ಬೆಳಗಾವಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಇದೇ ಮೊದಲಬಾರಿ ಭೇಟಿ ನೀಡಿದ ಸಚಿವ ಆರ್​ ಅಶೋಕ್​

ತರಾತುರಿಯಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ಮುಗಿಸಿದ ಅವರ ಕ್ರಮಕ್ಕೆ ಖಂಡನೆ ವ್ಯಕ್ತವಾಯಿತು. ಎಲ್ಲಾ ಮುಗಿದ ಮೇಲೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದುಮ ಸಚಿವರು ಬೇಕಾಬಿಟ್ಟಿ ವೀಕ್ಷಣೆ ಮಾಡಿದ್ದಾರೆ ಎಂದು ಸಂತ್ರಸ್ತರು ದೂರಿದರು

Seema.R | news18-kannada
Updated:October 27, 2019, 5:56 PM IST
ಬೆಳಗಾವಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಇದೇ ಮೊದಲಬಾರಿ ಭೇಟಿ ನೀಡಿದ ಸಚಿವ ಆರ್​ ಅಶೋಕ್​
ಸಚಿವ ಆರ್​.ಅಶೋಕ್​
  • Share this:
ಬೆಳಗಾವಿ (ಅ.27): ಮೇಲಿಂದ ಮೇಲೆ ಎಂಬಂತೆ  ಮೂರು ಬಾರಿ ಪ್ರವಾಹಕ್ಕೆ ತುತ್ತಾಗಿರುವ ಉತ್ತರ ಕರ್ನಾಟಕದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪ್ರವಾಹದಿಂದ ಮನೆಮಠ ಕಳೆದುಕೊಂಡ ಅವರ ಜೀವನ ಬೀದಿಗೆ ಬಂದಿದ್ದು, ಕಂಗಾಲಾಗಿ, ಸರ್ಕಾರದಿಂದ ಪರಿಹಾರಕ್ಕಾಗಿ ಎದುರು ನೋಡುತ್ತಿದ್ದಾರೆ. ಇದೇ ಮೊದಲ ಬಾರಿ ಹಾನಿಗೊಳಗಾದ ಪ್ರದೇಶಗಳಿಗೆ ಕಂದಾಯ ಸಚಿವ ಆರ್​ ಅಶೋಕ್​ ಭೇಟಿ ಮಾಡಿದ್ದಾರೆ.

ಇಲ್ಲಿನ ಕಿತ್ತೂರಿನ ಗದ್ದಿಕೇರಿ ಗ್ರಾಮಕ್ಕೆ ಭೇಟಿ ನೀಡಿದ ಅವರು ಭೂಕುಸಿದ ಸ್ಥಳಗಳ ವೀಕ್ಷಣೆ ಮಾಡಿದರು. ತರಾತುರಿಯಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ಮುಗಿಸಿದ ಅವರ ಕ್ರಮಕ್ಕೆ ಖಂಡನೆ ವ್ಯಕ್ತವಾಯಿತು. ಎಲ್ಲಾ ಮುಗಿದ ಮೇಲೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದುಮ ಸಚಿವರು ಬೇಕಾಬಿಟ್ಟಿ ವೀಕ್ಷಣೆ ಮಾಡಿದ್ದಾರೆ ಎಂದು ಸಂತ್ರಸ್ತರು ದೂರಿದರು.

ಹಾನಿ ಪ್ರದೇಶಗಳಲ್ಲಿ ಮನೆ ಕಟ್ಟಿಕೊಡುವ ಜವಾಬ್ದಾರಿ ಕಂದಾಯ ಸಚಿವರಿಗೆ ಇದ್ದರೂ, ಈ ಬಗ್ಗೆ ಸಚಿವರು ಯಾವುದೇ ಗಮನ ಹರಿಸಿಲ್ಲ. ಕ್ಷೇತ್ರಕ್ಕೂ ಭೇಟಿ ನೀಡಿ, ಇಲ್ಲಿನ ಪರಿಸ್ಥಿತಿ ಅವಲೋಕಿಸಿಲ್ಲ ಎಂಬ ದೂರು ಕೇಳಿ ಬಂದಿತ್ತು.

ಇದನ್ನು ಓದಿ: ನಾವೆಲ್ಲಾ ಸೇರಿಯೇ ಬಿಜೆಪಿ ಸರ್ಕಾರ ರಚಿಸಿದ್ದು; ಹಾಗಾಗಿ ನಾವು ಬಿಜೆಪಿ ಸೇರುವುದು ಖಚಿತ; ಎಚ್​ ವಿಶ್ವನಾಥ್

ಇನ್ನು ಕ್ಷೇತ್ರಕ್ಕೆ ಈಗಾಗಲೇ ಸಿಎಂ ನಾಲ್ಕು ಬಾರಿ ಭೇಟಿ ನೀಡಿದ್ದು, ಪ್ರವಾಹ ಸಂತ್ರಸ್ತರ ಕಷ್ಟ ಆಲಿಸಿದ್ದರು.  ಇನ್ನು ಇದೇ ಮೊದಲ ಬಾರಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಆರ್​ ಅಶೋಕ್​, ತಮ್ಮ ಭೇಟಿ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿರಲಿಲ್ಲ.

First published:October 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ