Illegal Building: ಎಷ್ಟೇ ದೊಡ್ಡವರಾದ್ರೂ ಬಿಡಲ್ಲ; ನೋಯ್ಡಾ ಮಾದರಿಯಲ್ಲಿ ಸ್ಫೋಟಕ ಇಟ್ಟು ನೆಲಸಮ ಮಾಡ್ತೀವಿ- ಆರ್ ಅಶೋಕ್

ಎಷ್ಟೇ ದೊಡ್ಡವರು ಇದ್ದರೂ ತೆರವು ಮಾಡುತ್ತೇವೆ. ನೋಯ್ಡಾ ಮಾದರಿಯಲ್ಲಿ ಅಕ್ರಮ ಕಟ್ಟಡಗಳಿಗೆ ಸ್ಫೋಟಕ​ ಇಟ್ಟು ನೆಲಸಮಗೊಳಿಸುತ್ತೇವೆ ಎಂದು ಹೇಳೋ ಮೂಲಕ ಒತ್ತುವರಿದಾರರಿಗೆ ಸಚಿ ಆರ್​ ಅಶೋಕ್​ ಖಡಕ್​ ಎಚ್ಚರಿಕೆ ರವಾನಿಸಿದ್ದಾರೆ.

ಸಚಿವ ಆರ್.ಅಶೋಕ್

ಸಚಿವ ಆರ್.ಅಶೋಕ್

  • Share this:
ಬೆಂಗಳೂರು (ಸೆ.13): ಬೆಂಗಳೂರಿನಲ್ಲಿ (Bengaluru)  ಅಕ್ರಮ ಕಟ್ಟಡಗಳ (Illegal Building) ತೆರವು ಕಾರ್ಯಾಚರಣೆ ಮುಂದುವರಿದಿದೆ. ಮಳೆಯಿಂದ ರಾಜಧಾನಿಯಲ್ಲಿ ಉಂಟಾದ ಅನಾಹುತಗಳ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ (BJP Government) ಒತ್ತುವರಿ ತೆರವು ಕಾರ್ಯ ಮಾಡ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್​. ಅಶೋಕ್, (R Ashok) ಒತ್ತುವರಿ ಮಾಡಿಕೊಂಡವರು ಯಾರೇ ಆದರೂ ನಾವು ಬಿಡಲ್ಲ. ಅವ್ರು ಎಷ್ಟೇ ದೊಡ್ಡವರಾದರೂ ತೆರವು ಮಾಡ್ತೀವಿ ಎಂದು ಆರ್ ಅಶೋಕ್ ಹೇಳಿದ್ದಾರೆ. 

ನೋಯ್ಡಾ ಮಾದರಿಯಲ್ಲಿ ಸ್ಫೋಟಕ ಇಟ್ಟು ನೆಲಸಮ

ಬೆಂಗಳೂರಲ್ಲಿ ಸರ್ಕಾರಿ ಜಾಗ ಹಾಗೂ ಕೆರೆ ಒತ್ತುವರಿ ಮಾಡಿಕೊಂಡು ಅನೇಕ ಬೃಹದಾಕಾರದ ಕಟ್ಟಡಗಳು ತಲೆ ಎತ್ತಿವೆ. ದೊಡ್ಡ ಕಟ್ಟಡಗಳನ್ನು ಹೇಗೆ ತೆರವು ಮಾಡ್ತೀರಿ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಆರ್ ಅಶೋಕ್​, ಎಷ್ಟೇ ದೊಡ್ಡವರು ಇದ್ದರೂ ತೆರವು ಮಾಡುತ್ತೇವೆ. ನೋಯ್ಡಾ ಮಾದರಿಯಲ್ಲಿ ಅಕ್ರಮ ಕಟ್ಟಡಗಳಿಗೆ ಸ್ಫೋಟಕ​ ಇಟ್ಟು ನೆಲಸಮಗೊಳಿಸುತ್ತೇವೆ ಎಂದು ಹೇಳೋ ಮೂಲಕ ಒತ್ತುವರಿದಾರರಿಗೆ ಖಡಕ್​ ಎಚ್ಚರಿಕೆ ರವಾನಿಸಿದ್ದಾರೆ.

minister r ashok speak about bbmp demolish encroachment
ಅಕ್ರಮ ಕಟ್ಟಡ ತೆರವು ಕಾರ್ಯ


ಐಟಿಯ 30 ಕಂಪನಿಗಳು ಒತ್ತುವರಿ ಮಾಡಿಕೊಂಡಿವೆ

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆರ್ ಅಶೋಕ್, ಐಟಿಯ 30 ಕಂಪನಿಗಳು ಒತ್ತುವರಿ ಮಾಡಿವೆ. ಈ ಹಿಂದಿನ ಸರ್ಕಾರಗಳು ಬಹಳ ನಾಟಕ ಮಾಡ್ತಾ ಇದ್ದವು. ಮಳೆ ನಿಂತ ಬಳಿಕ ಡೆಮಾಲಿಶ್ ನಿಂತು ಹೋಗುತ್ತಿತ್ತು. ಆದ್ರೆ ನಮ್ಮ ಆಡಳಿತದಲ್ಲಿ ಆ ರೀತಿ ಆಗಲ್ಲ, ನಮ್ಮ ಇಲಾಖೆ ಪಟ್ಟಿ ರೆಡಿ ಮಾಡಿ, ಬಿಬಿಎಂಪಿಗೆ ಕೊಟ್ಟಿದೆ. ಮುಲಾಜಿಲ್ಲದೆ ಒತ್ತುವರಿ ತೆರವು ಮಾಡುತ್ತೇವೆ ಎಂದು ಹೇಳಿದರು.

ಐಟಿ-ಬಿಟಿ ಕಂಪನಿಗಳಿಗೆ ಯಾವ ವಿನಾಯಿತಿ ಇಲ್ಲ

ಐಟಿ-ಬಿಟಿ ಕಂಪನಿಗಳಿಗೆ ಯಾವ ವಿನಾಯಿತಿಯೂ ಇಲ್ಲ, ದೊಡ್ಡವರು ಚಿಕ್ಕವರು ಅಂತ ನೋಡಲ್ಲ. ಕಂದಾಯ ಇಲಾಖೆ, ಬಿಬಿಎಂಪಿ, ಬಿಡಿಎ ಜಂಟಿ ಕಾರ್ಯಾಚರಣೆ ಮಾಡುತ್ತಿವೆ. ನೆರೆ ನಮಗೆ ಪಾಠ ಕಲಿಸಿದೆ. ಬಾಗಮನೆ ಪಾರ್ಕ್​ಗೆ ಯಾವುದೇ ವಿನಾಯಿತಿ ಕೊಟ್ಟಿಲ್ಲ. ದೊಡ್ಡವರು ಚಿಕ್ಕವರು ಅಂತ ನೋಡಲ್ಲ ಎಂದು ಸಚಿವರು ಹೇಳಿದ್ದಾರೆ.

ರಾಜಕಾಲುವೆ ಒತ್ತುವರಿ ತೆರವಿಗೆ ಸೂಚನೆ

ಐಟಿ ಕಂಪನಿಗಳು ಒತ್ತುವರಿ ಮಾಡಿವೆ, ಬಿಲ್ಡರ್​ಗಳು ಒತ್ತುವರಿ ಮಾಡಿದ್ದಾರೆ. ಬಡವರು, ಶ್ರೀಮಂತರು, ಸಾಹುಕಾರ, ಮಧ್ಯಮ ವರ್ಗ ಅಂತ ನೋಡಲ್ಲ. ಬಿಬಿಎಂಪಿ ಆಯುಕ್ತರ ಜೊತೆ ಮಾತಾಡಿದ್ದೀನಿ. ಯಾರಿಗೂ ಕಾಲಾವಕಾಶ ನೀಡಲ್ಲ. ಕೋರ್ಟ್​ಗೂ ನಾವು ವಿನಂತಿ ಮಾಡ್ತೀವಿ. ಕೋರ್ಟ್ ರಾಜಕಾಲುವೆ ಒತ್ತುವರಿ ತೆರವಿಗೆ ಸೂಚಿಸಿದೆ. ಕೆವಿಯಟ್ ಹಾಕುವುದರ ಕುರಿತು ಸಿಎಂ ಜೊತೆ ಚರ್ಚೆ ಮಾಡ್ತೀವಿ. ಎಜಿ ಬಳಿಯೂ ಈ ಬಗ್ಗೆ ಚರ್ಚೆ ಮಾಡ್ತೇನೆ ಎಂದು ಎಂದರು.

ಇದನ್ನೂ ಓದಿ: Bengaluru: ಜೈಲು ಸೇರಿದ BBMP ಜಂಟಿ ಆಯುಕ್ತ; ಮುಂದುವರಿಯಲಿದೆ ಒತ್ತುವರಿ ತೆರವು ಕಾರ್ಯಾಚರಣೆ; ಬಿಬಿಎಂಪಿ ಮೇಲಿದ್ಯಾ ರಾಜಕೀಯ ಒತ್ತಡ

ಅಧಿಕಾರಿಗಳಿಗೆ ಸಚಿವರ ಎಚ್ಚರಿಕೆ

ಮುಂದಿನ ವರ್ಷ ಮಳೆಗಾಲ ಬರುವುದರೊಳಗೆ ಬೆಂಗಳೂರಲ್ಲಿ ಇರುವ ಎಲ್ಲಾ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಲಾಗುವುದು. ಇಲ್ಲವಾದ್ರೆ ಅಧಿಕಾರಿಗಳು ಮತ್ತು ಬಿಲ್ಡರ್‌ಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಸಚಿವ ಆರ್ ಅಶೋಕ್ ಎಚ್ಚರಿಕೆ ನೀಡಿದರು.

ಹಲವು ಕಟ್ಟಡಗಳು ನೆಲಸಮ

ರಾಜಕಾಲುವೆ ಒತ್ತುವರಿಯಾಗಿರುವ ಕಟ್ಟಡಗಳ ಬಗ್ಗೆ ಬಿಬಿಎಂಪಿ ಪಟ್ಟಿ ಮಾಡಿದ್ದು, 600 ಒತ್ತುವರಿ ಕಟ್ಟಡಗಳ ತೆರವಿಗೆ ಸೂಚನೆ ನೀಡಲಾಗಿದೆ. ರಾಜಕಾಲುವೆ ಒತ್ತುವರಿ ಕಾರ್ಯ ಮುಂದುವರೆದಿದ್ದು, ಮಹದೇವಪುರ ಭಾಗದಲ್ಲಿ ಬಿಬಿಎಂಪಿ ರಾಜಕಾಲುವೆ ಒತ್ತುವರಿ ತೆರವು ಮಾಡುತ್ತಿದೆ. ಪ್ರತಿಷ್ಠಿತ ವಿಲ್ಲಾಗಳು, ಶಿಕ್ಷಣ ಸಂಸ್ಥೆ, ಮನೆಗಳು ಒತ್ತುವರಿ ಕಾರ್ಯಾಚರಣೆಗೆ ನೆಲಸಮವಾಗುತ್ತಿವೆ.

ಇದನ್ನೂ ಓದಿ:  Karnataka Politics: ನನ್ನನ್ನು ಲೂಟಿ ಅನ್ನೋ ಇವ್ರೇನು ಸತ್ಯಹರಿಶ್ಚಂದ್ರನ ಮಕ್ಕಳಾ? ಸಿಟಿ ರವಿ, ಸಿದ್ದು ನಡುವೆ ಟಾಕ್​ ವಾರ್!

ರೈನ್​ಬೋ ಡ್ರೈವ್ ಲೇಔಟ್​​ನಲ್ಲಿ ಜಿಲ್ಲಾಡಳಿತ ಸರ್ವೆ ನಡೆಸಿದ್ದು, ಕಾಲುವೆ ಒತ್ತುವರಿ ಮಾಡಿ ವಿಲ್ಲಾಗಳನ್ನ ನಿರ್ಮಿಸಿರುವುದು ಪತ್ತೆಯಾಗಿದೆ. ಇದೀಗ ವಿಲ್ಲಾಗಳ‌ನ್ನ ತೆರವುಗೊಳಿಸುವಂತೆ ಮಾಲೀಕರಿಗೆ ನೋಟಿಸ್ ನೀಡಲಾಗಿದೆ.
Published by:ಪಾವನ ಎಚ್ ಎಸ್
First published: