ಕೊರೋನಾ 2ನೇ ಅಲೆ; ರಸ್ತೆ ಮೇಲೆ ಹೊಸ ವರ್ಷ ಸಂಭ್ರಮಾಚರಣೆಗೆ ಇಲ್ಲ ಅವಕಾಶ; ಆರ್​ ಅಶೋಕ್​

New Year 2021: ಹೋಟೆಲ್​​ಗಳಲ್ಲಿ ಸರಳವಾಗಿ ಹೊಸ ವರ್ಷ ಆಚರಣೆ ಮಾಡಬಹುದು. ಕೋವಿಡ್-19 ನಿಯಮಗಳ ಪ್ರಕಾರ ಆಚರಿಸಬಹುದು . ಇದಕ್ಕಾಗಿ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು

ಆರ್. ಅಶೋಕ್

ಆರ್. ಅಶೋಕ್

  • Share this:
ಬೆಳಗಾವಿ (ನ.5): ಕೊರೊನಾ 2ನೇ ಹಂತದ ಅಲೆ ಬರುವ ಸಾಧ್ಯತೆ ಇದೆ. ಈ ಹಿನ್ನಲೆ ಸಾರ್ವಜನಿಕವಾಗಿ ಹೊಸ ವರ್ಷಾಚರಣೆಗೆ ಈ ಬಾರಿ ಅವಕಾಶ ನೀಡಲಾಗುವುದಿಲ್ಲ ಎಂದು ಕಂದಾಯ ಸಚಿವ ಆರ್​ ಅಶೋಕ್​ ತಿಳಿಸಿದ್ದಾರೆ. ಬಿಜೆಪಿ ಕಾರ್ಯಕಾರಿಣಿ ಬಳಿಕ ಮಾತನಾಡಿದ ಅವರು,  ಹೋಟೆಲ್​​ಗಳಲ್ಲಿ ಸರಳವಾಗಿ ಹೊಸ ವರ್ಷ ಆಚರಣೆ ಮಾಡಬಹುದು. ಕೋವಿಡ್-19 ನಿಯಮಗಳ ಪ್ರಕಾರ ಆಚರಿಸಬಹುದು . ಇದಕ್ಕಾಗಿ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು. ರಾಜ್ಯಾದಂತ್ಯ ಈ ನಿಯಮ ಜಾರಿಯಲ್ಲಿ ಇರಲಿದೆ. ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡುವಂತಿಲ್ಲ. ಎಂಜಿ ರಸ್ತೆ, ಬಿಗ್ರೇಡ್ ರಸ್ತೆಯಲ್ಲಿ ಸಂಭ್ರಮಾಚರಣೆಗೆ ತಡೆ ನೀಡಲಾಗುವುದು. ಈ ಕುರಿತು ನಾಳೆ ಸಿಎಂ ಜೊತೆ ಮತ್ತೆ ಮಾತುಕತೆ ನಡೆಸುತ್ತೇವೆ. ಇಂದು ಸಿಎಂ. ಗೃಹ ಸಚಿವರು ಮತ್ತು ನಾನು ಚರ್ಚೆ ಮಾಡಿ ಈ‌ ನಿರ್ಧಾರ ಕೈಗೊಂಡಿದ್ದೇವೆ. ಬಳಿಕ ಆದೇಶ ಹೊರಡಿಸುತ್ತೇವೆ ಎಂದರು. 

ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಸರ್ಕಾರ ಬೀಳಿಸಿದ್ದು ಸಿದ್ದರಾಮಯ್ಯ ಎಂಬುದು ಇದೀಗ ಸ್ಪಷ್ಟವಾಗಿದೆ. ಕುಮಾರಸ್ವಾಮಿಗೆ ಈಗಲಾದರು ಸತ್ಯ ಗೊತ್ತಾಗಿದೆ. ಕಾಂಗ್ರೆಸ್ ಸಹವಾಸ ಮಾಡಿದರೆ ವನವಾಸ ಪಕ್ಕಾ. ಮೈಸೂರಿನಲ್ಲಿ ಜ್ಞಾನೋದಯ ಆಗಿದ್ದು ಒಳ್ಳೆಯದು ಎಂದರು.

ಇದನ್ನು ಓದಿ: ಎಂಜಿ ರೋಡ್, ಬ್ರಿಗೇಡ್ ರೋಡ್​ನಲ್ಲಿ ಈ ಬಾರಿ ಹೊಸ ವರ್ಷ ಆಚರಿಸದಂತೆ ಬಿಬಿಎಂಪಿ ಮನವಿ

ಇನ್ನು ಇದೇ ವೇಳೆ ಬಿಜೆಪಿ ಜೊತೆಗೆ ಹೋಗಿದರೆ ಕುಮಾರಸ್ವಾಮಿ  ಸಿಎಂ ಆಗುತ್ತಿದೆ ಎಂಬ ಕುರಿತು ಮಾತನಾಡಿದ ಅವರು, ಇದು ಮುಗಿದ‌ ಹೋದ ಅಧ್ಯಾಯ. ಬಿಜೆಪಿಗೆ ಸದ್ಯ ಹೊಂದಾಣಿಕೆ ಅವಶ್ಯಕತೆ ‌ಇಲ್ಲ. ನಮ್ಮಲ್ಲಿ ಸಾಕಷ್ಟು ಸಂಖ್ಯೆ‌ಇದೆ, ಇನ್ನೂ ಅನೇಕರು ಬರಲಿದ್ದಾರೆ. ಸದ್ಯ ರಾಜ್ಯದ ಬಿಜೆಪಿಗೆ ಯಾರ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಹೊಸ ವರ್ಷ ಆಚರಣೆಗೆ ಅವಕಾಶ ನೀಡದಂತೆ ಈಗಾಗಲೇ ಬಿಬಿಎಂಪಿ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಈ ಕುರಿತು ಕಳೆದ ಮೂರುದಿನದ ಹಿಂದೆ ಮಾತನಾಡಿದ್ದ ಆಯುಕ್ತ ಮಂಜುನಾಥ್​, ಚಳಿಗಾಲ ಆರಂಭವಾಗುತ್ತಿದ್ದಂತೆ ಕೊರೋನಾ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಈಗಾಗಲೇ ದಸರಾ, ದೀಪಾವಳಿ ಹಬ್ಬದಲ್ಲಿ ಹೆಚ್ಚು ಜನ ಸೇರಲು ಬಿಡದೆ ಆಚರಣೆ ಮಾಡಲು ಅವಕಾಶ ನೀಡಲಾಗಿದೆ. ಇದರಿಂದ ಕೊರೋನಾ ಪ್ರಕರಣಗಳ ನಿಯಂತ್ರಣ ಕಾಪಾಡಿಕೊಳ್ಳಲಾಗಿದೆ. ಇಂಥ ಸಂದರ್ಭದಲ್ಲಿ ಹೊಸ ವರ್ಷಾಚರಣೆಗೆ ಜನರಿಗೆ ಅವಕಾಶ ಕಲ್ಪಿಸಿದರೆ ಪರಿಸ್ಥಿತಿ ಕಷ್ಟವಾಗಲಿದೆ ಎಂದು ಅಭಿಪ್ರಾಯ ನೀಡಲಾಗಿದೆ. ಜೊತೆಗೆ ಪಬ್ , ಬಾರ್ ಗಳಲ್ಲಿ ನ್ಯೂ ಇಯರ್ ಆಚರಣೆ ಮಾಡದಂತೆ ಮನವಿ ಮಾಡಲಾಗಿದೆ. ಆದರೆ, ಈ ಬಗ್ಗೆ ಅಂತಿಮವಾಗಿ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದಿದ್ದರು.
Published by:Seema R
First published: