HOME » NEWS » State » MINISTER R ASHOK SAYS IT IS BETTER TO EXTEND LOCK DOWN IN KARNATAKA LG

ಲಾಕ್​ಡೌನ್​ ವಿಸ್ತರಣೆ ಮಾಡಿದರೆ ಒಳಿತು; ಸಿಎಂಗೆ ಈ ಬಗ್ಗೆ ಮನವರಿಕೆ ಮಾಡ್ತೀವಿ; ಸಚಿವ ಆರ್​.ಅಶೋಕ್

ಸಿದ್ದರಾಮಯ್ಯ ಮನೆಯಲ್ಲಿ ಕುಳಿತು ಟ್ವೀಟ್ ಮಾಡ್ತಾರೆ. ನಾವು 24 ಗಂಟೆ ಜನರ ಜೊತೆ ಇದ್ದು, ಜನರ ಜೊತೆ ಓಡಾಡ್ತಿದ್ದೇವೆ. ಈ ಸಮಯದಲ್ಲಿ ರಾಜಕೀಯ ಮಾಡೋದು ಬೇಡ. ಮೋದಿ ಎಲ್ಲಿ‌ ಇದ್ದಾರೆ ಅಂತ ಜಗತ್ತಿಗೆ ಗೊತ್ತು. ಸಿದ್ದರಾಮಯ್ಯ ಎಲ್ಲಿದ್ದಾರೆ ಅಂದ್ರೆ ಟ್ವಿಟರ್ ನಲ್ಲಿ ಇದ್ದಾರೆ. ನಾವು, ನಮ್ಮ ಸಂಸದರು 24 ಗಂಟೆ ಕೆಲಸ ಮಾಡ್ತಿದ್ದೇವೆ. ಸಿದ್ದರಾಮಯ್ಯ ಅವ್ರು ರಾಜಕೀಯ ಬಿಟ್ಟು ಸಹಕಾರ ಕೊಡಲಿ. ಈ ಸಮಯದಲ್ಲಿ ರಾಜಕೀಯ ಮಾಡೋದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.

news18-kannada
Updated:May 14, 2021, 1:33 PM IST
ಲಾಕ್​ಡೌನ್​ ವಿಸ್ತರಣೆ ಮಾಡಿದರೆ ಒಳಿತು; ಸಿಎಂಗೆ ಈ ಬಗ್ಗೆ ಮನವರಿಕೆ ಮಾಡ್ತೀವಿ; ಸಚಿವ ಆರ್​.ಅಶೋಕ್
ಸಚಿವ ಆರ್​.ಅಶೋಕ್
  • Share this:
ಬೆಂಗಳೂರು(ಮೇ 14): ರಾಜ್ಯದಲ್ಲಿ ಲಾಕ್​ಡೌನ್​ ಮಾಡಿದ ಬಳಿಕ ಕೊರೋನಾ ಪ್ರಕರಣಗಳು ಕಡಿಮೆಯಾಗಿವೆ. ಹೀಗಾಗಿ ಲಾಕ್​ಡೌನ್​ ವಿಸ್ತರಣೆ ಮಾಡುವುದು ಅಥವಾ ಮುಂದುವರೆಸುವುದು ಒಳಿತು ಎಂದು ಕಂದಾಯ ಸಚಿವ ಆರ್​.ಅಶೋಕ್​ ಅಭಿಪ್ರಾಯಪಟ್ಟಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್​ಡೌನ್​ ವಿಸ್ತರಣೆ ಮಾಡುವ ಬಗ್ಗೆ ಒಲವು ತೋರಿದರು. ಜೊತೆಗೆ ಈ ಬಗ್ಗೆ ಸಿಎಂ ಬಿಎಸ್​ ಯಡಿಯೂರಪ್ಪನವರಿಗೆ ಮನವರಿಕೆ ಮಾಡುವುದಾಗಿ ತಿಳಿಸಿದರು.

ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿ ಬಿಬಿಎಂಪಿಯ ನೂತನ ಟ್ರಯಾಜ್ ಮತ್ತು ಕೋವಿಡ್ ಸ್ಥಿರೀಕರಣ ಘಟಕ ಉದ್ಘಾಟನೆ ಮಾಡಿದ ಸಚಿವ ಆರ್​. ಅಶೋಕ್​, ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಲಾಕ್ ಡೌನ್ ಮುಂದುವರೆಸಿದ್ರೆ ಅನುಕೂಲವಾಗುತ್ತೆ,  ಈಗ ಕೇಸ್ ಕಡಿಮೆ ಆಗ್ತಿದೆ. ಇದೇ ಸಂದರ್ಭದಲ್ಲಿ ಲಾಕ್ ಡೌನ್ ಮುಂದುವರೆಸಿದ್ರೆ ಮತ್ತಷ್ಟು ಅನುಕೂಲ ಆಗುತ್ತೆ. ಸಿಎಂ ಯಡಿಯೂರಪ್ಪರವರಿಗೂ ಈ ಬಗ್ಗೆ ಮನವರಿಕೆ ಮಾಡ್ತೀವಿ. ನಾನು ಬೆಂಗಳೂರು ನಾಗರೀಕನಾಗಿ ಲಾಕ್​​ಡೌನ್ ಮುಂದುವರಿಕೆ ಆಗಬೇಕು ಅಂತ ಹೇಳ್ತೀನಿ.  ಲಾಕ್​​ಡೌನ್ ಬೇಕು ಅಂತ ನಾವು ಸಿಎಂಗೆ ಸಲಹೆ ಮಾಡ್ತೀವಿ ಎಂದು ಸಚಿವರು ಹೇಳಿದರು.

ಮಹಾರಾಷ್ಟ್ರ, ದೆಹಲಿ ರಾಜ್ಯಗಳಲ್ಲಿ ನಮ್ಮ ರಾಜ್ಯಕ್ಕಿಂತ ಹೆಚ್ಚು ಪ್ರಕರಣಗಳಿವೆ. ಅಲ್ಲಿ ಮೊದಲ ಅಲೆ ಬಂತು. ಅವರು ಲಾಕ್​​ಡೌನ್ ವಿಸ್ತರಣೆ ಮಾಡಿದ್ರು. ಅದನ್ನ ನಾವು ಅನುಸರಿಸುತ್ತೇವೆ. ಸಿಎಂ ಅವ್ರಿಗೂ ನಾವು ಲಾಕ್​​ಡೌನ್ ಸಲಹೆ ಕೊಡ್ತೀವಿ. ಲಾಕ್​ಡೌನ್ ವಿಸ್ತರಣೆ ಆಗಬೇಕು. ಸಿಎಂ ಈಗಿರುವ ಲಾಕ್ ಡೌನ್ ಮುಗಿಯುವ ಮುಂಚೆ 3-4 ದಿನಗಳಲ್ಲಿ ಸಭೆ ಮಾಡ್ತಾರೆ. ಆ ಸಭೆಯಲ್ಲಿ ಈ ಬಗ್ಗೆ ಸಲಹೆ ಕೊಡ್ತೀವಿ. ಸಿಎಂ ಅಂತಿಮವಾಗಿ ಲಾಕ್ ಡೌನ್ ಮುಂದುವರೆಸುವ ಬಗ್ಗೆ ನಿರ್ಧಾರ ಮಾಡ್ತಾರೆ ಎಂದರು.

Oxygen Shortage: ಗೋವಾದಲ್ಲಿ ಪ್ರಾಣವಾಯುಗೆ ಹಾಹಾಕಾರ; ಇಂದೂ ಸಹ ಆಕ್ಸಿಜನ್ ಸಿಗದೆ 13ಕ್ಕೂ ಹೆಚ್ಚು ಮಂದಿ ಸಾವು

ಸಚಿವರು ಉದ್ಘಾಟಿಸಿದ ಈ ಬಿಬಿಎಂಪಿ ಆಸ್ಪತ್ರೆಯಲ್ಲಿ 40 ಬೆಡ್ ಸೌಲಭ್ಯವಿದೆ. 20 ಬೆಡ್ ಆಕ್ಸಿಜನ್ ಕಾನ್ಸಂಟ್ರೇಟರ್ ವ್ಯವಸ್ಥೆ ಹಾಗೂ 20 ನಾರ್ಮಲ್ ಬೆಡ್ ವ್ಯವಸ್ಥೆ ಇರುವ ಆಸ್ಪತ್ರೆ ಇದಾಗಿದೆ.

ಈ ಕೇಂದ್ರದ ಪಕ್ಕದಲ್ಲಿ ಮಕ್ಕಳಿಗಾಗಿ ವಿಶೇಷ‌ ಕೇಂದ್ರ ಪ್ರಾರಂಭ ಮಾಡ್ತಿದ್ದೇವೆ. 50 ಮಕ್ಕಳ ಬೆಡ್ ಪ್ರಾರಂಭ ಮಾಡಲಾಗ್ತಿದೆ. ಪೋಷಕರಿಗೂ ಉಳಿಯಲು ಅವಕಾಶ ನೀಡಲಾಗುತ್ತೆ. ಮಕ್ಕಳಿಗೆ ಆಗೋ ಸಮಸ್ಯೆ ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗ್ತಿದೆ. ಕಳೆದ ಹತ್ತು ದಿನಗಳಿಂದ ನಮ್ಮ ಅಧಿಕಾರಿಗಳು ಡಾಕ್ಟರ್ ಗಳು ಶ್ರಮವಹಿಸಿ ಈ ಕೇಂದ್ರ ಮಾಡಿದ್ದೇವೆ. ಆಕ್ಸಿಜನ್ ಕಡಿಮೆ ಪ್ರಮಾಣದಲ್ಲಿ ಬೇಕಿರುವ ರೋಗಿಗಳಿಗೆ ಈ ಕೋವಿಡ್ ಆರೈಕೆ ಕೇಂದ್ರ ಉಪಯೋಗ ಆಗಲಿದೆ. ಡಾಕ್ಟರ್ ಗಳು, ಸ್ಪೆಷಲಿಸ್ಟ್ ಗಳು ಇಲ್ಲಿ ಇರಲಿದ್ದಾರೆ. ಮುಂದೆ ಮೂರನೇ ಅಲೆಗೂ ಕೂಡಾ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ತಿದ್ದೇವೆ. ನಮ್ಮ ಕ್ಷೇತ್ರದಲ್ಲಿ ಲಸಿಕೆ ಕೊರತೆ ಆಗಿಲ್ಲ. ನಲವತ್ತೈದು ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗ್ತಿದೆ ಎಂದು ಹೇಳಿದರು.

ಲಾಕ್​ಡೌನ್​ ಮುಂದುವರೆಸಬೇಕು ಎಂದು ಪುನರುಚ್ಛರಿಸಿದ ಆರ್​.ಅಶೋಕ್,  ಲಾಕ್ ಡೌನ್ ವಿಸ್ತರಣೆ ಮಾಡುವುದು ಒಳಿತು. ಈಗ ಕೋವಿಡ್ ಕೇಸ್ ಗಳ ಸಂಖ್ಯೆ ಕಡಿಮೆ ಆಗ್ತಿದೆ. ಮೊದಲು ಲಾಕ್ ಡೌನ್ ಮಾಡಿದಾಗ ವಿಪಕ್ಷ ಗಳು ವ್ಯಂಗ್ಯ ಮಾಡ್ತಾ ಇದ್ದರು. ಸಿದ್ದರಾಮಯ್ಯ ಮನೆಯಲ್ಲಿ ಕುಳಿತು ಟ್ವೀಟ್ ಮಾಡ್ತಿದಾರೆ. ನಾವು ಜನರ ಜೊತೆ ಇದ್ದೇವೆ. ಲಾಕ್ ಡೌನ್ ವಿಸ್ತರಣೆ ಆಗಬೇಕು ಅಂತಾ ನಾನೂ ಕೂಡಾ ಸಿಎಂ ಗೆ ಸಲಹೆ ನೀಡ್ತೀನಿ. ಲಾಕ್ ಡೌನ್ ಮುಂದುವರೆಯುವ ಅವಶ್ಯಕತೆ ಇದೆ ಎಂದು ಒತ್ತಿ ಒತ್ತಿ ಹೇಳಿದರು.
Youtube Video

ಇನ್ನು, ಸರ್ಕಾರದ ವಿರುದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ ವಿಚಾರಕ್ಕೆ ಆರ್​.ಅಶೋಕ್​ ಗರಂ ಆದರು. ಸಿದ್ದರಾಮಯ್ಯ ಮನೆಯಲ್ಲಿ ಕುಳಿತು ಟ್ವೀಟ್ ಮಾಡ್ತಾರೆ. ನಾವು 24 ಗಂಟೆ ಜನರ ಜೊತೆ ಇದ್ದು, ಜನರ ಜೊತೆ ಓಡಾಡ್ತಿದ್ದೇವೆ. ಈ ಸಮಯದಲ್ಲಿ ರಾಜಕೀಯ ಮಾಡೋದು ಬೇಡ. ಮೋದಿ ಎಲ್ಲಿ‌ ಇದ್ದಾರೆ ಅಂತ ಜಗತ್ತಿಗೆ ಗೊತ್ತು. ಸಿದ್ದರಾಮಯ್ಯ ಎಲ್ಲಿದ್ದಾರೆ ಅಂದ್ರೆ ಟ್ವಿಟರ್ ನಲ್ಲಿ ಇದ್ದಾರೆ. ನಾವು, ನಮ್ಮ ಸಂಸದರು 24 ಗಂಟೆ ಕೆಲಸ ಮಾಡ್ತಿದ್ದೇವೆ. ಸಿದ್ದರಾಮಯ್ಯ ಅವ್ರು ರಾಜಕೀಯ ಬಿಟ್ಟು ಸಹಕಾರ ಕೊಡಲಿ. ಈ ಸಮಯದಲ್ಲಿ ರಾಜಕೀಯ ಮಾಡೋದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.
Published by: Latha CG
First published: May 14, 2021, 1:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories