HOME » NEWS » State » MINISTER R ASHOKA SLAMS AT KPCC PRESIDENT DK SHIVAKUMAR ON HIS STATEMENT ON BANGALORE VIOLENCE HK

ರಾಜಕೀಯವಾಗಿ ಹಲವು ಆಕಾಂಕ್ಷೆ ಇಟ್ಟುಕೊಂಡಿರುವ ನಿಮಗೆ ಇಂತಹ ಹೇಳಿಕೆ ತರವಲ್ಲ ; ಡಿಕೆಶಿಗೆ ಸಚಿವ ಆರ್.ಅಶೋಕ್ ತಿರುಗೇಟು

ಡಿಕೆ ಶಿವಕುಮಾರ್ ಅವರು ಬಸ್ ನಿಲ್ದಾಣ, ರೈಲ್ವೇ ಸ್ಟೇಶನ್ ಸೇರಿ ಇನ್ನೂ ಕೆಲ ಕಡೆ ಖಾಲಿ ಚೆಕ್ ಗಳನ್ನ ಹಿಡ್ಕೊಂಡು ಓಡಾಡಿದ್ದು ನೋಡಿದ್ದೇವೆ. ಆದರೆ, ಅದನ್ನ ಎಲ್ಲಿ ಬಳಸಿದರು ಗೊತ್ತಿಲ್ಲ

news18-kannada
Updated:August 17, 2020, 4:19 PM IST
ರಾಜಕೀಯವಾಗಿ ಹಲವು ಆಕಾಂಕ್ಷೆ ಇಟ್ಟುಕೊಂಡಿರುವ ನಿಮಗೆ ಇಂತಹ ಹೇಳಿಕೆ ತರವಲ್ಲ ; ಡಿಕೆಶಿಗೆ ಸಚಿವ ಆರ್.ಅಶೋಕ್ ತಿರುಗೇಟು
ಸಚಿವ ಆರ್. ಅಶೋಕ್
  • Share this:
ಬೆಂಗಳೂರು(ಆಗಸ್ಟ್​. 17): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಗೃಹ ಸಚಿವರ ವಿರುದ್ಧ ಮಾತಾಡಿದ್ದು ಸರಿಯಲ್ಲ. ರಾಜಕಾರಣದಲ್ಲಿ ಸಾಕಷ್ಟು ಆಸೆಗಳನ್ನ‌ ಇಟ್ಟುಕೊಂಡಿರುವ ನಿಮಗೆ ಇಂತಹ ಹೇಳಿಕೆಗಳಿಂದ ಹಿನ್ನಡೆಯಾಗುತ್ತದೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಅವರು ಎಸ್​ಡಿಪಿಐ, ಪಿಎಫ್​​ಐ ಬ್ಯಾನ್ ಮಾಡುವ ಬಗ್ಗೆ ಮಾತಾಡುತ್ತಿಲ್ಲ. ನಾವು ಬ್ಯಾನ್ ಮಾಡಿ ಅಂತಾ ಹೇಳುತ್ತಿದ್ದೇವೆ. ಕಾಂಗ್ರೆಸ್ ಮತ್ತು ಎಸ್ ಡಿಪಿಐ ಒಂದೇ ನಾಣ್ಯದ ಎರಡು ಮುಖಗಳು ಎಂದು ಕಂದಾಯ ಸಚಿವ ಆರ್​ ಅಶೋಕ್​​​ ಹೇಳಿದ್ದಾರೆ. 

ಕೋವಿಡ್ ನಿಯಂತ್ರಣಕ್ಕಾಗಿ 85.10 ಕೋಟಿ ರೂಪಾಯಿ ಹಣವನ್ನ30 ಜಿಲ್ಲೆಗಳಿಗೂ ಬಿಡುಗಡೆ ಮಾಡಲಾಗಿದೆ. ಕ್ವಾರಂಟೈನ್ ಸಮಯದಲ್ಲಿ ಒಂದು ಬ್ಯಾರಿಕೇಡ್ ಹಾಕಲಿಕ್ಕೆ 69 ಸಾವಿರ ಅಂತಾ ವರದಿಯಾಗಿದೆ. ಆ ರೀತಿಯ ಯಾವುದೇ ಬಿಲ್ ಆಗಿಲ್ಲ. ಅಂತಹದಕ್ಕೆ ನಾವು ಬಿಡಲ್ಲ. ಒಂದು ಕಡೆ ಹಾಕಿದ್ದ ಬ್ಯಾರಿಕೇಡ್ ನ್ನು ತೆಗೆದು ಮತ್ತೊಂದು ಕಡೆ ಹಾಕಬೇಕು. ಆದರೆ ಪ್ರತಿ ಬಾರಿಯೂ ಹೊಸದರ ಖರೀದಿಗೆ ಅವಕಾಶ ನೀಡಿಲ್ಲ ಎಂಧು ತಿಳಿಸಿದರು.

485 ಕೋಟಿ ರೂಪಾಯಿ ನಷ್ಟದ ಬಗ್ಗೆ ಯಾವುದೇ ವರದಿ ಇಲಾಖೆಗೆ ಹಾಗೂ ನನಗೆ ಬಂದಿಲ್ಲ. ಗ್ರಾಮೀಣಾಭಿವೃದ್ದಿ, ಲೊಕೋಪಯೋಗಿ, ತೋಟಗಾರಿಕಾ, ಕೃಷಿ ಇಲಾಖೆಗಳಿಂದ ವರದಿ ಬರಬೇಕು. ನೆರೆ ಹಾಗೂ ಅತೀವೃಷ್ಠಿಗೆ ಎಷ್ಟು ನಷ್ಟವಾಗಿದೆ ಅನ್ನೋದರ ಮಾಹಿತಿ ಬರಬೇಕು. ಐದು ಇಲಾಖೆಗಳ ವರದಿ ನನಗೆ ಬರಬೇಕು. ಆದರೆ ಬಂದಿಲ್ಲ. ಹಾಗಾಗಿ 485 ಕೋಟಿ ನಷ್ಟಾಗಿದೆ ಎನ್ನುವ ಸುದ್ದಿ ಎಲ್ಲಿಂದ ಬಂತು ಗೊತ್ತಿಲ್ಲ. ಯಾರು ಕೊಟ್ರು ಗೊತ್ತಿಲ್ಲ. ಈ ಬಗ್ಗೆ ಮುಖ್ಯಕಾರ್ಯದರ್ಶಿಗಳಿಗಳು ಕೂಡ ನನಗೆ ಗೊತ್ತಿಲ್ಲ ಅಂತಾ ಮಾಹಿತಿ ನೀಡಿದ್ದಾರೆ. 4 ಸಾವಿರ ಕೋಟಿ ರೂಪಾಯಿ ಕೊಡಿ ಎಂದು ಕೇಂದ್ರ ಸರ್ಕಾರಕ್ಕೆ ಈಗಾಗಲೆ ಮನವಿ ಮಾಡಿದ್ದೇವೆ ಎಂದರು.

ಡಿಕೆಶಿ ಕೋವಿಡ್ ಖರೀದಿ ಅಕ್ರಮದ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಡಿಕೆ ಶಿವಕುಮಾರ್ ಅವರು ಬಸ್ ನಿಲ್ದಾಣ, ರೈಲ್ವೇ ಸ್ಟೇಶನ್ ಸೇರಿ ಇನ್ನೂ ಕೆಲ ಕಡೆ ಖಾಲಿ ಚೆಕ್ ಗಳನ್ನ ಹಿಡ್ಕೊಂಡು ಓಡಾಡಿದ್ದು ನೋಡಿದ್ದೇವೆ. ಆದರೆ, ಅದನ್ನ ಎಲ್ಲಿ ಬಳಸಿದರು ಗೊತ್ತಿಲ್ಲ. ಅದರ ಬದಲಿಗೆ ಸಿಎಂ, ಪಿಎಂ ಪರಿಹಾರ ನಿಧಿಗೆ ನೀಡಬಹುದಿತ್ತು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಬಗ್ಗೆ ಡಿಕೆಶಿ ಏಕವಚನದಲ್ಲಿ ಮಾತಾಡಿದ್ದಾರೆ. ಅದು ಸರಿಯಲ್ಲ.‌ ಕೇಸ್ ಹಾಕಬೇಕು, ಹಾಕಬಾರದು ಅಂತಾ ಹೇಳಲಿಕ್ಕೆ ನಿಮಗೆ ಯಾವ ಅಧಿಕಾರವಿದೆ ಎಂದು ಡಿಕೆ ಶಿವಕುಮಾರ್​ಗೆ ಅಶೋಕ ತಿರುಗೇಟು ನೀಡಿದರು.

ಇದನ್ನೂ ಓದಿ : ಎನ್​​​ಇಕೆಆರ್​ಟಿಸಿ ನಿಗಮದ ಅಧ್ಯಕ್ಷರಾಗಲು ಹಿಂದೇಟು ; ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ನಡೆ ನಿಗೂಢ

ನಮ್ಮ‌ ಸಮಾಜದಿಂದ ಅವರಿಗೆ ಮನೆ, ಕಾರು ಕೊಡ್ತೇವೆ ಎಂದ ಜಮೀರ್ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಕೊತಂಬಿರಿ ಸೊಪ್ಪು ರಾತ್ರಿ ಒಂದು ಗಂಟೆಗೆ ಸಿಗುತ್ತಾ. ಕಾಂಗ್ರೆಸ್ ನವರು ಕೊತ್ತಂಬರಿ, ಕರಿಬೇವು ಸೊಪ್ಪು ಕತೆಯನ್ನು ಮೊದಲಲು ಬಿಡಿ. ಕಾರಣ ಇಲ್ಲದೇ ನಡೆದ ಘಟನೆ ಇದು. ಕಾಂಗ್ರೆಸ್ ನ ಒಳ ಜಗಳದ ದಳ್ಳೂರಿಯಿಂದಾಗಿ ಗಲಭೆ ನಡೆದು ಬೆಂಗಳೂರಿಗೆ ಕಪ್ಪುಚುಕ್ಕೆ ಮಾಡುವ ಹಾಗಾಯಿತು. ಅಡಕೆಗೆ ಹೋದ ಮಾನ ಆನೆ ಕೊಟ್ರು ಬರಲ್ಲ. ಮಾತು ಆಡಿದರೆ ಹೋಯ್ತು.‌ಮುತ್ತು ಒಡೆದ್ರೆ ಹೋಯ್ತು ಅನ್ನೋ ಹಾಗೆ ಆಗಿದೆ ಎಂದರು.
ಪೊಲೀಸ್ ಇಲಾಖೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಗೆ ನಾವು ಬಿಜೆಪಿ ಕರೆಯುವುದಿಲ್ಲ. ಅವರಿಗೆ ಬಿಜೆಪಿಗೆ ಸೇರಿಸಿಕೊಳ್ಳುವ ಪ್ರಸ್ತಾವನೆಯೂ ಇಲ್ಲ. ಅದರ ಅವಶ್ಯಕತೆಯೂ ಇಲ್ಲ ಎಂದು ತಿಳಿಸಿದರು.
Published by: G Hareeshkumar
First published: August 17, 2020, 4:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories