• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Kodagu: ಭೂಕುಸಿತ, ಭೂಕಂಪ! ಅಗತ್ಯ ಬಿದ್ದರೆ ಮನೆ ಮನೆಗೆ ಸೆಕ್ಯುರಿಟಿ ಭರವಸೆ ಕೊಟ್ಟ ಸರ್ಕಾರ

Kodagu: ಭೂಕುಸಿತ, ಭೂಕಂಪ! ಅಗತ್ಯ ಬಿದ್ದರೆ ಮನೆ ಮನೆಗೆ ಸೆಕ್ಯುರಿಟಿ ಭರವಸೆ ಕೊಟ್ಟ ಸರ್ಕಾರ

ಕೊಡಗಿಗೆ ಭೇಟಿ ಕೊಟ್ಟ ಸಚಿವ ಆರ್. ಅಶೋಕ್

ಕೊಡಗಿಗೆ ಭೇಟಿ ಕೊಟ್ಟ ಸಚಿವ ಆರ್. ಅಶೋಕ್

ಭೂಕಂಪನಕ್ಕೆ (Earthquake) ಜಿಲ್ಲೆಯ ಜನತೆ ಯಾವುದೇ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ (R. Ashok) ಹೇಳಿದ್ದಾರೆ. ಕೊಡಗು ಜಿಲ್ಲೆಯ ಮಡಿಕೇರಿ (Madikeri) ತಾಲ್ಲೂಕಿನ ಚೆಂಬು ಗ್ರಾಮದಲ್ಲಿ ಭೂಕಂಪನ ಆಗಿರುವ ಸ್ಥಳಕ್ಕೆ ಸಚಿವ ಆರ್ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮುಂದೆ ಓದಿ ...
  • Share this:

ಕೊಡಗು(ಜು.08): ಕೊಡಗು ಜಿಲ್ಲೆಯಲ್ಲಿ ಆಗಿರುವ ಭೂಕಂಪನಕ್ಕೆ (Earthquake) ಜಿಲ್ಲೆಯ ಜನತೆ ಯಾವುದೇ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ (R. Ashok) ಹೇಳಿದ್ದಾರೆ. ಕೊಡಗು ಜಿಲ್ಲೆಯ ಮಡಿಕೇರಿ (Madikeri) ತಾಲ್ಲೂಕಿನ ಚೆಂಬು ಗ್ರಾಮದಲ್ಲಿ ಭೂಕಂಪನ ಆಗಿರುವ ಸ್ಥಳಕ್ಕೆ ಸಚಿವ ಆರ್ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಅವರು ಈಗಾಗಲೇ ಹೈದರಾಬಾದ್ ನಿಂದ 5 ಹಿರಿಯ ವಿಜ್ಞಾನಿಗಳ ತಂಡ ಜಿಲ್ಲೆಗೆ ಬಂದಿದೆ. ಅವರು ಈಗಾಗಲೇ ಚೆಂಬು ಗ್ರಾಮದ ಸುತ್ತಮುತ್ತ ಅಧ್ಯಯನ ನಡೆಸಿದ್ದಾರೆ.


ಸಿಸ್ಮೋ ಮೀಟರ್ ನಲ್ಲಿ ಕೇವಲ ಒಂದು, ಎರಡು ಅಥವಾ ಮೂರು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಇದರಿಂದ ಯಾವುದೇ ಸಮಸ್ಯೆ ಇಲ್ಲ. ಇದೆಲ್ಲಾ ಪ್ರಕೃತಿಯಲ್ಲಿ ನಡೆಯುವ ಸ್ವಾಭಾವಿಕ ಕ್ರಿಯೆ ಎಂದು ಹೇಳಿದ್ದಾರೆ. ಆದ್ದರಿಂದ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಸರ್ಕಾರ ಸಂಪೂರ್ಣ ಜನರ ಜೊತೆ ಇದೆ. ಒಂದು ವೇಳೆ ಏನಾದರೂ ಸಮಸ್ಯೆ ಎದುರಾದರೆ   ಸರ್ಕಾರ ಜನರನ್ನು ಸಂಪೂರ್ಣ ಇಲ್ಲಿಂದ ಸ್ಥಳಾಂತರ ಮಾಡುವುದಕ್ಕೂ ಸಿದ್ಧವಿದೆ.


ಪ್ರತಿ ಮನೆಗೆ ಸೆಕ್ಯುರಿಟಿ ಭರವಸೆ


ಜೊತೆಗೆ ಮನೆಗಳನ್ನು ಖಾಲಿ ಮಾಡಿ ಹೋಗುವುದು ಹೇಗೆ ಎಂಬ ಭಯ ಜನರಿಗಿದ್ದರೆ ಪ್ರತೀ ಮನೆಗೆ ಸರ್ಕಾರ ಸೆಕ್ಯುರಿಟಿ ಕೂಡ ಕೊಡಲಿದೆ ಎಂದಿದ್ದಾರೆ. ಇನ್ನು ಮಳೆಯಿಂದಾಗಿ ಈಗಾಗಲೇ ಜಿಲ್ಲೆಯಲ್ಲಿ 44 ಮನೆಗಳು ಹಾನಿಯಾಗೀಡಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


1000 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕೆ


ಎನ್ ಡಿಆರ್ ಎಫ್  ನಿಯಮಗಳ ಪ್ರಕಾರ 95 ಸಾವಿರ ಮತ್ತು ರಾಜ್ಯ ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ. ಮತ್ತೊಂದೆಡೆ ಜಿಲ್ಲೆಯಲ್ಲಿ 1000 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಆದರೆ ಜಿಲ್ಲಾಡಳಿತ ಮತ್ತು ಸರ್ಕಾರ ತಕ್ಷಣವೇ ಕಾರ್ಯ ಪ್ರವೃತವಾಗಿ ಕಾರ್ಯಾಚರಣೆ ಮಾಡುತ್ತಿದೆ ಎಂದು ಆರ್ ಅಶೋಕ್ ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: Guruji Murder Case: ಕೊಲೆ ನಡೆದಿದ್ದ ಹೋಟೆಲ್​ಗೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ, ಸಿಬ್ಬಂದಿಗೆ ಫುಲ್ ಕ್ಲಾಸ್


ಇದಕ್ಕೂ ಮೊದಲು ಗ್ರಾಮದಲ್ಲಿ ಮಳೆ ಮತ್ತು ಭೂಕುಸಿತದಿಂದ ಹಾನಿಗೀಡಾದ ವಿವಿಧ ಮನೆಗಳ ಕುಟುಂಬಗಳಿಗೆ ಸ್ಥಳದಲ್ಲಿಯೇ ಪರಿಹಾರ ಚೆಕ್ ವಿತರಿಸಿದರು. ಭೂಕಂಪನವಾದ ಎರಡೇ ದಿನಗಳಲ್ಲಿ ಭೂಕುಸಿತದಿಂದ ಮನೆ ಹಾನಿಗೀಡಾಗಿದ್ದ ಅಕ್ಕಮ್ಮ ಎಂಬುವರಿಗೆ ಸಚಿವ ಅಶೋಕ್ ಅವರು ಸ್ಥಳದಲ್ಲಿಯೇ ಚೆಕ್ ವಿತರಿಸಿದರು. ಬಳಿಕ ಚೆಂಬು ಗ್ರಾಮ ಪಂಚಾಯಿತಿಯಲ್ಲಿ ಹೈದರಾಬಾದ್ ನಿಂದ ಬಂದಿದ್ದ ಐದು ವಿಜ್ಞಾನಿಗಳು ಮತ್ತು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಗ್ರಾಮದ ಜನರ ಜೊತೆಗೆ ಸಭೆ ನಡೆಸಿದರು.


ಭೂಕುಸಿತದ ಬಗ್ಗೆ ಆತಂಕ ಬೇಡ


ಆ ಮೂಲಕ ಗ್ರಾಮದ ಜನರಿಗೆ ಭೂಕಂಪನ ಮತ್ತು ಭೂಕುಸಿತದ ಬಗ್ಗೆ ಆತಂಕ ಬೇಡ ಎಂದು ಮನವರಿಕೆ ಮಾಡಿದರು. ಇದೇ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಸದ್ಯ ಕಳೆದ ಒಂದು ವಾರದಿಂದ ಭೂಕಂಪನವಾಗುತ್ತಿಲ್ಲ. ಇದರಿಂದ ಆತಂಕ ಕಡಿಮೆಯಾಗಿದೆ.


ಇದನ್ನೂ ಓದಿ: Rain Update: ರಾಜ್ಯಾದ್ಯಂತ ನಿಲ್ಲದ ಮಳೆಯ ಆರ್ಭಟ; ಇನ್ನೂ 5 ದಿನಗಳ ಕಾಲ ಭಾರೀ ಮಳೆ


ಆದರೆ ತೀವ್ರ ಮಳೆ ಸುರಿಯುತ್ತಿರುವುದರಿಂದ ಭೂಮಿಯಲ್ಲಿ ಒರತೆ ಜಾಸ್ತಿಯಾಗಿದ್ದು, ಭೂಮಿ ಕುಸಿಯುವ ಆತಂಕವಿದೆ ಎಂದಿದ್ದಾರೆ. ಒಟ್ಟಿನಲ್ಲಿ ಕೊಡಗಿನಲ್ಲಿ ಮಳೆ ಇನ್ನೂ ಎರಡು ತಿಂಗಳು ಕಾಲ ಸುರಿಯಲಿದ್ದು ಇನ್ನೂ ಏನು ಅನಾಹುತ ಕಾದಿದೆಯೋ ಎಂಬ ಆತಂಕ ಇದ್ದೇ ಇದೆ.

top videos
    First published: