ಕಲ್ಯಾಣ ಕರ್ನಾಟಕದಲ್ಲಿ ಭಾರೀ ಪ್ರವಾಹ; ರಾಷ್ಟ್ರೀಯ ವಿಪತ್ತೆಂದು ಘೋಷಿಸಲು ಕೇಂದ್ರಕ್ಕೆ ಮನವಿ; ಆರ್.ಅಶೋಕ್

ಕಲಬುರಗಿ , ಬೀದರ್ , ರಾಯಚೂರು , ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರವಾಹ ಆಗಿದೆ. 173 ತಾಲ್ಲೂಕು ಪ್ರವಾಹ ಪೀಡಿತ ತಾಲ್ಲೂಕು ಅಂತಾ ಘೋಷಣೆ ಮಾಡಲಾಗಿದೆ. ಕಲಬುರ್ಗಿ ಜಿಲ್ಲೆಯ ಎಲ್ಲ 11 ತಾಲೂಕುಗಳೂ ಪ್ರವಾಹ ಪೀಡಿತ ಎಂದು ಘೋಷಿಸಿದ್ದೇವೆ.

ನೆರೆ ಸಂತ್ರಸ್ತರನ್ನು ಭೇಟಿಯಾದ ಸಚಿವ ಅರ್.ಅಶೋಕ್

ನೆರೆ ಸಂತ್ರಸ್ತರನ್ನು ಭೇಟಿಯಾದ ಸಚಿವ ಅರ್.ಅಶೋಕ್

  • Share this:
ಕಲಬುರ್ಗಿ(ಅ.16): ಕಲ್ಯಾಣ ಕರ್ನಾಟಕದಲ್ಲಿ ಭಾರೀ ಪ್ರವಾಹ ಬಂದಿದ್ದು, ರಾಷ್ಟ್ರೀಯ ವಿಪತ್ತು ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡೋದಾಗಿ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಕಲಬುರ್ಗಿ ಜಿಲ್ಲೆಯ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅಶೋಕ್, ಹಲವು ವರ್ಷಗಳ ನಂತರ ಈ ಮಟ್ಟದ ದೊಡ್ಧ ಪ್ರವಾಹ ಬಂದಿದ್ದು ಜನತೆ ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಎಂದರು. ಅದರಲ್ಲಿಯೂ ತೊಗರಿ ನಾಡು ಕಲಬುರ್ಗಿಯಲ್ಲಿ ಭಾರಿ ಹಾನಿಯಾಗಿದೆ. ಕಳೆದ ವರ್ಷ ಮಲೆನಾಡು ಭಾಗದಲ್ಲಿ ಭಾರಿ ಪ್ರವಾಹ ಸೃಷ್ಟಿಯಾಗಿತ್ತು. ಈ ಬಾರಿ ಕಲ್ಯಾಣ ಕರ್ನಾಟಕದಲ್ಲಿ ಭಾರಿ ಪ್ರವಾಹ ಬಂದಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಕೇಂದ್ರಕ್ಕೆ ಮನವಿ ಮಾಡಲಾಗುವುದು. ಕೇಂದ್ರ ಸರ್ಕಾರದ ಪರಿಹಾರದ ಜೊತೆ ರಾಜ್ಯ ಸರ್ಕಾರದಿಂದಲೂ ಹೆಚ್ಚುವರಿ ಪರಿಹಾರ ನೀಡಲಾಗುವುದು ಎಂದರು.

ಪ್ರವಾಹ ನಿರ್ವಹಣೆ ವಿಷಯದಲ್ಲಿ ಅಧಿಕಾರಿಗಳು ಯಾವುದೇ ನಿರ್ಲಕ್ಷ್ಯ ತೋರುವಂತಿಲ್ಲ. ನಿರ್ಲಕ್ಷ್ಯ ತೋರಿದ ಅಧಿಕಾರಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಆರ್.ಅಶೋಕ್ ಎಚ್ಚರಿಕೆ ನೀಡಿದರು.

ಸಿದ್ಧರಾಮಯ್ಯಗೆ ವಿರೋಧ ಮಾಡೋದೇ ಕೆಲಸ

ವಿರೋಧ ಪಕ್ಷದವರಿಗೆ ವಿರೋಧ ಮಾಡೋದೆ ಕೆಲಸ. ಹಿಂದೆ ಸಿದ್ದರಾಮಯ್ಯ ಸರ್ಕಾರ ಏನು ಮಾಡಿದೆ ಅಂತಾ ಗೊತ್ತಿದೆ. ಹಿಂದೆ ಅವರ ಸರ್ಕಾರ ಇದ್ದಾಗ ಪ್ರವಾಹಕ್ಕೆ ಯಾವ ರೀತಿ ಸ್ಪಂದಿಸಿದೆ ಅಂತ ಗೊತ್ತಿದೆ. ನಮ್ಮ ಸರ್ಕಾರ ಬಂದಾಗ ಇದು ಎರಡನೆಯ ಬಾರಿಗೆ ಪ್ರವಾಹ ಎದುರಿಸುತ್ತಿದೆ. ಆದರೂ ಹಣದ ಕೊರತೆ ಬರದೆ ಇರೋ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಇದೆ. ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯಗೆ ಅಶೋಕ್ ತಿರುಗೇಟು ನೀಡಿದರು. ಪ್ರವಾಹದ ವಿಷಯದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಎಂಬ ಸಿದ್ಧರಾಮಯ್ಯ ಹೇಳಿಕೆಗೆ ಸಚಿವ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ತುಂಬು ಗರ್ಭಿಣಿಯ ಹೊಟ್ಟೆ ಬಗೆದು, ಭ್ರೂಣವನ್ನು ಹೊರತೆಗೆದ ಮಹಿಳೆ!

173 ತಾಲೂಕು ನೆರೆಪೀಡಿತ

ಕರ್ನಾಟಕ ರಾಜ್ಯದ 173 ತಾಲೂಕುಗಳನ್ನು ನೆರೆಪೀಡಿತ ಎಂದು ಘೋಷಿಸಿರುವುದಾಗಿ ಸಚಿವ ಆರ್.ಅಶೋಕ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ಕಲಬುರ್ಗಿ ಜಿಲ್ಲೆಗೆ ಸರ್ಕಾರದ ಪರವಾಗಿ ಬಂದಿದ್ದೇನೆ.  ಜನರನ್ನು ವಿಚಾರಿಸಿದಾಗ 30 ವರ್ಷದ ಬಳಿಕ ದೊಡ್ಡ ಪ್ರವಾಹ ಬಂದಿದೆ ಎಂದು ಹೇಳಿದ್ದಾರೆ. ಎರಡು ಗ್ರಾಮದ ಮಧ್ಯೆ ಸೈಯದ್ ಚಿಂಚೋಳಿ ಗ್ರಾಮ ಸಿಕ್ಕಿಹಾಕಿಕೊಂಡಿದೆ. ಗ್ರಾಮ ಬೇರೆಡೆ ಶಿಫ್ಟ್ ಮಾಡೋದಕ್ಕೆ 11 ಎಕರೆ ಜಮೀನು ನೋಡಲಾಗಿದೆ ಎಂದರು.

ಕಲಬುರಗಿ , ಬೀದರ್ , ರಾಯಚೂರು , ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರವಾಹ ಆಗಿದೆ. 173 ತಾಲ್ಲೂಕು ಪ್ರವಾಹ ಪೀಡಿತ ತಾಲ್ಲೂಕು ಅಂತಾ ಘೋಷಣೆ ಮಾಡಲಾಗಿದೆ. ಕಲಬುರ್ಗಿ ಜಿಲ್ಲೆಯ ಎಲ್ಲ 11 ತಾಲೂಕುಗಳೂ ಪ್ರವಾಹ ಪೀಡಿತ ಎಂದು ಘೋಷಿಸಿದ್ದೇವೆ. ಎನ್ ಡಿ ಆರ್ ಎಫ್ ತಂಡ ಇವತ್ತು ಎಲ್ಲ ಕಡೆ ಹೋಗಿ ತಲುಪುತ್ತದೆ ಎಂದು ಹೇಳಿದರು.

ಹಣದ ಕೊರತೆ ಇಲ್ಲ, ಜಿಲ್ಲಾಧಿಕಾರಿಗೆ ಹಣ ನೀಡಲಾಗಿದೆ. ಕಲಬುರ್ಗಿ ಜಿಲ್ಲಾಧಿಕಾರಿ ಕಜಾಖಾತೆಯಲ್ಲಿ 20 ಕೋಟಿ ಹಣ ಇದೆ. ಯಾದಗಿರಿ ಜಿಲ್ಲಾಧಿಕಾರಿ ಅಕೌಂಟ್ ನಲ್ಲಿ 11 ಕೋಟಿ ಹಣ ಇದೆ. ಭಾರಿ ಪ್ರವಾಹ ಬಂದಿರುವುದರಿಂದ ರಾಷ್ಟ್ರೀಯ ವಿಪತ್ತು ಘೋಷಣೆ ಮಾಡುವುದಕ್ಕೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುತ್ತೆ ಎಂದು ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ.
Published by:Latha CG
First published: