HOME » NEWS » State » MINISTER R ASHOK SAYS MY VILLAGE SATAY PROGRAM IS NOT FOR SAKE SAKLB SESR

R Ashok: ನನ್ನ ಗ್ರಾಮ ವಾಸ್ತವ್ಯ ಬಂದ ಸಿದ್ಧ, ಹೋದ ಸಿದ್ಧ ಅನ್ನೋ ಥರದ್ದಲ್ಲ: ಆರ್​ ಅಶೋಕ್​

ಇದು ಬಂದ ಸಿದ್ಧ ಹೋದ ಸಿದ್ಧ ಎನ್ನುವ ಗ್ರಾಮ ವಾಸ್ತವ್ಯ ಅಲ್ಲ. ಒಂದು ದಿನ ಸಂಪೂರ್ಣವಾಗಿ ಈ ಗ್ರಾಮಸ್ಥರೊಂದಿಗೆ ಕಳೆಯಲಿದ್ದೇನೆ. ಅವರ ದುಃಖ ದುಮ್ಮಾನಗಳನ್ನು ಆಲಿಸಲಿದ್ದೇನೆ

news18-kannada
Updated:March 20, 2021, 5:11 PM IST
R Ashok: ನನ್ನ ಗ್ರಾಮ ವಾಸ್ತವ್ಯ ಬಂದ ಸಿದ್ಧ, ಹೋದ ಸಿದ್ಧ ಅನ್ನೋ ಥರದ್ದಲ್ಲ: ಆರ್​ ಅಶೋಕ್​
ಗ್ರಾಮ ವಾಸ್ತವ್ಯದಲ್ಲಿ ಆರ್​ ಅಶೋಕ್​
  • Share this:
ಹುಬ್ಬಳ್ಳಿ (ಮಾ. 20): ನನ್ನದು ಬಂದಾ ಸಿದ್ಧ.. ಹೋದಾ ಸಿದ್ಧ ಎನ್ನುವ ರೀತಿ ಗ್ರಾಮ ವಾಸ್ತವ್ಯವಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಛಬ್ಬಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಜನರ ಸಂಕಷ್ಟಕ್ಕೆ ಸ್ಪಂದಿಸಲು ಗ್ರಾಮ ವಾಸ್ತವ್ಯ ಕೈಗೊಂಡಿದ್ದೇನೆ. ಜನ ಅಧಿಕಾರಿಗಳ ಬಳಿ ಸುತ್ತವ ಪರಿಪಾಠ ಹೋಗಲಾಡಿಸಬೇಕಿದೆ.  ಜನರ ಬಳಿಗೆ ಹೋಗಿ ಕೈ ಕಟ್ಟಿ ನಿಂತು ಅಧಿಕಾರಿಗಳು ಕೆಲಸ ಮಾಡಿಕೊಡಲು ಈ ಕಾರ್ಯಕ್ರಮ ನೆರವಾಗಲಿದೆ. ಇದು ಬಂದ ಸಿದ್ಧ ಹೋದ ಸಿದ್ಧ ಎನ್ನುವ ಗ್ರಾಮ ವಾಸ್ತವ್ಯ ಅಲ್ಲ. ಒಂದು ದಿನ ಸಂಪೂರ್ಣವಾಗಿ ಈ ಗ್ರಾಮಸ್ಥರೊಂದಿಗೆ ಕಳೆಯಲಿದ್ದೇನೆ. ಅವರ ದುಃಖ ದುಮ್ಮಾನಗಳನ್ನು ಆಲಿಸಲಿದ್ದೇನೆ ಎಂದರು. ರಾಜ್ಯದಲ್ಲಿ ಕೊರೋನಾ ಸೊಂಕು ಹೆಚ್ಚಾಗಿರಬಹುದು. ಹಾಗೆಂದು ಗ್ರಾಮ ವಾಸ್ತವ್ಯ ವನ್ನು ಮೊಟಕುಗೊಳಿಸಲು ಆಗೋದಿಲ್ಲ.ಮುಖ್ಯಮಂತ್ರಿಗಳೇ ಈಗಾಗಲೇ ಹೇಳಿದ್ದಾರೆ. ಕೊರೋನಾ ಜೊತೆ ಜೊತೆಯಲ್ಲಿ ನಾವು ಬದುಕುವುದನ್ನು ರೂಢಿಸಿಕೊಳ್ಳಬೇಕಿದೆ. ಆದಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಗ್ರಾಮ ವಾಸ್ತವ್ಯ ನಡೆಸಲಾಗುವುದು.

ಛಬ್ಬಿ ಗ್ರಾಮ ದೊಡ್ಡ ಗ್ರಾಮಗಳಲ್ಲಿ ಒಂದಾಗಿದೆ. ಅಷ್ಟೇ ಪ್ರಮಾಣದಲ್ಲಿ ಇಲ್ಲಿ ಸಮಸ್ಯೆಗಳೂ ಇವೆ. ಹೀಗಾಗಿಯೇ ಛಬ್ಬಿ ಗ್ರಾಮವನ್ನು ವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಂಡಿದ್ದೇನೆ. ಮೊದಲನೇ ಗ್ರಾಮ ವಾಸ್ತವ್ಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾಡಿದ್ದೆ. ಎರಡನೆ ಗ್ರಾಮ ವಾಸ್ತವ್ಯವನ್ನು ಮುಂಬೈ ಕರ್ನಾಟಕದಲ್ಲಿ ಮಾಡುತ್ತಿದ್ದೇನೆ. ಮುಂದಿನ ಗ್ರಾಮ ವಾಸ್ತವ್ಯ ಹೈದ್ರಾಬಾದ್ ಕರ್ನಾಟಕದ ಯಾದಗಿರಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಿಲಿರೋದಾಗಿ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.

ದಲಿತರ ಕೇರಿಗೆ ಅಶೋಕ್ ಭೇಟಿ.

ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಛಬ್ಬಿಗೆ ಆಗಮಿಸಿರುವ ಕಂದಾಯ ಸಚಿವ ಆರ್ ಅಶೋಕ್, ಮೆರವಣಿಗೆ ನಂತರ ದಲಿತ ಕೇರಿಗೆ ಭೇಟಿ ನೀಡಿದರು. ದಲಿತ ಕೇರಿಯ ದುರುಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನದ ಬಳಿಯ ಕಟ್ಟೆ ಮೇಲೆ ಕುಳಿತು ದಲಿತರ ಸಮಸ್ಯೆ ಆಲಿಸಿದರು.

ಇದನ್ನು ಓದಿ: ರಾಜ್ಯದಲ್ಲಿರೋದು ಬಿಜೆಪಿ ಸರ್ಕಾರ ಅಲ್ಲ, ಇದು ನ್ಯಾಷನಲ್ ಸರ್ಕಾರ; ಸ್ವಪಕ್ಷದ ವಿರುದ್ದ ವಿಶ್ವನಾಥ್ ವಾಗ್ದಾಳಿ

ವಿದ್ಯಾರ್ಥಿಗಳಿಂದ ಮನವಿ ಸಲ್ಲಿಕೆ

ಈ ವೇಳೆ ಗ್ರಾಮದ ವಿದ್ಯಾರ್ಥಿಗಳಿಂದ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಗ್ರಾಮದಲ್ಲಿ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೈಸ್ಕೂಲ್ ಗೆ ಹೋಗುತ್ತಿದ್ದಾರೆ. ಆದರೆ ಹೈಸ್ಕೂಲ್ ಗೆ ತೆರಳಲು ಸೂಕ್ತ ಬಸ್ ವ್ಯವಸ್ಥೆಯಿಲ್ಲ. ಅರಳಿ ಕಟ್ಟೆ ಗ್ರಾಮಕ್ಕೆ ಸೂಕ್ತ ಬಸ್ ವ್ಯವಸ್ಥೆಯಿಲ್ಲ ಎಂದು ಸಚಿವರ ಎದುರು ವಿದ್ಯಾರ್ಥಿಗಳ ಅಳಲು ತೋಡಿಕೊಂಡರು. ಗ್ರಾಮಕ್ಕೆ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಬೇಕು. ಜೊತೆಗೆ ಗ್ರಾಮದಲ್ಲಿಯೇ ಹೈಸ್ಕೂಲ್ ಸ್ಥಾಪಿಸಿದರೆ ಮತ್ತಷ್ಟು ಒಳ್ಳೆಯದು. ಮುಂದಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಲಾಯಿತು. ಸಂಜೆಯೊಳಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದೇನೆ ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು. ಸಚಿವರು ನುಡಿದಂತೆ ನಡೆದರೆ ಉಪಕಾರವಾಗಲಿದೆ ಎಂದು ಗ್ರಾಮದ ವಿದ್ಯಾರ್ಥಿಗಳು ವಿಶ್ವಾಸ ವ್ಯಕ್ತಪಡಿಸಿದರು. ನಂತರ ದಲಿತ ಕೇರಿಯ ಜನತೆಯ ಸಮಸ್ಯೆಗಳನ್ನು ಆಲಿಸಿದ ಅಶೋಕ್, ಮನೆ ಮನೆಗೂ ತೆರಳಿ ಮನವಿ ಆಲಿಸಿದರು.ವಿವಿಧ ಯೋಜನೆಗಳ ಹಸ್ತಾಂತರ

ಇದೇ ವೇಳೆ ಫಲಾನುಭವಿಗಳಿಗೆ ಸಲಕರಣೆಗಳ ವಿತರಣೆ ನಡೆಯಿತು. ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳ ಹಸ್ತಾಂತರ ನಡೆಯಿತು. ವಿಕಲ ಚೇತನರಿಗೆ ಪರಿಕರಗಳ ವಿತರಣೆ ನಡೆಯಿತು. ಇದೇ ವೇಳೆ ಛಬ್ಬಿ ನಾಡ ಕಛೇರಿಯನ್ನು ಆರ್. ಅಶೋಕ್ ಉದ್ಘಾಟಿಸಿದರು. ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸೋ ಪ್ರಯತ್ನ ಮಾಡಿದರು. ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ಸಚಿವ ಆರ್ ಅಶೋಕ್ ಮತ್ತಿತರರಿಗೆ ಶಾಲೆ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಚಿವ ಅಶೋಕ್ ಜೊತೆಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಊಟ ಸವಿದರು. ರೊಟ್ಟಿ, ಕಾಳು ಪಲ್ಯ ಶೇಂಗಾ ಹಿಂಡಿ, ಬದನೆಕಾಯಿ, ಅನ್ನ, ಸಾಂಬರ್ ಊಟ ಮಾಡಿದರು. ಎಲ್ಲರೊಂದಿಗೆ ಸಚಿವ ಮತ್ತು ಸಭಾಪತಿ ಭೋಜನ ಸವಿದರು.

(ವರದಿ :  ಶಿವರಾಮ ಅಸುಂಡಿ)
Published by: Seema R
First published: March 20, 2021, 5:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories