ಪ್ರವಾಹ ಸಂತ್ರಸ್ತರಿಗೆ ಸಂತೈಸಿದ ಆರ್. ಅಶೋಕ್; ಪರಿಹಾರದ ವಿಚಾರದಲ್ಲಿ ಮೊಣಕೈಗೆ ತುಪ್ಪ ಸವರಿ ಹೋದ ಸಚಿವರು

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕು ಕೇಂದ್ರದಿಂದ 40ಕಿ.ಮೀ ದೂರವಿರುವ ದೇವಳಮೆಕ್ಕಿ ಗ್ರಾ.ಪಂ ವ್ಯಾಪ್ತಿಗೆ ಬರುವ ನಗೆ ಊರಿನಲ್ಲಿ ಭೂ ಕುಸಿತ ಉಂಟಾಗಿದೆ. 25 ಎಕರೆ ಕೃಷಿ ಭೂಮಿ ಗುಡ್ಡ ಕುಸಿತದ ಮಣ್ಣಿಗೆ ತೋಯ್ದು ಹಾನಿ ಆಗಿದೆ. ಕಳೆದ ಮೂರು ದಿನದಿಂದ ಸುರಿಯುತ್ತಿರುವ ಮಳೆಯಿಂದ ಭೂಮಿ ಮಣ್ಣು ಸಡಿಲಗೊಂಡು ಕುಸಿತವಾಗಿದೆ.

news18-kannada
Updated:August 7, 2020, 7:07 PM IST
ಪ್ರವಾಹ ಸಂತ್ರಸ್ತರಿಗೆ ಸಂತೈಸಿದ ಆರ್. ಅಶೋಕ್; ಪರಿಹಾರದ ವಿಚಾರದಲ್ಲಿ ಮೊಣಕೈಗೆ ತುಪ್ಪ ಸವರಿ ಹೋದ ಸಚಿವರು
ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಸಚಿವ ಆರ್​. ಅಶೋಕ್​
  • Share this:
ಕಾರವಾರ(ಆ.07): ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಸ್ಥಳಕ್ಕೆ ರಾಜ್ಯ ಕಂದಾಯ ಸಚಿವ ಆರ್.ಅಶೋಕ್​ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಶರಾವತಿ ನದಿಯ ಉಪನದಿ ಗುಂಡಬಾಳ ನದಿ ಪ್ರವಾಹಕ್ಕೆ ಸಿಲುಕಿದ ಕುಟುಂಬದವರ ಜತೆ ಮಾತನಾಡಿದರು. ಕಾಳಜಿ ಕೇಂದ್ರದಲ್ಲಿ ಇದ್ದ ನೂರಕ್ಕೂ ಹೆಚ್ಚು ಜನರನ್ನು ಮಾತನಾಡಿಸಿ ಸಾಂತ್ವಾನಿಸಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಹಾನಿ ಆದ ಮನೆಗಳಿಗೆ ಕೂಡಲೇ ಪರಿಹಾರ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ದುರಂತ ಎಂದ್ರೆ ಸಚಿವರು ಬರುತ್ತಾರೆ ಎಂಬ ಸುದ್ದಿ ತಿಳಿದ ಮೇಲೆ ಕಾಳಜಿ ಕೇಂದ್ರಕ್ಕೆ ಸಂತ್ರಸ್ತರು ಆಗಮಿಸಿದ್ದರು. ಮಳೆ ನಿಂತ ಮೇಲೆ ತಮ್ಮ ತಮ್ಮ ಮನೆಗೆ ತೆರಳಿದ ಜನರು ಸಚಿವರು ಬರುತ್ತಾರೆ ಅಂದ್ಮೇಲೆ, ಓಡೋಡಿ ಬಂದು ಕಾಳಜಿ ಕೇಂದ್ರ ಸೇರಿಕೊಂಡು ತಮ್ಮ ತಮ್ಮ ಕಷ್ಟ ಹೇಳಿಕೊಂಡರು. ಇನ್ನು ಜಿಲ್ಲೆಯಲ್ಲಿ ಕಳೆದ ವರ್ಷ ಸಂಭವಿಸಿದ ಕಾಳಿ, ಗಂಗಾವಳಿ, ಅಘನಾಶಿನಿ ನದಿ ಪ್ರವಾಹದಲ್ಲಿ ಮನೆ ಮಠ ಕಳೆದುಕೊಂಡ ಸಂತ್ರಸ್ತರಿಗೆ ಇನ್ನು ಕೂಡಾ ಸಮರ್ಪಕ ಪರಿಹಾರ ಸಿಗದೆ ಪರದಾಟ ನಡೆಸುತ್ತಿದ್ದಾರೆ. ಇವರಿಗೆ ಪರಿಹಾರ ಕೊಡುತ್ತೇವೆ, ಸರಕಾರದ ಬಳಿ ಹಣ ಇದೆ ಎಂದರು.

ಬೆಂಗಳೂರು ಹೈಫೈ ಕಮರ್ಷಿಯಲ್ ಸ್ಟ್ರೀಟ್ ಬ್ಯುಸಿನೆಸ್ ಡಲ್; ಲಕ್ಷಾಂತರ‌ ಬಾಡಿಗೆ ಕಟ್ಟದೆ ಚರ್ಚ್ ಸ್ಟ್ರೀಟ್​ನ ಹಲವು ಶಾಪ್ ಕ್ಲೋಸ್

ಆದ್ರೆ ಈಗ ಈ ಭರವಸೆ ನೀಡುವ ಮೂಲಕ ಸಂತ್ರಸ್ತರ ಮೊಣಕೈಗೆ ತುಪ್ಪ ಹಚ್ಚಿ ಹೋಗಿದ್ದಾರೆ ಸಚಿವರು. ಈಗಲೂ ಕೂಡಾ ಕಳೆದ ವರ್ಷ ನೀಡಿದ್ದ ಭರವಸೆಯನ್ನೇ ಈಗಲೂ ನೀಡಿದ್ದಾರೆ. ಆದರೆ ಪರಿಹಾರ ಯಾವಾಗ ಬರುತ್ತದೆ ಎನ್ನುವುದೇ ಪ್ರಶ್ನೆಯಾಗಿ ಉಳಿದುಕೊಂಡಿದೆ. ಕೆಲಹೊತ್ತು ಇಲ್ಲಿನ ಜನರ ಜತೆ ನೆಲದ ಮೇಲೆ ಕುಂತು ಕಷ್ಟ ಸುಖ ವಿಚಾರಿಸಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಮಳೆಗೆ ಗುಡ್ಡ ಕುಸಿತ

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕು ಕೇಂದ್ರದಿಂದ 40ಕಿ.ಮೀ ದೂರವಿರುವ ದೇವಳಮೆಕ್ಕಿ ಗ್ರಾ.ಪಂ ವ್ಯಾಪ್ತಿಗೆ ಬರುವ ನಗೆ ಊರಿನಲ್ಲಿ ಭೂ ಕುಸಿತ ಉಂಟಾಗಿದೆ. 25 ಎಕರೆ ಕೃಷಿ ಭೂಮಿ ಗುಡ್ಡ ಕುಸಿತದ ಮಣ್ಣಿಗೆ ತೋಯ್ದು ಹಾನಿ ಆಗಿದೆ. ಕಳೆದ ಮೂರು ದಿನದಿಂದ ಸುರಿಯುತ್ತಿರುವ ಮಳೆಯಿಂದ ಭೂಮಿ ಮಣ್ಣು ಸಡಿಲಗೊಂಡು ಕುಸಿತವಾಗಿದೆ.

ಇಲ್ಲಿ‌ಬೆಳೆದ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ. ಇಲ್ಲಿನ ‌ಜನ ಆತಂಕದಲ್ಲಿ ಇದ್ದಾರೆ. ನಗೆ ಊರು ತೀರಾ ಹಿಂದುಳಿದ ಗ್ರಾಮವಾಗಿದ್ದು, ಇಲ್ಲಿನ‌ ಜನ ಭತ್ತ ಬೆಳೆಯನ್ನೆ ನಂಬಿ ಬದುಕುತ್ತಿದ್ದಾರೆ. ಈ‌ ನಡುವೆ ಕೃಷಿ ಭೂಮಿಗೆ ಹೊಂದಿಕೊಂಡ ಗುಡ್ಡದ ಮಣ್ಣು ಕುಸಿತವಾಗಿ ಮಣ್ಣು ಕೃಷಿ ಭೂಮಿ ಆವರಿಸಿದೆ

.

ಸುಮಾರು ಆರು ಎಕರೆ ಭೂ ಕುಸಿತ ಉಂಟಾಗಿ ಕೃಷಿ ಜಮೀನು ಮಣ್ಣು ಪಾಲಾಗಿದೆ. ಸಾವಿರಾರು ರೂ ವೆಚ್ಚ ಮಾಡಿ ಭತ್ತ ಬೆಳೆದ ರೈತ ಕಂಗಾಲಾಗಿದ್ದಾನೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಾಗಿದೆ. ಈ ಘಟನೆ ಹಿಂದೆಂದು ಕಂಡು ಕಾಣರಿಯದ್ದಾಗಿದೆ. ಈ ಹಿನ್ನಲೆಯಲ್ಲಿ ಜನ ಕಂಗಾಲು ಬಿದ್ದು ದಿಕ್ಕು ತೋಚದಂತಾಗಿದ್ದಾರೆ.
Published by: Latha CG
First published: August 7, 2020, 7:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading