HOME » NEWS » State » MINISTER R ASHOK SAYS STATE GOVERNMENT NEVER FAILURE IN MAINTAIN THE CORONA SITUATION LG

ಕೊರೋನಾ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ಎಲ್ಲೂ ವಿಫಲವಾಗಿಲ್ಲ; ಸಚಿವ ಆರ್.ಅಶೋಕ್ ಸಮರ್ಥನೆ

ಕೋವಿಡ್ ನಿಯಂತ್ರಣಕ್ಕೆ ಎಲ್ಲರೂ ಕೈ ಜೋಡಿಸಬೇಕು. ಸರ್ಕಾರ, ಪ್ರತಿಪಕ್ಷಗಳು ಒಟ್ಟಿಗೆ ಕೆಲಸ ಮಾಡಬೇಕು. ಕರ್ನಾಟಕಕ್ಕೆ ಮಾತ್ರವೇ ರಾಜ್ಯಪಾಲರು ಸಭೆ ಕರೆದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

news18-kannada
Updated:April 20, 2021, 12:34 PM IST
ಕೊರೋನಾ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ಎಲ್ಲೂ ವಿಫಲವಾಗಿಲ್ಲ; ಸಚಿವ ಆರ್.ಅಶೋಕ್ ಸಮರ್ಥನೆ
ಸಚಿವ ಆರ್​.ಅಶೋಕ್
  • Share this:
ಬೆಂಗಳೂರು(ಏ.20): ಇಲ್ಲಿ ರಾಜಕಾರಣ ಮಾಡುವುದು ಬೇಡ. ಎಲ್ಲರ ಸಹಕಾರ ಇಲ್ಲಿ ಮುಖ್ಯವಾಗಲಿದೆ. ಎಲ್ಲರೂ ಒಟ್ಟಾಗಿ ಇದನ್ನ ತಡೆಯಬೇಕಿದೆ. ಕೊರೋನಾ ಪರಿಸ್ಥಿತಿ ನಿಯಂತ್ರಿಸುವಲ್ಲಿ ಸರ್ಕಾರ ಎಲ್ಲೂ ವಿಫಲ ಆಗಿಲ್ಲ. ಹಿಂದೆ ಉತ್ತಮವಾಗಿ ನಿರ್ವಹಿಸಿದ್ದೆವು. ಎರಡನೇ ಅಲೆಯಲ್ಲೂ ಕಠಿಣ ನಿಯಮ ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್. ಅಶೋಕ್​ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಇಂದು ವರ್ಚುವಲ್ ಸಭೆ ಕರೆದಿದ್ದಾರೆ. ಸಿಎಂ, ಪ್ರತಿಪಕ್ಷ ನಾಯಕರು ಭಾಗಿಯಾಗಲಿದ್ದಾರೆ. ರಾಜ್ಯಪಾಲರಿಗೆ ಕೇಂದ್ರವೇ ಸೂಚನೆ ನೀಡಿತ್ತು. ರಾಜ್ಯಪಾಲರು ಭಾಗವಹಿಸಬೇಕು ಅಂತ ಸೂಚಿಸಿದೆ. ಹೀಗಾಗಿ ರಾಜ್ಯಪಾಲರು ಸಭೆ ಕರೆದಿದ್ದಾರೆ. ಕರ್ನಾಟಕ ಅಲ್ಲ, ಬೇರೆ ರಾಜ್ಯಗಳಲ್ಲೂ ಸಭೆ ನಡೆಯುತ್ತಿವೆ. ಇದನ್ನ ಕಾಂಗ್ರೆಸ್ ಅಪಾರ್ಥ ಮಾಡುವುದು ಬೇಡ ಎಂದರು.

Coronavirus Karnataka: ಬೇಡಿಕೆಗೆ ತಕ್ಕಂತೆ ಆಕ್ಸಿಜನ್ ಪೂರೈಸುವಂತೆ ಕೇಂದ್ರಕ್ಕೆ ಪತ್ರ ಬರೆದ ರಾಜ್ಯ ಸರ್ಕಾರ

ಮುಂದುವರೆದ ಅವರು, ಕೋವಿಡ್ ನಿಯಂತ್ರಣಕ್ಕೆ ಎಲ್ಲರೂ ಕೈ ಜೋಡಿಸಬೇಕು. ಸರ್ಕಾರ, ಪ್ರತಿಪಕ್ಷಗಳು ಒಟ್ಟಿಗೆ ಕೆಲಸ ಮಾಡಬೇಕು. ಕರ್ನಾಟಕಕ್ಕೆ ಮಾತ್ರವೇ ರಾಜ್ಯಪಾಲರು ಸಭೆ ಕರೆದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಇನ್ನು, ಆಕ್ಸಿಜನ್ ಕೊರತೆ ವಿಚಾರವಾಗಿ, ನಮ್ಮಲ್ಲಿ ಆಕ್ಸಿಜನ್ ಲಭ್ಯವಿದೆ. ಸ್ಟೋರೇಜ್ ಇರುವ ಕಡೆ ನಾವು ಕೊಡ್ತೇವೆ.  ಖಾಲಿ ಸಿಲಿಂಡರ್ ನಮಗೆ ಕೊರತೆ ಇದೆ. ಖಾಸಗಿಯವರಿಗೂ ಸರ್ಕಾರವೇ ಆಕ್ಸಿಜನ್ ಪೂರೈಸಲಿದೆ ಎಂದು ಹೇಳಿದರು.

ನಾವು ಸುಧಾಕರ್, ಸಿಎಂ ಸಭೆ ನಡೆಸಿದ್ದೆವು.  ಹಾಸಿಗೆ ಕೊರತೆ ಬಗ್ಗೆ ಗಮನಹರಿಸಿದ್ದೇವೆ. ಇಂದು ಕೆಲವು ಸಭೆಗಳನ್ನ ಮುಂದುವರಿಸುತ್ತೇವೆ. ರಾಜ್ಯಪಾಲರ ಭಾಷಣದ ನಂತರ ಕಠಿಣ ನಿಯಮಗಳನ್ನು ಜಾರಿಗೆ ತರುತ್ತೇವೆ.  ಸಿಎಂ ಅವರೇ ಕಠಿಣ ರೂಲ್ಸ್ ತೆಗೆದುಕೊಳ್ತಾರೆ.  ಬೆಂಗಳೂರಿಗೆ ಸಂಬಂಧಿಸಿದಂತೆ ಪ್ರತ್ಯೇಕ ರೂಲ್ಸ್ ಮಾಡುತ್ತೇವೆ ಇಂದು ಸಂಜೆಯೊಳಗೆ ಹೊಸ ರೂಲ್ಸ್ ಜಾರಿಯಾಗಲಿದೆ ಎಂದರು.
Published by: Latha CG
First published: April 20, 2021, 12:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories