ಮಳೆ ಆಗದಿದ್ದರೆ ಜುಲೈ ಮೊದಲ ವಾರದಲ್ಲಿ ಮೋಡ ಬಿತ್ತನೆ; ಸಚಿವ ಆರ್​ ವಿ ದೇಶಪಾಂಡೆ

ರಾಜ್ಯದಲ್ಲಿ ಆವರಿಸಿರುವ ಬರ ನಿರ್ವಹಣೆಗೆ ಸರ್ಕಾರ ಸಿದ್ದವಾಗಿದ್ದು, ಬರ ಎದುರಿಸಲು ಯಾವುದೇ ಹಣದ ಕೊರತೆ ಇಲ್ಲ. ರೈತರಿಗೆ ಬೆಳೆ ನಷ್ಟವಾದ ಒಂದೇ ವಾರದೊಳಗೆ ಪರಿಹಾರ ನೀಡಲು ಸರ್ಕಾರ ತಿಳಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಿದ್ದೇವೆ.

Seema.R | news18
Updated:June 19, 2019, 6:51 PM IST
ಮಳೆ ಆಗದಿದ್ದರೆ ಜುಲೈ ಮೊದಲ ವಾರದಲ್ಲಿ ಮೋಡ ಬಿತ್ತನೆ; ಸಚಿವ ಆರ್​ ವಿ ದೇಶಪಾಂಡೆ
ಬರ ಅಧ್ಯಯನದಲ್ಲಿ ಆರ್​ ವಿ ದೇಶಪಾಂಡೆ
Seema.R | news18
Updated: June 19, 2019, 6:51 PM IST
ಚಾಮರಾಜನಗರ (ಜೂ.19): ಮುಂಗಾರು ಆರಂಭವಾಗಿದ್ದರೂ ರಾಜ್ಯದಲ್ಲಿ ಮಳೆ ಈವರೆಗೂ ನಿಗದಿತ ಪ್ರಮಾಣದಲ್ಲಿ ಸುರಿದಿಲ್ಲ. ಮಳೆಗಾಗಿ ಕೃಷಿಕರು ಎದುರು ನೋಡುತ್ತಿದ್ದಾರೆ. ನಾಡಿನೆಲ್ಲೆಡೆ ಬರ ಪರಿಸ್ಥಿತಿ ಎದುರಾಗಿದ್ದು, ನೀರಿಲ್ಲದೆ ಜನ-ಜಾನುವಾರುಗಳು ತತ್ತರಿಸಿವೆ. ಇದೇ ಪರಿಸ್ಥಿತಿ ಮುಂದುವರೆದರೆ ಜುಲೈ ಮೊದಲ ವಾರದಲ್ಲಿ ಮೋಡ ಬಿತ್ತನೆ ಕಾರ್ಯಕ್ಕೆ ಮುಂದಾಗುವುದಾಗಿ ಕಂದಾಯ ಸಚಿವ ಆರ್​ ವಿ ದೇಶಪಾಂಡೆ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಬರ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿರುವ ಅವರು, ಕಳೆದ 18 ವರ್ಷಗಳಲ್ಲಿ 13 ವರ್ಷ ಬರಗಾಲವೇ ಇದೆ. ಕೆರೆ ಕಟ್ಟೆಗಳು ಒಣಗಿದ್ದು, ಜಲಾಶಯಗಳಲ್ಲಿಯೂ ನೀರು ಡೆಡ್​ ಸ್ಟೋರೆಜ್​ ಹಂತಕ್ಕೆ ತಲುಪಿದೆ.

ಬರ ಅಧ್ಯಯನ ನಡೆಸಿದ ಕಂದಾಯ ಸಚಿವರು . ಚಿತ್ರ ಕೃಪೆ : ಆರ್​ ವಿ ದೇಶಪಾಂಡೆ ಟ್ವೀಟರ್​ ಖಾತೆ


ಜೂನ್​ ಮೊದಲ ವಾರದಿಂದ ಮಾನ್ಸೂನ್​ ರಾಜ್ಯಕ್ಕೆ ಆಗಮಿಸಬೇಕಿತ್ತು. ಆದರೆ, ಈ ಬಾರಿ ವಿಳಂಬವಾಗಿದ್ದು, ಬಿತ್ತನೆ ಕಾರ್ಯ ಇನ್ನು ಆರಂಭವಾಗಿಲ್ಲ. ರಾಜ್ಯದಲ್ಲಿ ಈವರೆಗೆ ಶೇ. 30ರಷ್ಟು ಬಿತ್ತನೆಯಾಗಿದ್ದು, ರೈತರು ಮಳೆಗಾಗಿ ಕಾಯುತ್ತಿದ್ದಾರೆ.

ರಾಜ್ಯದಲ್ಲಿ ಆವರಿಸಿರುವ ಬರ ನಿರ್ವಹಣೆಗೆ ಸರ್ಕಾರ ಸಿದ್ದವಾಗಿದ್ದು, ಬರ ಎದುರಿಸಲು ಹಣದ ಕೊರತೆ ಇಲ್ಲ. ಬರ ಹಿನ್ನೆಲೆ ರೈತರಿಗೆ ಬೆಳೆ ನಷ್ಟವಾದರೆ ಅದನ್ನು ಪೂರೈಸಲು ಸರ್ಕಾರ ಸಿದ್ಧವಾಗಿದೆ. ಬೆಳೆ ನಷ್ಟವಾದ ಒಂದೇ ವಾರದೊಳಗೆ ಪರಿಹಾರ ನೀಡಲು  ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ ಎಂದರು.

ಇದನ್ನು ಓದಿ:  ಕಾವೇರಿ ಕೊಳ್ಳದಲ್ಲಿ ಮಳೆಯ ಕೊರತೆ, ಪಾತಾಳಕ್ಕೆ ಕುಸಿದ ಕೆಆರ್​ಎಸ್​; 5 ಜಿಲ್ಲೆಗಳಲ್ಲಿ ಎದುರಾಗಲಿದೆ ಕುಡಿಯುವ ನೀರಿಗೂ ತತ್ವಾರ!
Loading...

ರಾಜ್ಯದಲ್ಲಿ ಇದೇ ರೀತಿಯ ಪರಿಸ್ಥಿತಿ ಮುಂದುವರೆದರೆ ಜುಲೈ ಮೊದಲ ವಾರದಿಂದ ಮೋಡ ಬಿತ್ತನೆ ಮಾಡಲಾಗುವುದು. ಕೃತಕ ಮೋಡ ಬಿತ್ತನೆ ಮಾಡುವ ಮೂಲಕ ಮಳೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದರು.

ಕಳೆದ ಒಂದು ತಿಂಗಳಿನಿಂದ ನಾಡಿನ ಬರ ಅಧ್ಯಯನ ನಡೆಸುತ್ತಿರುವ ಸಚಿವ ಆರ್​ ವಿ ದೇಶಪಾಂಡೆ, ಉತ್ತರ ಕರ್ನಾಟಕದಲ್ಲಿ ಬರಗಾಯ ಛಾಯೆ ಭೀಕರವಾಗಿದ್ದು, ಮಳೆ ಆಗಮಿಸದಿದ್ದರೆ ರೈತರ ಹಿತದೃಷ್ಟಿಯಿಂದ ಮೋಡ ಬಿತ್ತನೆಗೆ ಸಕಲ ತಯಾರಿ ನಡೆಸಲಾಗುವುದು ಎಂದು ಹೇಳಿದ್ದರು

First published:June 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...