HOME » NEWS » State » MINISTER RAMESH JARKIHOLI IS MORE POWER FULL BJP RH KGV

ಮೂಲ ಬಿಜೆಪಿ ಮುಖಂಡರಿಂದಲೂ ಗೋಕಾಕ್ ಸಾಹುಕಾರ್ ಭೇಟಿ; ಸರ್ಕಾರದಲ್ಲಿ ಪವರ್​ಫುಲ್ ಆದ್ರಾ ರಮೇಶ್ ಜಾರಕಿಹೊಳಿ?

ಇನ್ನೂ ಮೂಲ ಬಿಜೆಪಿಗರು ಸಹ ಗೋಕಾಕ್ ಸಾಹುಕಾರ್ ಅವರನ್ನು ಹುಡುಕಿಕೊಂಡು ಅವರ ಮನೆ ಬಾಗಿಲಿಗೆ ಬರುತ್ತಿರುವುದರಿಂದ ರಮೇಶ್ ಜಾರಕಿಹೊಳಿ ಸರ್ಕಾರ ಹಾಗೂ ಪಕ್ಷದಲ್ಲಿ ಪವರ್ ಫುಲ್ ಲೀಡರ್ ಜೊತೆ ಪವರ್ ಪಾಯಿಂಟ್ ಆಗಿದ್ದಾರಾ? ಎಂಬ ಚರ್ಚೆಗಳು ಶುರುವಾಗಿವೆ.

news18-kannada
Updated:November 11, 2020, 6:14 PM IST
ಮೂಲ ಬಿಜೆಪಿ ಮುಖಂಡರಿಂದಲೂ ಗೋಕಾಕ್ ಸಾಹುಕಾರ್ ಭೇಟಿ; ಸರ್ಕಾರದಲ್ಲಿ ಪವರ್​ಫುಲ್ ಆದ್ರಾ ರಮೇಶ್ ಜಾರಕಿಹೊಳಿ?
ಸಚಿವ ರಮೇಶ್​ ಜಾರಕಿಹೊಳಿ
  • Share this:
ಬೆಂಗಳೂರು; ಮೈತ್ರಿ ಸರ್ಕಾರ ಕೆಡವಿ, ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಕಾರಣವಾಗಿರುವ ಗೋಕಾಕ ಸಾಹುಕಾರ್ ರಮೇಶ್ ಜಾರಕಿಹೊಳಿ, ಇದೀಗ ಬಿಜೆಪಿಯಲ್ಲಿ ಪವರ್ ಫುಲ್ ಲೀಡರ್.. ಅಲ್ಲದೆ ಈಗ ಸಚಿವ ಸ್ಥಾನದ ಆಕಾಂಕ್ಷಿಗಳಿಗೂ ಗಾಡ್ ಫಾದರ್. ಹೌದು ಬಿಜೆಪಿಯ ಸಚಿವ ಸ್ಥಾನದ ಆಕಾಂಕ್ಷಿಗಳು ಈಗ ರಮೇಶ್ ಜಾರಕಿಹೊಳಿ ಮನೆಗೆ ಹೋಗ್ತಿರೋದು ಇದಕ್ಕೆ ಸಾಕ್ಷಿಯಾಗುತ್ತಿದೆ. ಇಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಸಚಿವ ಸ್ಥಾನದ ಆಕಾಂಕ್ಷಿಗಳ ದಂಡು ಭೇಟಿ ನೀಡಿತ್ತು. ಅಲ್ಲಿ ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿಗಳು ರಮೇಶ್ ಜಾರಕಿಹೊಳಿ ಜೊತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಹಿರಿಯ ಶಾಸಕ ಮುರುಗೇಶ್ ನಿರಾಣಿ, ರೇಣುಕಾಚಾರ್ಯ, ಶಾಸಕ ರಾಜುಗೌಡ, ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸೇರಿದಂತೆ ಹಲವರು ಭೇಟಿ ಕೊಟ್ಟು, ರಮೇಶ್ ಜೊತೆ ಚರ್ಚೆ ನಡೆಸಿದ್ದಾರೆ. ರಮೇಶ್ ಜಾರಕಿಹೊಳಿ ಮೂಲಕ ಸಿಎಂ ಯಡಿಯೂರಪ್ಪಗೆ ಹಾಗೂ ಹೈಕಮಾಂಡ್ ಗೆ ಒತ್ತಡ ಹಾಕಿಸುವ ತಂತ್ರವನ್ನು ಶಾಸಕರು ಮಾಡಿದ್ದಾರೆ ಎನ್ನಲಾಗಿದೆ.

ರಮೇಶ್ ಜಾರಕಿಹೊಳಿ ಬಿಜೆಪಿ ಹೈಕಮಾಂಡ್ ಗೆ ಹತ್ತಿರ ಆಗಿದ್ದಾರೆ. ಹೈಕಮಾಂಡ್ ಮಟ್ಟದಲ್ಲೂ ಪ್ರಭಾವಿ ಲೀಡರ್. ಅಲ್ಲದೇ ಬಿಜೆಪಿಯ ಕೆಲ ರಾಷ್ಟ್ರೀಯ ನಾಯಕರ ಸಂಪರ್ಕ ಹೊಂದಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಅತ್ಯಾಪ್ತ. ಹೀಗಾಗಿ ರಮೇಶ್ ಜಾರಕಿಹೊಳಿ ಮೂಲಕ ಹೋದರೆ ತಮಗೆ ಸಚಿವ ಸ್ಥಾನ ಸಿಗಬಹುದು ಎಂದು ಸಚಿವ ಸ್ಥಾನದ ಆಕಾಂಕ್ಷಿಗಳು ಇಂದು ರಮೇಶ್ ಜಾರಕಿಹೊಳಿ ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ.

ಇದನ್ನು ಓದಿ: ಅವಕಾಶ ನೀಡಿದರೆ ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ; ಪರೋಕ್ಷವಾಗಿ ಸಚಿವ ಸ್ಥಾನ ಕೇಳಿದ ಶಾಸಕಿ ಪೂರ್ಣಿಮಾ ಶ್ರೀನಿವಾಸ್

ಈ ಹಿಂದೆ ಸಂಪುಟ ಪುನಾರಚನೆ ವಿಷಯ ಬಂದಂತಹ ಸಂದರ್ಭದಲ್ಲಿ, ಸಚಿವೆ ಶಶಿಕಲಾ ಜೊಲ್ಲೆ ರಮೇಶ್ ಭೇಟಿ ಮಾಡಿ, ತನ್ನನ್ನು ಸಂಪುಟದಿಂದ ಕೈ ಬಿಡದಂತೆ ನೋಡಿಕೊಳ್ಳುವಂತೆ ಮನವಿ ಮಾಡಿದ್ದರು. ಇದೀಗ ಸಚಿವ ಸ್ಥಾನದ ಆಕಾಂಕ್ಷಿಗಳು ಕೂಡ ರಮೇಶ್ ಭೇಟಿ ಮಾಡಿ, ತಮಗೆ ಸಚಿವ ಸ್ಥಾನ ಸಿಗುವ ರೀತಿಯಲ್ಲಿ ನೀವು ನೋಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಇನ್ನೂ ಮೂಲ ಬಿಜೆಪಿಗರು ಸಹ ಗೋಕಾಕ್ ಸಾಹುಕಾರ್ ಅವರನ್ನು ಹುಡುಕಿಕೊಂಡು ಅವರ ಮನೆ ಬಾಗಿಲಿಗೆ ಬರುತ್ತಿರುವುದರಿಂದ ರಮೇಶ್ ಜಾರಕಿಹೊಳಿ ಸರ್ಕಾರ ಹಾಗೂ ಪಕ್ಷದಲ್ಲಿ ಪವರ್ ಫುಲ್ ಲೀಡರ್ ಜೊತೆ ಪವರ್ ಪಾಯಿಂಟ್ ಆಗಿದ್ದಾರಾ? ಎಂಬ ಚರ್ಚೆಗಳು ಶುರುವಾಗಿವೆ.
Published by: HR Ramesh
First published: November 11, 2020, 6:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories