HOME » NEWS » State » MINISTER RAMESH JARAKIHOLI SAYS THAT GOVERNMENT NEVER NEGLECTED LEGAL ISSUES OF KALASA BANDOORI PROJECT HK

ಕಳಸಾ ಬಂಡೂರಿ ಯೋಜನೆ ವಿಚಾರದಲ್ಲಿ ರಾಜ್ಯ ಸರ್ಕಾರ ಕಾನೂನು ಬಾಹಿರ ಕೆಲಸ ಮಾಡಿಲ್ಲ; ಸಚಿವ ರಮೇಶ್ ಜಾರಕಿಹೊಳಿ

ಬೆಳಗಾವಿ ಜಿಲ್ಲೆ ವಿಭಜನೆಯಾಗಿ ಗೋಕಾಕ್ ಚಿಕ್ಕೋಡಿ ತಾಲೂಕು ರಚನೆ ಆಗಬೇಕು ಎನ್ನುವುದು ನಮ್ಮ ಬೇಡಿಕೆ ಸಹ ಇದೆ. ಆದರೆ, ಗಡಿ ಕೇಸದ ಸುಪ್ರೀಂ ಕೋರ್ಟ್ ನಲ್ಲಿ ಇದೆ

news18-kannada
Updated:November 30, 2020, 3:54 PM IST
ಕಳಸಾ ಬಂಡೂರಿ ಯೋಜನೆ ವಿಚಾರದಲ್ಲಿ ರಾಜ್ಯ ಸರ್ಕಾರ ಕಾನೂನು ಬಾಹಿರ ಕೆಲಸ ಮಾಡಿಲ್ಲ; ಸಚಿವ ರಮೇಶ್ ಜಾರಕಿಹೊಳಿ
ಸಚಿವ ರಮೇಶ್ ಜಾರಕಿಹೊಳಿ
  • Share this:
ಬೆಳಗಾವಿ (ನವೆಂಬರ್​. 30) :  ಕಳಸಾ ಬಂಡೂರಿ ನಾಲೆಯನ್ನು ಕರ್ನಾಟಕ ಕಾನೂನ ಬಾಹಿರವಾಗಿ ತಿರುವು ಮಾಡಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಆರೋಪಕ್ಕೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ. ಕರ್ನಾಟಕ ಯಾವುದೇ ಕಾನೂನು ಬಾಹಿರ ಕೆಲಸ ಮಾಡಿಲ್ಲ‌. ಕಳಸಾ ನಾಲಾಗೆ ನಿರ್ಮಾಣವಾಗಿರುವ ತಡೆಗೋಡೆ ಮುಟ್ಟಿಲ್ಲ.  ಸ್ಥಳ ಪರಿಶೀಲನೆ ಮಾಡೋಣ ಒಂದು ವೇಳೆ ಸಾವಂತ್‌ ಅವರ ಆರೋಪ ಸಾಬೀತು ಆದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಅಷ್ಟೇ ನೀರು ಹಂಚಿಕೆ ವಿಚಾರದಲ್ಲಿ ಉಭಯ ಮುಖ್ಯಮಂತ್ರಿಗಳ ಮಾತುಕತೆ ಅವಶ್ಯಕತೆ ಇಲ್ಲ. ಈಗಾಗಲೇ ನ್ಯಾಯಾಧೀಕರಣ ಈ ಬಗ್ಗೆ ತೀರ್ಪು ನೀಡಿದೆ. ಕೊರೋನಾ ಕಾರಣದಿಂದ ಅನುಷ್ಠಾನ ಸಾಧ್ಯವಾಗಿಲ್ಲ. ಮಹದಾಯಿ ವಿಚಾರ ಗೋವಾ ರಾಜಕೀಯ ಮಾಡುತ್ತಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ‌ ಹೇಳಿದರು.

ಸಚಿವ ರಮೇಶ್ ಜಾರಕಿಹೊಳಿ ಇಂದು ಕಳಸಾ ಬಂಡೂರಿ ಯೋಜನೆ ಬಗ್ಗೆ ಚರ್ಚೆ ನಡೆಸಲು ಸಭೆ ಕರೆದಿದ್ದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಬೇಕಿದ್ದ ಸಭೆ ಗ್ರಾಮ ಪಂಚಾಯತ್ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ರದ್ದು ಮಾಡಲಾಯಿತು. ಕೇವಲ ಜಿಲ್ಲೆಯ ಕೊರೋನಾ ಸೋಂಕಿನ ಬಗ್ಗೆ ‌ಮಾತ್ರ ಸಚಿವರು ಮಾಹಿತಿ ಪಡೆದರು. ಜಿಲ್ಲೆಯಲ್ಲಿ ಸೋಂಕಿನ ಸಂಖ್ಯೆ ತೀವ್ರವಾಗಿ ಕಡಿಮೆಯಾಗಿದೆ. ಜನ ನಿರ್ಭಯವಾಗಿ ತಮ್ಮ ಎಂದಿನ ಕೆಲಸದಲ್ಲಿ ತೊಡಗಬೇಕು ಎಂದು ಹೇಳಿದರು.

ಸಂಪುಟ ವಿಸ್ತರಣೆ ಪದೇ ಪದೇ ಮುಂದೆ ಹೋಗುವುದು ದುರ್ದೈವದ ಸಂಗತಿಯಾಗಿದೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಶೀಘ್ರದಲ್ಲೇ ಸಂಪುಟ ವಿಸ್ತರಣೆ ಆಗಬೇಕು ಎನ್ನುವುದು ನಮ್ಮ ಬೇಡಿಕೆ.

ಸೋತವರ ಪರ ಲಾಭಿ ಮಾಡುತ್ತಿರುವವರು ತ್ಯಾಗ ಮಾಡಲಿ ಎಂಬ ಶಾಸಕ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು‌. ತ್ಯಾಗ ಮಾಡಿದ 17 ಜನ ಹಾಗೂ ಸಿ ಪಿ ಯೋಗೇಶ್ವರಗೆ ಸಹ ಸಚಿವ ಸ್ಥಾನ ಸಿಗಬೇಕು. ನನ್ನನ್ನು ಬಿಟ್ಟು ಯಾರು ಸಭೆ ಮಾಡಿಲ್ಲ. ಎಲ್ಲರ ಪರವಾಗಿ ನಾನು ಪ್ರಯತ್ನ ಮಾಡುತ್ತೇನೆ. ದೆಹಲಿಯಲ್ಲಿ ಬಿ ಎಲ್ ಸಂತೋಷ ಅವರ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ಇದನ್ನೂ ಓದಿ : ತಹಶೀಲ್ದಾರ್ ಕಛೇರಿಗೆ ಪೊಲೀಸ್ ಬೇಡಿ; ಸಿಬ್ಬಂದಿಗಳ ಬೇಜವಾಬ್ದಾರಿಗೆ ಹೈರಾಣಾದ ಪೊಲೀಸರು

ಸಾಂಬ್ರಾ ಜಿಲ್ಲಾ ಪಂಚಾಯತ್ ಸದಸ್ಯ ಕೃಷ್ಣ ಅನಗೋಳ್ಕರ್ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆಯಾಗಿದ್ದಾರೆ. 43 ಕಾಂಗ್ರೆಸ್ ಜಿ ಪಂ ಸದಸ್ಯರ ಪೈಕಿ 22 ಜನ ಸದಸ್ಯರು ನನ್ನ ಜತೆಗೆ ಇದ್ದಾರೆ. ಎಷ್ಟು ಜನ ರಾಜೀನಾಮೆ ಕೊಡುತ್ತಾರೆ ಗೊತ್ತಿಲ್ಲ ಎನ್ನುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ಕಾದಿದೆ ಎಂಬ ಸುಳಿವು ರಮೇಶ್ ಜಾರಕಿಹೊಳಿ ನೀಡಿದರು.
ಬೆಳಗಾವಿ ಜಿಲ್ಲೆ ವಿಭಜನೆಯಾಗಿ ಗೋಕಾಕ್ ಚಿಕ್ಕೋಡಿ ತಾಲೂಕು ರಚನೆ ಆಗಬೇಕು ಎನ್ನುವುದು ನಮ್ಮ ಬೇಡಿಕೆ ಸಹ ಇದೆ. ಆದರೆ, ಗಡಿ ಕೇಸದ ಸುಪ್ರೀಂ ಕೋರ್ಟ್ ನಲ್ಲಿ ಇದೆ. ಜಿಲ್ಲೆ ವಿಭಜನೆಗೆ ಅಡ್ಡಿಯಾಗಿದೆ ಎನ್ನುವುದನ್ನು ಸಚಿವ ಜಾರಕಿಹೊಳಿ ಒಪ್ಪಿಕೊಂಡರು.
Published by: G Hareeshkumar
First published: November 30, 2020, 3:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories