HOME » NEWS » State » MINISTER R ASHOK SLAMS AT FORMER CM HD KUMARSWAMY ON PAKISTAN VOTE BANK TWEET SESR

ಪಾಕ್​ ಪರ ಮಾತಾಡುವ ಕುಮಾರಸ್ವಾಮಿಯವರದ್ದೂ ಒಂದು ಬದುಕಾ?; ಆರ್​ ಅಶೋಕ್

ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್​ಗೆ ಹೋಗುವ ಆತಂಕದಲ್ಲಿ ಅವರು ಈ ರೀತಿ ಮಾತಾಡುತ್ತಿದ್ದಾರೆ. ಅಲ್ಪಸಂಖ್ಯಾತರನ್ನು  ಸೆಳೆಯಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಪಾಕ್​ ಅನ್ನು ಬೆಂಬಲಿಸುವವರನ್ನು ಗುಂಡಿಟ್ಟು ಕೊಲ್ಲಬೇಕು

news18-kannada
Updated:January 23, 2020, 12:35 PM IST
ಪಾಕ್​ ಪರ ಮಾತಾಡುವ ಕುಮಾರಸ್ವಾಮಿಯವರದ್ದೂ ಒಂದು ಬದುಕಾ?; ಆರ್​ ಅಶೋಕ್
ಆರ್​ ಅಶೋಕ್​-ಕುಮಾರಸ್ವಾಮಿ
  • Share this:
ಬೆಂಗಳೂರು (ಜ.23): ಪಾಕಿಸ್ತಾನ ಪರ ವಹಿಸಿ ಮಾತನಾಡುವ ಮಾಜಿ ಸಿಎಂ ಕುಮಾರಸ್ವಾಮಿ ಅವರದು ಒಂದು ಬದುಕಾ ಎಂದು ಸಚಿವ ಆರ್​ ಅಶೋಕ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಪಾಕಿಸ್ತಾನ ಇಲ್ಲದಿದ್ದರೆ ನೀವು ಇಲ್ಲಿ ಒಂದು ಮತವನ್ನು ಕೂಡ ಪಡೆಯುತ್ತಿರಲಿಲ್ಲ. ಅದಕ್ಕಾಗಿಯೇ ಪಾಕಿಸ್ತಾನ ನಾಮ ಸ್ಮರಣೆ ನಿಮ್ಮ ಕಾಯಕವಾಗಿದೆ ಎಂದು ಕುಮಾರಸ್ವಾಮಿ ಪರೋಕ್ಷವಾಗಿ ಬಿಜೆಪಿ ನಾಯಕರನ್ನು ಉದ್ದೇಶಿಸಿ ಟ್ವೀಟ್​ ಮಾಡಿದ್ದರು.

ಕುಮಾರಸ್ವಾಮಿ ಅವರ ಈ ಟ್ವೀಟ್​ಗೆ ಇಂದು ಖಾರವಾಗಿ ಪ್ರತಿಕ್ರಿಯಿಸಿರುವ ಅವರು, ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್​ಗೆ ಹೋಗುವ ಆತಂಕದಲ್ಲಿ ಅವರು ಈ ರೀತಿ ಮಾತಾಡುತ್ತಿದ್ದಾರೆ. ಅಲ್ಪಸಂಖ್ಯಾತರನ್ನು  ಸೆಳೆಯಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಪಾಕ್​ ಅನ್ನು ಬೆಂಬಲಿಸುವವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಪ್ರತಿಕ್ರಿಯಿಸಿದರು.

ನಮಗೆ ಪಾಕ್​ ಧ್ವಜ ನೋಡಿದರೆ ಸಿಟ್ಟು ಬರುತ್ತದೆ. ಆದರೆ, ಇಲ್ಲಿದ್ದುಕೊಂಡು ಇವರುಗಳು ಪಾಕ್​ ಬೆಂಬಲಿಸುತ್ತಾರೆ ಎಂದು ಕೂಡ ಹರಿಹಾಯ್ದರು.

 

 

ಇದೇ ವೇಳೆ ಮಂಗಳೂರು ಬಾಂಬ್​ ಪ್ರಕರಣ ಕುರಿತು ಮಾತನಾಡಿದ ಅವರು, ಆದಿತ್ಯನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆದಿತ್ಯನದ್ದು ಮಾನಸಿಕ ಸ್ಥಿತಿ ಸರಿಯಿಲ್ಲ. ಆ ಬಗ್ಗೆ ವೈದ್ಯರು ಕೂಡ ಹೇಳಬೇಕಿದೆ. ಮುಸ್ಲಿಂ ಇರಲಿ, ಹಿಂದೂ ಆಗಿರಲಿ. ಎಲ್ಲರಿಗೂ ಕಾನೂನು ಒಂದೇ. ಇಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.ಇದನ್ನು ಓದಿ: ಪಾಕಿಸ್ತಾನ ಇಲ್ಲದಿದ್ದರೆ ಬಿಜೆಪಿಗೆ ಒಂದೂ ವೋಟ್ ಬರುತ್ತಿರಲಿಲ್ಲ, ಸೂಲಿಬೆಲೆಗೆ ದೇಶಭಕ್ತಿಯಲ್ಲಿ ಕಡೆಯ ರ‍್ಯಾಂಕ್; ಎಚ್​ಡಿಕೆ

ಮಂಗಳೂರು ಬಾಂಬ್​ ಪ್ರಕರಣ ಒಂದು ಅಣಕು ಪ್ರದರ್ಶನ ಎಂಬ ಕುಮಾರಸ್ವಾಮಿ ಟೀಕೆಗೆ ತಿರುಗೇಟು ನೀಡಿದ ಅವರು,ಸಿನಿಮಾ ನಿರ್ಮಾಪಕರಾಗಿದ್ದ  ಕುಮಾರಸ್ವಾಮಿ ಅದೇ ದೃಷ್ಟಿಕೋನದಲ್ಲಿ ಪೊಲೀಸರ ಬಗ್ಗೆ ಅನುಮಾನ ಬರುವ ರೀತಿಯಲ್ಲಿ ಮಾತಾಡಿದ್ದಾರೆ. ಅವರು  ಅಧಿಕಾರದಲ್ಲಿದ್ದಾಗ ಪೊಲೀಸರು ಬೇಕಿತ್ತು. ಈಗ ಅಧಿಕಾರ ಹೋದ ತಕ್ಷಣ ಪೊಲೀಸರು ವಿಲನ್ ಆಗಿದ್ದಾರೆ ಎಂದರು.
Youtube Video
First published: January 23, 2020, 12:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories