HOME » NEWS » State » MINISTER R ASHOK VILLAGE STAY END AT HUBLIS CHABBI VILLAGE WITH BREAKFAST AT DALITS HOUSE SAKLB LG

R Ashok: ದಲಿತರ ಮನೆಯ ಉಪಹಾರದೊಂದಿಗೆ ಸಚಿವ ಆರ್. ಅಶೋಕ್ ಗ್ರಾಮ ವಾಸ್ತವ್ಯ ಅಂತ್ಯ

ಜನರು ಮಂತ್ರಿಗಳು, ಡಿ ಸಿ ಹಾಗೂ ಎಸಿಯವರನ್ನು ಭೇಟಿಯಾಗಿ ಅಹವಾಲು ಹೇಳಿಕೊಳ್ಳಲು ಮುಜುಗರ ಪಟ್ಟುಕೊಳ್ಳುತ್ತಾರೆ. ಈ ಭಾವನೆ ಹಾಗೂ ಜನಸಾಮಾನ್ಯರ ನಡುವಿನ ಕಂದಕ ಮುಚ್ಚಿ, ಸೇತುವೆ ನಿರ್ಮಿಸುವಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.

news18-kannada
Updated:March 21, 2021, 1:22 PM IST
R Ashok: ದಲಿತರ ಮನೆಯ ಉಪಹಾರದೊಂದಿಗೆ ಸಚಿವ ಆರ್. ಅಶೋಕ್ ಗ್ರಾಮ ವಾಸ್ತವ್ಯ ಅಂತ್ಯ
ಆರ್​. ಅಶೋಕ್
  • Share this:
ಹುಬ್ಬಳ್ಳಿ(ಮಾ.21): ಕಂದಾಯ ಸಚಿವ ಆರ್ ಅಶೋಕ್ ಹುಬ್ಬಳ್ಳಿ ತಾಲ್ಲೂಕಿನ ಛಬ್ಬಿ ಗ್ರಾಮದಲ್ಲಿ ಕೈಗೊಂಡಿದ್ದ ಗ್ರಾಮವಾಸ್ತವ್ಯ ಅಂತ್ಯಗೊಂಡಿದೆ. ದಲಿತರ ಮನೆಯಲ್ಲಿ ಉಪಾಹಾರ ಸೇವನೆ ಮಾಡಿ ಅಶೋಕ್ ಗ್ರಾಮವಾಸ್ತವ್ಯ ಅಂತ್ಯಗೊಳಿಸಿದ್ದಾರೆ. ಅಶೋಕ್ ಗ್ರಾಮ ವಾಸ್ತವ್ಯದ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಛಬ್ಬಿ ಜನತೆಗೆ ಜಗದ್ಗುರುಗಳ ರೀತಿಯಲ್ಲಿ ಅಶೋಕ್ ಆಶೀರ್ವಾದ ಮಾಡಿ, ಬರಪೂರ ಯೊಜನೆ ಕೊಟ್ಟಿದ್ದಾರೆ ಎಂದರು.

ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಛಬ್ಬಿ ಯಲ್ಲಿ ಕಂದಾಯ ಸಚಿವ ಆರ್ ಅಶೋಕ್ ಕೈಗೊಂಡಿದ್ದ ಗ್ರಾಮ ವಾಸ್ತವ್ಯ ಅಂತ್ಯಗೊಂಡಿದೆ. ರಾತ್ರಿ ಶಾಲೆಯಲ್ಲಿ ವಾಸ್ತವ್ಯ ಮಾಡಿದ್ದ ಅಶೋಕ್, ಬೆಳಿಗ್ಗೆ ಏಳುತ್ತಿದ್ದಂತೆಯೇ ಪತ್ರಿಕೆಗಳ ಮೇಲೆ ಕಣ್ಣಾಡಿಸಿದರು. ನಂತರ ಛಬ್ಬಿ ಕೆರೆ ದಂಡೆ ಮೇಲೆ ವಾಯು ವಿಹಾರ ಮಾಡಿದರು.  ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮತ್ತಿತರ ಅಧಿಕಾರಿಗಳೊಂದಿಗೆ ವಾಯು ವಿಹಾರ ಮಾಡಿದರು.

ನಂತರ ದಲಿತರ ಕೇರಿಗೆ ಭೇಟಿ ನೀಡಿದ ಸಚಿವರು, ದಲಿತ ಫಕೀರಪ್ಪ ಕಾಳೆ ಎನ್ನುವವರ ಮನೆಯಲ್ಲಿ ಉಪಹಾರ ಸೇವನೆ ಮಾಡಿದರು. ಫಕೀರಪ್ಪ ಕುಟುಂಬದ ಸದಸ್ಯರ ಜೊತೆ ಕುಳಿತು ಉಪ್ಪಿಟ್ಟು ಸವಿದರು.

ಈ ವೇಳೆ ಮಾತನಾಡಿದ ಅಶೋಕ್, ಜನಸಾಮಾನ್ಯರು ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳ ನಡುವಿನ ಕಂದಕ ದೂರವಾಗಬೇಕಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಮೇಲಿನಿಂದ ಧರೆಗೆ ಇಳಿದು ಬಂದವರಲ್ಲ. ಜನರು ಮಂತ್ರಿಗಳು, ಡಿ ಸಿ ಹಾಗೂ ಎಸಿಯವರನ್ನು ಭೇಟಿಯಾಗಿ ಅಹವಾಲು ಹೇಳಿಕೊಳ್ಳಲು ಮುಜುಗರ ಪಟ್ಟುಕೊಳ್ಳುತ್ತಾರೆ. ಈ ಭಾವನೆ ಹಾಗೂ ಜನಸಾಮಾನ್ಯರ ನಡುವಿನ ಕಂದಕ ಮುಚ್ಚಿ, ಸೇತುವೆ ನಿರ್ಮಿಸುವಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.

ಜನರಿಗೆ ಅಧಿಕಾರಿಗಳು ನಮ್ಮವರು ಎನಿಸಿಬೇಕು, ಹಾಗೇ ಅಧಿಕಾರಿಗಳಿಗೆ ಜನರು ನಮ್ಮವರು ಎಂದೆನಿಸಬೇಕು. ಪಟ್ಟಣ ಪ್ರದೇಶದಿಂದ ಅಭಿವೃದ್ಧಿಯಿಂದ ಮಾತ್ರ ದೇಶ ಉದ್ದಾರವಾಗುವುದಿಲ್ಲ. ಮಹಾತ್ಮಾ ಗಾಂಧಿಜೀಯವರು ಆಶಯದಂತೆ ಹಳ್ಳಿಗಳು ಉದ್ಧಾರವಾಗಬೇಕು. ಸರ್ಕಾರ ಹಳ್ಳಿಗಳ ಉದ್ಧಾರಕ್ಕೆ ನೂರು ಕಾರ್ಯಕ್ರಮ ಜಾರಿ ಮಾಡಿದರು, ಜನರಿಗೆ ಹತ್ತು ಕಾರ್ಯಕ್ರಮಗಳ ಬಗ್ಗೆ ಅರಿವು ಇರುವುದಿಲ್ಲ. ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಲು ಹಾಗೂ ಅವುಗಳನ್ನು ಅನುಷ್ಠಾನಗೊಳಿಸಲು ಗ್ರಾಮವಾಸ್ತವ್ಯ ನೆರವಾಗುವುದು. ಇದರಿಂದ ಸರ್ಕಾರದ ಮೇಲೆ ವಿಶ್ವಾಸ ಮೂಡುವುದು ಎಂದರು.

ಹೆಚ್ಚಾಗುತ್ತಿರುವ ಕೊರೋನಾ; ಸರ್ವಪಕ್ಷಗಳ ಸಭೆ ಕರೆಯುವಂತೆ ಸಿಎಂಗೆ ಮನವಿ ಮಾಡಿದ ಸಚಿವ ಸುಧಾಕರ್

ಛಬ್ಬಿ ಗ್ರಾಮಸ್ಥರು ತೋರಿದ ಪ್ರೀತಿಗೆ ಚಿರಋಣಿಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ನನ್ನನ್ನು ಭವ್ಯ ಮೆರವಣಿಗೆಯೊಂದಿಗೆ ಛಬ್ಬಿ ಗ್ರಾಮಸ್ಥರು ಬರ ಮಾಡಿಕೊಂಡರು. ಊರಲ್ಲಿ ಹಬ್ಬದ ವಾತಾವರಣ, ಪ್ರತಿ ಮನೆಯ ಮುಂದೆ ರಂಗವಲ್ಲಿ ಹಾಕಿದ್ದಾರೆ. ರಾತ್ರಿ ಹನ್ನೊಂದು ಗಂಟೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮಧ್ಯೆಯೂ ಜನ ಅಹವಾಲು ಸಲ್ಲಿಸಿದರು. ಉತ್ತರ ಕರ್ನಾಟಕ ಭಾಗದಲ್ಲಿ ಸ್ವಲ್ಪವೇ ಕೆಲಸ ಮಾಡಿದರು ಜನರು ಹೆಚ್ಚಿನ ಪ್ರೀತಿ ಆದರಗಳನ್ನು‌ ತೋರುತ್ತಾರೆ. ಗ್ರಾಮಸ್ಥರು ತೋರಿದ ಪ್ರೀತಿಗೆ ಚಿರ ಋಣಿ ಆಗಿದ್ದೇನೆ. ಗ್ರಾಮ ವಾಸ್ತವ್ಯ ಯಶಸ್ವಿಯಾಗಿದೆ ಎಂದು ಹೇಳಿದರು.  ಉಪಹಾರದ ನಂತರ ಗ್ರಾಮ ವಾಸ್ತವ್ಯ ಅಂತ್ಯಗೊಳಿಸಿ ಅಶೋಕ್, ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

ಅಶೋಕ್ ರನ್ನು ಜಗದ್ಗುರುಗಳಿಗೆ ಹೋಲಿಸಿದ ಬೊಮ್ಮಾಯಿ..ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಛಬ್ಬಿಗೆ ಆಗಮಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಅಶೋಕ್ ರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಗದ್ಗುರುಗಳು ಬಂದಾಗ ಬಹಳ ಜನ ಸೇರ್ತಾರೆ. ಆರ್.ಅಶೋಕ್ ಬಂದಿರೋ ಸಂದರ್ಭದಲ್ಲಿಯೂ ಜನ ಕಿಕ್ಕಿರಿದು ಸೇರಿದ್ದಾರೆ. ಜಗದ್ಗುರುಗಳ ರೀತಿಯಲ್ಲಿ ಆರ್. ಅಶೋಕ್ ಆಶೀರ್ವಾದ ಮಾಡಿದ್ದಾರೆ. ಗ್ರಾಮ ವಾಸ್ತವ್ಯದ ವೇಳ ಛಬ್ಬಿ ಗ್ರಾಮಕ್ಕೆ ಸರ್ಕಾರದ ಎಲ್ಲ ಸೌಲಭ್ಯ ಕಲ್ಪಿಸೋ ಕೆಲಸ ಮಾಡಿದಾರೆ ಎಂದರು.

ರಾಜ್ಯದಲ್ಲಿ ಹಿಂದೆ ಬಹಳ ಮಂದಿ ಗ್ರಾಮ ವಾಸ್ತವ್ಯ ಮಾಡಿದಾರೆ. ಆದ್ರೆ ಯಾರಿಗೂ ಏನೂ ಪ್ರಯೋಜನವಾಗಿಲ್ಲ. ಎಲ್ಲರಂತೆ ವಾಸ್ತವ್ಯ ಮಾಡಿದ್ರೆ ಪ್ರಯೋಜನವಿಲ್ಲ. ರಾತ್ರಿ ಬಂದು ರಾತ್ರಿ ಹೋಗೋದ್ರಿಂದ ಏನೂ ಪ್ರಯೋಜನ ಎಂದಿದ್ದೆ. ಆದ್ರೆ ನನ್ನ ವಾಸ್ತವ್ಯದ ರೀತಿಯೇ ಬೇರೆ. ಹಗಲು ಬಂದು ಸಮಸ್ಯೆಗಳನ್ನು  ಬಗೆಹರಿಸಿಯೇ ವಾಸ್ತವ್ಯ ಮಾಡ್ತೇನೆ ಅಂದಿದ್ರು. ಅದರಂತೆಯೇ ಅಶೋಕ್ ನಡೆದಿಕೊಂಡಿದ್ದಾರೆ ಎನ್ನುವ ಮೂಲಕ ಪರೊಕ್ಷವಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ಬಗ್ಗೆ ಬೊಮ್ಮಾಯಿ ವ್ಯಂಗ್ಯವಾಡಿದರು.
Published by: Latha CG
First published: March 21, 2021, 1:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories