ಸಚಿವರ ಗ್ರಾಮ ವಾಸ್ತವ್ಯ: ದೊಡ್ಡಬಳ್ಳಾಪುರದ ಗ್ರಾಮವೊಂದಕ್ಕೆ ಭೇಟಿ ನೀಡಲಿರುವ ಆರ್.ಅಶೋಕ್

ಇನ್ನು, ಮಹಿಳಾ ಡಿಸಿಗಳು ಗ್ರಾಮ ವಾಸ್ತ್ಯವಕ್ಕೆ ಒಪ್ಪಿದ್ದಾರೆ. ಪ್ರವಾಹ ಸಂತ್ರಸ್ಥರ ಸಮಸ್ಯೆಯನ್ನೂ ಬಗೆಹರಿಸ್ತಾರೆ. ಕೆಲವು ಕಡೆ ಕಾಲು ದಾರಿಗಳಿಲ್ಲ. ಅಂತಹ ಕಡೆ ಕಾಲು ದಾರಿಗಳನ್ನ ಮಾಡಬೇಕು. ಡಿಸಿಗಳು ಅಲ್ಲಿ ತೆರಳಿ ಸಮಸ್ಯೆ ಬಗೆಹರಿಸಬೇಕು. ಜನಪ್ರತಿನಿಧಿಗಳು ಕೂಡ 1 ಗಂಟೆ ಭಾಗಿಯಾಗಬೇಕು ಎಂದು ಹೇಳಿದರು.

ಸಚಿವ ಆರ್​.ಅಶೋಕ್

ಸಚಿವ ಆರ್​.ಅಶೋಕ್

 • Share this:
  ಬೆಂಗಳೂರು(ಫೆ.16): ಟಿವಿ, ರೆಫ್ರಿಜರೇಟರ್ ಹಾಗೂ ಬೈಕ್ ಇರುವ ಮನೆಗಳ ಬಿಪಿಎಲ್ ಕಾರ್ಡ್​ ರದ್ದು ಮಾಡಬೇಕು ಎಂದು ಹೇಳಿದ್ದ ಸಚಿವ ಉಮೇಶ್​ ಕತ್ತಿ ಅವರಿಗೆ ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ. ರೇಡಿಯೋ ಈಗ ಔಟ್ ಡೇಟೆಡ್ ಆಗಿದೆ. ಟಿವಿ ಎಲ್ಲರ ಮನೆಯಲ್ಲೂ ಇರುತ್ತೆ. ಇದನ್ನ ಮಾನದಂಡವಾಗಿ ಇಟ್ಟುಕೊಳ್ಳುವುದು ಸರಿಯಲ್ಲ. ಇವತ್ತು 5 ಸಾವಿರಕ್ಕೂ ಟಿವಿ ಸಿಗುತ್ತೆ. ಮೊಬೈಲ್, ಟಿವಿ ಅವಶ್ಯಕತೆ ಇರುವಂತದ್ದು. ಈ ಕುರಿತಾಗಿ ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ನಮ್ಮ ಸಚಿವರು ಯಾವ ಸಂದರ್ಭದಲ್ಲಿ ಹೇಳಿದ್ದಾರೋ, ಅವರಿಗೂ ಅಂತಹ ಅಭಿಪ್ರಾಯವಿಲ್ಲ ಎಂದು ಹೇಳುವ ಮೂಲಕ ಉಮೇಶ್​ ಕತ್ತಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

  ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಚಿವ ಆರ್​.ಅಶೋಕ್,  43 ಐಎಎಸ್ ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ, ಸಿಎಂ ಅವರು ಇದರ ತೀರ್ಮಾನ ತೆಗೆದುಕೊಂಡಿದ್ದಾರೆ. ಅವರ ತೀರ್ಮಾನಕ್ಕೆ ನನ್ನ ಸಹಮತವಿದೆ. ಅನಿವಾರ್ಯವಲ್ಲ, ಮುಕ್ತವಾಗಿಯೇ ಒಪ್ಪಿಕೊಂಡಿದ್ದೇನೆ ಎಂದರು.

  ಗ್ರಾಮ ವಾಸ್ತವ್ಯಕ್ಕೆ ಸೂಚನೆ

  ಮುಂದುವರೆದ ಅವರು, ಡಿಸಿಗಳ ಜೊತೆ ಸಭೆ ನಡೆಸಿದ್ದೇವೆ. ಕಂದಾಯ ಇಲಾಖೆ ಮಾತೃ ಇಲಾಖೆ. ಜನರ ಬಳಿಗೆ ಈ ಇಲಾಖೆ ಕೊಂಡೊಯ್ಯುತ್ತೇವೆ. ಮೂರನೇ ಶನಿವಾರ ಅಧಿಕಾರಿಗಳು ಹಳ್ಳಿಗಳಲ್ಲಿ ಇರಬೇಕು. ವಿಸಿಂಟಿಂಗ್ ಅಧಿಕಾರಿಗಳಾಗಿ ಹೋಗಬಾರದು. ಅಲ್ಲಿನ ಸಮಸ್ಯೆಗಳನ್ನ ಅರಿಯಬೇಕು. ಜನರ ಸಮಸ್ಯೆಗಳನ್ನ ಅರಿತು ಪರಿಹರಿಸಬೇಕು. ಹಳ್ಳಿಗರಿಗೆ ಕಚೇರಿ ಅಲೆಯುವುದಕ್ಕೆ ಸಾಧ್ಯವಿಲ್ಲ. ಅದಕ್ಕೆ ಫೆ. 20 ರಂದು 227 ಕಡೆ ಅಧಿಕಾರಿಗಳು ಹೋಗ್ತಾರೆ. ಪ್ರತಿ ತಾಲೂಕಿಗೆ ತಹಸೀಲ್ದಾರ್, ಎಸಿ ಭೇಟಿ ನೀಡ್ತಾರೆ. ಬೆಳಗ್ಗೆ 10ರಿಂದಲೇ ಅವರ ಕಾರ್ಯಕ್ರಮ ಸ್ಟಾರ್ಟ್ ಆಗುತ್ತೆ ಎಂದು ಹೇಳಿದರು.

  ಬಾಹ್ಯಾಕಾಶಕ್ಕೆ ಭಗವದ್ಗೀತೆ, ಪ್ರಧಾನಿ ಮೋದಿ ಭಾವಚಿತ್ರ ಹೊತ್ತೊಯ್ಯಲಿರುವ ನ್ಯಾನೋ ಸ್ಯಾಟಲೈಟ್; ಏನಿದರ ವಿಶೇಷತೆ ಗೊತ್ತಾ..?

  ಅಂಗವಿಕಲರನ್ನ ಗುರ್ತಿಸಬೇಕು. ಕಣ್ಣಿಲ್ಲದವರು, ಪಿಂಚಣಿಯವರನ್ನ ಭೇಟಿ ಮಾಡಬೇಕು. ಅವರ ಸಮಸ್ಯೆಗಳನ್ನ ಪರಿಹರಿಸಬೇಕು. ಸರ್ಕಾರಿ ಭೂಮಿ ಗುರ್ತಿಸಿ ಅಲ್ಲಿ ಗಿಡ ನೆಡಬೇಕು. ಯಾವ ಗ್ರಾಮಕ್ಕೆ‌ ಹೋಗ್ತಾರೆ ಅಲ್ಲಿ ಸ್ಕೂಲಲ್ಲೇ ಮಲಗಬೇಕು.  ಹಾಸ್ಟೆಲ್ ಗಳಲ್ಲೇ ಪುರುಷ ಡಿಸಿ, ಎಸಿಗಳು ಮಲಗಬೇಕು. ಮಲಗಿ ಅಲ್ಲಿನ ಸಮಸ್ಯೆ ಬಗೆಹರಿಸಬೇಕು ಎಂದು ಸೂಚನೆ ನೀಡಿದರು.

  ಇನ್ನು, ಮಹಿಳಾ ಡಿಸಿಗಳು ಗ್ರಾಮ ವಾಸ್ತ್ಯವಕ್ಕೆ ಒಪ್ಪಿದ್ದಾರೆ. ಪ್ರವಾಹ ಸಂತ್ರಸ್ಥರ ಸಮಸ್ಯೆಯನ್ನೂ ಬಗೆಹರಿಸ್ತಾರೆ. ಕೆಲವು ಕಡೆ ಕಾಲು ದಾರಿಗಳಿಲ್ಲ. ಅಂತಹ ಕಡೆ ಕಾಲು ದಾರಿಗಳನ್ನ ಮಾಡಬೇಕು. ಡಿಸಿಗಳು ಅಲ್ಲಿ ತೆರಳಿ ಸಮಸ್ಯೆ ಬಗೆಹರಿಸಬೇಕು. ಜನಪ್ರತಿನಿಧಿಗಳು ಕೂಡ 1 ಗಂಟೆ ಭಾಗಿಯಾಗಬೇಕು ಎಂದು ಹೇಳಿದರು.

  ದೊಡ್ಡಬಳ್ಳಾಪುರದ ಗ್ರಾಮವೊಂದರಲ್ಲಿ ಆರ್.ಅಶೋಕ್ ವಾಸ್ತವ್ಯ

  ಜೊತೆಗೆ ಜನರಿಂದ ಡಿಸಿಗಳು ಅಹವಾಲು ಸ್ವೀಕರಿಸಬೇಕು. ನಂತರ ಅಲ್ಲೇ ಅವರ ಸಮಸ್ಯೆ ಬಗೆಹರಿಸಬೇಕು.  ಅಧಿಕಾರಿಗಳನ್ನ ಹಳ್ಳಿಗೆ ಕೊಂಡೊಯ್ಯಬೇಕು. ಈ ನಿಟ್ಟಿನಲ್ಲಿ ಕಂದಾಯ ಇಲಾಖೆ ಗಮನಹರಿಸಿದೆ. ನಾನು ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ಮಾಡ್ತೇನೆ. ಚಕ್ಕಡಿಯಲ್ಲಿ ಹೋಗಿ ದೇವರ ದರ್ಶನ ಮಾಡ್ತೇನೆ. ದಲಿತ ಕೇರಿಯ ಸಮಸ್ಯೆಗಳನ್ನ ಆಲಿಸುತ್ತೇನೆ. ನಂತರ ಹಳ್ಳಿಯ ಎಲ್ಲಾ ಮನೆಗಳಿಗೆ ಭೇಟಿ ನೀಡ್ತೇನೆ. ಅದೇ ಹಳ್ಳಿಯಲ್ಲಿ ಆರೋಗ್ಯ ಶಿಬಿರ ನಡೆಯುತ್ತೆ ಎಂದರು.

  ಇನ್ನು, ಅಲ್ಲಿನ ಸ್ಥಳೀಯ ಶಾಸಕರ ಜೊತೆ ಚರ್ಚಿಸುತ್ತೇನೆ. ಸಮಸ್ಯೆಗಳನ್ನ ಸರಿಪಡಿಸುತ್ತೇನೆ ರಾತ್ರಿ ಸ್ಥಳೀಯ ಕಲಾವಿದರ ಜೊತೆ ಕೂರುತ್ತೇನೆ. ರಾತ್ರಿ ಒಬಿಸಿ ಹಾಸ್ಟೆಲ್ ನಲ್ಲೇ ವಾಸ್ತವ್ಯ ಹೂಡುತ್ತೇನೆ ಎಂದು ಮಾಹಿತಿ ನೀಡಿದರು.
  Published by:Latha CG
  First published: