ಚಿಕ್ಕಮಗಳೂರು(ಜ.24): ಖಾತೆಯ ಕ್ಯಾತೆ ಮುಗಿದ ಅಧ್ಯಾಯ. ನೋ ಖಾತೆಯ ಕ್ಯಾತೆ. ಅದೆಲ್ಲಾ ಮುಗಿದ ಅಧ್ಯಾಯ. ನಿನ್ನೆಯೇ ಎಲ್ಲಾ ಮುಗಿದಿದೆ. ಇಡೀ ಮಂತ್ರಿಮಂಡಲದ ಎಲ್ಲಾ ಸದಸ್ಯರು ಮುಖ್ಯಮಂತ್ರಿ ಯಡಿಯೂರಪ್ಪನವರ ಜೊತೆ ಇದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ನಾನು ಮೊನ್ನೆಯೇ ಗೋಪಾಲಯ್ಯ, ಎಂ.ಟಿ.ಬಿ.ನಾಗರಾಜ್, ಶಂಕರ್ ಹಾಗೂ ಸುಧಾಕರ್ ಅವರನ್ನ ಕರೆಸಿ ಮಾತನಾಡಿದ್ದೇನೆ. ನಾನು ಬಸವರಾಜ್ ಬೊಮ್ಮಾಯಿ ಎಲ್ಲರ ಜೊತೆ ಮಾತನಾಡಿದ್ದೇವೆ. ಯಾರ್ಯಾರಿಗೆ ಬೇಸರವಿತ್ತೋ ಅವರನ್ನೆಲ್ಲಾ ಕರೆದು ಮಾತನಾಡಿದ್ದೇವೆ. ಖಾತೆಯ ಮರು ಹಂಚಿಕೆಯಾಗಿದೆ. ಈಗ ಎಲ್ಲಾ ಸಮಾಧಾನವಾಗಿ, ಶಾಂತವಾಗಿ ಇದ್ದಾರೆ. ಯಾವುದೇ ರೀತಿಯ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಯಾರ್ಯಾರು ಆಗಬೇಕೆಂದು ಬಾಕಿ ಇದೆ. ಶೀಘ್ರದಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪನವರು ಜಿಲ್ಲಾ ಉಸ್ತುವಾರಿ ಸಚಿವರನ್ನ ಘೋಷಣೆ ಮಾಡುತ್ತಾರೆ. ಎಲ್ಲಾ ತಣ್ಣಗಾಗಿದೆ. ಶಾಂತವಾಗಿದೆ ಎಂದರು. ರೆಸಾರ್ಟ್ಗೆ ಯಾರ್ಯಾರೋ ಬಂದಿದ್ದರು ಅಂತ ಹೇಳಿದ್ದೀರಾ. ಯಾರ್ಯೋರು ಬಂದಿರಲಿಲ್ಲ. ಅವರಿಬ್ಬರು ಸ್ನೇಹಿತರು ಯಾವ್ದೋ ಕಾರಣಕ್ಕೆ ಬಂದಿರಬಹುದು ಎಂದು ಅಸಮಾಧಾನಿಕರ ಗುಪ್ತ್ ಸಭೆಗೆ ಕಂದಾಯ ಸಚಿವ ಆರ್.ಅಶೋಕ್ ತೇಪೆ ಹಾಕಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಸ್ಪೋಟ ಪ್ರಕರಣವನ್ನ ಸಿಬಿಐಗೆ ವಹಿಸುವುದಿಲ್ಲ, ನಮ್ಮ ಪೊಲೀಸರೇ ಸಮರ್ಥರಿದ್ದಾರೆ, ಅವರೇ ತನಿಖೆ ಮುಂದುವರೆಸುತ್ತಾರೆ. ಶಿವಮೊಗ್ಗದ ಹುಣಸೋಡಿನಲ್ಲಿ ನಡೆದ ಜಿಲೆಟಿನ್ ಸ್ಫೋಟ ಪ್ರಕರಣವನ್ನ ಸಿಬಿಐಗೆ ವಹಿಸುವುದಿಲ್ಲ, ನಮ್ಮ ಪೊಲೀಸರೇ ಸಮರ್ಥರಿದ್ದಾರೆ. ನಮ್ಮ ಪೊಲೀಸರೇ ಸೂಕ್ತ ತನಿಖೆ ನಡೆಸಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಸ್ಫೋಟಕ ವಸ್ತುಗಳು ಮೈನಿಂಗಿಗೆ ಬಂದಿದೆ ಓಕೆ, ಬೇರೆ ಉದ್ದೇಶಕ್ಕಾದ್ರೆ ದೊಡ್ಡ ಅನಾಹುತವಾಗ್ತಿತ್ತು, ಬೇರೆ ರಾಜ್ಯದಿಂದ ಯಾರು ಕೊಡ್ತಾರೆ, ಯಾರು ತರ್ತಾರೆ ಅದೂ ತನಿಖೆಯಾಗಬೇಕು ಎಂದು ಕಂದಾಯ ಸಚಿವರು ಆಗ್ರಹಿಸಿದ್ದಾರೆ. ಇನ್ನು ಘಟನೆ ನಡೆದ ದಿನ ಕಂದಾಯ ಇಲಾಖೆಯಿಂದ ಡಿಸಾಸ್ಟರ್ ಟೀಂ ಕಳಿಸಿದ್ದೇವೆ. ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ.
ಯಾದಗಿರಿಯಲ್ಲಿ ಕಲ್ಲುಗಣಿಗಾರಿಕೆಯಿಂದ ನೆಮ್ಮದಿ ಕಳೆದುಕೊಂಡ ಜನ; ಸ್ಪೋಟಕ್ಕೆ ಬಿರುಕು ಬಿಟ್ಟ ಮನೆಗಳು
ಇನ್ನು ಸ್ಫೋಟಕ ಸಾಮಗ್ರಿ ಕೊಳ್ಳಲು ಮತ್ತಷ್ಟು ಟೈಟ್ ರೂಲ್ಸ್ಗೆ ತರಬೇಕಾಗಿದೆ, ಸ್ಫೋಟಕ ಸಾಮಾಗ್ರಿಗಳ ಶೇಖರಣೆಗೆ ಬಗ್ಗೆ ನೋಡಿ ಅನುಮತಿ ಕೊಡಬೇಕಾಗಿದೆ, ಈಗೀನ ಮಾಹಿತಿ ಸ್ಫೋಟಕ ಬಂದಿರೋದು ಆಂಧ್ರದಿಂದ ಎಂಬ ಮಾಹಿತಿ ಇದೆ, ಮುಂದೆ ಹೀಗಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಇನ್ಮುಂದೆ ನಮ್ಮ ಎಲ್ಲಾ ಜಿಲ್ಲಾಧಿಕಾರಿಗಳು ಹಳ್ಳಿಗಳಿಗೆ ಹೋಗಬೇಕು. ಜನ ಹಳ್ಳಿಗಳಿಂದ ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿ, ಎಸಿ ಕಚೇರಿಗೆ ಪೆನ್ಷನ್, ಖಾತೆ, ಕಂದಾಯಕ್ಕಾಗಿ ಚಪ್ಪಲಿ ಸವೆಸುತ್ತಿದ್ದರು. ಇನ್ಮುಂದೆ ಅಧಿಕಾರಿಗಳು ಕೂಡ ಚಪ್ಪಲಿಯನ್ನ ಸವೆಸಿ ಹಳ್ಳಿ ಕಡೆ ಪ್ರಯಾಣ ಮಾಡಲಿ. ಅವರಿಗೂ ಹಳ್ಳಿಯ ಕಷ್ಟಸುಖ ಗೊತ್ತಾಗಲಿ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ