್ದಾಳಿ ನಡೆಸುತ್ತಿದ್ದರು. ಅಷ್ಟೇ ಅಲ್ಲ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುತ್ತಿದ್ದರು. ಶಾಸಕಿ ಹೆಬ್ಬಾಳ್ಕರ್ ಇತ್ತೀಚಿಗೆ ಮೌನ ಮುರಿದು ನಾನು ಪಕ್ಷ ಬಯಸಿದರೆ ಗೋಕಾಕ್ ನಿಂದ ಸ್ಪರ್ಧಗೆ ಸಿದ್ದ ಎಂದಿದ್ದರು. ಜತೆಗೆ ಗೋಕಾಕ್ ಕ್ಷೇತ್ರ ಇದೀಗ ಸಾಮಾನ್ಯ ಕ್ಷೇತ್ರವಾಗಿದ್ದು, ಅನೇಕ ಸಮೂದಾಯಗಳಿಗೆ ಅನ್ಯಾವಾಗಿದೆ, ಅವರ ಪರ ಧ್ವನಿಯಾಗುತ್ತೇನೆ ಎಂದಿದ್ದರು. ಇದರ ಗಂಭೀರತೆ ಅರಿತ ಸಚಿವ ರಮೇಶ ಜಾರಕಿಹೊಳಿ ಇದೀಗ ಮೌನಕ್ಕೆ ಶರಣಾಗಿದ್ದಾರೆ. ಇನ್ನೂ ಮುಂದೆ ಶಾಸಕಿ ಬಗ್ಗೆ ಮಾತನಾಡಲ್ಲ ಎಂದು ಹೇಳುವ ಮೂಲಕ ಹೊಸ ವರಸೆ ಆರಂಭಿಸಿದ್ದಾರೆ.

ಬೆಳಗಾವಿ ಗ್ರಾಮೀಣದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೆಲುವಿಗೆ ರಮೇಶ ಜಾರಕಿಹೊಳಿ ಶ್ರಮಿಸಿದ್ದರು. ನಂತರ ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಇಬ್ಬರು ಬದ್ಧವೈರಿಗಳಂತೆ ಕಾದಾಡುತ್ತಿದ್ದಾರೆ. ಬೆಳಗಾವಿ ಗ್ರಾಮೀಣದಲ್ಲಿ ಮುಂದಿನ ಸಲ ಕಮಲ ಅರಳಿಸಲೇಬೇಕು ಎಂದು ಹಠಕ್ಕೆ ಸಚಿವ ರಮೇಶ ಜಾರಕಿಹೊಳಿ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಅನೇಕ ಕಾರ್ಯಕರ್ತರನ್ನು ಪಕ್ಷಕ್ಕೆ ಸೆಳೆದಿದ್ದಾರೆ. ಅಷ್ಟೇ ಅಲ್ಲದ  ಕ್ಷೇತ್ರ ವ್ಯಾಪ್ತಿಯ ಎಲ್ಲಾ ಪಂಚಾಯಿತಿ ಸದಸ್ಯರ ಜತೆಗೆ ನೇರವಾಗಿ ಸಂಪರ್ಕ ಹೊಂದಿದ್ದಾರೆ. ಜತೆಗೆ ಹೆಬ್ಬಾಳ್ಕರ್ ವಿರುದ್ಧ ಮರಾಠ ಅಭ್ಯರ್ಥಿಯನ್ನು ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನು ಓದಿ: ಸಿಕ್ಸ್​ ಪ್ಯಾಕ್​ ಬಳಿಕ ವಿದ್ಯಾರ್ಥಿಗಳೊಂದಿಗೆ ಪುಶ್​ ಅಪ್, ಡ್ಯಾನ್ಸ್​​​ ; ರಾಹುಲ್​ ಗಾಂಧಿ ಫಿಟ್​ನೆಸ್​ಗೆ ನೆಟ್ಟಿಗರು ಫಿದಾ

ಬೆಳಗಾವಿ ಗ್ರಾಮೀಣ ಕ್ಷೇತ್ರ ಮರಾಠಿಗರ ಕ್ಷೇತ್ರವಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಮಾಡಿ ಮರಾಠಿ ಅಭ್ಯರ್ಥಿ ಆಯ್ಕೆಗೆ ಶ್ರಮಿಸಬೇಕು. ಯಾರಿಗೆ ಟಿಕೆಟ್ ಕೊಟ್ಟರು ಬಂಡಾಯ, ಭಿನ್ನಮತ ಮಾಡಲ್ಲ ಎಂದು ದೇವರ ಮುಂದೆ ಪ್ರಮಾಣ ಮಾಡಬೇಕು ಎಂದು ಕಾರ್ಯಕರ್ತರಿಗೆ ಸೂಚನೆ ಕೊಟ್ಟಿದ್ದರು ಸಚಿವ ರಮೇಶ ಜಾರಕಹೊಳಿ.  ಈಗಾಗಲೇ ಅನೇಕ ಅಭ್ಯರ್ಥಿಗಳು ಗ್ರಾಮೀಣದಲ್ಲಿ ಸ್ಪರ್ಧಿಸಲು ಉತ್ಸಾಹ ತೋರಿಸುತ್ತಿದ್ದಾರೆ.

ಇತ್ತೀಚಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪಕ್ಷ ಬಯಸಿದ್ದರೆ ಗೋಕಾಕ್ ನಲ್ಲಿ ಸ್ಪರ್ಧೆ ಮಾಡಲು ಸಿದ್ದ ಎಂದು ಘೋಷಣೆ ಮಾಡಿದ್ದರು. ಅಷ್ಟೇ ಅಲ್ಲದೇ ಒಂದು ಹೆಜ್ಜೆ ಮುಂದೆ ಹೋಗಿ, ಗೋಕಾಕ್ ಇದೀಗ ಮೀಸಲು ಕ್ಷೇತ್ರ ಅಲ್ಲ. ಅದು ಸಮಾನ್ಯ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಅನೇಕ ಸಮೂದಾಯಗಳಿಗೆ ಅನ್ಯವಾಗಿದೆ. ಲಿಂಗಾಯತ, ಕುರುಬ, ಮುಸ್ಲಿಂ ಹಾಗೂ ಉಪ್ಪಾರ ಸಮೂದಾಯಕ್ಕೆ ಅನ್ಯಾವಾಗಿದೆ. ಸಮಾಜವನ್ನು ಒಗ್ಗೂಡಿಸಿ ನ್ಯಾಯ ಒದಗಿಸಲು ಹೋರಾಟ ಮಾಡುತ್ತೇನೆ ಎಂದಿದ್ದರು. ಪಕ್ಷ ಸಂಘಟನೆಗೆ ಹೈಕಮಾಂಡ್ ಇದೀಗ ಮೂರು ಕ್ಷೇತ್ರದ ಜವಾಬ್ದಾರಿ ನನಗೆ ಕೊಟ್ಟಿದ್ದು, ಶೀಘ್ರದಲ್ಲಿಯೇ ಪಕ್ಷ ಸಂಘಟನೆ ಆರಂಭಿಸುತ್ತೇನೆ ಎಂದಿದ್ದರು.

ಈ ಹೇಳಿಕೆಗೆ ಬೆಳಗಾವಿ ಜಿಲ್ಲಾ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿತ್ತು. ಇದೀಗ ಎಚ್ಚೆತ್ತಿರುವ ಸಚಿವ ರಮೇಶ ಜಾರಕಿಹೊಳಿ ಮೌನಕ್ಕೆ ಶರಣಾಗಿದ್ದಾರೆ. ಇನ್ನೂ ಮುಂದೆ ಹೆಬ್ಬಾಳ್ಕರ್ ಬಗ್ಗೆ ನಾನು ಮಾತನಾಡಲ್ಲ. ನೀವು ಪದೇ ಪದೇ ಇಂತಹ ಪ್ರಶ್ನೆ ಕೇಳಿದರೆ ನಿಮ್ಮ ಜತೆಗೂ ಮಾತನಾಡುವುದನ್ನು ಬಿಡುತ್ತೇನೆ ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ.
Published by:Seema R
First published: