ನಾಳೆ ಬಂದ್​ಗೆ ಯಾರೂ ಬೆಂಬಲಿಸಿಲ್ಲ, ಅದು ಯಶಸ್ವಿಯೂ ಆಗುವುದಿಲ್ಲ; ಆರ್​ ಅಶೋಕ್​​

ಬಂದ್​ ರೂಪದಲ್ಲಿ ಪ್ರತಿಭಟನೆ ನಡೆಸಲಿ. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಪ್ರತಿಭಟನೆಗೆ ಬೇಕಾದ ಭದ್ರತೆಯನ್ನು ನೀಡುತ್ತೇವೆ. ಪ್ರತಿಭಟನೆ ನೆಪದಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುವಂತಿಲ್ಲ.

news18-kannada
Updated:January 7, 2020, 4:52 PM IST
ನಾಳೆ ಬಂದ್​ಗೆ ಯಾರೂ ಬೆಂಬಲಿಸಿಲ್ಲ, ಅದು ಯಶಸ್ವಿಯೂ ಆಗುವುದಿಲ್ಲ; ಆರ್​ ಅಶೋಕ್​​
ಸಚಿವ ಆರ್​ ಅಶೋಕ್​​
  • Share this:
ಬೆಂಗಳೂರು (ಜ.07): ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಹಲವು ಕಾರ್ಮಿಕ ಸಂಘಟನೆಗಳು ಮತ್ತು ಎಡಪಕ್ಷಗಳು ನಾಳೆ ಕರೆ ನೀಡಿರುವ ರಾಷ್ಟ್ರವ್ಯಾಪಿ ಬಂದ್​ ಯಶಸ್ವಿಯಾಗುವುದಿಲ್ಲ ಎಂದು ಸಚಿವ ಆರ್​ ಅಶೋಕ್​ ಭವಿಷ್ಯ ನುಡಿದಿದ್ದಾರೆ. 

ಈ ಕುರಿತು ಮಾತನಾಡಿದ ಅವರು, ನಾಳೆ ಕರೆ ನೀಡಲಾಗಿರುವ ಭಾರತ್​ ಬಂದ್​ಗೆ ಸುಪ್ರೀಂಕೋರ್ಟ್​ ತಡೆ ನೀಡಿದ್ದು, ಬಂದ್​ ನಡೆಸಲು ಅವಕಾಶವಿಲ್ಲ ಎಂದು ತಿಳಿಸಿದೆ. ಅಲ್ಲದೇ, ನಾಳೆಯ ಬಂದ್​ಗೆ ಯಾರೂ ಬೆಂಬಲಿಸಿಲ್ಲ. ಯಾವುದೇ ಸಂಘಟನೆ ಕೂಡ ಇದಕ್ಕೆ ಬೆಂಬಲಿಸಿಲ್ಲ. ಹೀಗಾಗಿ ಇದು ಯಶಸ್ಚಿಯಾಗುವುದಿಲ್ಲ ಎಂದರು.

ಬಂದ್​ ರೂಪದಲ್ಲಿ ಪ್ರತಿಭಟನೆ ನಡೆಸಲಿ. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಪ್ರತಿಭಟನೆಗೆ ಬೇಕಾದ ಭದ್ರತೆಯನ್ನು ನೀಡುತ್ತೇವೆ. ಪ್ರತಿಭಟನೆ ನೆಪದಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುವಂತಿಲ್ಲ. ಅಲ್ಲದೇ, ಯಾವುದೇ ಮೆರವಣಿಗೆ, ಜಾಥಾಕ್ಕೆ ಕೂಡ ಪೊಲೀಸ್​ ಇಲಾಖೆ ಅನುಮತಿ ನೀಡಿಲ್ಲ. ಯಾವುದೇ ಅಹಿತಕರ ಘಟನೆ ನಡೆದರೂ ಪ್ರತಿಭಟನೆ ಆಯೋಜಕರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದನ್ನು ಓದಿ: ನಾಳೆ ಭಾರತ್ ಬಂದ್ ನಡೆಯಲಿದೆಯಾ?; ಯಾವ ಸೇವೆ ಸಿಗುತ್ತೆ? ಯಾವುದು ಸಿಗಲ್ಲ? ಇಲ್ಲಿದೆ ಮಾಹಿತಿ

ನಾಳೆ ಭಾರತ ಬಂದ್​ ಬದಲು, ಕೇವಲ ಮುಷ್ಕರಗಳು ಮಾತ್ರ ನಡೆಯುತ್ತವೆ ಎನ್ನಲಾಗುತ್ತಿದೆ. ಯಾಕೆಂದರೆ ಬಹುತೇಕ ಸಂಘಟನೆಗಳು ನೈತಿಕ ಬೆಂಬಲ ಮಾತ್ರ ನೀಡಿವೆ. ಕೆಎಸ್​​ಆರ್​​ಟಿಸಿ, ಆಟೋ ಯೂನಿಯನ್​​ಗಳು ನೈತಿಕ ಬೆಂಬಲ ನೀಡಿದ್ದು, ಎಂದಿನಂತೆ ಸೇವೆ ನೀಡಲಿದೆ.

  

 
Published by: Seema R
First published: January 7, 2020, 4:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading